Masti Venkatesha Iyengar Biography in Kannada Language: In this article, we are providing ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕವಿ ಪರಿಚಯ for students and teachers. Students can use this Masti Venkatesha Iyengar Kavi Parichay in Kannada to complete their homework.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕವಿ ಪರಿಚಯ Masti Venkatesha Iyengar Kavi Parichay in Kannada
'ಸಣ್ಣ ಕಥೆಗಳ ಬ್ರಹ್ಮ, 'ಮಾಸ್ತಿ ಕನ್ನಡದ ಆಸ್ತಿ,' ಎಂಬ ಗೌರವಕ್ಕೆ ಪಾತ್ರರಾಗಿದ್ದು, ಮಾಸ್ತಿಯವರು ಉತ್ತಮ ಕಥೆಗಾರರು. ಕಾದಂಬರಿಕಾರರು, ಕವಿಗಳು, ಇವರ ಕಾವ್ಯನಾಮ 'ಶ್ರೀನಿವಾಸ'. ಕನ್ನಡ ಭಾಷೆಗೆ, ಸಾಹಿತ್ಯಕ್ಕೆ ಹೊಸ ಸೌಂದರ್ಯ, ಅರ್ಥ. ಆಯಾಮ ತಂದುಕೊಟ್ಟ ಧೀಮಂತ ಸಾಹಿತಿ, ಕನ್ನಡ ಸಾಹಿತ್ಯ ಪರಂಪರೆಯ ನಿರ್ಮಾಪಕರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬಲ್ಲಿ 6-8-1891ರಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ, ಯಳಂದೂರು, ಶಿವಾರ ಪಟ್ಟಣ, ಮಳವಳ್ಳಿ, ಮೈಸೂರು ಇಲ್ಲಿ ವಿದ್ಯಾಭ್ಯಾಸ, ಮಹಾರಾಜಾ ಕಾಲೇಜಿನಲ್ಲಿ ಎಫ್.ಎ ಪದವಿ. ಮದರಾಸಿನಲ್ಲಿ ಎಂ.ಎ ಪದವಿಯ ನಂತರ ಮೈಸೂರು ಸಂಸ್ಥಾನದ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಸಿಸ್ಟೆಂಟ್ ಕಮೀಷನರ್, ಜಿಲ್ಲಾಧಿಕಾರಿ ಇತ್ಯಾದಿ ವಿವಿಧ ಹುದ್ದೆಯಲ್ಲಿ ದಕ್ಷತೆಯಿಂದ ಕೆಲಸ ನಿರ್ವಹಿಸಿ 16-4-1944ರಲ್ಲಿ ಸ್ವಇಚ್ಛೆಯಿಂದ ನಿವೃತ್ತರಾದರು. 1920ರಲ್ಲಿ ಕೆಲವು ಸಣ್ಣ ಕಥೆಗಳು' ಮಾಸ್ತಿಯವರ ಮೊದಲ ಪುಸ್ತಕ ಪ್ರಕಟವಾಯಿತು. ಅವರ ಮೊದಲ ಕಥೆ “ರಂಗನ ಮದುವೆ.” ಮಾಸ್ತಿಯವರ ಸುಮಾರು ೨೦ ಕಥೆಗಳು, 14 ಸಂಪುಟಗಳಲ್ಲಿ ಪ್ರಕಟವಾಗಿವೆ. ಕನ್ನಡ ಕಥಾಬ್ರಹ್ಮ ಸಣ್ಣಕಥೆಗಳ ಪಿತಾಮಹ, ಕಥೆಗಾರರ ಅಣ್ಣ, ಎಂದೆಲ್ಲಾ ಕರೆಯಲಾಗುವ ಮಾಸ್ತಿಯವರ ಅನೇಕ ಕಥೆಗಳು ಇಂಗ್ಲಿಷ್, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಜರ್ಮನ್ ಭಾಷೆಗಳಿಗೆ ಅನುವಾದವಾಗಿವೆ. ಕುರುಡರಿಗಾಗಿ ಬೈಲ್ ಆವೃತ್ತಿಯೂ ಸಿದ್ದವಾಗಿದೆ. ಮಾಸ್ತಿಯವರ ಕಥೆಗಳ ವಸ್ತು, ಪಾತ್ರ, ಘಟನೆ, ಭಾಷೆ, ನಿರೂಪಣೆ, ಅನುಭಾವ, ವಿನ್ಯಾಸಗಳ ಕ್ಷೇತ್ರ ವಿಶಾಲವಾಗಿದೆ. ಅವರ ಕಥಾ ನಿರೂಪಣೆ ಪ್ರಶಂಸನೀಯ. 1968ರಲ್ಲಿ ಮಾಸ್ತಿಯವರ 'ಸಣ್ಣ ಕಥೆಗಳು' ಸಂಯುಕ್ತ ಸಂಪುಟ ಗ್ರಂಥಕ್ಕೆ ದೆಹಲಿ ಸಾಹಿತ್ಯ ಅಕಾಡಮಿಯ ಬಹುಮಾನ ದೊರೆಯಿತು. ಎರಡನೆಯ ಸಂಪುಟ 'ಗುರುದಕ್ಷಿಣೆ' ಎಂಬ ಹೆಸರಿನಲ್ಲಿ ತಮಿಳು ಭಾಷೆಗೆ ಭಾಷಾಂತರವಾಗಿದೆ. 1949ರಲ್ಲಿ 'ಚೆನ್ನ ಬಸವನಾಯಕ', 1956ರಲ್ಲಿ ಚಿಕವೀರ ರಾಜೇಂದ್ರ ಐತಿಹಾಸಿಕ ಕಾದಂಬರಿಗಳು ಪ್ರಕಟಗೊಂಡವು. ಇವು ದುರಂತ ಕಾದಂಬರಿಗಳು. 1983ರಲ್ಲಿ 'ಚಿಕವೀರರಾಜೇಂದ್ರ' ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಅವರ ಮೊದಲ ಭಾವಗೀತೆಗಳ ಸಂಗ್ರಹ 'ಬಿನ್ನಹ 1922ರಲ್ಲಿ ಪ್ರಕಟವಾಯಿತು. ಕಥನಗೀತೆಗಳಲ್ಲಿ ಶ್ರೀನಿವಾಸರ ಸಾಧನೆ, ಸಿದ್ದಿ ಗಮನಾರ್ಹವಾದದ್ದು. ಸರಳರಗಳೆಯನ್ನು ಸಾರ್ಥಕವಾಗಿ ಬಳಸಿಕೊಂಡಿದ್ದಾರೆ. 1940ರಲ್ಲಿ ಪ್ರಕಟವಾದ 'ಗೌಡರ ಮಲ್ಲಿ' ಅನಂತರ ಬೆಳಕು ಕಂಡ 'ನವರಾತ್ರಿ' 'ಮೂಕನ ಮಕ್ಕಳು 'ರಾಮನವಮಿ' ಸಂಗ್ರಹಗಳಲ್ಲಿ ಸಾಹಿತ್ಯಕ, ಸುಸಂಸ್ಕೃತ ಮೌಲಿಕ ಗುಣಗಳಿವೆ.
1972ರಲ್ಲಿ ಪ್ರಕಟವಾದ 'ಶ್ರೀರಾಮ ಪಟ್ಟಾಭಿಷೇಕ' ಒಂಬತ್ತು ಸಾವಿರ ಸಾಲುಗಳಿರುವ ದೀರ್ಘಕಾವ್ಯ ಮಾಸ್ತಿಯವರು ಹಲವು ನಾಟಕಗಳನ್ನು ಬರೆದಿದ್ದಾರೆ. ಶಾಂತಾ, ಮಂಜುಳಾ ಸಾಮಾಜಿಕ ನಾಟಕಗಳು, ಗೊಂಡ, ಕಾಕನ ಕೋಟೆ ಮತ್ತು 'ಯಶೋಧರಾ' ಇವರ ಉತ್ತಮ ನಾಟಕಗಳು. ಇವರ 'ಕಾಳಿದಾಸ' ನಾಟಕಕ್ಕೆ 1983ರಲ್ಲಿ (ವರ್ಧಮಾನ ಪ್ರಶಸ್ತಿ ದೊರಕಿವೆ. ಷೇಕ್ಸ್ಪಿಯರ್‌ನ ಕೆಲವು ನಾಟಕಗಳನ್ನು “ಚಂಡಮಾರುತ 'ದ್ವಾದಶರಾತ್ರಿ' 'ಲಿಯರ್ ಮಹಾರಾಜ' ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಮಾಸ್ತಿಯವರ ಆತ್ಮಕತ 'ಭಾವ' ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ನವರತ್ನರಾಮರಾವ್, ರವೀಂದ್ರನಾಥ ಠಾಗೂರ್, ಶ್ರೀರಾಮಕೃಷ್ಣ ಮುಂತಾದವರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅಂತರಗಂಗೆ', 'ಆದಿಕವಿ ವಾಲ್ಮೀಕಿ,' 'ಧರ್ಮಸಂರಕ್ಷಣೆ, ಭಾರತ ತೀರ್ಥ ಮುಂತಾದವು ಮಾಸ್ತಿಯವರ ಸಾಹಿತ್ಯ ಕೃಷಿಗೆ ಕಿರೀಟ ಪ್ರಾಯವಾಗಿವ. ಭಾರತ ಮತ್ತು ಪಾಶ್ಚಾತ್ಯ ಕೃತಿಗಳ ವಿವೇಚನೆಯನ್ನೊಳಗೊಂಡ 'ವಿಮರ್ಶೆಗಳು' 'ನೂರಾರು ಪ್ರಸಂಗಗಳು, ವಿಚಾರಸೂಕ್ತಗಳು, ನೂರಾರು ಲೇಖನಗಳು ಅವರಿಂದ ರಚನೆಗೊಂಡಿವೆ. ಮಾಸ್ತಿಯವರು ಇಂಗ್ಲಿಷ್ ಭಾಷೆಯಲ್ಲೂ ಗ್ರಂಥಗಳನ್ನು ರಚಿಸಿದ್ದಾರೆ. ಮಾಸ್ತಿಯವರ ಕೃತಿಗಳು ಸಂಖ್ಯೆಯಲ್ಲಿ ಸತ್ವದಲ್ಲಿ ಗುಣದಲ್ಲಿ, ಗಾತ್ರದಲ್ಲಿ ವೈವಿಧ್ಯದಲ್ಲಿ ದೊಡ್ಡದು. ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶ, ಆತ್ಮಕತೆ, ಜೀವನ ಚರಿತ್ರೆ, ಪ್ರಬಂಧ, ಜನಪದ, ಪತ್ರಿಕೋದ್ಯಮ, ವಿಚಾರ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ 120 ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ 17 ಗ್ರಂಥಗಳನ್ನು ಬರೆದಿದ್ದಾರೆ. ಮಾಸ್ತಿಯವರ ಬಹುಮುಖ ಸೇವೆಗೆ ಅನೇಕ ಪ್ರಶಸ್ತಿ, ಸಂಮಾನ ದೊರೆತಿವೆ. 1929ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1942ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. 1943ರಿಂದ 48ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ 1953-54ರಲ್ಲಿ ಅಧ್ಯಕ್ಷರಾಗಿ ಸಾಹಿತ್ಯ ಪರಿಷತ್ತಿಗೆ ದುಡಿದರು. 1977ರಲ್ಲಿ ಮೈ.ವಿ.ವಿ. ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು. 1974ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋ ಆಗಿ ಆಯ್ಕೆಯಾದರು. 1979ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತವು. ಕನ್ನಡಕ್ಕೆ ಅಖಿಲಭಾರತ ಖ್ಯಾತಿ ದೊರಕಿಸಿ ಕೊಟ್ಟ ಮಾಸ್ತಿ 1986ರಲ್ಲಿ ನಿಧನರಾದಾಗ ಅವರಿಗೆ 95 ವರ್ಷ ತುಂಬಿತ್ತು.
Read also :
Read also :