Tuesday, 24 March 2020

ಕೇಶಾಲಂಕಾರ ಬಗ್ಗೆ ಪ್ರಬಂಧ Essay on Hairstyle in Kannada Language

1.ವಿವರಣೆ 2. ಉಗಮ ಮತ್ತು ಬೆಳವಣಿಗೆ 3. ವಿಧಗಳು 4. ಅನುಸರಿಸಬೇಕಾದ ವಿಧಾನ 5. ಉಪಸಂಹಾರ

ಹೆಣ್ಣುಮಕ್ಕಳ ಹವ್ಯಾಸಗಳಲ್ಲಿ 'ಕೇಶಾಲಂಕಾರಕ್ಕೆ ಆದ್ಯತೆ ಇದೆ. ತಲೆಗೂದಲು ಮುಖಕ್ಕೆ ಮೆರುಗು ನೀಡುವಂಥದು. ಮುಖಕ್ಕೆ ಒಪ್ಪುವಂತೆ ರೂಢಿಯಲ್ಲಿರುವ ಶೈಲಿಯನ್ನು ಅನುಸರಿಸಿ ವಿವಿಧ ಕೇಶವಿನ್ಯಾಸಗಳು ಬೆಳೆದು ಬಂದಿದೆ. ಇಂದು ಕೇಶಾಲಂಕಾರ ಶೈಲಿ ನಾನಾ ಬಗೆಯದು. ಮಹಿಳಾ ಸಂಸ್ಥೆಗಳಲ್ಲಿ ಕೇಶಾಲಂಕಾರದ ಬಗೆಗೆ ಪರಿಣತರಿಂದ ತರಬೇತಿ ಕೊಡಿಸುವುದುಂಟು. ಕೇಶಾಲಂಕಾರದ ಸ್ಪರ್ಧೆಗಳು, ಬಹುಮಾನಗಳು ಉಂಟು.
ಕೇಶಾಲಂಕಾರ ಸಂಪ್ರದಾಯ ಅತ್ಯಂತ ಪ್ರಾಚೀನವಾದುದು. ಎಲ್ಲ ದೇಶಗಳಲ್ಲಿ, ಎಲ್ಲ ಕಾಲದಲ್ಲಿ ಇದು ಇದ್ದದ್ದೇ. ಪ್ರಾಚೀನ ಆಸ್ಪೀರಿಯಾ, ಈಜಿಪ್ಟ್ನಲ್ಲಿ ಕುರುಳುಗಳಿಂದ ಕೂಡಿದ ವಿಸ್ತಾರವಾದ ಕೇಶಾಲಂಕಾರ ರೂಢಿಯಲ್ಲಿತ್ತು. ಅಲ್ಲಿನ ಪುರುಷರು ವಿಶೇಷ ಸಂದರ್ಭಗಳಲ್ಲಿ ಕೃತಕ ಕೇಶಧಾರಣೆ ಮಾಡಿಕೊಳ್ಳುತ್ತಿದ್ದರು. ಹುಡುಗರು ವಯಸ್ಸಿಗೆ ಬಂದಾಗ ತಮ್ಮ ತಲೆಗೂದಲನ್ನು ಕತ್ತರಿಸಿ 'ಅಪೋಲೋ' ದೇವತೆಗೆ ಅರ್ಪಿಸುತ್ತಿದ್ದರು. ಗ್ರೀಕ್ ಜನರ ರೀತಿನೀತಿಗಳನ್ನು ಬಹುಮಟ್ಟಿಗೆ ರೋಮನ್ನರು ಅನುಕರಿಸುತ್ತಿದ್ದರು. ರೋಮ್ ಸಾಮ್ರಾಜ್ಯ ಪತನಾನಂತರ ಯೂರೋಪ್‌ನಲ್ಲಿ ಸುಮಾರು ಸಾವಿರ ವರ್ಷಗಳವರೆಗೆ ತಲೆಗೂದಲು ಸ್ವಲ್ಪವೂ ಕಾಣದಂತೆ ಅಲಂಕರಿಸಿಕೊಳ್ಳುವ ರೂಢಿ ಪ್ರಚಲಿತವಿತ್ತು.
14ನೇ ಶತಮಾನದಲ್ಲಿ ತಲೆಗೂದಲನ್ನು ಕಿವಿಗಳ ಬದಿಗೆ ಪುಟ್ಟ ಮುಡಿಗಳಂತೆ ಸುತ್ತಿಕೊಳ್ಳುವ ರೂಢಿ ಇತ್ತು. ಕಾಂತಿವರ್ಧಕ ಚೂರ್ಣ ಉಪಯೋಗಿಸುತ್ತಿದ್ದರು. 16ನೇ ಶತಮಾನದಲ್ಲಿ ಹೊನ್ನಧೂಳಿ ಉಪಯೋಗಿಸುತ್ತಿದ್ದರು. ಅನಂತರ ಪುರುಷರ ಕೇಶಾಲಂಕಾರದಲ್ಲಿ ಮಾರ್ಪಾಟು ಉಂಟಾಯಿತು. ಚಿಕ್ಕದಾಗಿ ಕೂದಲು ಕತ್ತರಿಸುವುದು, ಉದ್ದುದ್ದ ಸುರುಳಿಯಾಗಿ ಇಳಿ ಬೀಳುವಂತೆ ಬೆಳೆಸುವುದು-ಬದಲಾವಣೆ ಬಂದಿತು. ಕೇಶಾಲಂಕಾರದಿಂದ ವ್ಯಕ್ತಿಯ ಸ್ಥಾನಮಾನ ಗುರುತಿಸಲ್ಪಡುತ್ತಿತ್ತು. 18ನೇ ಶತಮಾನದಲ್ಲಿ ಬಹಳ ಬದಲಾವಣೆ ಕಂಡುಬಂದಿದೆ. ಸ್ತ್ರೀಯರು ತಮ್ಮ ಎತ್ತರಕ್ಕಿಂತ-ಮೂರು ಅಡಿ ಮೇಲಿರುವಂತೆ ಕೇಶವಿನ್ಯಾಸ ಮಾಡಿಕೊಳ್ಳುತ್ತಿದ್ದರು.
