ಶಿವರಾಮ ಕಾರಂತ ಜೀವನ ಚರಿತ್ರೆ Biography of K. Shivaram Karanth in Kannada Language

Admin
0
Biography of K. Shivaram Karanth in Kannada Language: In this article, we are providing ಶಿವರಾಮ ಕಾರಂತ ಜೀವನ ಚರಿತ್ರೆ for students and teachers. Students can use this Biography of K. Shivaram Karanth in Kannada Language to complete their homework.

ಶಿವರಾಮ ಕಾರಂತ ಜೀವನ ಚರಿತ್ರೆ Biography of K. Shivaram Karanth in Kannada Language

Biography of K. Shivaram Karanth in Kannada Language
ಕಥೆ, ಕಾದಂಬರಿ, ನಾಟಕ, ವಿಜ್ಞಾನ, ಸಾಹಿತ್ಯ, ಚಲನಚಿತ್ರ, ಶಿಕ್ಷಣ, ಕಲೆ, ರಾಜಕೀಯ, ಯಕ್ಷಗಾನ, ಪತ್ರಿಕೋದ್ಯಮ, ಸಮಾಜಸೇವೆ - ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯ '
ಕೋಟ' ಎಂಬ ಹಳ್ಳಿಯಲ್ಲಿ 10-10-1902ರಲ್ಲಿ ಜನಿಸಿದರು. ತಂದೆ ಶೇಷ ಕಾರಂತ, ತಾಯಿ ಲಕ್ಷ್ಮಮ್ಮ, ಕುಂದಾಪುರ, ಮಂಗಳೂರಿನಲ್ಲಿ ವಿದ್ಯಾಭ್ಯಾಸ, “ಆಡುಮುಟ್ಟದ ಸೊಪ್ಪಿಲ್ಲ', 'ಕಾರಂತರು ಬರೆಯದ ವಿಷಯವಿಲ್ಲ', 'ಕಾರಂತರು ಒಬ್ಬ ವ್ಯಕ್ತಿಯಲ್ಲ', 'ಅವರೊಂದು ಸಂಸ್ಥೆ,' 'ಕಾರಂತರೇ ಒಂದು ವಿಶ್ವವಿದ್ಯಾಲಯ,' 'ಕಾರಂತರು ನಡೆದಾಡುವ ವಿಶ್ವಕೋಶ -ಮುಂತಾದ ಮಾತುಗಳು ಕಡಲತೀರದ ಭಾರ್ಗವ ಎಂದೇ ಹೆಸರಾಗಿರುವ ಕೋಟ ಶಿವರಾಮಕಾರಂತರ ಬಹುಮುಖ ಸಾಧನೆಗೆ ಕೈಗನ್ನಡಿಯಾಗಿದೆ. ಕಾರಂತರು ಚಿಕ್ಕವರಿಗಾಗಿಯೇ 'ಬಾಲ ಪ್ರಪಂಚ' ಬರೆದಿದ್ದಾರೆ. ಕಾರಂತರು ರಚಿಸಿರುವ 'ವಿಜ್ಞಾನ ಪ್ರಪಂಚದ' 4 ಸಂಪುಟಗಳು ತುಂಬ ಉಪಯುಕ್ತವಾದವು. 'ಸಿರಿಗನ್ನಡ ಅರ್ಥಕೋಶ' ನಿಘಂಟು ಕ್ಷೇತ್ರದಲ್ಲಿ ಮೆಚ್ಚುವಂಥದ್ದು. ಯಕ್ಷಗಾನವನ್ನು ಕುರಿತು ಪುಸ್ತಕ ರಚನೆಯಲ್ಲದೆ ಸ್ವತಃ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಇವರ 'ಯಕ್ಷಗಾನ ಬಯಲಾಟ' ಶ್ರೇಷ್ಠ ಸಂಶೋಧನಾ ಕೃತಿ, ಈ ಗ್ರಂಥಕ್ಕೆ ಸ್ವೀಡನ್ ದೇಶದ ಅಕಾಡೆಮಿ ಪ್ರಶಸ್ತಿ ಮತ್ತು 1958ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿವೆ. ಈ ಕೃತಿ ಹಿಂದಿ ಮತ್ತು ಇಂಗ್ಲಿಷ್‌ಗೆ ಭಾಷಾಂತರಗೊಂಡಿದೆ.
ಕಾರಂತರು ಕನ್ನಡದಲ್ಲಿ ಗೀತನಾಟಕಗಳನ್ನು ಬರೆದವರಲ್ಲಿ ಮೊದಲಿಗರು. 1930ರಲ್ಲಿ ಗೀತನಾಟಕ 'ಮುಕ್ತದ್ವಾರ' ಪ್ರಕಟಗೊಂಡಿತು. ವುರಾಣ, ಇತಿಹಾಸ, ಜಾನಪದ, ಸಾಹಿತ್ಯದಿಂದ ಕಥಾವಸ್ತುಗಳನ್ನೆತ್ತಿಕೊಂಡು 'ಕಿಸಾಗೋತಮಿ', “ಬುದ್ದೋದಯ' 'ಯಾರೋ ಅಂದರು' ಮುಂತಾದ ಗೀತ ನಾಟಕಗಳನ್ನು ರಚಿಸಿದ್ದಾರೆ. ಶಿಲ್ಪಕಲೆ, ಚಿತ್ರಕಲೆ, ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಸ್ವತಃ ಚಿತ್ರಗಳನ್ನು ರಚಿಸಿದ್ದಾರೆ. ಚಲನಚಿತ್ರ ನಿರ್ಮಿಸಿದ್ದಾರೆ. 30ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಟಕ, ಯಕ್ಷಗಾನಗಳಲ್ಲಿ ನಟಿಸಿದ್ದಾರೆ, 44 ಕಾದಂಬರಿಗಳನ್ನು ಬರೆದಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿಗೆ, ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಹಲವು ಪ್ರವಾಸಕಥನಗಳು, ಆತ್ಮಚರಿತ್ರೆಯನ್ನು ಬರೆದಿದ್ದಾರೆ. ಪ್ರಾಣಿ ಪ್ರಪಂಚದ ವಿಸ್ಮಯಗಳು ಕಾರಂತರ ಅಪೂರ್ವ ಕೃತಿ. ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಗಾಂಧೀಜಿಯವರ ಅಸಹಾರ ಚಳವಳಿಯಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದಾರೆ.
ಕಾರಂತರ 'ಮರಳಿ ಮಣ್ಣಿಗೆ,' 'ಮೂಕಜ್ಜಿಯ ಕನಸುಗಳು', 'ಸರಸಮ್ಮನ ಸಮಾಧಿ, ಜೋಮನದುಡಿ ಹೀಗೆ ಹಲವಾರು ಪುಸ್ತಕಗಳು ಇಂಗ್ಲಿಷಿಗೆ ಅನುವಾದವಾಗಿವೆ. 'ಹುಚ್ಚುಮನಸ್ಸಿನ ಹತ್ತು ಮುಖಗಳು,' ಮತ್ತು 'ಸ್ಮೃತಿ ಪಟಲದಿಂದ ಭಾಗ 1, 2 ಮತ್ತು 3 ಕಾರಂತರ ಆತ್ಮಚರಿತ್ರೆ, ಕಾರಂತರ ಪ್ರವಾಸಕಥನಗಳು “ಅಬೂವಿನಿಂದ ಬರಮಾ'ಕ್ಕೆ 'ಅಪೂರ್ವ ಪಶ್ಚಿಮ', 'ಪೂರ್ವದಿಂದ ಆತ್ಮಪೂರ್ವಕ್ಕೆ, ಮುಂತಾದ ಕೃತಿಗಳು ಕನ್ನಡ ಗದ್ಯದ ಮುಖ್ಯ ಆಕರ್ಷಣೆಗಳು, ಕಾರಂತರ ಸೃಜನಶೀಲ ಕೃತಿಗಳೇ ಸುಮಾರು ನೂರಕ್ಕೂ ಮಿಕ್ಕಿವೆ. 'ವಸಂತ', 'ವಿಚಾರವಾಣಿ', ಮಕ್ಕಳಿಗೆ ಕನ್ನಡ ಪಠ್ಯಪುಸ್ತಕ', 'ಕರ್ನಾಟಕದಲ್ಲಿ ಚಿತ್ರಕಲೆ, ಭಾರತೀಯ ಶಿಲ್ಪ,' 'ಕಲೆಯ ದರ್ಶನ' ಹಾಗೂ ಅವರ ಕಾದಂಬರಿಗಳು ಕಾರಂತರ ಅಪೂರ್ವ ಸಾಧನೆಗೆ ಸಾಕ್ಷಿಗಳಾಗಿವೆ. ಕಾರಂತರ ನಿರಂತರ ಸೇವೆಗೆ ಹಲವು ಬಹುಮಾನ, ಪ್ರಶಸ್ತಿಗಳು ಬಂದಿವೆ.1963ರಲ್ಲಿ ಕರ್ನಾಟಕ, ಮೈಸೂರು ವಿ.ವಿ.ಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕೇಂದ್ರ ಸರ್ಕಾರ 'ಪದ್ಮ ಭೂಷಣ' ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1956ರಲ್ಲಿ 'ಮೈಸೂರಿನಲ್ಲಿ ನಡೆದ 37ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, 1977ರಲ್ಲಿ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ, 1990ರಲ್ಲಿ ಅವರ 'ಮೈಮನಗಳ ಸುಳಿಯಲ್ಲಿ' ಕಾದಂಬರಿಗೆ 'ಪಂಪ ಪ್ರಶಸ್ತಿ' ಇತ್ಯಾದಿ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. 1973ರಲ್ಲಿ ಮೈ.ವಿ.ವಿ. ಇಂಗ್ಲೀಷಿನಲ್ಲಿ ಇವರ ಜೀವನ ಚರಿತ್ರೆಯನ್ನು ಪ್ರಕಟಿಸಿದೆ. ಕಾರಂತರು 1997 ಡಿಸೆಂಬರ್ 9ರಂದು ನಮ್ಮನ್ನಗಲಿದರು.
Read also : Sarvagna Biography in Kannada
Read also : Kumaravyasa Parichaya in Kannada Language
Tags

Post a Comment

0Comments
Post a Comment (0)

#buttons=(Accept !) #days=(20)

Our website uses cookies to enhance your experience. Learn More
Accept !