Vikru Gokak Kannada Jeevana Charitre: In this article, we are providing ವಿ ಕೃ ಗೋಕಾಕ್ ಅವರ ಪರಿಚಯ for students and teachers. Students can use this Vikru Gokak Kavi Parichay in Kannada to complete their homework. ಕವಿ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಶಿಕ್ಷಣತಜ್ಞ ವಿನಾಯಕ ಕೃಷ್ಣ ಗೋಕಾಕರು, ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಕೃಷ್ಣರಾಯರು ಇವರ ತಂದ. ಶಾರದಾದೇವಿ ಇವರ' ಪತ್ನಿ, ಸವಣೂರು, ಧಾರವಾಡದಲ್ಲಿ ವಿದ್ಯಾಭ್ಯಾಸ. ಎಂ.ಎ. ಪದವಿಯನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ . ಆರಂಭ. ಆರ್ಕ್‌ಫರ್ಡ್‌ನಲ್ಲಿ ಉನ್ನತ ಶಿಕ್ಷಣ, ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ, ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜು, ಹೈದರಾಬಾದ್, ಸಿಮ್ಲಾ ಮುಂತಾದ ಕಡ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ. 1966ರಲ್ಲಿ ಬೆಂಗಳೂರು ವಿ.ವಿ.ದಲ್ಲಿ ಕುಲಪತಿ ಹಾಗೂ ಪುಟ್ಟಪರ್ಟಿಯ ಸತ್ಯಸಾಯಿ ವಿ.ವಿ.ದಲ್ಲಿ ಉಪಕುಲಪತಿಗಳಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದರು. Read also : Masti Venkatesha Iyengar Kavi Parichay in Kannada, Ra Bendre Biography in Kannada.
Vikru Gokak Kannada Jeevana Charitre: In this article, we are providing ವಿ ಕೃ ಗೋಕಾಕ್ ಅವರ ಪರಿಚಯ for students and teachers. Students can use this Vikru Gokak Kavi Parichay in Kannada to complete their homework.
ಕವಿ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಶಿಕ್ಷಣತಜ್ಞ ವಿನಾಯಕ ಕೃಷ್ಣ ಗೋಕಾಕರು, ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಕೃಷ್ಣರಾಯರು ಇವರ ತಂದ. ಶಾರದಾದೇವಿ ಇವರ' ಪತ್ನಿ, ಸವಣೂರು, ಧಾರವಾಡದಲ್ಲಿ ವಿದ್ಯಾಭ್ಯಾಸ. ಎಂ.ಎ. ಪದವಿಯನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ . ಆರಂಭ. ಆರ್ಕ್‌ಫರ್ಡ್‌ನಲ್ಲಿ ಉನ್ನತ ಶಿಕ್ಷಣ, ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ, ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜು, ಹೈದರಾಬಾದ್, ಸಿಮ್ಲಾ ಮುಂತಾದ ಕಡ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ. 1966ರಲ್ಲಿ ಬೆಂಗಳೂರು ವಿ.ವಿ.ದಲ್ಲಿ ಕುಲಪತಿ ಹಾಗೂ ಪುಟ್ಟಪರ್ಟಿಯ ಸತ್ಯಸಾಯಿ ವಿ.ವಿ.ದಲ್ಲಿ ಉಪಕುಲಪತಿಗಳಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದರು. ಜಪಾನ್, ಬೆಲ್ಸಿಯಂ, ಗ್ರೀಸ್ ದೇಶಗಳ ಪ್ರವಾಸ ಮಾಡಿದ್ದಾರೆ.
ಗೋಕಾಕರ ಕಾವ್ಯ ಹಳತು ಹೊಸತುಗಳ ಹಿತವಾದ ಮಿಶ್ರಣ, ಸುಂದರ, ವಿಚಾರಪೂರ್ಣ ಪ್ರಬಂಧಗಳನ್ನು ಬರೆದಿದ್ದಾರೆ. ಸಮಗ್ರ ಸಾಹಿತ್ಯ ವಿಮರ್ಶಗಳಿಂದ ಖ್ಯಾತರಾಗಿದ್ದಾರೆ. ಪ್ರವಾಸ ಸಾಹಿತ್ಯದ ಮೂಲಕ ವಿದೇಶಗಳ ಪರಿಚಯ ಮಾಡಿಕೊಟ್ಟಿದ್ದಾರೆ. 1934ರಲ್ಲಿ 'ಇಲ್ನೋಡು' ಕಾದಂಬರಿ ಪ್ರಕಟಗೊಂಡಿತು. ಅದೇ ವರ್ಷ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದರು. 1938ರಲ್ಲಿ ಸಮುದ್ರದಾಚೆಯಿಂದ ಪ್ರಕಟಿಸಿದರು. ದಿನಚರಿಯಂತೆ ಬರೆದಿರುವ ಈ ಕೃತಿ ಒಳ್ಳೆಯ ಪ್ರವಾಸಕಥನ ಎನಿಸಿದೆ. 1940ರಲ್ಲಿ ಹೊರಬಂದ 'ಸಮುದ್ರಗೀತ'ಗಳು ಮೊದಲ ನವ್ಯ ಧ್ವನಿ ಅನ್ನಿಸಿತು. ಮತ್ತೆ 1950ರಲ್ಲಿ ಮುಂಬಯಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾದರು. 1957ರಲ್ಲಿ `ದ್ಯಾವಾ ಪೃಥಿವೀ' ಖಂಡಕಾವ್ಯ ಪ್ರಕಟವಾಯಿತು. ಇದರಲ್ಲಿ ನೀರದ ಹಾಗೂ ಇಳಾಗೀತಗಳೆಂಬ ಎರಡು ಭಾಗಗಳಿವೆ. ಭೂಮಿಯ ಮೇಲಿಂದ ವೀಕ್ಷಣೆಯನ್ನು ಕುರಿತದ್ದು ನೀರದ, ಇಳಾಗೀತ ಸಭಾದ ಎತ್ತರದಿಂದ ಭೂಮಿಯ ವೀಕ್ಷಣೆಯನ್ನು ಕುರಿತದ್ದು. ಇವು ಪರಸ್ಪರ ಪೂರಕ. 1960ರಲ್ಲಿ ಈ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿವೆ. 1957ರಲ್ಲಿ ಅಂತರರಾಷ್ಟ್ರೀಯ ಪಿ.ಇ.ಎನ್. ಸಮ್ಮೇಳನಕ್ಕೆ ಟೋಕಿಯೋಗೆ ಹೋದಾಗ ಗೋಕಾಕರು 'ಸಮುದ್ರದೀಚೆಯಿಂದ' ಬರೆದರು. ಇದೂ ದಿನಚರಿಯ ರೂಪದಲ್ಲಿದೆ.
Read also : Ra Bendre Biography in Kannada Language
ಗೋಕಾಕರು ನವ್ಯಕಾವ್ಯದ ಅಧ್ವರ್ಯುಗಳಲ್ಲೊಬ್ಬರು. ಪರಂಪರೆಯಲ್ಲಿ ಉತ್ತಮವಾದದ್ದನ್ನು ಉಳಿಸಿಕೊಂಡು ನವ್ಯತೆಯನ್ನು ಪ್ರತಿಪಾದಿಸಿ ಸಮನ್ವಯ ಸಾಧಿಸಿದರು. ಇವರ ತ್ರಿವಿಕ್ರಮರ ಆಕಾಶಗಂಗೆ' ಬಾಲ್ಯ, ಯೌವನ, ದೈವಭಕ್ತಿ ಸೌಂದರ್ಯಗಳಿಂದ ವಿಕಸಿಸುವ ವ್ಯಕ್ತಿತ್ವ, ಸ್ನೇಹದ ಸಿಹಿ, ಸೌಂದರ್ಯ ಬೋಧೆಗಳನ್ನು ವಿವರಿಸುವ ಕಾವ್ಯ. 'ಇಂದಲ್ಲ ನಾಳೆ' ಕೃತಿ ಹೊರದೇಶಗಳ ಸಂಚಾರದಿಂದ ಅಲ್ಲಿನ ಸಂಸ್ಕೃತಿಯನ್ನು ಬಣ್ಣಿಸುತ್ತದೆ. ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು', 'ಸಾಹಿತ್ಯದಲ್ಲಿ ಪ್ರಗತಿ,' 'ನವ್ಯತೆ ಹಾಗೂ ಕಾವ್ಯಜೀವನ,' 'ವಿಮರ್ಶೆ ಸಂಕಲನಗಳು. 'ಕಾವ್ಯ ಮೀಮಾಂಸೆ' ಪ್ರಬಂಧಗಳ ಸಂಗ್ರಹ 'ಜನನಾಯಕ' 'ಯುಗಾಂತರ', 'ವಿಮರ್ಶಕ ವೈದ್ಯ' ಇವರ ನಾಟಕಗಳ, 'ಇಜೋಡು' ಕಾದಂಬರಿಯ ಮುಂದಿನ ಭಾಗಗಳನ್ನು ವಿನಾಯಕರು 'ಸಮರಸವೇ ಜೀವನ' ಎಂಬ ಬೃಹತ್ ಕಾದಂಬರಿಯನ್ನು ರೂಪಿಸಿದ್ದಾರೆ. ಇವರು ಬರೆದಿರುವ ಮುನ್ನುಡಿಗಳು ಅವರ ವಿದ್ವತ್ತಿಗೆ ಸಾಕ್ಷಿಯಂತಿವೆ. ಗೋಕಾಕರು ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲಿಷಿನಲ್ಲೂ ಸಾಹಿತ್ಯರಚನೆ ಮಾಡಿದ್ದಾರೆ. 'ದಿ ಸಾಂಗ್ ಆಫ್ ಲೈಫ್' 'ಇನ್ ಲೈಫ್ ಟೆಂಪಲ್' ಇವರ ಇಂಗ್ಲಿಷ್ ಕವನಗಳು. ಇವಲ್ಲದೆ ಭಾರತ ಸಂಸ್ಕೃತಿ, ಸೌಂದರ್ಯ ಮೀಮಾಂಸೆ, ಕನ್ನಡ ಸಾಹಿತ್ಯ ಚರಿತ್ರೆಗಳನ್ನು ಕುರಿತು ಸರ್ವಜ್ಞ ಬೇಂದ್ರೆ ಮುಂತಾದ ಕನ್ನಡ ಕವಿಗಳ ಬಗೆಗೂ ಇಂಗ್ಲಿಷಿನಲ್ಲಿ ಬರೆದಿದ್ದಾರೆ.
ವಿ.ಕೃ. ಗೋಕಾಕರ ಮಹಾಸೇವೆಗೆ ಕನ್ನಡ ನಾಡು ವಿವಿಧ ಬಗೆಯಲ್ಲಿ ಗೌರವಿಸಿದೆ. 1958ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೆಂಗಳೂರು ಮತ್ತು ಕರ್ನಾಟಕ ವಿ.ವಿ.ಗಳು ಗೌರವ ಡಾಕ್ಟರೇಟ್ ನೀಡಿ ಅವರನ್ನು ಗೌರವಿಸಿದೆ. 1961ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ಬಂದಿದೆ. ಯೂನಿವರ್ಸಿಟಿ ಆಫ್ ಫೆಸಿಫಿಕ್ ವಿಶ್ವವಿದ್ಯಾನಿಲಯ (ಅಮೆರಿಕಾ) ಗೌರವ ಡಾಕ್ಟರೇಟ್ ನೀಡಿವೆ. 'ವಿನಾಯಕ ವಾಯ' ಅಭಿನಂದನ ಗ್ರಂಥವನ್ನು ಗೌರವಪೂರ್ವಕ ಅರ್ಪಿಸಲಾಗಿದೆ. ಅವರ ಮಹಾಕಾವ್ಯ 'ಭಾರತ ಸಿಂಧು ರಶ್ಮಿಗೆ 1990ರ ಜ್ಞಾನಪೀಠ ಪ್ರಶಸ್ತಿ ದೊರೆತಿವೆ. ವಿನಾಯಕ ಕೃಷ್ಣ ಗೋಕಾಕರು ಮುಂಬಯಿಯಲ್ಲಿ 28-4-1992ರಂದು ನಿಧನರಾದರು.
Read also :
Tags:
kannada 98
Admin


100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
This essay was very helpful to us thank you so much.
DeleteThank you dear! wishing you an auspicious Happy Holi.
Delete