Saturday, 14 March 2020

15 ಆಗಸ್ಟ್ ಸ್ವಾತಂತ್ರ್ಯ ದಿನ ಪ್ರಬಂಧ 15 August Independence Day Essay in Kannada

15 August Independence Day Essay in Kannada Language: In this article, we are providing 15 ಆಗಸ್ಟ್ ಸ್ವಾತಂತ್ರ್ಯ ದಿನ ಪ್ರಬಂಧ for students and teachers. Students can use this 15 August Independence Day Essay in Kannada Language to complete their homework.

15 ಆಗಸ್ಟ್ ಸ್ವಾತಂತ್ರ್ಯ ದಿನ ಪ್ರಬಂಧ 15 August Independence Day Essay in Kannada

1.ಸಂಕೋಲೆ ಹರಿಯಿತು 2.ಸಂಭ್ರಮದ ವಾತಾವರಣ.3.ರಾಷ್ಟ್ರಧ್ವಜ 4.ರಾಷ್ಟಗೌರವ 5. ಉಪಸಂಹಾರ

1947 ಆಗಸ್ಟ್ 14ರ ಮಧ್ಯರಾತ್ರಿಗೆ ಸ್ವಲ್ಪ ಮುಂಚೆ ಪಂಡಿತ ಜವಾಹರಲಾಲ ನೆಹರು ಭಾರತೀಯ ರಾಜ್ಯಾಂಗ ರಚನಾ ಸಭೆಯನ್ನು ಕುರಿತು ಈ ರೀತಿ ಹೇಳಿದರು. “ಮಧ್ಯರಾತ್ರಿ ಮುಗಿಯುತ್ತಲೇ ಜಗತ್ತು ನಿದ್ರಿಸುತ್ತಿರುವಾಗ ಭಾರತ ಎಚ್ಚೆತ್ತು ಜೀವತಳೆದು ಸ್ವತಂತ್ರವಾಗುತ್ತದೆ. ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಕಾಲಿಡುತ್ತೇವೆ. ಯುಗವೊಂದು ಅಂತ್ಯವಾಗುತ್ತದೆ. ದೀರ್ಘಕಾಲದಿಂದ ಅದುಮಿಹಿಡಿಯಲ್ಪಟ್ಟ ರಾಷ್ಟ್ರವೊಂದರ ಆತ್ಮನುಡಿಯತೊಡಗುತ್ತದೆ.” ಆಗಸ್ಟ್ 15 ಆರಂಭವಾದಂತೆ ಭಾರತ ತನ್ನೆಲ್ಲಾ ಬಂಧನದ ಸಂಕೋಲೆಗಳನ್ನು ಕಳಚಿಕೊಂಡು ಸ್ವತಂತ್ರವಾಯಿತು. ಬ್ರಿಟಿಷರ ಹಿಡಿತದಿಂದ ಬಿಡಿಸಿಕೊಂಡು ಭಾರತ ಸ್ವತಂತ್ರವಾಯಿತು. ಅದನ್ನು ಸಾಧಿಸಲು ಭಾರತೀಯರು ಸುಮಾರು ಒಂದು ಶತಮಾನ ಕಾಲ ಹೋರಾಡಬೇಕಾಯಿತು. ಆಗಸ್ಟ್ 15ರಂದು ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ.

ಭಾರತದ ರಾಜಧಾನಿ ದೆಹಲಿಯ ಪುರಾನತ ಕೆಂಪುಕೋಟೆಯಲ್ಲಿ ಆಕರ್ಷಕ ಸಮಾರಂಭ ನಡೆಯುತ್ತದೆ. ಸ್ವಾತಂತ್ರ್ಯ ಘೋಷಣೆಯಾದಾಗ ಇದೇ ಸ್ಥಳದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿದ್ದು, ಪ್ರಧಾನ ಮಂತ್ರಿ ಆಗಸ್ಟ್ 15 ರಂದು ಬೆಳಗ್ಗೆ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುತ್ತಾರೆ. ಕೋಟೆಯ ವಿಶಾಲ ಮೈದಾನದಲ್ಲಿ ಅವರು ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಜನರನ್ನು ಉದ್ದೇಶಿಸಿ ಮಾತಾಡುತ್ತಾರೆ. ಅನಂತರ ಮರವಣಿಗೆ, ಕವಾಯಿತು ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ.

