Wednesday, 25 March 2020

ಭಿಕ್ಷುಕನ ಕುರಿತು ಪ್ರಬಂಧ Essay on Beggar in Kannada language

Essay on Beggar in Kannada language: In this article, we are providing ಭಿಕ್ಷುಕನ ಕುರಿತು ಪ್ರಬಂಧ for students and teachers. Students can use this Essay on Beggar in Kannada language to complete their homework.

ಭಿಕ್ಷುಕನ ಕುರಿತು ಪ್ರಬಂಧ Essay on Beggar in Kannada language

1ಪರಿಚಯ 2. ಅನಾದಿಕಾಲದಿಂದ ಭಿಕ್ಷುಕ ಪ್ರವೃತ್ತಿ 3, ಸೋಮಾರಿತನ 4. ಸ್ವಾಭಿಮಾನದ ಕೊರತೆ 5. ಉಪಸಂಹಾರ

ತಮ್ಮ ಜೀವನಕ್ಕೆ ಬೇಕಾದುದನ್ನು ಸ್ವಪ್ರಯತ್ನದಿಂದ ಪಡೆಯಲಾಗದ ಸೋಮಾರಿಗಳು ಇತರರಿಂದ ಅದನ್ನು ಪಡೆಯಲು ಪ್ರಯತ್ನಿಸುತ್ತಾರೆ, ಉಳ್ಳವರು ಇಲ್ಲದವರಿಗೆ ಕೊಡುವುದು 'ಸಹಾಯ' ಎನ್ನಿಸುತ್ತದೆ, ಇಲ್ಲದವರು ಉಳ್ಳವರಿಂದ ಕಾಡಿ ಬೇಡಿ ಪಡೆಯುವುದು 'ಭಿಕ್ಷೆ' ಎನ್ನಿಸುತ್ತದೆ. ಸಹಾಯ ಪಡೆದ ವ್ಯಕ್ತಿ ತಾನು ಪಡೆಥಷ್ಟನ್ನು ಯಾರಿಂದ ಪಡೆದವೊ ಅವರಿಗೆ ಹಿಂತಿರುಗಿಸಬೇಕಾದ್ದು ನ್ಯಾಯ. ಆದರೆ ಭಿಕ್ಷುಕ ವೃತ್ತಿಯಲ್ಲಿ ಪಡೆಯುವುದಷ್ಟೇ ಮುಖ್ಯ; ಹಿಂತಿರುಗಿಸುವ ಗೋಜಿಲ್ಲ.
ನಮ್ಮ ದೇಶದಲ್ಲಿ ಭಿಕ್ಷುಕತ್ರ ಸಂಖ್ಯೆ ಅಧಿಕ, ಏನೊಂದೂ ಕೆಲಸ ಮಾಡದೆ, ಆಸ್ತಿಪಾಸ್ತಿ ಇಲ್ಲದೆ ಇರುವ ಭಿಕ್ಷುಕರು ಹೊಟ್ಟೆಯ ಭಾಡಿಗಾಗಿ ಊರಿಂದೂರಿಗೆ ಅಲೆಥು ಆಹಾರವನ್ನೊ, ದವಸಧಾನ್ಯವನ್ನೋ, ಹಣವನ್ನೊ ಭೇಡುತ್ತಾರೆ, ಕೆಲವರು ಬೇಡುವುದು ಮಾತ್ರವಲ್ಲ; ಭಿಕ್ಷೆಗಾಗಿ ಕಾಡುತ್ತಾರೆ, ಪೀಡಿಸುತ್ತಾರೆ ಕೂಡ, ಢಾ. ಫ.ಗ್ರಾ. ಬೇಂದ್ರೆಯವರು ಇದರ ಬಗ್ಗೆ (ತಿರುಕರ ಫಿಡುಗು) ಎಂಬ ಒಂದು ನಾಟಕವನ್ನೇ ಬರೆದಿದ್ದಾರೆ.
