Essay on Spring Season in Kannada: In this article, we are providing ಕನ್ನಡ ವಸಂತ ಋತು ವನ್ನು ಪ್ರಬಂಧ for students and teachers. Students can use this Essay on Spring Season in Kannada Language to complete their homework. ಭಾರತ ಋತುಗಳ ದೇಶ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ-ಈ ಆರು ಋತುಗಳು ನಮ್ಮ ದೇಶದಲ್ಲಿ ಕ್ರಮವಾಗಿ ಕಾಲಿಡುತ್ತವೆ. ಇದು ಬೇರೆ ದೇಶಗಳಲ್ಲಿ ದುರ್ಲಭ. ಪ್ರತಿ ಋತುವಿಗೂ ತನ್ನದೇ ಆದಂತಹ ಆಕರ್ಷಣೆ ಮತ್ತು ಸೊಬಗು ಇದೆ. ಆದರೆ ಈ ಎಲ್ಲ ಋತು ಅಪ್ಸರೆಯರಲ್ಲಿ ನನಗೆ ವಸಂತ ಋತು ತುಂಬ ಪ್ರಿಯ. ವಸಂತ ಋತುವಿನ ಸೌಂದರ್ಯ ಮನಮೋಹಕ. ಶಿಶಿರ ಋತು ಮುಗಿಯುತ್ತಲೇ ವಸಂತ ಋತು ನವ ವಧುವಿನಂತ ಸರ್ವಾಲಂಕಾರಭೂಷಿತೆಯಾಗಿ ಮಂದಗಮನದಿಂದ ಹೆಜ್ಜೆಯಿಡುತ್ತಾಳ, ಉದ್ಯಾನ ವನಗಳು, ತೋಟ, ಕಾಡು ಈ ಋತು ಸುಂದರಿಯನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುತ್ತವೆ. ಮೊಗ್ಗುಗಳು ತಮ್ಮ ಮುಸುಕು ತೆಗೆಯುತ್ತವೆ. ಹೂವುಗಳು ತಮ್ಮಲ್ಲಿನ ಸುಗಂಧವನ್ನು ಪಸರಿಸುತ್ತವೆ. ಭ್ರಮರಗಳು ತಮ್ಮ ಮಧುರಗಾನದಿಂದ ಹಾರಾಡುತ್ತವೆ. ರಂಗುರಂಗಿನ ಆಕರ್ಷಕ ಚಿಟ್ಟೆಗಳು ವಸಂತ ಋತುವನ್ನು ಪ್ರೀತಿಯಿಂದ ಸ್ವಾಗತಿಸುತ್ತವೆ. ನೆಲದ ಕಣಕಣಗಳಲ್ಲಿ ಹೊಸ ಆನಂದ, ಹೊಸ ಉತ್ಸಾಹ, ಮಧುರ ಸಂಗೀತ, ಹೊಸ ಜೀವನ ತರಂಗ ಪುಟಿಯುತ್ತದೆ.
Essay on Spring Season in Kannada: In this article, we are providing ಕನ್ನಡ ವಸಂತ ಋತು ವನ್ನು ಪ್ರಬಂಧ for students and teachers. Students can use this Essay on Spring Season in Kannada Language to complete their homework.
1.ಭಾರತದಲ್ಲಿ ಋತುಗಳ ಆಗಮನ 2.ಪ್ರಿಯ ಋತುವಿನ ಪರಿಚಯ 3. ಋತು ಪ್ರಿಯವಾಗಲು ಕಾರಣ. 4.ಬೇರೆ ಋತುಗಳ ಜೊತೆ ಹೋಲಿಕೆ 5. ಉಪಸಂಹಾರ
ಭಾರತ ಋತುಗಳ ದೇಶ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ-ಈ ಆರು ಋತುಗಳು ನಮ್ಮ ದೇಶದಲ್ಲಿ ಕ್ರಮವಾಗಿ ಕಾಲಿಡುತ್ತವೆ. ಇದು ಬೇರೆ ದೇಶಗಳಲ್ಲಿ ದುರ್ಲಭ. ಪ್ರತಿ ಋತುವಿಗೂ ತನ್ನದೇ ಆದಂತಹ ಆಕರ್ಷಣೆ ಮತ್ತು ಸೊಬಗು ಇದೆ. ಆದರೆ ಈ ಎಲ್ಲ ಋತು ಅಪ್ಸರೆಯರಲ್ಲಿ ನನಗೆ ವಸಂತ ಋತು ತುಂಬ ಪ್ರಿಯ.
ವಸಂತ ಋತುವಿನ ಸೌಂದರ್ಯ ಮನಮೋಹಕ. ಶಿಶಿರ ಋತು ಮುಗಿಯುತ್ತಲೇ ವಸಂತ ಋತು ನವ ವಧುವಿನಂತ ಸರ್ವಾಲಂಕಾರಭೂಷಿತೆಯಾಗಿ ಮಂದಗಮನದಿಂದ ಹೆಜ್ಜೆಯಿಡುತ್ತಾಳ, ಉದ್ಯಾನ ವನಗಳು, ತೋಟ, ಕಾಡು ಈ ಋತು ಸುಂದರಿಯನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುತ್ತವೆ. ಮೊಗ್ಗುಗಳು ತಮ್ಮ ಮುಸುಕು ತೆಗೆಯುತ್ತವೆ. ಹೂವುಗಳು ತಮ್ಮಲ್ಲಿನ ಸುಗಂಧವನ್ನು ಪಸರಿಸುತ್ತವೆ. ಭ್ರಮರಗಳು ತಮ್ಮ ಮಧುರಗಾನದಿಂದ ಹಾರಾಡುತ್ತವೆ. ರಂಗುರಂಗಿನ ಆಕರ್ಷಕ ಚಿಟ್ಟೆಗಳು ವಸಂತ ಋತುವನ್ನು ಪ್ರೀತಿಯಿಂದ ಸ್ವಾಗತಿಸುತ್ತವೆ. ನೆಲದ ಕಣಕಣಗಳಲ್ಲಿ ಹೊಸ ಆನಂದ, ಹೊಸ ಉತ್ಸಾಹ, ಮಧುರ ಸಂಗೀತ, ಹೊಸ ಜೀವನ ತರಂಗ ಪುಟಿಯುತ್ತದೆ.
ಇಡೀ ಪ್ರಕೃತಿ ವಸಂತನ ಆಗಮನದಿಂದ ಸಡಗರ ಪಡುವಾಗ ನಾನೇಕೆ ಸಡಗರ ಪಡಬಾರದು? ವಸಂತ ನನ್ನ ಮನಸ್ಸಿಗೆ ಸಂತೋಷಕೊಡುವ ಋತು ಎನ್ನುವಲ್ಲಿ ಸಂದೇಹವಿಲ್ಲ. ಒಂದೆಡೆ ಶೀತಲ, ಮಂದ, ಸುಗಂಧ ಪವನದ ಮಧುರ ಆಹ್ಲಾದ, ಮತ್ತೊಂದೆಡೆ ರಂಗುರಂಗಿನ ಹೂಗಿಡಗಳ ಸೌಂದರ್ಯ-ಮುದುಕರಲ್ಲಿ ತರುಣರ ಉತ್ಸಾಹವನ್ನು ತುಂಬುತ್ತದೆ. ಬಿಸಿಲಿನ ಝಳವಿಲ್ಲ, ಚಳಿಯ ಅವಾಂತರವಿಲ್ಲ. ಪ್ರಕೃತಿಯ ರಂಗುರಂಗಿನ ಹೋಳಿ ನನಗೆ ಸ್ವರ್ಗದ ಆನಂದವನ್ನು ನೀಡುತ್ತದೆ. ಮನಸ್ಸಿಗೆ ಮುದ ಕೊಡುವ ಋತುಗಳ ರಾಜ ವಸಂತ ನನಗೆ ಪ್ರಿಯವಾಗಿರುವುದರಲ್ಲಿ ಆಶ್ಚರ್ಯವಿಲ್ಲ.