ಈ ದಿನ ರಾಷ್ಟ್ರದ ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಧ್ವಜವಂದನೆ ನಡೆಯುತ್ತದೆ. ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಶಾಲಾ ಮಕ್ಕಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ನಾಗರಿಕರು ಈ ಸಮಾರಂಭಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಸಿಹಿ ವಿನಿಯೋಗವೂ ಇರುತ್ತದೆ. ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಛೇರಿಗಳಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ರಾಷ್ಟ್ರಧ್ವಜ: ಭಾರತದ ತ್ರಿವರ್ಣರಂಜಿತ ರಾಷ್ಟ್ರಧ್ವಜವನ್ನು1947 ಜುಲೈ 22ರಂದು ರಾಜ್ಯಾಂಗ ರಚನಾಸಭೆ ಅಂಗೀಕರಿಸಿತು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳಿರುವ ರಾಷ್ಟ್ರಧ್ವಜದ ಒಳಪಟ್ಟಿಯ ನಡುವೆ ಕಡುನೀಲಿ ಬಣ್ಣದ ಅಶೋಕ ಚಕ್ರವಿದೆ. ರಾಷ್ಟ್ರಧ್ವಜಕ್ಕೆ ಉಪಯೋಗಿಸುವ ವಸ್ತ ಹತ್ತಿಯ ಖಾದಿ ಅಥವಾ ಕೈಯಿಂದ ನೇಯ್ದ ಉಣ್ಣೆ, ರೇಷ್ಮೆ ಬಟ್ಟೆಯದಾಗಿರಬೇಕು. 2 ಅಡಿ x3 ಅಡಿ ಧ್ವಜದ ಅಗಲ ಮತ್ತು ಉದ್ದಗಳ ಪ್ರಮಾಣ. ಧ್ವಜ ಹಾರಿಸುವಾಗ ಕೇಸರಿ ಬಣ್ಣ ಸದಾ ಮೇಲ್ಬಾಗದಲ್ಲಿರಬೇಕು. ಸ್ವಾತಂತ್ರ್ಯದಿನ, ಗಣರಾಜ್ಯದಿನ, ಗಾಂಧಿಜಯಂತಿ ಮುಂತಾದ ರಾಷ್ಟ್ರೀಯ ದಿನಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. * ಕೇಸರಿ ಬಣ್ಣ ಸೈರ್ಯ, ತ್ಯಾಗವನ್ನು, ಬಿಳಿ ಬಣ್ಣ ಸತ್ಯ ಮತ್ತು ಶಾಂತಿಯನ್ನು ಹಸಿರು ಬಣ್ಣ ಭರವಸೆ, ಶೌರ್ಯಗಳನ್ನು ಪ್ರತಿನಿಧಿಸುತ್ತವೆ. ಕಡುನೀಲ ಬಣ್ಣದ ಅಶೋಕನ ಧರ್ಮಚಕ್ರವನ್ನು ಬಿಳಿಪಟ್ಟಿಯಲ್ಲಿ ಸೇರಿಸಲಾಗಿದೆ. ರಾಷ್ಟ್ರಧ್ವಜ ನಮ್ಮೆಲ್ಲರ ಗೌರವದ ಸಂಕೇತ ಇದಕ್ಕೆ ಅಪಮಾನವಾಗುವಂತೆ ಎಂದಿಗೂ ನಡೆದುಕೊಳ್ಳಬಾರದು.

ಭಾರತಕ್ಕೆ ಒಂದು ರಾಷ್ಟ್ರಧ್ವಜವಿರುವಂತೆ ಒಂದು ರಾಷ್ಟ್ರಗೀತೆಯೂ ಇದೆ. 'ಜನಗಣಮನ....' ಇದು ನಮ್ಮ ದೇಶದ ರಾಷ್ಟ್ರಗೀತೆ. ಅಂತೆಯೇ ನವಿಲು ಭಾರತದ ರಾಷ್ಟ್ರಪಕ್ಷಿ, ರಾಷ್ಟಪ್ರಾಣಿ ಹುಲಿ, ರಾಷ್ಟ್ರಭಾಷೆಯಾದ ಹಿಂದಿ, ಭಾರತ ಒಕ್ಕೂಟದ ಅಧಿಕೃತ ಭಾಷೆಯಾಗಿ 1965 ಜನವರಿ 16ರಂದು ಅಂಗೀಕೃತವಾಯಿತು. ರಾಷ್ಟ್ರಲಾಂಛನ ಅಶೋಕ ಚಕ್ರ ಮತ್ತು ರಾಷ್ಟಸ್ತವನ ವಂದೇಮಾತರಂ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

5 comments:

 1. It's A Good Essay My Grandchild had to give a speech on Rashtr Dwaja so she took help from this and she one the 1 prize in speech competition.Thank u

  ReplyDelete
 2. ⭐⭐⭐⭐⭐ stars for this Essay Thank u

  ReplyDelete
 3. I want to give a speech on Independence day infront if Karnataka's CM and he gave me shabash
  ⭐⭐⭐⭐⭐Stars for this Essay Thank you

  ReplyDelete