ಹಿಂದಿನ ಕಾಲದಲ್ಲಿ ಸನ್ಯಾಸಿಗಳೂ ವಿದ್ಯಾರ್ಥಿಗಳೂ ಆದವರು ಭಿಕ್ಷೆ ಮಾಡಬಹುದೆಂದು ಹಿಂಧೂ ಧರ್ಮಶಾಸ್ತ್ರಗಳು ಅವಕಾಶ ನೀಡಿದ್ದವು. ವಿದ್ಯಾರ್ಜನೆ ಮಾಡಬೇಕಾದ ವಿದ್ಯಾರ್ಥಿ ಊಟಕ್ಕೆ ಕಷ್ಟಪಡದ ಓದಲೆಂಬುದು ಸಾರ್ವಜನಿಕರ ದೃಷ್ಟಿಯಾಗಿತ್ತು. ತನ್ನ ಕಾಲವಲ್ಲಾ ಆಧ್ಯಾತ್ಮ ಸಾಧನೆ ಮತ್ತು ಜನರಿಗೆ ದೈವದ ಬಗ್ಗೆ ಹೇಳಲೆಂದು ಸನ್ಯಾಸಿಗೆ ಭಿಕ್ಷೆ ಬೇಡುವ ಅವಕಾಶ ಕಲ್ಪಿಸಲಾಯಿತು. ಉಳಿದವರೆಲ್ಲಾ ತಮ್ಮಕಾಯಕದಿಂದಲೇ ಡುಡಿದು ಉಣ್ಣಬೇಕೆಂಬ ನಿಯಮವಿತ್ತು,
ಬುದ್ಧನ ಕಾಲದಲ್ಲಿ ಸಹಸ್ರಾರು ಮಂದಿ ಭಿಕ್ಷುಕರು ಥರ್ಮೊಪದೇಶಕ್ಕಾಗಿ ದೇಶದಲ್ಲಿ ಸುತ್ತಾಡುತ್ತಿದ್ದರು, ಅವರು ಕೂಡಾ ಪರಾನ್ನದಿಂದಲೇ ಜೀವಿಸಬೇಕಾಗಿತ್ತು. 'ಅನ್ನವನ್ನು ಇಕ್ಕುವುದು, ನನ್ನಿಯು ನುಡಿಯುವುದು, ತನ್ನಂತೆ ಪರರ ಬಗೆಯುವುದು ಕೈಲಾಸಕ್ಕೆ ಬಿನ್ನಣವಕ್ಕು' ಎಂದು ಸರ್ವಜ್ಞ ಸಾರಿದ. ಆದರೆ ರಷ್ಯಾದ ಕಾರ್ಲ್ ಮಾರ್ಕ್ಸ್, ದುಡಿಯದ ಬೇಡುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಏರುಪೇರಾಗುತ್ತದೆಂದು ಸಾರಿದ. ಪ್ರತಿಯೊಬ್ಬ ವ್ಯಕ್ತಿಯೂ ತನಗೊಪ್ಪುವ ಕಾರ್ಯ ಮಾಡಲೇಬೇಕೆಂದು ಹೇಳಿದ. ಬಸವಣ್ಣನವರು 'ಕಾಯಕವೇ ಕೈಲಾಸ' ಎಂದು ಕಾಯಕ ಕಷ್ಟದ ಮಹತ್ವ ಸಾರಿದರು.
ಆದರೂ ಹೊಟ್ಟೆಗಿಲ್ಲದ ಬಡವರು ಭಿಕ್ಷೆಬೇಡುವುದೇ ತಮ್ಮ ಕಾಯಕವೆಂದು ತಿಳಿದರು. ಕಾಲಕ್ರಮದಲ್ಲಿ ಇಂಥವರ ಸಂಖ್ಯೆ ಬೆಳೆಯಿತು. ದಾಸಯ್ಯಗಳು, ಬುಡುಬುಡುಕೆಯವರು, ಬಡಬ್ರಾಹ್ಮಣರು, ಹರಿದಾಸರು, ಗಂಗೆತ್ತಿನವರು, ಕಣಿ ಹೇಳುವವರು, ಶಾಸ್ತ್ರ ಹೇಳುವವರು, ಮಾರಮ್ಮನಭಕ್ತರು, ಈ ವೃತ್ತಿಗೆ ಅಂಟಿಕೊಂಡರು.

ದೇವಾಲಯದ ಮುಂದೆ ಕುಳಿತು ಭಿಕ್ಷೆ ಬೇಡುವವರು, ದೇವರಿಗಾಗಿ ಭಿಕ್ಷೆ ಬೇಡುವವರು ಹೆಚ್ಚಾದರು. ಎಲ್ಲೆಲ್ಲೂ ಭಿಕ್ಷುಕರು ಹಾವಳಿ ಪ್ರಾರಂಭವಾಯಿತು. ಸರ್ಕಾರ ಭಿಕ್ಷುಕ ವೃತ್ತಿಯನ್ನು ನಿಷೇಧಿಸಿ ಕಾನೂನನ್ನೇ ಮಾಡಿತು. ಯಾವ ರೀತಿಯಲ್ಲೂ ಕೆಲಸ ಮಾಡಲಾಗದವರಿಗೆ ಭಿಕ್ಷುಕರ ಕಾಲೊನಿಗಳಾದವು. ಆದರೆ ಸಮಸ್ಯೆ ಬಗೆಹರಿಯಲಿಲ್ಲ.
ಯಾರು ಏನೇ ಹೇಳಿದರೂ, ಸೋಮಾರಿತನವೇ ಭಿಕ್ಷಾಟನೆಗೆ ಮೂಲ ಕಾರಣ. ಭಾರತದಲ್ಲಿ ದಾನಧರ್ಮ ಮಾಡಿದರೆ ಪುಣ್ಯ ಬರುತ್ತದೆಂಬ ನಂಬಿಕೆಯಿದೆ. ಈ ಕೆಟ್ಟ ಕರುಣೆ ಭಿಕ್ಷುಕರ ಸಂಖ್ಯೆ ಹೆಚ್ಚಲು ಕಾರಣವಾಯಿತು. ನಿಜವಾಗಿ ಭಿಕ್ಷಾವೃತ್ತಿಯನ್ನು ಪೋಷಿಸುವವರೇ ಈ ಕೆಟ್ಟ ಕರುಣೆಯುಳ್ಳ ಜನ. ಪರಾವಲಂಬಿಗಳಾದ ಭಿಕ್ಷುಕರು ಸಮಾಜಕ್ಕೆ ಬಂದಳಿಕೆ ಇದ್ದ ಹಾಗೆ, ಪರಾವಲಂಬಿಗಳಾದ ಭಿಕ್ಷುಕರಿಂದ ಕಳ್ಳತನ ದರೋಡೆಗಳಿಗೂ ಆಸ್ಪದವಾಯಿತು. ನಾನಾ ರೀತಿಯ ವಂಚನೆಗಳಿಗೆ ನಾಂದಿಯಾಯಿತು. ಭಿಕ್ಷುಕರಲ್ಲಿ ದುಶ್ಚಟಗಳೂ ಹೆಚ್ಚಿದವು. ಪರಿಸರ ನಾಶ, ಪರಿಸರ ಮಾಲಿನ್ಯಕ್ಕೂ ಭಿಕ್ಷುಕರು ಕಾರಣರಾದರು.
ಸ್ವಾಭಿಮಾನದ ಅಭಾವವೇ ಭಿಕ್ಷಾವೃತ್ತಿಗೆ ಮತ್ತೊಂದು ಕಾರಣ. ಆತ್ಮಗೌರವ ಇರುವ ಯಾವ ವ್ಯಕ್ತಿಯೂ ಭಿಕ್ಷೆ ಬೇಡಲಾರ. ಇದರಲ್ಲಿ ಕುಂಟರು ಕುರುಡರು ಇರಬಹುದು. ಕಣ್ಣಿಲ್ಲದವರು ಇರಬಹುದು. ಅಂಥವರೂ ಕೂಡ ತಮಗೆ ಸಾಧ್ಯವಾದ ವೃತ್ತಿ ಮಾಡಲು ಅವಕಾಶವಿದೆ. ಆದ್ದರಿಂದಲೇ ಸರ್ಕಾರ ಭಿಕ್ಷೆ ಬೇಡುವುದರ ವಿರುದ್ದ ನಿಷೇಧ ಹೇರಿದೆ. ಆದರೂ ಸಮಾಜದ ಜನರು ಎಂದಿನವರೆಗೆ 'ಪಾಪ-ಪುಣ್ಯ' ಎಂದು ಭಿಕ್ಷುಕರಿಗೆ ನೀಡುತ್ತಿರುತ್ತಾರೋ ಅಂದಿನವರೆಗೆ ಈ ದುಷ್ಟ ಪದ್ಧತಿ ಇದ್ದೇ ಇರುತ್ತದೆ. ಭಿಕ್ಷುಕರನ್ನೂ ಸ್ವಂತ ಗೌರವಾನ್ವಿತ ವೃತ್ತಿ ಮಾಡಲು ಪ್ರಚೋದಿಸಬೇಕು. ಅವರಿಗೆ ಇಷ್ಟವಾದ ಕಸುಬುಗಳಲ್ಲಿ ವೃತ್ತಿ ತರಬೇತಿ ನೀಡಬೇಕು. ಇದರಿಂದ ಅವರ ಜೀವನ ನಿರ್ವಹಣೆ ಸಾಗುತ್ತದೆ. ಸಮಾಜ ಮತ್ತು ಸರ್ಕಾರ - ಇವೆರಡೂ ಪ್ರಯತ್ನಿಸಿ ಭಿಕ್ಷಾಪದ್ಧತಿಯನ್ನು ನಿರ್ಮೂಲನಗೊಳಿಸಬೇಕು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: