ವನಮಹೋತ್ಸವ ಪ್ರಬಂಧ Van Mahotsav Essay in Kannada Language

Admin
1
Van Mahotsav Essay in Kannada Language: In this article, we are providing ವನಮಹೋತ್ಸವ ಪ್ರಬಂಧ for students and teachers. Students can use this Van Mahotsav Essay in Kannada Language to complete their homework.

ವನಮಹೋತ್ಸವ ಪ್ರಬಂಧ Van Mahotsav Essay in Kannada

1. ಮರಗಿಡಗಳಿಗೆ ಪ್ರಾಶಸ್ಯ 2. ಮರಗಳ ನಾಶ 3. ವನಮಹೋತ್ಸವದ ಆಚರಣೆ 4.ಹಸಿರು ಉಸಿರು 5. ಉಪಸಂಹಾರ.
ಪ್ರಾಚೀನ ಕಾಲದಿಂದಲೂ ಭಾರತ ದೇಶದಲ್ಲಿ ಮರ ಗಿಡಗಳಿಗೆ ವಿಶೇಷ ಪ್ರಾಶಸ್ಯ, ಮನ್ನಣೆ ನೀಡಲಾಗುತ್ತಿದೆ. ದೇವತೆಗಳು, ನೀರು, ಸಸ್ಯಗಳು, ಅರಣ್ಯ ವೃಕ್ಷಗಳು ನಮ್ಮ ಪ್ರಾರ್ಥನೆಯನ್ನು ಮನ್ನಿಸಲಿ. ಅವರ ಅನುಗ್ರಹ ನಮ್ಮನ್ನು ಸದಾ ರಕ್ಷಿಸಲಿ' -ಎಂದು ಭಾರತದ ಋಷಿಮುನಿಗಳು ಪ್ರಾರ್ಥಿಸುತ್ತಿದ್ದರು. ವೃಕ್ಷಗಳನ್ನು ದೇವರ ಸಮಾನ ಎಂದು ಆರಾಧಿಸುತ್ತಿದ್ದರು. ಇಂದಿಗೂ ಅಶ್ವತ್ಥ, ಬನ್ನಿ, ಎಕ್ಕ ಇತ್ಯಾದಿ ಗಿಡ, ಮರಗಳನ್ನು ಪೂಜಿಸುವುದನ್ನು ನಾವು ಕಾಣಬಹುದು.

ದಿನೇ ದಿನೇ ಜಗತ್ತಿನಲ್ಲಿ ಜನಸಂಖ್ಯೆ ಹೆಚ್ಚತೊಡಗಿತು. ವ್ಯವಸಾಯಕ್ಕೆ, ದನಕರುಗಳ ಮೇವಿಗೆ ಭೂಮಿ ಸಾಲದಾಯಿತು. ಕಾಡು ಪ್ರದೇಶ ಕ್ರಮೇಣ ಕಡಿಮೆಯಾಯಿತು. ಮರಗಳನ್ನು ಉರುವಲಿಗಾಗಿ, ಮರದ ಸಾಮಾನು ಮತ್ತಿತರ ವಸ್ತುಗಳಿಗಾಗಿ, ಮನೆ ಇತ್ಯಾದಿ ಕಟ್ಟುವುದಕ್ಕಾಗಿ ಕಡಿಯುವುದು ಪ್ರಾರಂಭವಾಯಿತು. ಆದರೆ ಕಡಿದ ಮರಕ್ಕೆ ಸಮನಾಗಿ ಮರಗಳನ್ನು ಬೆಳೆಸುವ ಪ್ರವೃತ್ತಿ ಜನರಲ್ಲಿ ಇಲ್ಲದಂತಾಯಿತು. ಹೊಸದಾಗಿ ಸಸಿಗಳನ್ನು ನೆಟ್ಟು ಅರಣ್ಯವನ್ನು ಬೆಳೆಸುವುದರಿಂದ, ಪರಿಸರ ಮಾಲಿನ್ಯವನ್ನು ತಡೆಯುವುದರ ಅಗತ್ಯ ಜನರಲ್ಲಿ ಕಂಡುಬಂದಿತು. 'ಹೊಸ ಸಸಿಗಳನ್ನು ಬೆಳೆಸಿ ಜೀವ ಉಳಿಸಿಕೊಳ್ಳಿ' ಘೋಷಣೆ ಹೊರಟಿತು. ಜನರಲ್ಲಿ ಈ ಬಗ್ಗೆ ಜಾಗೃತಿ ಉಂಟುಮಾಡಲು ವನಮಹೋತ್ಸವ' ಆಚರಣೆ ಜಾರಿಗೆ ಬಂದಿತು.

ಮೊದಲ ಬಾರಿಗೆ ಗಿಡಗಳನ್ನು ನೆಡುವ ಸಪ್ತಾಹ ದೆಹಲಿ ಪ್ರದೇಶದಲ್ಲಿ1947ರಲ್ಲಿ ನಡೆಯಿತು. 1950ರಿಂದ ಪ್ರತಿವರ್ಷ 'ವನಮಹೋತ್ಸವ ಸಪ್ತಾಹ' ನಡೆಯುತ್ತಿದೆ. ಸಪ್ತಾಹದ ದಿನಗಳಲ್ಲಿ ಹುಣಸೆ, ಮಾವು, ಬೇವು, ಸರ್ವೆ, ಗೊಬ್ಬಳಿ, ಹೊಂಗೆ ಮುಂತಾದ ಮರಗಳನ್ನು ದೇಶದಾದ್ಯಂತ ನೆಡಲಾಗುತ್ತಿದೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು, ಮಹಿಳಾಸಂಘಗಳು ಪ್ರತಿವರ್ಷ 'ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಖಾಲಿಯಿರುವ ಅಗತ್ಯ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಲು ವ್ಯವಸ್ಥೆ ಮಾಡುತ್ತಾರೆ. ತೋಟಗಾರಿಕೆ ಇಲಾಖೆಗಳು, ನಗರ ಸಭೆಗಳು, ಮಂಡಲ ಪಂಚಾಯಿತಿಗಳು ವನಮಹೋತ್ಸವ ಸಪ್ತಾಹವನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿ ಅದರ ಮಹತ್ವಗಳನ್ನು ಜನರಿಗೆ ತಿಳಿಯಪಡಿಸುತ್ತಾರೆ. ಸಾಲು ಮರಗಳನ್ನು ನೆಡುವುದರಿಂದ ನಗರ ಮತ್ತು ಹಳ್ಳಿಗಳು ಸುಂದರವಾಗುವುದಲ್ಲದೆ ಭೂ ಸವೆತ ಕಡಿಮೆಯಾಗುತ್ತದೆ.

ವನಮಹೋತ್ಸವದ ಅಂಗವಾಗಿ ಎಲ್ಲೆಡೆ ಗಿಡಗಳನ್ನು ನೆಡುವ ಆಚರಣೆ ಭಾರತದಲ್ಲಿ ಮಾತ್ರವಲ್ಲದೆ ಬೇರೆ ಅನೇಕ ದೇಶಗಳಲ್ಲೂ ಜಾರಿಯಲ್ಲಿದೆ. ಸಸ್ಯ ಸಂರಕ್ಷಣೆ, ಅರಣ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಬೇಕು. ಜನರು ಈ ವಿಷಯದಲ್ಲಿ ಜಾಗೃತರಾಗಬೇಕು. ಹುಟ್ಟುಹಬ್ಬ, ಮದುವೆ ಇತ್ಯಾದಿ ಸಂದರ್ಭದ ಸವಿ ನೆನಪಿಗಾಗಿ ಸಸಿಗಳನ್ನು ನೆಟ್ಟು ಪೋಷಿಸುವ ಆಚರಣೆ ಜನರಲ್ಲಿ ಬೆಳೆದು ಬರಬೇಕು. 'ಮನೆಗೊಂದು ಮರ', ದೇಶದ ಹಿತಕ್ಕೆ ವರ' ಎನ್ನುವ ಘೋಷಣೆಯ ಅರ್ಥ ಎಲ್ಲರಲ್ಲಿ ಮೂಡಬೇಕು. - ನಗರ ಪ್ರದೇಶದಲ್ಲಿನ ಜನಸಂದಣಿ, ಕೈಗಾರಿಕೆಗಳು ಉಗುಳುವ ಹೊಗೆ, ಶಬ್ದಮಾಲಿನ್ಯ, ಕೊಳಚೆ ಪ್ರದೇಶದ ದುರ್ಗಂಧ ಇತ್ಯಾದಿ ಪರಿಸರ ಮಾಲಿನ್ಯದಿಂದ ಜನರ ಜೀವನ ದಿನೇ ದಿನೇ ಕೆಡುತ್ತಿರುವುದನ್ನು ನಾವು ಗಮನಿಸಬೇಕು. ಇದರಿಂದ ಪಾರಾಗಲು ಉಳಿದಿರುವ ಏಕೈಕ ಮಾರ್ಗವೆಂದರೆ ನಗರದಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದು. ಇದರಿಂದ ಕೆಟ್ಟ ಹವಾ ಇಂಗಾಲದ ಡೈ ಆಕೈಡನ್ನು ಮರಗಿಡಗಳು ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಹೊರಗೆ ಬಿಡುತ್ತವೆ. ಇದರಿಂದ ಜನರ ಜೀವನ ಒಂದಿಷ್ಟು ಸುಧಾರಿಸಲು ಅವಕಾಶವಾಗುತ್ತದೆ.

ಹಸಿರು ಕಣ್ಣಿಗೆ ತಂಪು, ಮರ ಬೆಳೆಸುವುದು ದೇಹದ ಆರೋಗ್ಯವನ್ನು ಕಾಪಾಡುವುದು, ವೃಕ್ಷಗಳು ಭಾರತದ ಸಂಪತ್ತು. ಮರಗಿಡಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಬೇಕು.

ನನಗೆ ಪ್ರಿಯವಾಗಿ ನೀಡುತ್ತದೆ. ಈ ಪ್ರಕೃತಿಯ

ದಕೊಡುತ್ತದೆ. ಅವತೆಯಾಗುತ್ತದೆ. ಆಳುತ್ತವೆ. ಕೋಗಿಲೆಗಳ ತವಕಿಸುತ್ತದೆ. ನನ್ನ
Tags

Post a Comment

1Comments
Post a Comment

#buttons=(Accept !) #days=(20)

Our website uses cookies to enhance your experience. Learn More
Accept !