Thursday, 12 March 2020

Kannada Information on “Satellite”, “ಉಪಗ್ರಹ ಎಂದರೇನು ಮಾಹಿತಿ”, for Class 5, 6, 7, 8, 9 & 10 Students and Competitive Examinations.

Kannada Information on “Satellite”, “ಉಪಗ್ರಹ ಎಂದರೇನು ಮಾಹಿತಿ”

ಉಪಗ್ರಹ ಎಂದರೇನು ಮಾಹಿತಿ 1. ಉಪಗ್ರಹ ಎಂದರೇನು ? 2. ನೈಸರ್ಗಿಕ ಗ್ರಹಗಳು 3. ವಿಜ್ಞಾನಿಗಳ ಶ್ರಮ 4, ಕೃತಕ ಉಪಗ್ರಹ 5.ಉಪಸಂಹಾರ
ಒಂದು ಗ್ರಹದ ಸುತ್ತಸುತ್ತುವ ಆಕಾಶ ಕಾಯಕ್ಕೆ ಉಪಗ್ರಹವೆಂದು ಹೆಸರು. ಇದು ಗ್ರಹ ಅಲ್ಲ; ಉಪಗ್ರಹ, ಭೂಮಿ ಸೌರವ್ಯೂಹದ ಒಂದು ಗ್ರಹ, ಚಂದ್ರ ಭೂಮಿಯ ಉಪಗ್ರಹ.

ಗ್ರಹವು ಉಪಗ್ರಹದ ಮೇಲೆ ಗುರುತ್ವಾಕರ್ಷಣೆ ಬೀರುವುದರಿಂದ ಉಪಗ್ರಹ ಸುತ್ತುತ್ತದೆ. ಉಪಗ್ರಹಕ್ಕೆ ಸ್ವಂತ ಚಲನಾಶಕ್ತಿಯಿಲ್ಲ. ಉಪಗ್ರಹಗಳು ಮೂಲಗ್ರಹದಿಂದ ಸಿಡಿದು ಬರುತ್ತವೆ. ಆದರೂ ಮೂಲಗ್ರಹಗಳ ಗುರುತ್ವಾಕರ್ಷಣೆಯಿಂದ ಅವು ತಪ್ಪಿಸಿಕೊಳ್ಳಲಾರವೆ? ಅಥವಾ ಇವೇ ಬೇರೆ ಕಾಯಗಳಾಗಿದ್ದು ಮೂಲಗ್ರಹದ ಗುರುತ್ವಾಕರ್ಷಣೆಗೆ ಸಿಕ್ಕುತ್ತವೆಯೆ ? ಇದು ಉಪಗ್ರಹಗಳ ಬಗೆಗಿನ ವಾದ.
ಶುಕ್ರ, ಫೋಟೋ ಮತ್ತು ಬುಧಗ್ರಹಗಳಿಗೆ ಉಪಗ್ರಹಗಳಿಲ್ಲ. ಆದರೆ ಮಂಗಳಕ್ಕೆ ಎರಡು, ಗುರುವಿಗೆ ಹನ್ನೆರಡು, ಶನಿಗೆ ಹತ್ತು, ಯುರೇನಸ್‌ಗೆ ಐದು, ಮತ್ತು ನೆಪ್ಪನಿಗೆ ಎರಡು-ಹೀಗೆ ಉಪಗ್ರಹಗಳಿವೆ. ಅತಿ ದೊಡ್ಡ ಉಪಗ್ರಹವಿರುವುದು ಗುರುವಿಗೆ. ಅದು ಗವಿಮೀಡ್, ಅದರ ವ್ಯಾಸ 4,960 ಕಿ.ಮೀ. ಚಂದ್ರ ದೊಡ್ ಉಪಗ್ರಹ ಚಂದ್ರನ ದ್ರವ್ಯರಾಶಿ ಭೂಮಿಯ ದ್ರವ್ಯರಾಶಿಯ ಒಂಬತ್ತರಲ್ಲಿ ಒಂದರಷ್ಟು.

ನೈಸರ್ಗಿಕ ಉಪಗ್ರಹಗಳು ಮೂಲಗ್ರಹಕ್ಕೆ ಹತ್ತಿರವಾಗಿವೆ. ಮಂಗಳ ಫೋಟೋ ಉಪಗ್ರಹದ ವೇಗಮಂಗಳದ ವೇಗಕ್ಕಿಂತ ಹೆಚ್ಚು. ಉಪಗ್ರಹಗಳು ವಾತಾವರಣವನ್ನು ಸೆಳೆದಿಡಲಾರವು. ಆದರೆ ಶನಿಯ ಉಪಗ್ರಹ ಟೈಟನ್ ಸುತ್ತಲೂ ಮಿಥೇನ್ ಅನಿಲವಿದೆ ಎಂದು ತಿಳಿದುಬಂದಿದೆ.

1610ರ ವರೆಗೆ ತಿಳಿದಿದ್ದ ಉಪಗ್ರಹ ಚಂದ್ರ ಮಾತ್ರ. ಅನಂತರ ಗೆಲಿಲಿಯೋ ಗುರುಗ್ರಹದ ನಾಲ್ಕು ಉಪಗ್ರಹಗಳನ್ನು ಪತ್ತೆ ಹಚ್ಚಿದ. 1957ರ ವೇಳೆಗೆ ಸೌರವ್ಯೂಹದ ಮೂವತ್ತೊಂದು ಉಪಗ್ರಹಗಳು ಬೆಳಕಿಗೆ ಬಂದವು. ಮೊಟ್ಟಮೊದಲು ಮಾನವ ನಿರ್ಮಿತ ಕೃತಕ ಉಪಗ್ರಹ 'ಸ್ಟುಟ್ಟಿಕ್'ನ್ನು ರಷ್ಯವು 1957 ಅಕ್ಟೋಬರ್ 4 ರಂದು ಉಡಾಯಿಸಿತು. ಅಮೆರಿಕ 1958 ಫೆಬ್ರವರಿ 1 ರಂದು ತನ್ನ ಮೊದಲ ಕೃತಕ ಉಪಗ್ರಹವನ್ನು ಹಾರಿಸಿತು.
ಕೃತಕ ಉಪಗ್ರಹ ಉಡಾವಣೆ: ಮೊದಲು ಅದನ್ನು ನೇರವಾಗಿ ಮೇಲೇರಿಸುವುದು. ಅನಂತರ ಭೂಮಿಗೆ ಸಮಾನಾಂತರವಾಗುವಂತೆ ನಿರ್ದೆಶಿಸಿ ಸರಿಯಾದ ವೇಗ ಕೊಡುವುದು. ಹಂತಹಂತವಾಗಿ ಈ ಕಾರ್ಯ ಮಾಡಲು ರಾಕೆಟ್ಟುಗಳು ಬೇಕು.

ಕೃತಕ ಉಪಗ್ರಹಗಳು ದೀರ್ಘ ವೃತ್ತದ ಕಕ್ಷೆಯಲ್ಲಿ ಸುತ್ತುತ್ತವೆ. ಅದು ಭೂಮಿಯಿಂದ ದೂರ ಹೋದಷ್ಟೂ ಕಕ್ಷಾವೇಗ ಕಡಿಮೆಯಾಗುತ್ತದೆ. ಭೂಮಿಯಿಂದ 480 ಕಿ.ಮೀ. ದೂರದಲ್ಲಿ ಸುಮಾರು 28,800ಕಿ.ಮೀ. ರಕ್ಷಾ ವೇಗದಲ್ಲಿ ಅದು ಸುತ್ತುತ್ತಿರಬೇಕು. ನಿರ್ದಿಷ್ಟ ವೇಗ ಇಲ್ಲವಾದರೆ ಅದು ಕ್ರಮೇಣ ಭೂ ಕೇಂದ್ರದ ಕಡೆಗೆ ಸಾಗುತ್ತದೆ. ಅಥವಾ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಹೊರಕ್ಕೆ ಸಾಗುತ್ತದೆ.

ಕೃತಕ ಉಪಗ್ರಹದ ಕಾಯವನ್ನು ಶಾಖದಿಂದ ರಕ್ಷಣೆ ಕೊಡುವ ನಿಕ್ಕಲ್, ಕ್ರೋಮಿಯಂ, ಮಾಲಿಬ್ಲಿನಮ್ ಮತ್ತು ಕಬ್ಬಿಣದ ಮಿಶ್ರಲೋಹಗಳಿಂದ ರಚಿಸುತ್ತಾರೆ. ಆದಷ್ಟು ಚಿಕ್ಕದಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅವುಗಳ ಒಳಗಡೆ ಇಡುತ್ತಾರೆ.
ಉಪಗ್ರಹಗಳಲ್ಲಿರುವ ರೇಡಿಯೊ ಪ್ರೇಷಕಗಳು ವೈಜ್ಞಾನಿಕ ಉಪಕರಣಗಳು ಸಂಗ್ರಹಿಸಿದ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತವೆ. ಮೋಡಗಳ ಚಿತ್ರ, ನೌಕಾಯಾನ ಸಂಕೇತಗಳನ್ನು ಭೂಮಿಗೆ ಕಳಿಸುತ್ತವೆ. ಭೂಮಿಯ ವಿಶೇಷ ನಿಲ್ದಾಣಗಳಲ್ಲಿ ಇವುಗಳನ್ನು ಸಂಗ್ರಹಿಸುತ್ತಾರೆ. ವಿಶೇಷ ಭೂ ನಿಲ್ದಾಣಗಳಲ್ಲಿ ವಿವರಗಳನ್ನು ಸ್ವೀಕರಿಸುವ ಅಥವಾ ಕಳಿಸುವ ಆಂಟೆನಾಗಳಿರುತ್ತವೆ. ಈ ನಿಲ್ದಾಣಗಳಿಂದ ಉಪಗ್ರಹಕ್ಕೆ ಸೂಚನೆಗಳು ಸತತವಾಗಿ ಹೋಗುತ್ತಿರುತ್ತವೆ. ಕೃತಕ ಉಪಗ್ರಹ ಜಾಗ ಬದಲಿಸಲು, ವಿವರಗಳನ್ನು ಕಳಿಸದಿರಲು, ರಾಕೆಟ್‌ಗಳನ್ನು ಉರಿಸಿ ಮರಳಿ ಬರಲು-ಈ ನಿಲ್ದಾಣಗಳಿಂದ ಸೂಚನೆ ಹೋಗಬಹುದು.

ಕೃತಕ ಉಪಗ್ರಹಗಳಲ್ಲಿ 'ಸಂಶೋಧಕ' ಮತ್ತು 'ಅನ್ವಯಕ' - ಎಂದು ಎರಡು ವಿಧ. ಸಂಶೋಧಕ ಉಪಗ್ರಹಗಳಲ್ಲಿ ಸೂಕ್ಷ್ಮ ವೈಜ್ಞಾನಿಕ ಉಪಕರಣಗಳು ಇರುತ್ತವೆ. ಆಕಾಶಕಾಯ ಹಾಗೂ ಖಗೋಲದ ಘಟನೆಗಳ ಬಗ್ಗೆ ಇವು ವಿವರ ಸಂಗ್ರಹಿಸುತ್ತವೆ. 'ಅನ್ವಯಕ' ಉಪಗ್ರಹಗಳಲ್ಲಿ ಹಲವು ವಿಧ, ಹವಾಮಾನ ಮುನ್ಸೂಚನೆ ಕೊಡುವುದು ಹವಾಮಾನ ಉಪಗ್ರಹ, ಸಂಪರ್ಕ ಉಪಗ್ರಹ ಇನ್ನೊಂದು. ಇದರ ಸಹಾಯದಿಂದ ರೇಡಿಯೋ ಮತ್ತು ಟೆಲಿವಿಷನ್ ಸಂಕೇತಗಳನ್ನು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಕಳಿಸಬಹುದು. ನೌಕಾಯಾನ ಉಪಗ್ರಹಗಳಿಂದ ಎಂಥ ಹವೆಯಲ್ಲೂ ನಾವಿಕರು ತಮ್ಮನೆಲೆ ಕಂಡುಕೊಳ್ಳಬಹುದು. ಕೆಲವು ಉಪಗ್ರಹಗಳು ಭೂಮಿಯ ಮೇಲೆ ಚಿತ್ರ ತೆಗೆಯುತ್ತವೆ. ಇದರಿಂದ ಭೂಪಟ ರಚನೆ ಸುಲಭ. ಭೂಮಿಯಲ್ಲಿನ ನೈಸರ್ಗಿಕ ಸಂಪತ್ತಿನ ನಿಕ್ಷೇಪ ತಿಳಿಸುವ ಕೃತಕ ಉಪಗ್ರಹಗಳಿವೆ. ಮಿಲಿಟರಿ ಉಪಗ್ರಹಗಳು ವೈರಿಯ ಚಲನವಲನಗಳನ್ನು ತಿಳಿಸುತ್ತವೆ. ಕೆಲವು ಕೃತಕ ಉಪಗ್ರಹಗಳನ್ನು ಪ್ರೋಮ ನಿಲ್ದಾಣಗಳಂತ ನಿರ್ಮಾಣ ಮಾಡುವ ಉದ್ದೇಶವಿದೆ. ಇದುವರೆಗೆ ಉಡಾಯಿಸಲಾದ ಕೃತಕ ಉಪಗ್ರಹಗಳು:
ರಷ್ಯ-ಪುಟ್ಟಿಕ್, ಕಾಸ್ಕೋಸ್, ಲ್ಯೂನಾಸರಣಿ, ವೊಸ್ತೋಕ್
ಅಮೆರಿಕ-ಎಕ್ಸ್‌ಪ್ಲೋರರ್, ಪಯನೀರ್, ಟೆರೋಸ್, ಟೆಲ್‌ಸ್ಟಾಲ್, ರೇಂಜರ್, ಜೆಮಿನಿ.
ಜಪಾನ್, ಇಂಗ್ಲೆಂಡ್, ಫ್ರಾನ್ಸ್, ಕೆನಡಾ, ಇಟಲಿ, ಭಾರತ ರಾಷ್ಟ್ರಗಳೂ ಕೃತಕ ಉಪಗ್ರಹಗಳನ್ನು ಉಡಾಯಿಸಿವ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: