ಜಿ ಪಿ ರಾಜರತ್ನಂ ಅವರ ಜೀವನ ಚರಿತ್ರೆ Biography of G. P. Rajaratnam in Kannada Language

Admin
0
Biography of G. P. Rajaratnam in Kannada Language: In this article, we are providing ಜಿ ಪಿ ರಾಜರತ್ನಂ ಅವರ ಜೀವನ ಚರಿತ್ರೆ for students and teachers. Students can use this G P  Rajaratnam life history in kannada to complete their homework.

ಜಿ ಪಿ ರಾಜರತ್ನಂ ಅವರ ಜೀವನ ಚರಿತ್ರೆ Biography of G. P. Rajaratnam in Kannada Language

ಸಾಹಿತ್ಯ, ನೀತಿ ನೇಮಗಳಿಗೆ ಹೆಸರಾದ ಗುಂಡ್ಲುಪಂಡಿತ ವಂಶದಲ್ಲಿ ರಾಜರತ್ನಂ 5 ಡಿಸೆಂಬರ್ 1908ರಲ್ಲಿ ಕ್ಲೋಸ್‌ಪೇಟೆಯಲ್ಲಿ (ಈಗಿನ ರಾಮನಗರಂ) ಜನಿಸಿದರು. ತಂದೆ ಗೋಪಾಲಕೃಷ್ಣ ಅಯ್ಯಂಗಾರ್. 1931ರಲ್ಲಿ ಕನ್ನಡ ಎಂ.ಎ. ಅನಂತರ ಅಧ್ಯಾಪಕ ವೃತ್ತಿ ಮಾಡಿದರು. ಇವರು ತಮ್ಮ ಕನ್ನಡ ಸೇವೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿದ್ದಾರೆ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲದೆ ಪಾಳಿ, ಹಿಂದಿ, ಪ್ರಾಕೃತ, ತೆಲುಗು ಭಾಷೆಗಳಲ್ಲೂ ಪರಿಣಿತಿಯನ್ನು ಹೊಂದಿದ್ದರು. ಇದರಿಂದಾಗಿ ಇವರು ಇನ್ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. 'ಹೀಗೇಕಾಯಿತು' ಎಂಬ ಕವನ ಸಂಕಲನ ಇವರ ಮೊದಲ ಬರವಣಿಗೆ, 'ಸೋಲಿಗರ ಸಿದ್ದ' ಮತ್ತು 'ನೆನಪು' ಎಂಬ ಏಕಾಂಕಗಳನ್ನು ಅನಂತರ ಬರೆದರು. ರಾಜರತ್ನಂ ಬೌದ್ಧ ಹಾಗೂ ಜೈನ ಧರ್ಮಗಳ ಪ್ರಚಾರಕ್ಕೆ ತುಂಬ ಶ್ರಮಿಸಿದ್ದರು. 'ನ್ಯೂಯನ್ ತ್ಸಾಂಗ್', 'ಇಂಗ್' ಬೌದ್ಧ ಯಾತ್ರಿಕರನ್ನು ಕುರಿತು ಗ್ರಂಥ ರಚಿಸಿದ್ದಾರೆ. ಅನಂತರ ಶಾಕ್ಯ ಸಾಹಿತ್ಯ ಮಂಟಪ ಪುಸ್ತಕ ಮಾಲೆಯಲ್ಲಿ 'ಧರ್ಮದಾನಿ ಬುದ್ದ 'ಬುದ್ಧವಚನ ಪರಿಚಯ' 'ಜಾತಕ ಕಥೆಗಳು', “ಪಾಲಿಸಜ್ಜ ಪುಷ್ಪಾಂಜಲಿ', 'ಭಗವಾನ್ ಬುದ್ಧ ಮುಂತಾದ ಕೃತಿಗಳನ್ನೂ, ಜೈನಧರ್ಮಕ್ಕೆ ಸಂಬಂಧಿಸಿದಂತೆ 'ಮಹಾವೀರನ ಮಾತುಕತೆ', 'ಶ್ರೀಗೋಮಟೇಶ್ವರ', 'ಭಗವಾನ್ ಮಹಾವೀರ' 'ಭಗವಾನ್ ಪಾರ್ಶ್ವನಾಥ', 'ಜೈನರ ಅರವತ್ತು ಮೂವರು' ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇಂಥದೇ ಶ್ರದ್ದೆಯಿಂದ ಅವರು ಪ್ರಪಂಚದ ಇತರ ಮತಗಳ ಸ್ವಾರಸ್ಯಗಳಿಗೆ ಸಂಬಂಧಿಸಿದಂತೆ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ.

ರಾಜರತ್ನಂ ಕನ್ನಡಕ್ಕೆ ಕೊಟ್ಟ ಇನ್ನೊಂದು ವಿಶಿಷ್ಟ ಕೊಡುಗೆಯೆಂದರೆ ಅವರ 'ಶಿಶುಸಾಹಿತ್ಯ'. ಮಕ್ಕಳ ಮೇಲಿನ ಅವರ ಅಕ್ಕರೆ, ಅವರಿಗಾಗಿ ಒಳ್ಳೆಯ ಸಾಹಿತ್ಯ ಒದಗಿಸುವ ಕಾಳಜಿ, ಬೇರೆ ಬೇರೆ ವಯಸ್ಸಿನ ಮಕ್ಕಳ ಮಾನಸಿಕ ಮಟ್ಟಕ್ಕೆ ಸೂಕ್ತವಾಗುವಂತೆ ವಿಜಾರ ಒದಗಿಸುವ ಕೌಶಲ, ಆ ಸಾಹಿತ್ಯದ ಆಕರ್ಷಕ ಅಚ್ಚುಕಟ್ಟು, ಚಿತ್ರ, ಅಕ್ಷರ ವಿನ್ಯಾಸಗಳು, ಹದವಾದ ಭಾಷೆ, ಹಾಡಲು, ಕುಣಿಯಲು, ಅಭಿನಯಿಸಲು, ಓದಿಕೊಳ್ಳಲು ಸರಾಗವಾಗಿ ಬರುವಂತಹ ಶೈಲಿ - ಇವೆಲ್ಲದರಿಂದ ರಾಜರತ್ನಂ ಅವರ ಶಿಶುಸಾಹಿತ್ಯ ಕನ್ನಡದ ಒಂದು ಗಮನಾರ್ಹ ಭಾಗವಾಗಿದೆ. ಅವರ ಕವನಗಳು ಸಾವಿರಾರು ಮಕ್ಕಳಿಗೆ ಖುಷಿಕೊಟ್ಟಿವೆ. ಇಂದಿಗೂ ಕೊಡುತ್ತಿವೆ. ರಾಜರತ್ನಂರ “ಕಂದನ ಕಾವ್ಯಮಾಲೆ' ಮಕ್ಕಳ ಸಾಹಿತ್ಯ ಹೇಗಿರಬೇಕು ಅನ್ನುವುದಕ್ಕೆ ಒಂದು ಮಾದರಿ. 'ತುತ್ತೂರಿ', ಕಡಲೆಪುರಿ, ಗುಲಗಂಜಿ ಇವು ಶಿಶುಸಾಹಿತ್ಯ ರಚನೆಯಲ್ಲಿ ಅವರಿಗೆ ಹೆಸರು ತಂದ ಕೃತಿಗಳು,

14 ಪದ್ಯಗಳ (ಎಂಡಕುಡ್ಕ ರತ್ನ', ಪುಟ್ನಂಜಿ ಪದಗಳು, ಮುನಿಯನ ಪದಗಳು ಸೇರಿಕೊಂಡು 77 ಪದಗಳ 'ರತ್ನನ ಪದಗಳು' ಕೃತಿ ಆಯಿತು. ಮಡಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಆ ಪದಗಳು ಎಬ್ಬಿಸಿದ ಕೋಲಾಹಲ, ಪಡೆದ ಪ್ರಚಾರ, ಜನಪ್ರಿಯತೆ ಅತ್ಯಂತ ಅಪೂರ್ವವಾದದ್ದು.

ಸಂಟ್ರಲ್ ಕಾಲೇಜು ಕರ್ನಾಟಕ ಸಂಘದ ವತಿಯಿಂದ ಸುಮಾರು 30 ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ತಾವೇ ಹೊತ್ತು ತಿರುಗಾಡಿ ಅವುಗಳನ್ನು ಮಾರಿದರು.

ರಾಜರತ್ನಂ ದೈಹಿಕವಾಗಿ, ಮಾನಸಿಕವಾಗಿ ಒಳ್ಳೆಯ ದಾರ್ಥ್ಯವನ್ನು ಪಡೆದಿದ್ದರು. ಅಂಗಸಾಧನೆ ಮಾಡಿದ ಬಲವಾದ ಮೈಕಟ್ಟು, ಸವಾಲು ಹಾಕುವ ಹುರುಪು, ಅಧ್ಯಯನ, ಅನುಭವ, ಆತ್ಮಗೌರವ, ಅಭಿಮಾನಗಳ ವ್ಯಕ್ತಿತ್ವ, ಎಣೆಯಿಲ್ಲದ ಸೊಗಸಾದ ಭಾಷಣಕಾರರು, ಕಂಚಿನಕಂಠ, ಮಕ್ಕಳಿಂದ ಮುದುಕರವರೆಗೂ ಎಲ್ಲರ ಮನಸೆಳೆವ, ಮನತುಂಬುವ ಮಾತುಗಾರಿಕೆ, ಓದುಗಾರಿಕೆ, ಆರೋಗ್ಯದ ಬದುಕು ರಾಜರತ್ನಂ ಅವರದ್ದು.

ರಾಜರತ್ನಂ ಅವರ 'ನಾಗನ ಪದಗಳು' ಒಂದು ಮಹತ್ವದ ಕೃತಿ. ಇಲ್ಲಿ ನೆಮ್ಮದಿಯ ಸಂಸಾರದ ಚಿತ್ರಣವಿದೆ. ಪ್ರಾಮಾಣಿಕವಾಗಿ ದುಡಿದು, ಹೆಂಡಿರು ಮಕ್ಕಳನ್ನು ಅಕ್ಕರೆಯಿಂದ ಸಾಕುವ ನಲಿವಿನಿಂದ ನಡೆಯುವವನ ಚಿತ್ರಣ ಇಲ್ಲಿದೆ. ಶಾಂತಿ, ನೂರುಪುಟಾಣಿ, ಪುರುಷ ಸರಸ್ವತಿ ಇವು ಇತರ ಪದ್ಯ ಸಂಕಲನಗಳು, 'ಗಂಡು ಗೋಡಲಿ', 'ನರಕದ ನ್ಯಾಯ ಮತ್ತು ಕಂಬೈ ಸೇವೆ', 'ಸಂಭವಾಮಿ ಯುಗೇ ಯುಗೇ' ಇವು ಇವರ ಕೆಲವು ನಾಟಕಗಳು, ಹಳಗನ್ನಡ ಕೃತಿಗಳಿಗೆ ರಾಜರತ್ನಂ ಟೀಕು, ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಗುಲಗಂಜಿ, ಕೋಳಿಕಳ್ಳ, ಗೂಳೂರು ಗಾಯಕರು, ಬಾ ಕರು ಬಾ ಇತ್ಯಾದಿ ಇವರ ಗದ್ಯಕೃತಿಗಳು, ವಿಚಾರ ತರಂಗ, ಕಿರಣಾನುಭವ, ಸಭಾವಿನಯ, ಸ್ವಾರಸ್ಯ ಮತ್ತು ವಿಚಾರ ರಶ್ಮಿ ಮೊದಲಾದವು ಇವರ ವಿಚಾರ ಸಾಹಿತ್ಯ. ನಿರ್ಭಯಾಗ್ರಫಿ' ಇತರ ಅಂತದರ್ಶನ ಕೃತಿ, 'ಹತ್ತುವರ್ಷ', ಬದುಕು ಬರಹಗಳನ್ನು ಕುರಿತ ಮಹಾ ಹರಟೆಯನ್ನು ಪ್ರಕಟಿಸಿದ್ದಾರೆ. ಇವುಗಳ ಜೊತೆಗೆ ರಾಜರತ್ನಂ ಸಂಘಸಂಸ್ಥೆಗಳಲ್ಲಿ ಮಾಡಿದ ಸೇವೆಯೂ ಗಣನೀಯವಾದದ್ದು.

ವಿದ್ಯಾರ್ಥಿದೆಸೆಯಲ್ಲಿ ಬರೆದ 'ತಾರೆ' ಎಂಬ ಪದ್ಯಕ್ಕೆ ಶ್ರೀಯವರ ಸ್ವರ್ಣಪದಕ ಲಭಿಸಿದೆ. 1938ರ ಬಳ್ಳಾರಿ ಸಾಹಿತ್ಯಸಮ್ಮೇಳನದ ಲೇಖಕರ ಗೋಷ್ಠಿ ಅಧ್ಯಕ್ಷತೆ, 1945ರ ರಬಕವಿ ಸಮ್ಮೇಳನದ ಗೋಷ್ಠಿ ಅಧ್ಯಕ್ಷತೆ, 1976ರಲ್ಲಿ ಕಾರ್ಕಳದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹಾಗೂ ಹೊಂಬುಚದಲ್ಲಿ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1969ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1970ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1977ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪ್ರಶಸ್ತಿ, 1969ರಲ್ಲಿ ಮಲ್ಲೇಶ್ವರದ ನಾಗರೀಕರಿಂದ ಪುಸ್ತಕ ಮಾರಾಟದ ನಿಧಿ ಅರ್ಪಣೆ, ಸನ್ಮಾನ, 1978ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಚೀನಾ ದೇಶದ ಬೌದ್ಧ ಯಾತ್ರಿಕರು, ಬುದ್ದವಚನ ಪರಿಚಯ, ಬುದ್ದನ ಕಥೆಗಳು-ಈ ಕೃತಿಗಳಿಗೆ ದೇವರಾಜ ಬಹದ್ದೂರರ ದತ್ತಿ ಬಹುಮಾನ, 'ರಾಜರತ್ನಂ' ಎಂಬ ಗೌರವ ಗ್ರಂಥ ಸಮರ್ಪಣೆ ಹೀಗೆ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದ ಜಿ.ಪಿ. ರಾಜರತ್ನಂ 13-3-197ರಲ್ಲಿ ತೀರಿಕೊಂಡರು.

1979ಮಾರ್ಚ್ 11ರಂದು ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆಯೇ ಕೊನೆಯದು.
Tags

Post a Comment

0Comments
Post a Comment (0)

#buttons=(Accept !) #days=(20)

Our website uses cookies to enhance your experience. Learn More
Accept !