ಫ್ರಾನ್ಸ್, ಕ್ರಾಂತಿಯ ನಂತರ ಸ್ತ್ರೀಯರು ಚಿಕ್ಕದಾಗಿ ತಲೆಗೂದಲು ಕತ್ತರಿಸಿಕೊಳ್ಳುತ್ತಿದ್ದರು. 19ನೇ ಶತಮಾನದಲ್ಲಿ ಯೂರೋಪಿನ ಕೇಶವಿನ್ಯಾಸದಲ್ಲಿ ಮಹತ್ತರ ಬದಲಾವಣೆಯಾಯಿತು. ನಾನಾ ಬಗೆಯ ಹ್ಯಾಟು ಧರಿಸುತ್ತಿದ್ದರು. 20ನೇ ಶತಮಾನದಲ್ಲಿ ಕೇಶಾಲಂಕಾರಕ್ಕೆ ಸೆಲೂನ್ ತೆರೆದವು. 'ಬಾಬ್' ಶೈಲಿ ರೂಢಿಗೆ ಬಂತು. 1950ರಲ್ಲಿ ಒಳಗೆ ಆಸರೆ ಕೊಟ್ಟು ಕೂದಲನ್ನು ಎತ್ತರವಾಗಿ ಜೇನುಗೂಡು ತರಹ ಕಟ್ಟುವ ರೂಢಿ ಬಂತು. 1960ರ ವೇಳೆಗೆ ವಿಗ್' ಕೃತಕ ಕೇಶಾಲಂಕಾರ ಬಳಕೆಗೆ ಬಂತು.
ಹಳೇಬೀಡು ಮತ್ತು ಬೇಲೂರು ನೃತ್ಯ ಭಂಗಿಯಲ್ಲಿ ಆಕರ್ಷಕವಾಗಿ ನಿಂತಿರುವ ಶಿಲಾಬಾಲಿಕೆಯರಲ್ಲಿ ಹಲವು ಬಗೆಯ ಕೇಶಾಲಂಕಾರವನ್ನು ಕಾಣಬಹುದು. ಕೇಶಾಲಂಕಾರಗಳಲ್ಲಿ ಹಲವು ವಿಧ-ಒಂದು ಸುತ್ತು ಜಡೆ, ಒಂದು ಸುತ್ತು ಹೂವು, ಮತ್ತೆ ಒಂದೇ ಜಡೆ ಅನಂತರ ಹೂ, ಹೀಗಿರುವ ಜಡೆ ಮುಡಿ, ಜೋಲುಮುಡಿ, ಸೋರ್ಮುಡಿ, ಬಂಬಲು ಮುಡಿ, ತಕ್ಕೆದುರುಂಬು, ಸೋಗೆದುರುಂಬು ಇತ್ಯಾದಿ ಕನ್ನಡ ಕವಿಗಳು ಕೇಶಾಲಂಕಾರ ವರ್ಣಿಸಿದ್ದಾರೆ.
ಕೇದಗೆ ಹೂವಿನಿಂದ, ಮಲ್ಲಿಗೆ ಮೊಗ್ಗಿನಿಂದ, ಪಾರಿಜಾತ, ಸೇವಂತಿಗೆ, ಸುಗಂಧರಾಜ ಇತ್ಯಾದಿ ಹೂವಿನಿಂದ ಜಡೆಯನ್ನು ಅಲಂಕರಿಸುವುದು, ಮಾಣಿಕ್ಯವನ್ನು ಹೋಲುವ ದಾಳಿಂಬೆ ಬೀಜವನ್ನು ತೆಗೆದು ಅಲಂಕರಿಸುವುದು ರೂಢಿಯಲ್ಲಿದೆ. ಹೂವಿನಿಂದ ಕೇಶ ಅಲಂಕರಿಸುವುದು, ಆಭರಣಗಳಿಂದ ಕೇಶ ಅಲಂಕರಿಸುವುದು ಹೆಚ್ಚು. ಜನಪ್ರಿಯ, ಕೇಶಾಲಂಕಾರಕ್ಕೆ ಉಪಯೋಗಿಸುವ ಆಭರಣಗಳು ವೈವಿಧ್ಯಮಯವಾಗಿವೆ. ಜಡೆಬಿಲ್ಲೆ, ರಾಕಡ, ನಾಗರ, ಬೈತಲೆ, ಬೊಟ್ಟು, ಚಂದ್ರ, ಸೂರ್ಯ, ಕನ್ನ ಸರಪಳಿ, ಗೊಂಡ, ಮುತ್ತಿನ ಮಾಲೆ, ಬಂಗಾರ-ಬೆಳ್ಳಿ ಹೂವುಗಳು ಇತ್ಯಾದಿ. - ಕೇಶ ಸಂಸ್ಕಾರ ಕೇಂದ್ರಗಳಲ್ಲಿ ಕೇಶಾಲಂಕಾರಕ್ಕಾಗಿ ವಿದೇಶಿ ಮಹಿಳೆಯರು ಹೆಚ್ಚು ಸಮಯ ವಿನಿಯೋಗಿಸುತ್ತಾರೆ. ಕೂದಲಿಗೆ ಬಣ್ಣ ಹಾಕುವುದು, ಅದಕ್ಕೆ ಹೊಳಪು ಕೊಡುವುದು ಇಂದು ಸಾಮಾನ್ಯ ಸಂಗತಿಯಾಗಿದೆ. ಇಂಥ ಕೇಂದ್ರಗಳಲ್ಲಿ ಅಲೆಅಲೆಯಾಗಿರುವಂತ ಗುಂಗುರು ಕೂದಲು ಮಾಡಿಕೊಳ್ಳುವುದು, ರಂಗು ಹಾಕುವುದು, ಸಹಜವಾಗಿ ತಿರುಚಿ ಗುಂಗುರಾದ ಕೂದಲನ್ನು ನೇರಗೊಳಿಸುವುದು, ಬೇಕಾದ ಆಕಾರಕ್ಕೆ ತಲೆಗೂದಲು ಕತ್ತರಿಸುವುದು ಇತ್ಯಾದಿ ಕೇಶಾಲಂಕಾರ ಮಾಡಲಾಗುವುದು.

ಭಾರತದಲ್ಲಿ ಇಂದು ಒಂದು ಅಥವಾ ಎರಡು ಜಡೆ, ಪೋನಿ ಟೇಸ್ಟ್, ಕತ್ತಿನ ಮೇಲೆ ಇಳಿ ಬೀಳುವ, ನವರೆಗೆ ಬರುವ, ಮುಖಕ್ಕಿಂತ ದೊಡ್ಡದಾದ ವಿವಿಧ ಮುಡಿಗಳು, ಬಾಬ್ ಕಟ್, ಕಪೋಲ ಕೇಶಿ, ಹಿಪ್ಪಿ ಮಾದರಿ-ಇತ್ಯಾದಿ ಕೇಶಾಲಂಕಾರಗಳು ಜನಪ್ರಿಯವಾಗಿವೆ. ಮೂರು ಕಾಲಿನ ಜಡ, ಐದು ಕಾಲಿನ ಜಡ, ಏಳು ಕಾಲಿನ ಜಡ ಮತ್ತು ಸೀಳು ಕಾಲಿನ ಜಡೆಗಳೂ ಪ್ರಚಾರದಲ್ಲಿವೆ. ಜಡ ತುದಿಗೆ ದಾರ, ರಬ್ಬರ್ ಉಂಗುರ, ಟೇಪು ಇತ್ಯಾದಿ ಉಪಯೋಗಿಸುವರು.
ಮುಡಿಗೆ ಸಿಂಬಿಗಳು, ಚವರಿ, ಕುಚ್ಚು, ಇತ್ಯಾದಿ ಉಪಯೋಗಿಸುವುದುಂಟು. ನರ ಕೂದಲಿಗೆ ಕಪ್ಪು ಬಣ್ಣ ಬಳೆಯುವುದುಂಟು.

ಕೂದಲನ್ನು ಶುಚಿಯಾಗಿಟ್ಟುಕೊಳ್ಳಬೇಕು. ತಲೆಯಲ್ಲಿ ಹೊಟ್ಟು ಬರದಂತ ನೋಡಿಕೊಳ್ಳಬೇಕು. ಜಿಡ್ಡಾಗಿ ಮುದ್ದೆಯಾಗದಂತೆ ನೋಡಿಕೊಳ್ಳಲು ಆಗಾಗ್ಗೆ ತಲೆಗೂದಲನ್ನು ತೊಳೆಯುವುದು ಒಳ್ಳೆಯದು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: