ಛತ್ರಪತಿ ಶಿವಾಜಿ ಪ್ರಬಂಧ Chhatrapati Shivaji Prabandha Kannada

Admin
0
Essay on Chhatrapati Shivaji in Kannada language: In this article, we are providing ಛತ್ರಪತಿ ಶಿವಾಜಿ ಪ್ರಬಂಧ for students and teachers. Students can use this Chhatrapati Shivaji Prabandha Kannada to complete their homework.

ಛತ್ರಪತಿ ಶಿವಾಜಿ ಪ್ರಬಂಧ Chhatrapati Shivaji Prabandha Kannada

ತನ್ನ ಸೈನಿಕರಿಗೆ “ಮಸೀದಿಗಳನ್ನು ಹಾಳು ಮಾಡಬಾರದು; ಖುರಾನ್‌ನನ್ನು ನಾಶಮಾಡಬಾರದು, ಪರಸ್ತ್ರೀಯರನ್ನು ಗೌರವದಿಂದ ಕಾಣಬೇಕು” ಎಂದು ಕಟ್ಟಪ್ಪಣೆ ಮಾಡಿದ್ದ ಶಿವಾಜಿ ಪುಣೆಯ ಬಳಿಯಿರುವ ಶಿವನೇರಿ ಕೋಟೆಯಲ್ಲಿ 1627 ಏಪ್ರಿಲ್ 6 ರಂದು ಜನಿಸಿದ. ತಂದೆ ಷಹಾಜಿ, ಬಿಜಾಪುರದ ಸುಲ್ತಾನ ಆದಿಲ್‌ಷಾನ ಸೇನಾಪತಿಯಾಗಿದ್ದ. ತಾಯಿ ಬೇಜಾಬಾಯಿ, ದೈವಭಕ್ಕಳು, ಸ್ವಾತಂತ್ರ್ಯ ಪ್ರೇಮಿ, ರಕ್ಷಕ ದಾದಾಜಿಕೊಂಡದೇವ. ಪ್ರೇರಕಶಕ್ತಿಯಾಗಿದ್ದವರು ಸಮರ್ಥರಾಮದಾಸರು. ಈ ಎಲ್ಲರ ನೇತೃತ್ವದಲ್ಲಿ ಶಿವಾಜಿ ದೈವಭಕ್ತನಾಗಿ, ಸ್ವಾತಂತ್ರ್ಯ ಪ್ರೇಮಿಯಾಗಿ, ವೀರನಾಗಿ ರೂಪುಗೊಂಡ. ಹಿಂದೂ ಧರ್ಮ ರಕ್ಷಣೆ ಅವರ ಧೈಯವಾಯಿತು. ಅದಕ್ಕಾಗಿ ಮರಾಠರ ಶಕ್ತಿಯನ್ನು ಬೆಳಸಿ ಮರಾಠರ ಸಾಮ್ರಾಜ್ಯ ಸ್ಥಾಪನೆಗೆ ಅಸ್ತಿಭಾರ ಹಾಕಿದ. ಹದಿನಾರು ವಯಸ್ಸಿನ ಶಿವಾಜಿ ಸಹ್ಯಾದ್ರಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವಕರನ್ನು ಸೇರಿಸಿಕೊಂಡು ಆದಿಲ್‌ಷಾನ ಹತೋಟಿಯಲ್ಲಿದ್ದ ತೋರಣಕೋಟೆಯನ್ನೂ ಮುಂದ ಬಿಜಾಪುರದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡ.
