Monday, 20 April 2020

ಕುವೆಂಪು ಅವರ ಜೀವನ ಚರಿತ್ರೆ Kuvempu Biography in Kannada Language

Kuvempu Biography in Kannada Language: In this article, we are providing ಕುವೆಂಪು ಅವರ ಜೀವನ ಚರಿತ್ರೆ for students and teachers. Students can use this Kuvempu life history in kannada to complete their homework.

ಕುವೆಂಪು ಅವರ ಜೀವನ ಚರಿತ್ರೆ Kuvempu Biography in Kannada Language

ಕುವೆಂಪು ಅವರ ಜೀವನ ಚರಿತ್ರೆ Kuvempu Biography in Kannada Language
ಕನ್ನಡ ರಸಋಷಿ, ರಾಷ್ಟ್ರಕವಿ, ಸಾಹಿತ್ಯ ದಿಗ್ಗಜ ಎಂದೇ ಪ್ರಸಿದ್ದರಾಗಿರುವ ಕುವೆಂಪು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1904 ರಲ್ಲಿ ಜನಿಸಿದರು. ತಾಯಿ ಸೀತಮ್ಮ ತಂದೆ ವೆಂಕಟಪ್ಪ ತೀರ್ಥಹಳ್ಳಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಕುವೆಂಪು 1927ರಲ್ಲಿ ಬಿ.ಎ. 1929ರಲ್ಲಿ ಎಂ.ಎ. ಪದವಿಯನ್ನು ಪಡೆದು ತಾವು ಓದಿದ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು. 1955ರಲ್ಲಿ ಅಲ್ಲಿಯ ಪ್ರಾಂಶುಪಾಲರಾದರು. 1956ರಿಂದ 1960ರವರೆಗೆ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆಸಲ್ಲಿಸಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ 1928ರಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿತು. 1933ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾದರು. 1957ರಲ್ಲಿ ಧಾರವಾಡದಲ್ಲಿ ನಡೆದ 39ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡರು. 1955ರಲ್ಲಿ 'ಶ್ರೀರಾಮಾಯಣ ದರ್ಶನಂ” ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1969ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಗಳು ದೊರೆತವು. 1958ರಲ್ಲಿ ಭಾರತ ಸರ್ಕಾರ 'ಪದ್ಮಭೂಷಣ ಪ್ರಶಸ್ತಿ' ನೀಡಿತು. 1964ರಲ್ಲಿ ಕರ್ನಾಟಕ ಸರ್ಕಾರ “ರಾಷ್ಟ್ರಕವಿ” ಬಿರುದು ನೀಡಿ ಗೌರವಿಸಿತು. 1991 ರಲ್ಲಿ ಭಾರತ ಸರ್ಕಾರದಿಂದ 'ಪದ್ಮವಿಭೂಷಣ ಪ್ರಶಸ್ತಿ' ದೊರೆಯಿತು. 12-11-1992 ರಲ್ಲಿ ಕರ್ನಾಟಕ ಸರ್ಕಾರದಿಂದ ಪಂಪಪ್ರಶಸ್ತಿ, 1992ರಲ್ಲಿ 'ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿದವು.
1956ರಲ್ಲಿ ಮೈಸೂರು, 1966ರಲ್ಲಿ ಕರ್ನಾಟಕ 1969ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿವೆ. ಕನ್ನಡ ಸಾಹಿತ್ಯ ಪರಿಷತ್ತು ಗೌರವ ಸದಸ್ಯತ್ವವನ್ನು ನೀಡಿದೆ. 1956ರಲ್ಲಿ 'ಉಡುಗೊರೆ', 1968ರಲ್ಲಿ 'ಗಂಗೋತ್ರಿ', 1975ರಲ್ಲಿ 'ಸಹ್ಯಾದ್ರಿ' ಹೆಸರಿನ ಅಭಿನಂದನ ಗ್ರಂಥಗಳು ಇವರಿಗೆ ಅರ್ಪಿತವಾಗಿವೆ.
ಕುವೆಂಪು ಅವರ ಸಾಹಿತ್ಯ ಸೃಷ್ಟಿ ವೈವಿಧ್ಯಮಯವಾದದ್ದು. ಅಂತೆಯೇ ವಿಪುಲವಾದದ್ದೂ ಹೌದು. ಅದರ ಗಾತ್ರ ಮತ್ತು ಗುಣ ಎರಡೂ ಗಣನೀಯವಾದದ್ದು. ಚಿತ್ರಾಂಗದಾ, ಕೊಳಲು, ನವಿಲು, ಪಾಂಚಜನ್ಯ, ಅನಿಕೇತನ, ಪಕ್ಷಿಕಾಶಿ ಇತ್ಯಾದಿ ಕವನಸಂಕಲನಗಳು, ಕಾನೂನು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಬೃಹತ್ ಕಾದಂಬರಿಗಳು, ಬೆರಳ್ಗೆ ಕೊರಳ್, ರಕ್ತಾಕ್ಷಿ, ಸ್ಮಶಾನ ಕುರುಕ್ಷೇತ್ರ, ಯಮನಸೋಲು ಮುಂತಾದ ನಾಟಕಗಳು,ತಪೋನಂದನ, ರಸೋವೈಸಃ, ವಿಭೂತಿ ಪೂಜೆ ಮುಂತಾದವು ವಿಮರ್ಶಾ ಗ್ರಂಥಗಳು, ವಿಚಾರಕ್ರಾಂತಿಗೆ ಆಹ್ವಾನ, ನಿರಂಕುಶಮತಿಗಳಾಗಿ, ಷಷ್ಠಿನಮನ ಮುಂತಾದವು ವೈಚಾರಿಕ ಗ್ರಂಥಗಳು, ನೆನಪಿನ ದೋಣಿಯಲ್ಲಿ ಆತ್ಮಕಥನ, ಮೋಡಣ್ಣನ ತಮ್ಮ ನನ್ನ ಗೋಪಾಲ, ಬೊಮ್ಮನಹಳ್ಳಿ ಕಿಂದರಿಜೋಗಿ ಮುಂತಾದ ಮಕ್ಕಳ ಕವನಗಳು ಕುವೆಂಪು ಅವರ ಬೃಹತ್ ಸಾಹಿತ್ಯ ಕೃಷಿಗೆ ಸಾಕ್ಷಿಯಾಗಿವೆ. 
ಕನ್ನಡದ ಮಹೋನ್ನತ ಕವಿ ಕುವೆಂಪು ಅವರ ಮರಣ 9 ನವೆಂಬರ್ 1994ರಲ್ಲಿ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

1 comment: