Basaveshwara Jivan Charitra in Kannada Language: In this article, we are providing ಬಸವೇಶ್ವರ ಚರಿತ್ರೆ for students and teachers. Students can use this Basaveshwara Jivan Charitra in Kannada to complete their homework. ಈ ಮಾತುಗಳನ್ನು ನುಡಿದವರು ಬಸವೇಶ್ವರರು. ಸುಮಾರು 800 ವರುಷಗಳ ಹಿಂದೆ (ಕ್ರಿ.ಶ.ಸು. 1131) ಬಸವಣ್ಣನವರು ಈಗಿನ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ತಂದೆ ಮಾದರಸ, ತಾಯಿ ಮಾದಲಾಂಬಿಕೆ.ಕಲ್ಯಾಣದ ದೊರೆ ಬಿಜ್ಜಳನ ಆಸ್ಥಾನದಲ್ಲಿದ್ದ ಬಲದೇವ ತನ್ನ ಸೋದರಳಿಯ ಬಸವೇಶ್ವರರಿಗೆ ತನ್ನ ಮಗಳು ಗಂಗಾದೇವಿಯನ್ನು ಕೊಟ್ಟು ಮದುವೆ ಮಾಡಿದರು. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಶ್ರದ್ಧೆಯಿಂದ, ನಿಷ್ಠೆಯಿಂದ ದುಡಿದು ದಕ್ಷ ಅಧಿಕಾರಿ ಎನಿಸಿಕೊಂಡರು. ಬಲದೇವ ಕಾಲವಾದ ಮೇಲೆ ಪ್ರಧಾನ ಮಂತ್ರಿಯಾದರು. ಜೊತೆಗೆ ದಂಡನಾಯಕ, ಕೋಶಾಧಿಕಾರಿಯೂ ಆದರು. Read also : Lokmanya Bal Gangadhar Tilak Essay in Kannada Language, Essay on Lal Bahadur Shastri in Kannada language
Basaveshwara Jivan Charitra in Kannada Language: In this article, we are providing ಬಸವೇಶ್ವರ ಚರಿತ್ರೆ for students and teachers. Students can use this Basaveshwara Jivan Charitra in Kannada to complete their homework.
ಆಚಾರವೇ ಸ್ವರ್ಗ; ಅನಾಚಾರವೇ ನರಕ”
“ದಯೆಯೇ ಧರ್ಮದ ಮೂಲವಯ್ಯಾ”
“ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ”
ಈ ಮಾತುಗಳನ್ನು ನುಡಿದವರು ಬಸವೇಶ್ವರರು. ಸುಮಾರು 800 ವರುಷಗಳ ಹಿಂದೆ (ಕ್ರಿ.ಶ.ಸು. 1131) ಬಸವಣ್ಣನವರು ಈಗಿನ ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ತಂದೆ ಮಾದರಸ, ತಾಯಿ ಮಾದಲಾಂಬಿಕೆ.ಕಲ್ಯಾಣದ ದೊರೆ ಬಿಜ್ಜಳನ ಆಸ್ಥಾನದಲ್ಲಿದ್ದ ಬಲದೇವ ತನ್ನ ಸೋದರಳಿಯ ಬಸವೇಶ್ವರರಿಗೆ ತನ್ನ ಮಗಳು ಗಂಗಾದೇವಿಯನ್ನು ಕೊಟ್ಟು ಮದುವೆ ಮಾಡಿದರು. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಶ್ರದ್ಧೆಯಿಂದ, ನಿಷ್ಠೆಯಿಂದ ದುಡಿದು ದಕ್ಷ ಅಧಿಕಾರಿ ಎನಿಸಿಕೊಂಡರು. ಬಲದೇವ ಕಾಲವಾದ ಮೇಲೆ ಪ್ರಧಾನ ಮಂತ್ರಿಯಾದರು. ಜೊತೆಗೆ ದಂಡನಾಯಕ, ಕೋಶಾಧಿಕಾರಿಯೂ ಆದರು. ಉತ್ತಮ ಆಡಳಿತ ನಡೆಸಿದರು. ಬೊಕ್ಕಸವನ್ನು ತುಂಬಿದರು. ಶಿವಭಕ್ತರಿಗೆ ನೆರವಾದರು.
ಬಸವಣ್ಣನವರು ಜನರಲ್ಲಿ ಹೊಸ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಿದರು. ಜಾತಿ ಭೇದ ತಪ್ಪು, ಹುಟ್ಟಿದ ಜಾತಿ ಮುಖ್ಯವಲ್ಲ, ಭಕ್ತಿ ಮುಖ್ಯ, ಶುಭ್ರ ಜೀವನ ಮುಖ್ಯ ಎಂದು ಸಾರಿದರು. ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಹಕ್ಕು ಇದೆಯೆಂದು ಲಿಂಗಧಾರಣೆ, ದೀಕ್ಷಾ ಸಂಸ್ಕಾರಗಳಿಗೆ ಅವಕಾಶ ಕೊಟ್ಟು ಸ್ವತಂತ್ರವಾಗಿ ಪೂಜೆ ಮಾಡಲು ಸಮಾನ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು.
ಒಣ ಆಡಂಬರದ ಭಕ್ತಿ ಸಲ್ಲದು, ಈ ಲೋಕ ಕರ್ತಾರನ ಕಮ್ಮಟ, ಕಾಯಕವೇ ಕೈಲಾಸ, ಪ್ರತಿಯೊಬ್ಬರೂ ದುಡಿಯಬೇಕು, ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು, ನಾವು ಜೀವನವನ್ನು ಹೇಗೆ ನಡೆಸುತ್ತೇವೆ ಎನ್ನುವುದು ಮುಖ್ಯ. ಏನು ಹೇಳುತ್ತೇವೆ ಎನ್ನುವುದಲ್ಲ ಎಂದು ಬಸವಣ್ಣನವರು ಉಪದೇಶಿಸಿದರು.
ಬಸವಣ್ಣನವರು ಕಲ್ಯಾಣದಲ್ಲಿ ಅಲ್ಲಮಪ್ರಭು ಮೊದಲಾದ ಶಿವಭಕ್ತರ ನೆರವಿನಿಂದ ಅನುಭವ ಮಂಟಪವನ್ನು ಕಟ್ಟಿದರು. ಇಲ್ಲಿ ಶಿವಶರಣ, ಶಿವಶರಣೆಯರು ಸೇರಿ ಧರ್ಮದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಬಸವಣ್ಣನವರು ಕವಿಹೃದಯವುಳ್ಳ ವಚನಕಾರರಾಗಿದ್ದರು. ಇವರ ವಚನದಲ್ಲಿ ಭಾವಗೀತೆಯ ತೀವ್ರತೆ ಹಾಗೂ ಮಧುರತೆಯಿದೆ. ಇವರ 1000ಕ್ಕೂ ಹೆಚ್ಚಿನ ವಚನಗಳು ದೊರೆತಿವೆ. “ಕೂಡಲ ಸಂಗಮದೇವ' ಎಂಬುದು ಇವರ ವಚನಗಳ ಅಂಕಿತ, ಇವರ ವಚನಗಳು ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಜೀವನಕ್ಕೆ ಬೆಳಕು ಚೆಲ್ಲುತ್ತವೆ, ಹಾಗೂ ವಚನಕಾರರ ಜೀವನ ದೃಷ್ಟಿಯನ್ನು ತಿಳಿಸುತ್ತವೆ. ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ತತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಾಗಲಾರದು. ಇಂಥ ನೈತಿಕ ಜೀವನ, ಸಾಮಾಜಿಕ ಸಮತೆಯನ್ನು ಸಾಧಿಸುವುದು ಇವರ ಗುರಿ. ಬಸವಣ್ಣನವರ ವೈಚಾರಿಕ ದೃಷ್ಟಿ, ಬೌದ್ಧಿಕ ವಿಕಾಸಕ್ಕೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ, ಆಧ್ಯಾತ್ಮಿಕ ಪ್ರಗತಿಗೆ ತಳಹದಿಯಾಗಿದೆ. ಇವರ ವಚನಗಳಲ್ಲಿ ಗಾಢ ಚಿಂತನೆಯಿದೆ. ಭಾಷೆ ತುಂಬ ಸರಳ. ಇವರು ಪ್ರತಿನಿತ್ಯದ ಅನುಭವಗಳಿಂದ ಉಪಮಾನಗಳನ್ನು ಬಳಸಿ ತಮ್ಮ ಉಪದೇಶ ಎಲ್ಲರ ಮನಮುಟ್ಟುವಂತೆ ಮಾಡಿದರು. ಈ ವಚನಗಳಿಂದ ಕನ್ನಡ ಭಾಷೆಗೆ ಅಪೂರ್ವ ಶಕ್ತಿ ಹಾಗೂ ಶ್ರೀಮಂತಿಕೆ ಬಂದಿರುವುದು ಸ್ಪಷ್ಟ,
12ನೇ ಶತಮಾನದಲ್ಲಿದ್ದ ಶರಣ ಪ್ರಮುಖ, ಪ್ರಸಿದ್ದ ವಚನಕಾರ, ಸಮಾಜ ಸುಧಾರಕ, ಭಕ್ತಿ ಭಂಡಾರಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ತಮ್ಮ ಇಷ್ಟದೇವರಾದ ಕೂಡಲಸಂಗಮನ ಬೀಡಾದ 'ಕೂಡಲಸಂಗಮಕ್ಕೆ ಬಂದು ಶತಮಾನದ ಉತ್ತರಾರ್ಧದಲ್ಲಿ ಶಿವೈಕ್ಯರಾದರು.
Tags:
kannada 98
Admin


100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
Gret bhas
Delete