ಛತ್ರಪತಿ ಶಿವಾಜಿ ಪ್ರಬಂಧ Chhatrapati Shivaji Prabandha Kannada
ಬಲಿಷ್ಠನಾಗುತ್ತಿದ್ದ ಶಿವಾಜಿಯ ಶಕ್ತಿಯನ್ನು ಭಂಗಪಡಿಸಲು ಬಿಜಾಪುರದ ಸುಲ್ತಾನ 1659ರಲ್ಲಿ ತನ್ನ ಸೇನಾಪತಿ ಅಲ್‌ಖಾನ್‌ನನ್ನು ಕಳಿಸಿದ. “ಆ ದಂಗೆಕೋರನನ್ನು ಜೀವಂತವಾಗಲೀ, ಮರಣಿಸಿಯಾಗಲೀ ತರಬೇಕು” ಎಂದು ಸುಲ್ತಾನ ಆದೇಶಿಸಿದ. ಅಫ್ಘಲ್‌ಖಾನ್ ಒಪ್ಪಂದದ ಮಾತುಗಳನ್ನಾಡಲು ಶಿವಾಜಿಯನ್ನು ಬರಹೇಳಿ ಮೋಸದಿಂದ ಅವನನ್ನು ಕೊಲ್ಲಿಸುವ ಪ್ರಯತ್ನ ಮಾಡಿದ. ಆದರೆ ಶಿವಾಜಿಯದೇ ಮೇಲುಗೈಯಾಗಿ ಅಫೇಲ್‌ಖಾನ್ ಮರಣಿಸಿದ. ದೆಹಲಿಯ ಸಾಮ್ರಾಟನಾಗಿದ್ದ ಔರಂಗಜೇಬ್ ದಕ್ಕನ್ ಪ್ರದೇಶದ ತನ್ನ ಅಧಿಕಾರಿ ಷಯಿಸ್ತಾಖಾನ್‌ನನ್ನು 1663ರಲ್ಲಿ ಶಿವಾಜಿಯನ್ನು ನಿಗ್ರಹಿಸಲು ಕಳಿಸಿದ. ಆದರೆ ಶಿವಾಜಿ ಅವನನ್ನು ಸೋಲಿಸಿದ. 1664ರಲ್ಲಿ ಉತ್ತಮ ಬಂದರು ಸೂರತ್‌ನ್ನು ಮುತ್ತಿ ಅಪಾರ ಹಣವನ್ನು ವಶಪಡಿಸಿಕೊಂಡ. ಔರಂಗಜೇಬ್ ಇದರಿಂದ ಕೋಪಗೊಂಡು ಅಂಬರದ ರಾಜ ಜಯಸಿಂಹನನ್ನು ಶಿವಾಜಿಯ ಪ್ರಾಬಲ್ಯವನ್ನು ಮುರಿಯಲು ಕಳಿಸಿದ. 1665ರಲ್ಲಿ ಶಿವಾಜಿ ಯುದ್ಧದಲ್ಲಿ ಸೋತು ತನ್ನ ಹಲವು ಕೋಟೆಗಳನ್ನು ಮೊಘಲರಿಗೆ ಒಪ್ಪಿಸಬೇಕಾಯಿತು. ಒಪ್ಪಂದ ಮಾಡಿಕೊಳ್ಳಲು ಶಿವಾಜಿಯನ್ನು ದೆಹಲಿಗೆ ಬರಮಾಡಿಕೊಂಡ ಔರಂಗಜೇಬ್ ಅವನನ್ನು ಬಂಧನದಲ್ಲಿರಿಸಿದ. ಶಿವಾಜಿ ಸೆರೆಯಿಂದ ತಪ್ಪಿಸಿಕೊಂಡು ಬಂದು ತಾನು ಮೊಘಲರಿಗೆ ಒಪ್ಪಿಸಿದ್ದ ಕೋಟೆಗಳನ್ನು ಪುನಃ ಗೆದ್ದ. 1670ರಲ್ಲಿ ಮತ್ತೆ ಸೂರತ್ ಮೇಲೆ ದಾಳಿ ಮಾಡಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿದ.

1674ರಲ್ಲಿ ತಾನೇ ನಿರ್ಮಿಸಿದ 'ರಾಯಗಢ'ದಲ್ಲಿ ಶಿವಾಜಿಯ ಪಟ್ಟಾಭಿಷೇಕ ನಡೆಯಿತು. ಅವನು “ಛತ್ರಪತಿ'ಯಾದ ದಕ್ಷಿಣದ ವೆಲ್ಲೂರು, ಜಿಂಜಿ ಮೊದಲಾದ ಆಯಕಟ್ಟಿನ ಕೋಟೆಗಳನ್ನು ಜಯಿಸಿದ. 1680ಏಪ್ರಿಲ್ 14ರಂದು ಶಿವಾಜಿ ಮರಣಿಸಿದ.

ಶಿವಾಜಿ ದಕ್ಷ ಸೇನಾಪತಿ, ಸಮರ್ಥ ಆಡಳಿತಗಾರನಾಗಿದ್ದ. 8 ಜನ ಮಂತ್ರಿಗಳು ಅವನಿಗೆ ಆಡಳಿತದಲ್ಲಿ ಸಲಹೆ ನೀಡುತ್ತಿದ್ದರು. ಹಿಂದೂಧರ್ಮದ ಬಗೆಗೆ ಅಪಾರ ಶ್ರದ್ದೆಯಿತ್ತು. ಇತರ ಧರ್ಮಗಳನ್ನು ಆದರಿಸುತ್ತಿದ್ದ. ಮೊಘಲರು ಮತ್ತು ದಖನ್ನಿನ ಸುಲ್ತಾನರೊಡನೆ ಹೋರಾಡಿ, ಮಹಾರಾಷ್ಟ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದೂ ಸಾಮ್ರಾಜ್ಯವನ್ನು ಕಟ್ಟಿ, ಹಿಂದೂ ಧರ್ಮವನ್ನು ಪೋಷಿಸಿದ ಕೀರ್ತಿ, ಗೌರವ ಛತ್ರಪತಿ ಶಿವಾಜಿಯದು.
ಡಾ. ಕಲ್ಪನಾ ಚಾವ್ಹಾ (1961-2003) ಭಾರತದ ಗುಜರಾತ್ ಪ್ರಾಂತದ ಕರ್ನಾಲ್ ಎಂಬಲ್ಲಿ ಜನಿಸಿದ ಕಲ್ಪನಾ ಚಾವ ಭಾರತೀಯ ಮೂಲದ ಅಮೆರಿಕಾ ನಾಸಾದ ಗಗನಯಾತ್ರಿ. 1976ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ 'ಏರೋನಾಟಿಕಲ್ ಇಂಜಿನಿಯರಿಂಗ್'ನಲ್ಲಿ ಪದವಿ ಪಡೆದ ಇವರು * 1982ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾನಿಲಯದಿಂದ 'ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ತಮ್ಮ ಉನ್ನತ ಪದವಿ ಪಡೆದರು. 1988ರಲ್ಲಿ ಇವರು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕೊಲರಡೂ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.
1988ರಲ್ಲಿ ಅಮೆರಿಕಾದ ವಿಶ್ವದ ಪ್ರಸಿದ್ದ ನಾಸಾ (NASA) ಸಂಸ್ಥೆ 'ಸಹಯೋಗದೊಂದಿಗೆ ಗತಿ ವಿಜ್ಞಾನದ (Fluid Dynamics) ವಿಷಯದಲ್ಲಿ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1993ರಲ್ಲಿ ಕ್ಯಾಲಿಫೋರ್ನಿಯಾದ ಓವರ್‌ಸೆಟ್ ಮೆಥಡ್ಸ್ ಇಂಕ್ (Overset Methods Inc.)ಗೆ ಉಪಾಧ್ಯಕ್ಷರಾಗಿ ಸೇರಿ ಅಲ್ಲಿ ಸಂಶೋಧನಾ ವಿಜ್ಞಾನಿಗಳ ಗುಂಪಿಗೆ ನಾಯಕರಾದರು. ಅಲ್ಲಿ ಗಗನಯಾನದ ವೇಳೆ ಮಾನವನ ಶರೀರದ ವಿವಿಧ ತೊಂದರೆಗಳ ಬಗ್ಗೆ ಅಧ್ಯಯನ ಪ್ರಾರಂಭಿಸಿದರು. ಹಲವಾರು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಹೆಸರು ಗಳಿಸಿದರು. 1994ರಲ್ಲಿ ಚಾನ್ಹಾ NASAಗೆ ಅಧಿಕೃತವಾಗಿ ಸೇರಿದರು.
ಅವರು ಗಗನಯಾನ ಅಭ್ಯರ್ಥಿಯಾಗಿ ಗಗನಯಾತ್ರಿಕಳ 15ನೇ ಗುಂಪಿನಲ್ಲಿ ಮಾರ್ಚ್ 1995ರಲ್ಲಿ ಸೇರಿದರು. ಒಂದು ವರ್ಷದ ಕಠಿಣ ತರಬೇತಿ ಮುಗಿಸಿದ ಚಾಪ್ಲಾ ಅವರಿಗೆ EVA/Robotics ಮತ್ತು ಕಂಪ್ಯೂಟರ್ ವಿಭಾಗದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ಮಾಡುವ ಜವಾಬ್ದಾರಿ ವಹಿಸಲಾಯಿತು. ಸಂಶೋಧನೆ ಫಲಪ್ರದವಾಯಿತು. ಅಲ್ಲಿಂದ ಅವರಿಗೆ ಗಗನಯಾನದ ಹಲವಾರು ಘಟ್ಟಗಳು ಪ್ರಾರಂಭವಾಯಿತು ಎಂದೇ ಹೇಳಬೇಕು.
ನವೆಂಬರ್ 1996ರಲ್ಲಿ ಕಲ್ಪನಾ ಅವರನ್ನು ಮಿಷನ್ STS-87 ಗಗನ ನೌಕೆಯ (Prime Robotic Arm Operator) PRAO ಆಗಿ ನೇಮಿಸಲಾಯಿತು. ಅದೇ ಅವರ ಪ್ರಥಮ ಗಗನಯಾನ. ಅವರು STS-87 (1997)ಹಾಗೂ STS-107(2003)ರಲ್ಲಿ 30 ದಿನ 14 ಗಂಟೆ 54 ನಿಮಿಷ ಗಗನಯಾನ ಮಾಡಿದ್ದರು. STS-87 ನೌಕೆಯು ತನ್ನ ಯಾನದ ವೇಳೆ 252 ಬಾರಿ ಭೂಮಿಯನ್ನು ಪ್ರದಕ್ಷಿಣೆ ಹಾಕಿ, 6.5 ದಶಲಕ್ಷ ಮೈಲಿ ದೂರವನ್ನು 376ಘಂಟೆ ಹಾಗೂ 34 ನಿಮಿಷದಲ್ಲಿ ಕ್ರಮಿಸಿತ್ತು.
ಯಾರೂ ಊಹಿಸಲಾರದ ಒಂದು ಘಟನೆ ನಡೆದೇ ಹೋಗಿತ್ತು. ಫೆಬ್ರವರಿ 1, 2003ರಲ್ಲಿ ಕೊಲಂಬಿಯಾ ಗಗನನೌಕೆ ಭೂಮಿಗೆ ಮರಳುವಾಗ 16ನಿಮಿಷ ಮೊದಲೇ ಭೂಮಿಗೆ ಅಪ್ಪಳಿಸಿತು. ಅದರಲ್ಲಿದ್ದ ಗಗನಯಾನಿಗಳ ಜೊತ ಕಲ್ಪನಾಚಾಟ್ಲಾ ಕೂಡಾ ಅಸು ನೀಗಿದ್ದರು. 16ದಿನದ ಈ ಯಾನದಲ್ಲಿ ದಿನದ 24 ಗಂಟೆಗಳೂ ಗಗನಯಾನಿಗಳು ಸುಮಾರು 80 ಪ್ರಯೋಗಗಳನ್ನು ಮಾಡಿದ್ದರು. ಎಲ್ಲ ಪ್ರಯೋಗಗಳಲ್ಲಿಯೂ ಸಫಲರಾಗಿದ್ದರು.
ಭಾರತೀಯರಷ್ಟೇ ಏಕೆ ವಿಶ್ವದ ಪ್ರತಿಯೊಬ್ಬರೂ ಗೌರವಿಸಬೇಕಾದ ಮಹಿಳೆ ಕಲ್ಪನಾ ಚಾವ್ಹಾ ವಿಜ್ಞಾನಿಯಾಗಿ, ಗಗನಯಾನಿಯಾಗಿ ನಮ್ಮ ಮನಸ್ಸಿನಲ್ಲಿ ಅಮರರಾಗಿದ್ದಾರೆ.
Tags

Post a Comment

0Comments
Post a Comment (0)

#buttons=(Accept !) #days=(20)

Our website uses cookies to enhance your experience. Learn More
Accept !