ಕೆಲವರು ವರ್ಷ ಋತುವನ್ನು ವಸಂತ ಋತುವಿಗಿಂತಲೂ ಚೆನ್ನ ಎಂದು ಹೇಳುವುದುಂಟು. ಆದರೆ ಸದಾ ಕಿಚ್, ಕಿಚ್ ಎನ್ನುವ, ಬೋರ್ ಮಳೆಯ ಉಸಿರು ಕಟ್ಟುವ ವಾತಾವರಣಕ್ಕಿಂತ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವ ವಸಂತವೇ ಚೆನ್ನ. ಮಳೆಯ ಆರ್ಭಟ ಮನೆಗಳನ್ನು ಉರುಳಿಸಿ, ನದಿಗಳಲ್ಲಿ ಹುಚ್ಚು ಹೊಳೆಯಾಗಿ, ಫಸಲು ಇತ್ಯಾದಿಯನ್ನು ಹಾಳು ಮಾಡಿ ಜನ ಜಾನುವಾರುಗಳನ್ನು ಧ್ವಂಸ ಮಾಡುತ್ತದೆ. ಹಳ್ಳಿಗಳನ್ನು ನೆಲಸಮ ಮಾಡುತ್ತದೆ. ಇಂಥ ವರ್ಷಋತು ಹೇಗೆ ತಾನೇ ಪ್ರಿಯವಾಗಬಲ್ಲದು? ಅಂತೆಯೇ ಶರತ್ ಋತುವಿನ ಶೋಭೆ ವಸಂತ ಋತುವಿನ ಸೌಂದರ್ಯದೆದುರು ತಲೆ ತಗ್ಗಿಸುತ್ತದೆ. ವಸಂತ ನಿಜವಾಗಿ ಋತುಗಳ ರಾಜ. ಬೇರೆ ಎಲ್ಲಾ ಋತುಗಳು ವಸಂತ ಋತುವಿನ ರಾಣಿಯರಾಗಬಹುದು ಅಥವಾ ಸೇವಕಿಯರಾಗಬಹುದು ಅಷ್ಟೆ.
ನಾನು ವಸಂತ ಋತುವನ್ನು 'ಜೀವನ ಋತು' ಎಂದೇ ತಿಳಿದಿದ್ದೇನೆ. ವಸಂತ ದಾಂಗುಡಿಯಿಡುತ್ತಲೇ ನನ್ನ ಮನಸ್ಸಿನಲ್ಲಿ ಆಹ್ಲಾದ ತುಂಬಿ ಬರುತ್ತದೆ. ನನ್ನ ಜೀವನದ ಕಾಮನ ಬಿಲ್ಲಿನಲ್ಲಿ ಸುಂದರ ಬಣ್ಣಗಳು ಸಿಡಿಯುತ್ತವೆ. ನನ್ನ ಕಲ್ಪನೆ ಜಾಗೃತವಾಗುತ್ತದೆ. ಕೈತೋಟ, ವನ, ಉದ್ಯಾನವನಗಳಲ್ಲಿ ವಿಹರಿಸಲು ನನ್ನ ಮನಸ್ಸು ತವಕಿಸುತ್ತದೆ. ನನ್ನ ಮನಸ್ಸಿನಲ್ಲಿ ಸೂರ್ಯೋದಯದ ತರಂಗಗಳೇಳುತ್ತವೆ. ಕೋಗಿಲೆಗಳ ಇಂಚರ ನನ್ನ ಕಾವ್ಯ ಸ್ಫೂರ್ತಿಯ ವರದೇವತೆಯಾಗುತ್ತದೆ. ರಂಗುರಂಗಿನ ಹೂವುಗಳು ಮನಸ್ಸಿಗೆ ಮುದಕೊಡುತ್ತದೆ. ತುಟಿಯಂಚಿನಲ್ಲಿ ಮುಗುಳಗೆ ತೇಲಿಸುತ್ತದೆ. ಬಣ್ಣದ ಚಿಟ್ಟೆಗಳು ಹೂವುಗಳನ್ನು ಪ್ರೀತಿಸಲು, ಭ್ರಮರಗಳು ನನಗೆ ಹಾಡಲು ಕಲಿಸುತ್ತವೆ.
ಇಂಥ ವಸಂತ ಋತು ನನಗೆ ಪ್ರಿಯ. ಇಡೀ ವರ್ಷ ವಸಂತನ ಆಗಮನಕ್ಕಾಗಿ ನಾನು ಕಾಯುತ್ತಿರುತ್ತೇನೆ. ವಸಂತ ಬಂದ ಕೂಡಲೇ ನನ್ನ ಮನಸ್ಸು ನಲಿಯುತ್ತದೆ.
Tags:
kannada 98
Admin

100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
COMMENTS