Monday, 23 March 2020

ನನ್ನ ನೆಚ್ಚಿನ ಹವ್ಯಾಸ ನಾಣ್ಯ ಸಂಗ್ರಹ ಪ್ರಬಂಧ Kannada Essay on My Favourite Hobby Coin Collection

Kannada Essay on My Favourite Hobby Coin Collection: In this article, we are providing ನನ್ನ ನೆಚ್ಚಿನ ಹವ್ಯಾಸ ನಾಣ್ಯ ಸಂಗ್ರಹ ಪ್ರಬಂಧ for students and teachers. Students can use this Kannada Essay on My Favourite Hobby Coin Collection to complete their homework.

ನನ್ನ ನೆಚ್ಚಿನ ಹವ್ಯಾಸ ನಾಣ್ಯ ಸಂಗ್ರಹ ಪ್ರಬಂಧ Kannada Essay on My Favourite Hobby Coin Collection 

1.ವಿವರಣೆ 2. ಉಗಮ ಮತ್ತು ಬೆಳವಣಿಗೆ 3, ಸಂಗ್ರಹ ಮತ್ತು ವರ್ಗಿಕರಣ 4.ಕಾಪಾಡುವುದು 5.ಉಪಸಂಹಾರ.

ನಾಣ್ಯ ಸಂಗ್ರಹ ಹವ್ಯಾಸ ಉತ್ತಮ ಮನೋರಂಜನೆಯನ್ನು ಒದಗಿಸುತ್ತದೆ. ಇದೊಂದು ಕುತೂಹಲಕಾರಿ ಹವ್ಯಾಸ. ಪ್ರಾಚೀನ ಕಾಲದಲ್ಲಿ ರೋಮ್ ದೇಶದ ಜನರು ಪ್ರಾಚೀನ ಗ್ರೀಸ್ ನಾಣ್ಯಗಳನ್ನು ಅವುಗಳ ಅಂದ-ಚಂದಕ್ಕಾಗಿ, ಆಕರ್ಷಣೆಗಾಗಿ ಸಂಗ್ರಹಿಸುತ್ತಿದ್ದರು. ಹದಿಮೂರನೇ ಶತಮಾನದಲ್ಲಿ ಯೂರೋಪ್ ದೇಶದಲ್ಲಿ ಪೋಪರು, ರಾಜ-ಮಹಾರಾಜರು, ಅನೇಕ ವಿದ್ವಾಂಸರು 'ನಾಣ್ಯ ಸಂಗ್ರಹ ಹವ್ಯಾಸದಲ್ಲಿ ಆಸಕ್ತಿ ತಾಳಿದ್ದರು.
ಇದಕ್ಕೆ ಮುಖ್ಯ ಪ್ರೇರಣೆ ಎಂದರೆ ನಾಣ್ಯಗಳ ಕಲಾತ್ಮಕ ವಿನ್ಯಾಸ, ಐತಿಹಾಸಿಕ ವ್ಯಕ್ತಿಗಳ ಮೇಲಿನ ಪ್ರೀತಿ-ವಿಶ್ವಾಸ-ಶ್ರದ್ದೆಯೇ ಕಾರಣ. ನಾಣ್ಯಸಂಗ್ರಹ, ಹವ್ಯಾಸ ಕೆಲವೊಮ್ಮಲಾಭದಾಯಕವಾಗುತ್ತದೆ. ಹಳೇಕಾಲದ ನಾಣ್ಯಗಳನ್ನು ಆಸಕ್ತ ಜನರು ಅಧಿಕ ಬೆಲೆ ನೀಡಿ ಕೊಳ್ಳುವುದು ಉಂಟು. ಗ್ರೀಕ್, ರೋಮನ್ ಮತ್ತು ಗುಪ್ತರ ಕಾಲದ ಹಳೆಯ ನಾಣ್ಯಗಳನ್ನು ಕೆಲವರು ಸಂಗ್ರಹಿಸುವುದುಂಟು. ಕೆಲವರು ವಿದೇಶಗಳಿಗೆ ಹೋಗಿ ಬಂದ ಮಿತ್ರರುಗಳಿಂದ ಅಲ್ಲಿಯ ನಾಣ್ಯಗಳನ್ನು ತರಿಸಿಕೊಂಡು ಸಂಗ್ರಹಿಸುತ್ತಾರೆ. ಚಲಾವಣೆಯಲ್ಲಿರುವ ನಾಣ್ಯಗಳನ್ನು ಸಂಗ್ರಹಿಸಿ ಇಟ್ಟುಕೊಂಡರೆ ಕಾಲಾನಂತರ ಅದರ ಚಲಾವಣೆ ನಿಂತಾಗ ಆ ನಾಣ್ಯಗಳ ಬೆಲೆ ಅಧಿಕವಾಗುವುದು ಸಹಜ.
