Monday, 16 March 2020

26 ಜನವರಿ ಗಣರಾಜ್ಯೋತ್ಸವ ಪ್ರಬಂಧ Essay on Republic Day in Kannada Language

Essay on Republic Day in Kannada Language: In this article, we are providing 26 ಜನವರಿ ಗಣರಾಜ್ಯೋತ್ಸವ ಪ್ರಬಂಧ for students and teachers. Students can use this Essay on 26 January Republic Day in Kannada Language to complete their homework.

26 ಜನವರಿ ಗಣರಾಜ್ಯೋತ್ಸವ ಪ್ರಬಂಧ Essay on Republic Day in Kannada Language

1. ಪರಿಚಯ 2. ಮೆರವಣಿಗೆ 3. ರಾಷ್ಟ್ರಪತಿಗೆ ಗೌರವ 4. ಸಾಂಸ್ಕೃತಿಕ ಮಹತ್ವ 5. ಉಪಸಂಹಾರ

ಭಾರತ ರಾಷ್ಟ್ರೀಯ ಕಾಂಗ್ರೆಸ್ 1929 ಜನವರಿ 20 ರಂದು “ಭಾರತದಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಸ್ಥಾಪನೆಗೆ ಅವಿರತವಾಗಿ ಶ್ರಮಿಸಬೇಕು” ಎಂದು ಪ್ರತಿಜ್ಞೆ ಮಾಡಿತು.1950 ಜನವರಿ 26ರಂದು ಈ ಕನಸು ನನಸಾಯಿತು.

ಈ ದಿನ ಗಣರಾಜ್ಯ ಸಂವಿಧಾನ ಜಾರಿಗೆ ಬಂತು. ಈ ಚರಿತ್ರಾರ್ಹ ದಿನದ ನೆನಪಿಗಾಗಿ ಪ್ರತಿವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯದಿನ”ವನ್ನು “ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.
ಈ ಉತ್ಸವದಲ್ಲಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದವರಿಗೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುತ್ತದೆ. ವೈಭವದ ಮೆರವಣಿಗೆ ಧ್ವಜಾರೋಹಣ, ಕವಾಯತು ಇತ್ಯಾದಿ ಆಕರ್ಷಕ ಕಾರ್ಯಕ್ರಮಗಳು ನಡೆಯುತ್ತವೆ.

ಭಾರತದ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯ ದಿನಾಚರಣೆಯ ಮರವಣಿಗೆ (ರಿಪಬ್ಲಿಕ್ ಡೇ ಪರೇಡ್) ಅತ್ಯಂತ ಭವ್ಯವಾಗಿದ್ದು ನೋಡಲು ತುಂಬ ಆಕರ್ಷಕವಾಗಿರುತ್ತದೆ. ಮನಸ್ಸಿಗೆ ಮುದಕೊಡುತ್ತದೆ. ಈ ಸುಂದರ ಮೆರವಣಿಗೆಯನ್ನು ನೋಡಲು ಲಕ್ಷಾಂತರ ಜನರು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರಿಗೆ ರಾಜಪಥದ ಎರಡೂ ಬದಿಯಲ್ಲಿ ಸೇರಿರುತ್ತಾರೆ. ಜಾಗ ಸಿಗದೆ ಸುತ್ತಲಿನ ಮರಗಳ ಮೇಲೆಯೂ ಕುಳಿತು ಮೆರವಣಿಗೆಯನ್ನು ವೀಕ್ಷಿಸುತ್ತಾರೆ. - ಅಂಗರಕ್ಷಕರ ಜೊತೆ ಕುದುರೆ ಸಾರೋಟಿನಲ್ಲಿ ರಾಷ್ಟ್ರಪತಿ ತಮ್ಮ ಭವನದಿಂದ ಹೊರಡುತ್ತಾರೆ. ರಾಜಪಥದ ಒಂದೆಡೆ ಅವರಿಗಾಗಿಯೇ ವಿಶೇಷವಾದ ವೇದಿಕೆ ನಿರ್ಮಾಣವಾಗಿರುತ್ತದೆ ಅವರು ವೇದಿಕೆಗೆ ಬಂದ ಕೂಡಲೇ ಬೃಹತ್ ಮೆರವಣಿಗೆಯ ಸಾಲು ನಿಧಾನವಾಗಿ ಚಲಿಸುತ್ತದೆ.

ಸುಂದರವಾದ ಛತ್ರಿಯ ಕೆಳಗೆ ನಿಂತ ರಾಷ್ಟ್ರಪತಿಯವರು ಮೆರವಣಿಗೆಯಲ್ಲಿನ ರಕ್ಷಣಾಪಡೆಗಳು, ಎನ್.ಸಿ.ಸಿ. ದಳದಿಂದ ಗೌರವ ವಂದನೆ ಸ್ವೀಕರಿಸುತ್ತಾರೆ. ಸೈನಿಕ ಸಂಗೀತ ಬ್ಯಾಂಡ್‌ನವರಿಂದ ಈ ಫಡೆಯವರು ಶಿಸ್ತಿನಿಂದ ಮುನ್ನಡೆಯುತ್ತಾರೆ. ಅನಂತರ ವಿಮಾನ ನಿರೋಧಕ ಪಿರಂಗಿಗಳನ್ನು ಹೊತ್ತ ವಾಹನಗಳು, ಆನೆಗಳ ಸಾಲು, ಸಾಂಸ್ಕೃತಿಕ ತಂಡಗಳು, ಪುರಾತನ -ಆಧುನಿಕ ಭಾರತದ ಇತಿಹಾಸ ಪ್ರಸಿದ್ದ ಸನ್ನಿವೇಶಗಳನ್ನು ಬೃಹತ್ ಮೂಕದೃಶ್ಯಗಳು, ಬೇರೆ ಬೇರೆ ರಾಜ್ಯಗಳ ಸ್ವಾತಂತ್ರ್ಯೋತ್ತರ ಸಾಧನೆಗಳನ್ನು ಬಿಂಬಿಸುವ ಪ್ರತಿಮಾ ಚಿತ್ರಗಳಿಂದ ಅಲಂಕರಿಸಿದ ವಾಹನಗಳ ಅನಂತರ ಸಮವಸ್ತ್ರ ಧರಿಸಿದ ಶಿಸ್ತಿನಿಂದ ನಡೆಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡೆದುಬರುತ್ತಾರೆ.

ಇದಾದ ನಂತರ ವಿಮಾನಗಳು ಬೇರೆ ಬೇರೆ ಆಕರ್ಷಕ ವಿನ್ಯಾಸಗಳಲ್ಲಿ ಸಾಲುಗಟ್ಟಿ ಹಾರುತ್ತವೆ. ರಂಗುರಂಗು ಚೆಲ್ಲುತ್ತಾ ಆಕಾಶದಲ್ಲಿ ರಾಷ್ಟ್ರಧ್ವಜದ ತ್ರಿವರ್ಣ ಪಟ್ಟಿಗಳನ್ನು ರಚಿಸುತ್ತವೆ. ರಾಷ್ಟ್ರದ ಬೇರೆ ಬೇರೆ ರಾಜ್ಯಗಳ ಜಾನಪದ ನೃತ್ಯಗಳ ಪ್ರದರ್ಶನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರುಗುತ್ತವೆ. ಸಂಜೆ ರಾಷ್ಟ್ರಪತಿ ಭವನದ ಪ್ರಸಿದ್ದ ಮೊಘಲ್ ಉದ್ಯಾನವನದಲ್ಲಿ ಬಾಣಬಿರುಸುಗಳ ಅಮೋಘ ಪ್ರದರ್ಶನವಿರುತ್ತದೆ.

ರಾಜ್ಯಗಳ ರಾಜಧಾನಿಗಳಲ್ಲಿ, ಬೇರೆ ಬೇರೆ ಊರುಗಳಲ್ಲಿ, ಶಾಲಾ, ಕಾಲೇಜುಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಇಂಥದೇ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಗಣರಾಜ್ಯೋತ್ಸವ ಭಾರತೀಯರಿಗೆ ಅತ್ಯಂತ ಅವಿಸ್ಮರಣೀಯವಾದ ದಿನ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

1 comment: