Kittur Rani Chennamma Essay in Kannada Language : In this article, we are providing ಕಿತ್ತೂರು ರಾಣಿ ಚೆನ್ನಮ್ಮ ಪ್ರಬಂಧ. This Kittur Rani Chennamma Prabandha in Kannada Language is ideal for students of all classes and teachers.
Kittur Rani Chennamma Essay in Kannada Language ಕಿತ್ತೂರು ರಾಣಿ ಚೆನ್ನಮ್ಮ ಪ್ರಬಂಧ
ಕಿತ್ತೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿದೆ. ತನ್ನ ರಾಜ್ಯದ ರಕ್ಷಣೆಗಾಗಿ ಇಂಗ್ಲಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಕಿತ್ತೂರು ಚೆನ್ನಮ್ಮ 1772ರಿಂದ 1816ರವರೆಗೆ ರಾಜ್ಯವನ್ನಾಳಿದ ಮಲ್ಲಸರ್ಜ ದೇಸಾಯಿ ಕಿತ್ತೂರಿನ ಅರಸರಲ್ಲಿ ಪ್ರಮುಖನಾದವನು ಮಲ್ಲಸರ್ಜ ದೊರೆಗೆ ರುದ್ರವ್ವ ಮತ್ತು ಚೆನ್ನಮ್ಮ ಇಬ್ಬರು ಹೆಂಡಂದಿರು, ಚೆನ್ನಮ್ಮ ಕಾಕತಿ ದೇಸಾಯರ ಮಗಳು. ಚೆಲುವೆ, ಯುದ್ಧ ಕಲೆಯಲ್ಲಿ ಪ್ರವೀಣಳು. ಚೆನ್ನಮ್ಮನಿಗೆ ಮಕ್ಕಳಿರಲಿಲ್ಲ. ಮಲ್ಲಸರ್ಜನ ಮರಣಾನಂತರ ರುದ್ರವ್ವಯ ಹಿರಿಯ ಮಗ ಶಿವಲಿಂಗ ರುದ್ರಸರ್ಜ ಪಟ್ಟಕ್ಕೆ ಬಂದ. ಮಕ್ಕಳಿಲ್ಲದ ರುದ್ರಸರ್ಜ ಅನಾರೋಗ್ಯದಿಂದ 1824ರಲ್ಲಿ ಮರಣಿಸಿದ. ಇದಕ್ಕೆ ಮೊದಲು ಮಾಸ್ತ ಮರಡಿ ಬಾಳಪ್ಪಗೌಡರ ಮಗ ಶಿವಲಿಂಗ ಎಂಬ ಬಾಲಕನನ್ನು ದತ್ತು ತೆಗೆದುಕೊಂಡಿದ್ದ.
ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸನ್ನಾಹ ನಡೆಸಿದ್ದರು. ದತ್ತಕವನ್ನು ಒಪ್ಪಲು ಬ್ರಿಟಿಷರು ನಿರಾಕರಿಸಿದರು. ಇದರಿಂದ ಕುಪಿತಗೊಂಡ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ದತೆ ನಡೆಸಿದಳು. ಅರಮನೆಯ ಕಾರುಭಾರಿಗಳಾಗಿದ್ದ ಮಲ್ಲಪ್ಪಶೆಟ್ಟಿ, ವೆಂಕಟರಾಯ ಎಂಬ ದೇಶದ್ರೋಹಿಗಳಿಂದ ಈ ಸುದ್ದಿ ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಯಿತು. 1824 ಅಕ್ಟೋಬರ್ 21 ರಂದು ಥ್ಯಾಕರೆ ಹಠತ್ತಾಗಿ ಕಿತ್ತೂರಿನ ಕೋಟೆಯ ಮೇಲೆ ಎರಗಿದ. ದಿನಾಂಕ23 ರಂದು ಕೋಟೆಯ ಹೆಬ್ಬಾಗಿಲನ್ನು ಒಡೆಯಲು ಥ್ಯಾಕರೆ ಕ್ಯಾಪ್ಟನ್ ಬ್ಲಾಕ್‌ಗೆ ಆಜ್ಞೆ ಮಾಡಿದ. ಅಷ್ಟರಲ್ಲಿ ಕಿತ್ತೂರಿನ ಯೋಧ ಮಟೂರು ಬಾಳಪ್ಪ ಥ್ಯಾಕರೆಯನ್ನು ಗುಂಡಿಕ್ಕಿ ಕೊಂದ. ಬ್ಲಾಕ್ ಮತ್ತಿತರ ಅಧಿಕಾರಿಗಳು ಹೋರಾಟದಲ್ಲಿ ಸತ್ತರು. ನೂರಾರು ಬ್ರಿಟಿಷ್ ಸೈನಿಕರು ಸೆರೆಸಿಕ್ಕರು. ಚಿನ್ನಮ್ಮ ಈ ಸೆರೆಯಾಳುಗಳ ಬಗೆಗೆ ಉದಾರವಾಗಿ ನಡೆದುಕೊಂಡಳು.
Read also : Jhansi Rani Lakshmi Bai Essay in Kannada
Read also : Jhansi Rani Lakshmi Bai Essay in Kannada
ಮೈಸೂರು, ಮದರಾಸು, ಮುಂಬಯಿ, ಸೊಲ್ಲಾಪುರ, ಇನ್ನಿತರ ಕಡೆಗಳಿಂದ ಬಂದ ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ದಾಳಿ ಮಾಡಿತು. ದತ್ತುಪುತ್ರನನ್ನು ಮಾನ್ಯ ಮಾಡುವುದಾಗಿ ಚಾಪ್ಲಿನ್ ವಚನ ಕೊಟ್ಟಾಗ ಚೆನ್ನಮ್ಮ ಕೈದಿಗಳನ್ನು ಬಿಡುಗಡೆ ಮಾಡಿದಳು. ಆದರೆ ಮಾತಿಗೆ ತಪ್ಪಿದ ಚಾಪ್ಲಿನ್ ಕೋಟೆಯನ್ನು ಮುತ್ತಲು ಆಜ್ಞೆ ಮಾಡಿದ. ಇದರಿಂದ ಕ್ರೋಧಿತಳಾದ ಚೆನ್ನಮ್ಮ ಸ್ವತಃ ತನ್ನ ವೀರರೊಂದಿಗೆ ಕಾಳಗಕ್ಕೆ ಮುಂದಾದಳು ಬ್ರಿಟಿಷರ ಸುಸಜ್ಜಿತ ಆಯುಧಗಳೆದುರು ಕಿತ್ತೂರು ಪಕ್ಷಕ್ಕೆ ಸೋಲುಂಟಾಯಿತು.
ಚೆನ್ನಮ್ಮ ಮತ್ತು ಸೊಸೆ ವೀರವ್ವನನ್ನು ಬಂಧಿಸಿ ಬೈಲಹೊಂಗಲದ ಸರೆಯಲ್ಲಿರಿಸಲಾಯಿತು. ಚಿಕ್ಕಮ್ಮ ಮತ್ತೆ ರಾಜ್ಯ ಪಡೆಯುವ ಆಸೆ ಹೊತ್ತು ಸಂಗೊಳ್ಳಿ ರಾಯಣ್ಣನಂಥ ವೀರಯೋಧರ ಗುಪ್ತ ಸಂಪರ್ಕ ಪಡೆದಳು. ಕಿತ್ತೂರಿನ ಬಿಡುಗಡೆಗಾಗಿ ಪ್ರಯತ್ನ ನಡೆಸಲು ತನ್ನ ಒಡವೆಗಳನ್ನು, ಹಣವನ್ನು ಕಳಿಸುತ್ತಾ ಅವರನ್ನು ಹುರಿದುಂಬಿಸಿದಳು. ಕೊನೆಗೆ ರಾಣಿ ಚನ್ನಮ್ಮ ತನ್ನ 57ನೇ ವಯಸ್ಸಿನಲ್ಲಿ 1829 ಫೆಬ್ರವರಿ 2 ರಂದು ಕೊನೆಯುಸಿರೆಳೆದಳು. ಸಕಲ ಸೇನಾ ಮರ್ಯಾದೆಗಳೊಂದಿಗೆ ಆಕೆಯ ಅಂತ್ಯಕ್ರಿಯ ಬೈಲಹೊಂಗಲದ 'ಕಠ'ದಲ್ಲಿ ನಡೆಯಿತು.
Read also : ಕರ್ನಾಟಕದ ಶಾಸನಗಳು ಮಾಹಿತಿ
ಒನಕೆ ಓಬವ್ವ ಚಿತ್ರದುರ್ಗದ ಹೆಸರನ್ನು ಕೇಳಿದ ಒಡನೆಯೇ ಅಲ್ಲಿನ ಏಳುಸುತ್ತಿನ ಕೋಟೆಯ ನೆನಪಾಗುವುದು ಹೇಗೆ ಸಹಜವೋ ಹಾಗೆಯೇ ಇಂದಿಗೂ ಮನೆಮಾತಾಗಿ ಉಳಿದಿರುವ ಒನಕೆಯ ಓಬವ್ವನ ಪರಾಕ್ರಮವೂ ಕಣ್ಣುಮುಂದೆ ಕಟ್ಟಿದಂತಾಗುತ್ತದೆ. ಓಬವ್ವನ ದೇಶಪ್ರೇಮವನ್ನು ಕುರಿತ ಕಥೆ ಹೀಗಿದೆ. ಚಿತ್ರದುರ್ಗದ ಪಾಳೆಯಗಾರರಲ್ಲಿ ಕಡೆಯವನಾದ ಮದಕರಿನಾಯಕನಿಗೂ (ಕ್ರಿ.ಶ. 1753-1778) ಹೈದರನಿಗೂ ನಡೆದ ಕಾಳಗ ಇತಿಹಾಸಪ್ರಸಿದ್ಧವಾಗಿದೆ. ಹೈದರ್ ಈ ಅಭೇದ್ಯ ದುರ್ಗವನನ್ನು ತಿಂಗಳುಗಟ್ಟಲೆ ಮುತ್ತಿಗೆ ಹಾಕಿ ಸ್ವಾಧೀನಪಡಿಸಿಕೊಳ್ಳಲಾರದೆ ಹೋದ. ಕಡೆಗೆ ತನ್ನ ಶತ್ರುವನ್ನು ಭೇದೋಪಾಯದಿಂದಲೇ ಗೆಲ್ಲಬೇಕೆಂದು ಬಯಸಿ, ತನ್ನ ಬೇಹುಗಾರರನ್ನು ಕರೆದು ಕೋಟೆಯ ಕಳ್ಳದಾರಿಗಳನ್ನು ಪತ್ತೆಮಾಡಿ ತಿಳಿಸಬೇಕೆಂದು ಆಜ್ಞೆಮಾಡಿದ. ವೇಷಧಾರಿಗಳಾದ ಆ ಬೇಹುಗಾರರನ್ನು ಕೋಟೆಯ ಸುತ್ತಲೂ ಸುಳಿದಾಡುತ್ತಿರುವಾಗ, ಒಂದು ಪಾರ್ಶ್ವದಲ್ಲಿ ಒಬ್ಬ ಹೆಂಗಸು ಮೊಸರಿನ ಮಡಕೆಯನ್ನು ತಲೆಯ ಮೇಲೆ ಹೊತ್ತುಕೊಂಡು ಆ ಕೋಟೆಯ ಕಡೆ ನಡೆದು ಅದೃಶ್ಯಳಾದದ್ದು ಗಮನಕ್ಕೆ ಬಂತು. ಚಾರರು, ಆ ದಿಕ್ಕಿನಲ್ಲಿ ಎಲ್ಲಿಯೋ ಕಳ್ಳಗಿಂಡಿಯಿರಬೇಕೆಂದು ತರ್ಕಿಸಿ ಹುಡುಕತೊಡಗಿದಾಗ, ಬಂಡೆಗಳ ಮಧ್ಯೆ ನುಸುಳಿಕೊಂಡು ಹೋಗುವಂತೆ ಒಂದು ಇಕ್ಕಟ್ಟಾದ ಮಾರ್ಗವಿರುವುದು ಸ್ಪಷ್ಟವಾಯಿತು. ಈ ಸುದ್ದಿಯನ್ನು ಕೇಳಿದ ನವಾಬನಿಗೆ ತುಂಬ ಸಂತೋಷವಾಯಿತು. ಶತ್ರುಸೈನಿಕರು ಒಬ್ಬೊಬ್ಬರಾಗಿ ಆ ದಾರಿಯ ಮೂಲಕ ಒಳಕ್ಕೆ ಹೋಗಲು ನಿಶ್ಚಯಿಸಿಕೊಂಡರು.
Read also : Information about "Volcano in Kannada Language"
ಆ ಕಳ್ಳದಾರಿಯ ಒಳಭಾಗಕ್ಕೆ ಸ್ವಲ್ಪ ದೂರದಲ್ಲಿಯೇ ಒಂದು ಕೊಳವೂ ಕಾವಲುಗಾರನ ಒಂದು ಬತೇರಿಯೂ ಇದ್ದುವು. ಸರ್ಪಗಾವಲು ಕಾಯುತ್ತಿದ್ದ ಕಾವಲುಗಾರ ಸ್ವಲ್ಪ ಬಿಡುವು ಮಾಡಿಕೊಂಡು ತನ್ನ ಗುಡಿಸಿಲಿನಲ್ಲಿ ಊಟಮಾಡುತ್ತಿರುವಾಗ್ಗೆ ಅವನ ಹೆಂಡತಿ ಓಬವ್ವ ನೀರು ತರಲೆಂದು ಕೊಳದ ಬಳಿಗೆ ಬಂದಳು. ಆ ವೇಳೆಗೆ ಕಳ್ಳಗಿಂಡಿಯ ಸಮೀಪದಲ್ಲಿ ಶತ್ರುಸೈನಿಕರು ಹೊಂಚುಹಾಕಿ, ಪಿಸಿಪಿಸಿ ಮಾತುಗಳನ್ನಾಡುತ್ತಿದ್ದುದು ಅವಳಿಗೆ ಕೇಳಿಸಿತು. ಆಕೆಗೆ ಆ ಸೂಕ್ಷದ ಅರಿವಾಗಿ, ಕೂಡಲೆ ಗುಡಿಸಲಿಗೆ ತೆರಳಿ ಒಂದು ಒನಕೆಯನ್ನು ತೆಗೆದುಕೊಂಡು ಬಂದು ಆ ಕಳ್ಳಗಿಂಡಿಯ ಬಳಿ ನಿಂತಳು. ಅತ್ತ ಶತ್ರುಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುವುದೇ ತಡ, ಓಬವ್ವ ಅವರ ತಲೆಯನ್ನು ಒನಕೆಯಿಂದ ಹೊಡೆದು ಕೆಡವುತ್ತಿದ್ದಳು. ಈ ಹತ್ಯೆ ಕೆಲಕಾಲ ಹೀಗೆಯೇ ಸಾಗಿತು. ಓಬವ್ವನ ಗಂಡ ಮನೆಯಲ್ಲಿ ತನ್ನ ಹೆಂಡತಿಯನ್ನು ಕಾಣದೆ ಹುಡುಕಿಕೊಂಡು ಕಳ್ಳಕಂಡಿಯ ಹತ್ತಿರಕ್ಕೆ ಬಂದಾಗ ಆಕೆಯ ಮುಂದೆ ಬಿದ್ದಿದ್ದ ಹೆಣದ ರಾಶಿಯನ್ನೂ ಹರಿಯುತ್ತಿದ್ದ ಕೆನ್ನೇರಿನ ಕಾಲುವೆಯನ್ನೂ ಕಂಡು ಕಂಗೆಟ್ಟ, ಆಕೆಯ ಹೆಸರು ಹಿಡಿದು ಕೂಗುತ್ತ ಮುಂದುವರಿಯಲು ವೀರಾವೇಶದಲ್ಲಿ ಮೈಮರೆತ್ತಿದ್ದ ಓಬವ್ವ ತನ್ನ ಗಂಡನನ್ನೂ ಹೊಡೆಯುವುದರಲ್ಲಿದ್ದಳು. ಗಂಡ ದೂರ ಸರಿದು, ಕೆಲಸ ಕೆಟ್ಟಿತೆಂದು ಎಣಿಸಿ ಕೂಡಲೆ ಕಹಳೆಯನ್ನು ಊದಿದ. ಆ ಎಚ್ಚರಿಕೆಯ ದನಿಯನ್ನು ಕೇಳಿದ ಒಡನೆಯೇ ಮದಕರಿನಾಯಕನ ಸೈನಿಕರು ಅತ್ತ ಧಾವಿಸಿಬಂದರು. ಶತ್ರುಸೈನಿಕರೊಂದಿಗೆ ಯುದ್ಧ ಮೊದಲಾಯಿತು. ಆ ಗೊಂದಲದಲ್ಲಿ ಶತ್ರುಸೈನಿಕನೊಬ್ಬನ ಪೆಟ್ಟಿಗೆ ಸಿಕ್ಕಿ ಓಬವ್ವ ಹತಳಾದಳು. ಮದಕರಿನಾಯಕನ ಸೈನಿಕರ ಕೈಮೇಲಾಗಲು ಶತ್ರುಗಳು ಮತ್ತೆ ಹಿಮ್ಮೆಟ್ಟಿದರು. ಕ್ಷಣಮಾತ್ರದಲ್ಲಿ ಅಸದೃಶವಾದ ಕೆಚ್ಚನ್ನು ತೋರಿ ಕಾಳಗದಲ್ಲಿ ಬಲಿಯಾದ ಓಬವ್ವನ ಸಲುವಾಗಿ ಎಲ್ಲರೂ ಕಣ್ಣೀರು ಸುರಿಸಿದರು. ಕಾವಲುಗಾರನ ಹೆಂಡತಿಯಾದ ಓಬವ್ವನ ಆ ಪರಾಕ್ರಮದ ಕುರುಹಾಗಿ ಆ ಕಳ್ಳಗಿಂಡಿಗೆ ಒನಕೆಯ ಓಬವ್ವನ ಕಂಡಿ ಎಂಬ ಹೆಸರು ಇಂದಿಗೂ ಪ್ರಚಲಿತವಾಗಿದೆ.
0 comments: