Togalu Gombe Information in Kannada Language: In this article, we are providing ಟೊಗಲು ಗೊಂಬೆ ಮಾಹಿತಿ for students and teachers. Students can use this Togalu Gombe Information in Kannada Language to complete their homework. ತೊಗಲು ಗೊಂಬೆ ಆಟದಲ್ಲಿ ಜಾನಪದ ಚಿತ್ರಕಲೆ ವಿಶೇಷ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಈ ಆಟದ ಉದ್ದೇಶ ಶುದ್ಧ ಮನರಂಜನೆ, ತೊಗಲು ಗೊಂಬೆಗಳ ಚಿತ್ರಣ ಮತ್ತು ಬೊಂಬೆಗಳನ್ನು ಆಡಿಸುವ ರೀತಿ ತುಂಬ ಕಲಾತ್ಮಕವಾಗಿರುತ್ತದೆ. Read also : Essay on Olympic Games in Kannada Language ಈ ಕಲೆ ತುಂಬ ಪುರಾತನವಾದುದು. ಕರ್ನಾಟಕ, ಕೇರಳ, ಆಂಧ್ರ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಈ ಜಾನಪದ ಕಲೆ ಬೆಳೆದು ಬಂದಿದೆ. ಆಂಧ್ರ ಪ್ರದೇಶದಲ್ಲಿ ಇದನ್ನು 'ತೋಲು ಬೊಮ್ಮಲಾಟ' ಎಂದು ಕರೆಯುತ್ತಾರೆ. ಉತ್ತರ ಭಾರತದಲ್ಲಿ 'ಕಟ್ ಪುತಲಿ' ಎನ್ನುತ್ತಾರೆ.ಈ ಸುಂದರವಾದ ಕಲೆ ಚೀನ, ಥೈಲೆಂಡ್, ಜಾವಾ ಮುಂತಾದ ದೇಶಗಳಲ್ಲೂ ಸಹ ಕಂಡುಬಂದಿದೆ. ಹೊರದೇಶಗಳಲ್ಲಿ ಈ ಕಲೆ ಇಂದಿಗೂ ಜೀವಂತವಾಗಿರುವುದನ್ನು ನಾವು ಕಾಣಬಹುದು. Read also : Essay on Puppet Show in Kannada Language ತೊಗಲು ಗೊಂಬೆಗಳ ರಚನ ವೈಶಿಷ್ಟದಿಂದ ಕೂಡಿದೆ. ಇದನ್ನು ಪ್ರಾಣಿಗಳ ಚರ್ಮದಿಂದ ತಯಾರಿಸುತ್ತಿದ್ದರು. ಆಟದಲ್ಲಿ ದೇವರು, ದೇವತೆಗಳ ಪಾತ್ರ ಇರುವುದರಿಂದ ಜಿಂಕೆ ಚರ್ಮದಿಂದ ಇಂಥದನ್ನು ತಯಾರಿಸುತ್ತಿದ್ದರು. ಮೇಕೆ, ಹಸು, ಎಮ್ಮಚರ್ಮವನ್ನು ಇದಕ್ಕಾಗಿ ಬಳಸುತ್ತಿದ್ದುದುಂಟು.
Togalu Gombe Information in Kannada Language: In this article, we are providing ಟೊಗಲು ಗೊಂಬೆ ಮಾಹಿತಿ for students and teachers. Students can use this Togalu Gombe Information in Kannada Language to complete their homework.
1. ಪ್ರಾಚೀನ ಜಾನಪದ ಕಲೆ 2. ಹಳ್ಳಿಗಳಲ್ಲಿ ಪ್ರಚಾರ 3. ತೊಗಲುಗೊಂಬೆಗಳ ತಯಾರಿ 4.ರಂಗಭೂಮಿ ಸಿದ್ಧತೆ 5. ಆಕರ್ಷಕ ಆಟ.
ತೊಗಲು ಗೊಂಬೆ ಆಟದಲ್ಲಿ ಜಾನಪದ ಚಿತ್ರಕಲೆ ವಿಶೇಷ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಈ ಆಟದ ಉದ್ದೇಶ ಶುದ್ಧ ಮನರಂಜನೆ, ತೊಗಲು ಗೊಂಬೆಗಳ ಚಿತ್ರಣ ಮತ್ತು ಬೊಂಬೆಗಳನ್ನು ಆಡಿಸುವ ರೀತಿ ತುಂಬ ಕಲಾತ್ಮಕವಾಗಿರುತ್ತದೆ.
ಈ ಕಲೆ ತುಂಬ ಪುರಾತನವಾದುದು. ಕರ್ನಾಟಕ, ಕೇರಳ, ಆಂಧ್ರ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಈ ಜಾನಪದ ಕಲೆ ಬೆಳೆದು ಬಂದಿದೆ. ಆಂಧ್ರ ಪ್ರದೇಶದಲ್ಲಿ ಇದನ್ನು 'ತೋಲು ಬೊಮ್ಮಲಾಟ' ಎಂದು ಕರೆಯುತ್ತಾರೆ. ಉತ್ತರ ಭಾರತದಲ್ಲಿ 'ಕಟ್ ಪುತಲಿ' ಎನ್ನುತ್ತಾರೆ.ಈ ಸುಂದರವಾದ ಕಲೆ ಚೀನ, ಥೈಲೆಂಡ್, ಜಾವಾ ಮುಂತಾದ ದೇಶಗಳಲ್ಲೂ ಸಹ ಕಂಡುಬಂದಿದೆ. ಹೊರದೇಶಗಳಲ್ಲಿ ಈ ಕಲೆ ಇಂದಿಗೂ ಜೀವಂತವಾಗಿರುವುದನ್ನು ನಾವು ಕಾಣಬಹುದು.
ಗೊಂಬೆ ಆಟದವರಿಗೆ ಗೊಂಬೆ ರಾಮರು, ಶಿಳ್ಳೆಕ್ಯಾತರು, ಕಿಳ್ಳೆಕ್ಯಾತರು ಎಂದೆಲ್ಲಾ ನಮ್ಮಲ್ಲಿ ಹೆಸರಿದೆ. ಈ ಜನರು ತೊಗಲು ಗೊಂಬೆಗಳನ್ನು ಆಡಿಸುವುದು ಮಾತ್ರವಲ್ಲದೆ ಗೊಂಬೆಗಳನ್ನು ಮರದ ಬುಟ್ಟಿಗಳಲ್ಲಿ ತುಂಬಿಕೊಂಡು ಹಳ್ಳಿಗಳಿಗೆ ಹೋಗಿ ಪ್ರದರ್ಶನ ಸಹ ಕೊಡುವುದನ್ನು ನಾವು ಕಾಣಬಹುದು. ತೊಗಲು ಗೊಂಬೆ ಆಟ ಏರ್ಪಡಿಸಿದರೆ ಮಳೆ ಬರುತ್ತದೆ ಎಂದು ಹಳ್ಳಿಗರ ನಂಬಿಕೆ. ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ತೊಗಲು ಗೊಂಬೆ ಆಟ ಹೆಚ್ಚು ಪ್ರಚಾರದಲ್ಲಿ ಬಂದಿದೆ.
ತೊಗಲು ಗೊಂಬೆಗಳ ರಚನ ವೈಶಿಷ್ಟದಿಂದ ಕೂಡಿದೆ. ಇದನ್ನು ಪ್ರಾಣಿಗಳ ಚರ್ಮದಿಂದ ತಯಾರಿಸುತ್ತಿದ್ದರು. ಆಟದಲ್ಲಿ ದೇವರು, ದೇವತೆಗಳ ಪಾತ್ರ ಇರುವುದರಿಂದ ಜಿಂಕೆ ಚರ್ಮದಿಂದ ಇಂಥದನ್ನು ತಯಾರಿಸುತ್ತಿದ್ದರು. ಮೇಕೆ, ಹಸು, ಎಮ್ಮಚರ್ಮವನ್ನು ಇದಕ್ಕಾಗಿ ಬಳಸುತ್ತಿದ್ದುದುಂಟು.
ಮೊದಲು ಚರ್ಮವನ್ನು ಹದಗೊಳಿಸಿ ಮಾಂಸ, ಕೂದಲು ಇತ್ಯಾದಿ ಕೆರೆದು ಹಾಕಲಾಗುವುದು. ಇದರಿಂದ ಚರ್ಮ ಅರೆ ಪಾರದರ್ಶಕವಾಗುತ್ತದೆ. ಅನಂತರ ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಅದರ ಮೇಲೆ ಚೂಪಾದ ಉಪಕರಣದಿಂದ ಚಿತ್ರದ ರೇಖೆ ಗುರುತಿಸಿಕೊಳ್ಳುತ್ತಾರೆ. ಆಮೇಲೆ ಅದರಂತೆ ಚರ್ಮವನ್ನು ಕತ್ತರಿಸುತ್ತಾರೆ. ಪ್ರದರ್ಶನ ಕಾಲದಲ್ಲಿ ಪ್ರತ್ಯೇಕವಾಗಿ ಅಂಗಗಳನ್ನು ಚಿತ್ರಿಸಿ ಹೊಲಿಯುತ್ತಾರೆ. ಚಿತ್ರಗಳಿಗೆ ಸರಿ ಹೊಂದುವ ಬಣ್ಣವನ್ನು ಹಚ್ಚುತ್ತಾರೆ. ಆಭರಣಗಳಿರುವ ಕಡ ರಂಧ್ರ ಮಾಡುವುದರಿಂದ ಬೆಳಕಿನಲ್ಲಿ ರಂಧ್ರಗಳು ಮುತ್ತುರತ್ನಗಳಂತೆ ಹೊಳೆಯುತ್ತವೆ.
ಗೊಂಬೆಗಳು ಎರಡರಿಂದ ಆರು ಅಡಿಗಳಷ್ಟು ಎತ್ತರವಿರುವುದುಂಟು. ಪ್ರಮುಖ ಪಾತ್ರಗಳು ಬೇರೆ ಪಾತ್ರಗಳಿಗಿಂತ ದೊಡ್ಡದಾಗಿರುತ್ತವೆ. ಗೊಂಬೆಗಳು ನೆಟ್ಟಗೆ ನಿಲ್ಲಲು ಅವುಗಳಿಗೆ ಈಚಲು ಅಥವಾ ಬಿದಿರುಕಡ್ಡಿ ಕಟ್ಟಿರುತ್ತಾರೆ.
ತೊಗಲುಗೊಂಬೆ ಆಟದ ಪ್ರದರ್ಶನ ಕೊಡಲು ವಿಶಿಷ್ಟ ರೀತಿಯಲ್ಲಿ ರಂಗಭೂಮಿ ಸಿದ್ಧಗೊಳಿಸುತ್ತಾರೆ. ಎರಡು ಬೊಂಬೆ ನಿಲ್ಲಿಸಿ ನಡುವೆ ಬಿಳಿ ಪಂಚೆಯನ್ನು ಬಿಗಿಯಾಗಿ ಎಳೆದು ಕಟ್ಟುತ್ತಾರೆ. ಸುತ್ತಲೂ ತಡಿಕೆ ಇರುತ್ತದೆ. ಇದರಿಂದ ಪಂಚೆಯ ಹಿಂದ ಕುಳಿತವರು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಪ್ರೇಕ್ಷಕರು ಇರುವ ಕಡೆ ಕತ್ತಲು ಇರುತ್ತದೆ. ಪಂಚೆಯ ಹಿಂದೆ ದೊಡ್ಡ ಎಣ್ಣೆ ದೀಪ ಇಡುತ್ತಾರೆ. ಇದರಿಂದ ಪಂಚೆಯ ಮೇಲೆ ಬೀಳುವ ಬೆಳಕು ಪಂಚೆಯನ್ನು ಬೆಳಕಿನ ತೆರೆಯನ್ನಾಗಿಸುತ್ತದೆ.
ದೀಪಕ್ಕೆ ಕೊಂಚ ಹಿಂದೆ ಕುಳಿತ ಆಟಗಾರರು ಬೊಂಬೆಗಳಿಗೆ ಸಿಕ್ಕಿಸಿದ ಬಿದಿರು ಕಡ್ಡಿಗಳನ್ನು ಹಿಡಿದು ಬೊಂಬೆಗಳನ್ನು ಆಡಿಸುತ್ತಾರೆ. ಬೊಂಬೆಗಳನ್ನು ತೆರೆಗೆ ಒತ್ತಿ ಹಿಡಿದಾಗ ಅವುಗಳ ಬಿಂಬ ತೆರೆಯ ಆಚೆ ಪ್ರೇಕ್ಷಕರಿಗೆ ಕಾಣಿಸುತ್ತದೆ. ಬಣ್ಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಕೆಲವೊಮ್ಮೆ ಆಟವನ್ನು ಪ್ರಭಾವಿತವನ್ನಾಗಿಸಲು ಗಿಡ, ಪ್ರಾಣಿ, ಪಕ್ಷಿಗಳನ್ನೂ ಸಹ ತೋರಿಸುವುದುಂಟು. ಗೊಂಬೆಯಾಡಿಸುವವರು ಕಥಾ ಸಂದರ್ಭಗಳಿಗೆ ಅನುಸಾರವಾಗಿ ಹಾಡು ಮತ್ತು ಮಾತು ಹೇಳುತ್ತಾರೆ. ಸೂಕ್ತವಾದ ವಾದ್ಯ ಹಿಮ್ಮೇಳಗಳನ್ನು ಸಹ ವ್ಯವಸ್ಥೆ ಮಾಡಿರುತ್ತಾರೆ. ಜನರಿಗೆ ತೊಗಲು ಗೊಂಬೆಯ ಆಟ ಉತ್ತಮ ಮನರಂಜನೆಯನ್ನು ಒದಗಿಸುತ್ತದೆ.
Admin

100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
COMMENTS