ಬೇರೆ ಬೇರೆ ದೇಶಗಳ ಐತಿಹಾಸಿಕ, ಭೌಗೋಳಿಕ ವೃತ್ತಾಂತಗಳನ್ನು, ಆ ಕಾಲದ ಜನಜೀವನ, ಉಡುಪು, ಆಭರಣ, ಕೇಶಾಲಂಕಾರ ಇತ್ಯಾದಿ ಅತಿ ಸ್ವಾರಸ್ಯಕರ ವಿಷಯಗಳನ್ನು ತಿಳಿಯಲು ಈ ಹವ್ಯಾಸ ಸಹಾಯಕ. ಉತ್ತಮ ಸ್ಥಿತಿಯಲ್ಲಿರುವ ನಾಣ್ಯಗಳನ್ನು ಸಂಗ್ರಹಿಸುವುದು ಒಳ್ಳೆಯದು. ಕೆಲವೊಮ್ಮೆ ಆ ನಾಣ್ಯಗಳು ಹೊರಬಂದ ಅಥವಾ ತಯಾರಾದ ಹಿನ್ನೆಲೆ ವಿಷಯಗಳು ಅತ್ಯಂತ ಕುತೂಹಲಕಾರಿಯಾಗಿರುತ್ತದೆ. ನಾಣ್ಯಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡುವುದಕ್ಕೆ ನಾಣ್ಯ ವಿಜ್ಞಾನ' ಎನ್ನುವುದುಂಟು.
ಲಂಡನ್, ಆಕ್ಸ್‌ಫರ್ಡ್, ಕೇಂಬ್ರಿಜ್, ಗ್ಲಾಸ್ಕೋ, ಪ್ಯಾರಿಸ್‌, ಬರ್ಲಿನ್, ವಿಯೆನ್ನಾ, ಮ್ಯೂನಿಚ್, ನ್ಯೂಯಾರ್ಕ್ ಇತ್ಯಾದಿ ಸ್ಥಳಗಳಲ್ಲಿರುವ ವಸ್ತುಸಂಗ್ರಹಾಲಯಗಳು ಅತ್ಯಂತ ಪ್ರಾಚೀನ ಹಾಗೂ ಅಪರೂಪದ ನಾಣ್ಯಗಳನ್ನು ಕಾಲಕಾಲಕ್ಕೆ ಸಂಗ್ರಹಿಸುತ್ತವೆ.
ನಾಣ್ಯಗಳಲ್ಲಿ ಅನೇಕ ರೀತಿಯವು ಇವೆ. ಸಾಧಾರಣ, ಮಧ್ಯಮ, ಉತ್ತಮ, ಅತ್ಯುತ್ತಮ ಚಲಾವಣೆಯಲ್ಲಿ ಇರುವಂಥವು, ಚಲಾವಣೆಯಲ್ಲಿ ಇಲ್ಲದ ನಾಣ್ಯಗಳು. ಆದ್ದರಿಂದ ನಾಣ್ಯ ಸಂಗ್ರಹದ ವಿಷಯದಲ್ಲಿ ಹೆಚ್ಚು ತಿಳಿವಳಿಕೆ ಅಗತ್ಯ. ಸ್ನೇಹಿತರಲ್ಲಿ ನಾಣ್ಯಗಳ ವಿನಿಮಯ ಮಾಡಿಕೊಳ್ಳಬಹುದು. ತಮ್ಮಲ್ಲಿರುವ ನಾಣ್ಯಗಳನ್ನು ಕೊಟ್ಟು ತಮ್ಮಲ್ಲಿಲ್ಲದ ನಾಣ್ಯಗಳನ್ನು ತೆಗೆದುಕೊಳ್ಳಬಹುದು. ಬೇಕಾದರೆ ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾಣ್ಯ ಮಾರುವ ಅಂಗಡಿಗಳಲ್ಲಿ ಸ್ಥಳೀಯ ಗ್ರಂಥ ಭಂಡಾರಗಳಲ್ಲಿ ವಸ್ತು ಸಂಗ್ರಹಾಲಯಗಳಲ್ಲಿ ಮತ್ತು ನಾಣ್ಯ ಸಂಗ್ರಹ ಸಂಘಗಳಿಂದ ಪಡೆಯಬಹುದು.
ನಾಣ್ಯಗಳು ಕೆಡದಂತೆ ಎಚ್ಚರ ವಹಿಸಬೇಕು. ವ್ಯವಸ್ಥಿತವಾಗಿ ಜೋಡಿಸಿಡಬೇಕು. ಕೆಲವು ಸಂಗ್ರಾಹಕರು ಶೇಖರಿಸಿದ ನಾಣ್ಯಗಳನ್ನು ಎರಡು ಅಂಗುಲ ಉದ್ದದ ಚೌಕಾಕಾರದ ಲಕೋಟೆಗಳಲ್ಲಿ ಇಡುತ್ತಾರೆ. ಲಕೋಟೆಯ ಹೊರಮೈಯ್ಯಲ್ಲಿ ಒಳಗಿರುವ ನಾಣ್ಯಗಳ ವಿವರ ಬರೆಯುತ್ತಾರೆ. ಇದಕ್ಕಾಗಿ ಪಾರದರ್ಶಕ ಲಕೋಟೆ ಉಪಯೋಗಿಸುವುದುಂಟು.
ಪ್ಲಾಸ್ಟಿಕ್ ಪುಟಗಳಿರುವ ಆಲ್ಬಮ್ನಲ್ಲಿ ನಾಣ್ಯಗಳನ್ನು ಅಂಟಿಸುತ್ತಾರೆ. ಸೋಡಿಯಂ ಬೈಾರ್ಬನೇಟ್‌ನಿಂದ ನಾಣ್ಯಗಳ ಮೇಲಿನ ಧೂಳು, ಕೊಳ ತಳಿಯಬಹುದು. ತಾಮ್ರದ ನಾಣ್ಯಗಳನ್ನು ಮೃದು ತೂಗಲಿನಿಂದ ಬರಸಬಹುದು. ಉಜ್ಜಿ ಮರುಗು ಕೊಡುವ ಪುಡಿ ಉಪಯೋಗಿಸಬಾರದು. ಏಕೆಂದರೆ ಅದರ ಮೌಲ್ಯ ಕಡಿಮೆಯಾಗುವ ಸಂಭವವುಂಟು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: