Essay on Olympic Games in Kannada Language: In this article, we are providing ಒಲಂಪಿಕ್ ಕ್ರೀಡಾಕೂಟ ಬಗ್ಗೆ ಪ್ರಬಂಧ for students and teachers. Students can use this Essay on Olympic Games in Kannada Language to complete their homework. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಗ್ರೀಸಿನ ಒಲಂಪಿಯಾ ಬಯಲು ಪ್ರದೇಶ ಧಾರ್ಮಿಕ ಚಟುವಟಿಕೆ ಕೇಂದ್ರವಾಗಿತ್ತು. ಅಲ್ಲಿರುವ ಜೂಸ್ ದೇವಾಲಯದಲ್ಲಿ ಹಸ್ತಿದಂತ ಮತ್ತು ಚಿನ್ನದಿಂದ ಮಾಡಿರುವ ವಿಗ್ರಹ ಜಗತ್ತಿನ ಪ್ರಾಚೀನ ಏಳು ಅದ್ಭುತಗಳಲ್ಲಿ ಒಂದು. ಇಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಏರ್ಪಡಿಸುತ್ತಿದ್ದ ಕ್ರೀಡೆಗಳಿಗೆ ಒಲಿಂಪಿಕ್ಸ್ ಅಥವಾ ಒಲಿಂಪಿಕ್ ಕ್ರೀಡ ಎಂದು ಹೆಸರಾಯಿತು. ಒಂದು ಒಲಿಂಪಿಕ್ಸ್‌ನಿಂದ ಮುಂದಿನ ಒಲಿಂಪಿಕ್ಸ್ ತನಕ ನಾಲ್ಕು ವರ್ಷಗಳ ಅವಧಿಗೆ “ಒಲಿಂಪಿಯಾಡ್” ಎಂದು ಹೆಸರು. 1924ರಿಂದ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿದೆ.ಇದು ಆಯಾ ಒಲಿಂಪಿಕ್ ವರ್ಷಗಳಲ್ಲೇ ಜರುಗುತ್ತದೆ. ಉಷ್ಣವಲಯದಲ್ಲಿರುವ ಗ್ರೀಸಿನಲ್ಲಿ ಚಳಿಗಾಲದ ಆಟಗಳೇ ಇರಲಿಲ್ಲ. ಪ್ರಾಚೀನ ಒಲಿಂಪಿಕ್ ಕ್ರೀಡೆಗಳು ಒಲಿಂಪಿಯಾದಲ್ಲಿ ಮಾತ್ರ ನಡೆಯುತ್ತಿತ್ತು. ಆಧುನಿಕ ಒಲಿಂಪಿಕ್ಸ್ ಈಗ ಪ್ರಪಂಚದ ಬೇರೆ ಬೇರೆ ನಗರಗಳಲ್ಲಿ ಜರುಗುತ್ತಿದ. ಒಲಿಂಪಿಕ್ ಕ್ರೀಡೆಗಳನ್ನು ನಡೆಸಲು ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಈ ಕ್ರೀಡೆಯನ್ನು ನಡೆಸುವುದು ಆ ನಗರಕ್ಕೆ ಸಲ್ಲುವ ಗೌರವ. ಅಂಗೀಕೃತ ಕ್ರೀಡೆಗಳಲ್ಲಿ ಯಾವುದನ್ನು ಸ್ಪರ್ಧೆಗೆ ಇಡಬೇಕು ಎಂಬುದನ್ನು ಆತಿಥೇಯ ರಾಷ್ಟ್ರದ ಒಲಿಂಪಿಕ್ ಸಮಿತಿ ನಿರ್ಧರಿಸುತ್ತದೆ.
Essay on Olympic Games in Kannada Language: In this article, we are providing ಒಲಂಪಿಕ್ ಕ್ರೀಡಾಕೂಟ ಬಗ್ಗೆ ಪ್ರಬಂಧ for students and teachers. Students can use this Essay on Olympic Games in Kannada Language to complete their homework.
1. ವಿವರಣೆ 2. ಉಗಮ 3, ಒಲಂಪಿಕ್ ಕ್ರೀಡೆಯ ಸದಾಶಯ 4. ಒಲಂಪಿಕ್ ಜ್ಯೋತಿ 5. ಒಲಂಪಿಕ್ ಧ್ವಜ 6. ಒಲಂಪಿಕ್ ಪ್ರತಿಜ್ಞೆ 7. ಒಲಂಪಿಕ್ ಪದಕ 8. ಉಪಸಂಹಾರ
ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಗ್ರೀಸಿನ ಒಲಂಪಿಯಾ ಬಯಲು ಪ್ರದೇಶ ಧಾರ್ಮಿಕ ಚಟುವಟಿಕೆ ಕೇಂದ್ರವಾಗಿತ್ತು. ಅಲ್ಲಿರುವ ಜೂಸ್ ದೇವಾಲಯದಲ್ಲಿ ಹಸ್ತಿದಂತ ಮತ್ತು ಚಿನ್ನದಿಂದ ಮಾಡಿರುವ ವಿಗ್ರಹ ಜಗತ್ತಿನ ಪ್ರಾಚೀನ ಏಳು ಅದ್ಭುತಗಳಲ್ಲಿ ಒಂದು. ಇಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಏರ್ಪಡಿಸುತ್ತಿದ್ದ ಕ್ರೀಡೆಗಳಿಗೆ ಒಲಿಂಪಿಕ್ಸ್ ಅಥವಾ ಒಲಿಂಪಿಕ್ ಕ್ರೀಡ ಎಂದು ಹೆಸರಾಯಿತು. ಒಂದು ಒಲಿಂಪಿಕ್ಸ್‌ನಿಂದ ಮುಂದಿನ ಒಲಿಂಪಿಕ್ಸ್ ತನಕ ನಾಲ್ಕು ವರ್ಷಗಳ ಅವಧಿಗೆ “ಒಲಿಂಪಿಯಾಡ್” ಎಂದು ಹೆಸರು.
ಪ್ರಾಚೀನ ಒಲಿಂಪಿಕ್ ಕ್ರೀಡ ನೂರಾರು ವರ್ಷ ನಡೆದವು. ಗ್ರೀಕ್ ರಾಜ್ಯದಲ್ಲಿ ಪರಸ್ಪರ ಯುದ್ಧ ನಡೆಯುತ್ತಿದ್ದರೂ ಸಹ ಒಲಿಂಪಿಕ್ ಉತ್ಸವ ಕಾಲದಲ್ಲಿ ಕದನ ವಿರಾಮ ಆಚರಿಸುತ್ತಿದ್ದರು. ರಾಜ, ಮಹಾರಾಜರೂ ಸಹ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಕ್ರಿ.ಪೂ. 776ರಲ್ಲಿ ನಡೆದ ಒಲಿಂಪಿಕ್ ಕ್ರೀಡೋತ್ಸವದ ಬಗ್ಗೆ ಚಾರಿತ್ರಿಕ ದಾಖಲೆಗಳಿವೆ. ಪ್ರಾರಂಭದಲ್ಲಿ ಒಲಿಂಪಿಕ್ ಕ್ರೀಡೆಗಳಲ್ಲಿ ಗ್ರೀಕ್ ಪುರುಷರು ಮಾತ್ರ ಭಾಗವಹಿಸಲು ಅವಕಾಶವಿತ್ತು.
ಒಲಂಪಿಕ್ಸ್ 19ನೇ ಶತಮಾನದ ಅಂತ್ಯದಲ್ಲಿ ಪುನರುತ್ಥಾನಗೊಂಡಿತು. ಶಾರೀರಿಕ ಸಂಪತ್ತಿಗೆ ಮಹತ್ವ ಕೊಟ್ಟ ಗ್ರೀಕ್ ಆದರ್ಶದಿಂದ ಪ್ರೇರಿತನಾದ ಫ್ರಾನ್ಸಿನ ಕೂಬರ್ತಿ ಒಲಂಪಿಕ್ ಕ್ರೀಡೆಗಳು ಮತ್ತೆ ನಡೆಯಲು ಕಾರಣನಾದ. 1894ರಲ್ಲಿ ಅವನ ಅಧ್ಯಕ್ಷತೆಯಲ್ಲಿ ಜಾಗತಿಕ ಒಲಿಂಪಿಕ್ ಸಮಿತಿ ಸ್ಥಾಪಿತವಾಯಿತು. 1886ರಲ್ಲಿ ಪ್ರಥಮ ಆಧುನಿಕ ಒಲಿಂಪಿಕ್ಸ್ ಜರುಗಿತು. ಇದೂ ಸಹ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದರಲ್ಲಿ ಪ್ರಪಂಚದ ಎಲ್ಲ ದೇಶಗಳ ಪ್ರಜೆಗಳೂ ಭಾಗವಹಿಸಲು ಅವಕಾಶವಿದೆ. ಯಾವುದೇ ಸ್ಪರ್ಧೆ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಗಲು ಅದು 25 ದೇಶಗಳಲ್ಲಿಯಾದರೂ ರೂಢಿಯಲ್ಲಿರಬೇಕು.
1924ರಿಂದ ಚಳಿಗಾಲದ ಒಲಿಂಪಿಕ್ಸ್ ನಡೆಯುತ್ತಿದೆ.ಇದು ಆಯಾ ಒಲಿಂಪಿಕ್ ವರ್ಷಗಳಲ್ಲೇ ಜರುಗುತ್ತದೆ. ಉಷ್ಣವಲಯದಲ್ಲಿರುವ ಗ್ರೀಸಿನಲ್ಲಿ ಚಳಿಗಾಲದ ಆಟಗಳೇ ಇರಲಿಲ್ಲ. ಪ್ರಾಚೀನ ಒಲಿಂಪಿಕ್ ಕ್ರೀಡೆಗಳು ಒಲಿಂಪಿಯಾದಲ್ಲಿ ಮಾತ್ರ ನಡೆಯುತ್ತಿತ್ತು. ಆಧುನಿಕ ಒಲಿಂಪಿಕ್ಸ್ ಈಗ ಪ್ರಪಂಚದ ಬೇರೆ ಬೇರೆ ನಗರಗಳಲ್ಲಿ ಜರುಗುತ್ತಿದ. ಒಲಿಂಪಿಕ್ ಕ್ರೀಡೆಗಳನ್ನು ನಡೆಸಲು ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಈ ಕ್ರೀಡೆಯನ್ನು ನಡೆಸುವುದು ಆ ನಗರಕ್ಕೆ ಸಲ್ಲುವ ಗೌರವ. ಅಂಗೀಕೃತ ಕ್ರೀಡೆಗಳಲ್ಲಿ ಯಾವುದನ್ನು ಸ್ಪರ್ಧೆಗೆ ಇಡಬೇಕು ಎಂಬುದನ್ನು ಆತಿಥೇಯ ರಾಷ್ಟ್ರದ ಒಲಿಂಪಿಕ್ ಸಮಿತಿ ನಿರ್ಧರಿಸುತ್ತದೆ.
ಒಲಿಂಪಿಕ್ಸ್‌ನಲ್ಲಿ ಹವ್ಯಾಸಿ ಕ್ರೀಡಾಪಟುಗಳು ಮಾತ್ರ ಭಾಗವಹಿಸಬಹುದು. ಒಂದು ವೈಯಕ್ತಿಕ ಸ್ಪರ್ಧೆಯಲ್ಲಿ ಒಂದು ದೇಶದ ಮೂವರು ಸ್ಪರ್ಧಿಗಳು ಭಾಗವಹಿಸಲು ಅವಕಾಶವಿದೆ. ಚಳಿಗಾಲದ ಒಲಿಂಪಿಕ್ಸ್‌ನಲ್ಲಿಯೂ ಭಾಗವಹಿಸಬಹುದು. ವಯಸ್ಸಿನ ನಿರ್ಬಂಧವಿಲ್ಲ.
ಒಲಿಂಪಿಕ್ ಕ್ರೀಡಯ ಸದಾಶಯ: ಜಗತ್ತಿನ ಅತ್ಯುತ್ತಮ ಹವ್ಯಾಸಿ ಕ್ರೀಡಾಪಟುಗಳ ನಡುವೆ ತೀವ್ರ ಸ್ಪರ್ಧೆ, ವ್ಯಕ್ತಿವ್ಯಕ್ತಿಗಳ ಮಧ್ಯ ಸಣಸಾಟ, ಸ್ಪರ್ಧೆ ಎಷ್ಟೇ ತೀವ್ರವಾಗಿದ್ದರೂ ಅದರ ಉದ್ದೇಶ ಸೌಹಾರ್ದ ಸಾಧನೆ. 'ನಾವೆಲ್ಲ ಒಂದೇ ಜಾತಿ, ಒಂದೇ ಕುಲ, ನಾವು ಮನುಜರು'-ಇದು ಒಲಿಂಪಿಕ್ ಕ್ರೀಡೆಗಳ ಸದಾಶಯ, ಪ್ರಥಮ ಸ್ಥಾನ ಗಳಿಸಿದ ಗೌರವ ಅಧಿಕೃತವಾಗಿ ವ್ಯಕ್ತಿಗೆ ಸಲ್ಲುತ್ತದೆ. ಯಾವುದೇ ದೇಶಕ್ಕಲ್ಲ.
ಇನ್ನಷ್ಟು ವೇಗ, ಇನ್ನಷ್ಟು ಎತ್ತರ ಇನ್ನಷ್ಟು ಶಕ್ತಿ-ಸಾಧನೆಯಲ್ಲಿ ಸ್ಪರ್ಧೆಯೇ ಒಲಿಂಪಿಕ್ಸ್‌ನ ಸೂತ್ರ, ಕೀರ್ತಿ-ಗೌರವ ಜಯಿಸುವುದರಲ್ಲಿ ಭಾಗವಹಿಸುವುದರಲ್ಲಿ ಇದು ಒಲಿಂಪಿಕ್ಸ್‌ನ ಧೈಯ.
ಒಲಿಂಪಿಕ್ ಜ್ಯೋತಿ:- ಒಲಿಂಪಿಕ್ ಕ್ರೀಡ ಎಲ್ಲೇ ನಡೆಯಲಿ, ಒಲಿಂಪಿಯಾದ ಪವಿತ್ರ ತೋಪಿನಲ್ಲಿ ಜೂಸ್ ದೇವತೆಯನ್ನು ಪ್ರಾರ್ಥಿಸಿ, ಜ್ಯೋತಿಯನ್ನು ಹೊತ್ತಿಸಿ ಕ್ರೀಡೋತ್ಸವ ನಡೆಯುವಲ್ಲಿಗೆ ತರುತ್ತಾರೆ. ಈಗ ಜ್ಯೋತಿ ಹೊತ್ತಿಸುವಾಗ ಹಿಂದಿನ ಮಹಿಳಾ ಅರ್ಚಕಳಂತ ಪೋಷಾಕು ಧರಿಸಿದ ಮಹಿಳೆಯೊಬ್ಬಳು ಜೂಸ್ ದೇವತೆಯ ಅನುಗ್ರಹ ಬೇಡುತ್ತಾಳ. ಅನಂತರ ಸೂರ್ಯನ ಬಿಸಿಲಿನಿಂದ ನಿಮ್ಮ ದರ್ಪಣದ ಸಹಾಯದಿಂದ ಪಂಜನ್ನು ಹೊತ್ತಿಸುತ್ತಾಳೆ. ಅದನ್ನು ಗ್ರೀಕ್ ಓಟಗಾರರು ಒಬ್ಬರಿಗೊಬ್ಬರು ಕೈ ಬದಲಾಯಿಸಿಕೊಳ್ಳುತ್ತಾ ಅಥೆನ್ಸಿಗೆ ತಲುಪಿಸುತ್ತಾರೆ. ಅಲ್ಲಿಂದ ಹಡಗು, ವಿಮಾನ, ಅಥವಾ ಬೇರೆ ಬೇರೆ ದೇಶದ ಓಟಗಾರರ ಮೂಲಕ ಒಲಿಂಪಿಕ್ ಉತ್ಸವ ಸ್ಥಳಕ್ಕೆ ಅದನ್ನು ಒಯ್ಯುತ್ತಾರೆ. ಈಗ ಜ್ಯೋತಿ ಬೆಳಗಲು ಅನಿಲವನ್ನು ಉಪಯೋಗಿಸುತ್ತಾರೆ.
ಜ್ಯೋತಿಯನ್ನು ಒಲಿಂಪಿಕ್ಸ್‌ನ ಪ್ರಧಾನ ಕ್ರೀಡಾಂಗಣಕ್ಕೆ ತರುವವನು ಆತಿಥೇಯ ರಾಷ್ಟ್ರದ ಒಬ್ಬ ಪ್ರಸಿದ್ದ ಓಟಗಾರ. ಅವನು ಮುಖ್ಯ ಅತಿಥಿಯ ಸಮ್ಮುಖ ನಿಂತು ಜ್ಯೋತಿಯನ್ನು ಮೇಲೆತ್ತಿ ಗೌರವ ಸಲ್ಲಿಸುತ್ತಾನೆ. ಪ್ರೇಕ್ಷಕರ ಹರ್ಷೋದ್ದಾರದ ನಡುವೆ ಕ್ರೀಡಾಂಗಣದಲ್ಲಿ ಒಂದು ಸುತ್ತು ಓಡುತ್ತಾನೆ. ಬೇರೆ ಬೇರೆ ಖಂಡಗಳನ್ನು ಪ್ರತಿನಿಧಿಸುವ ಆಟಗಾರರು ಅವನನ್ನು ಹಿಂಬಾಲಿಸುತ್ತಾರೆ.
ಒಲಿಂಪಿಕ್ ಧ್ವಜ:- ಒಲಿಂಪಿಕ್ ಧ್ವಜ ಬಿಳಿಯ ಹಿನ್ನೆಲೆಯಲ್ಲಿ ಒಲಿಂಪಿಕ್ ಸಂಕೇತಗಳನ್ನು ಒಳಗೊಂಡಿರುತ್ತದೆ. ಒಂದರೊಳಗೊಂದು ಸೇರಿರುವ ಐದು ಬಳೆಗಳ ಚಿಹ್ನೆಯೇ ಆಧುನಿಕ ಒಲಿಂಪಿಕ್ಸ್‌ನ ಸಂಕೇತ. ಈ ಬಳೆಗಳ ಬಣ್ಣ ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು, ಇವುಗಳಲ್ಲಿ ಕನಿಷ್ಠ ಒಂದು ಬಣ್ಣ ಜಗತ್ತಿನ ಯಾವುದೇ ದೇಶದ ಧ್ವಜದಲ್ಲಿ ಇರುತ್ತದೆ. ಆದ್ದರಿಂದ ಈ ಚಿಹ್ನ ಜಗತ್ತಿನ ಎಲ್ಲ ದೇಶಗಳ ಐಕ್ಯವನ್ನು ಸೂಚಿಸುತ್ತದೆ. ಐದು ಬಳೆಗಳು ಜಗತ್ತಿನ ಐದು ಖಂಡಗಳಿಗೆ ಸಂಕೇತವಾಗಿರುತ್ತದೆ.
1920ನಲ್ಲಿ ಬೆಲ್ಸಿಯಂನ ಆಂಟ್‌ವರ್ಪ್‌ನಲ್ಲಿ ನಡೆದ ಒಲಿಂಪಿಕ್ಸ್‌ನಿಂದ ಈ ಒಲಿಂಪಿಕ್ ಧ್ವಜವನ್ನು ಮೊದಲ ಬಾರಿಗೆ ಬಳಸಲಾಯಿತು. ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಯದಲ್ಲಿ ಕ್ರೀಡಾಂಗಣದಲ್ಲಿ ಹಾರಿಸಿದ ಧ್ವಜವನ್ನು ಮುಕ್ತಾಯದಲ್ಲಿ ಇಳಿಸುವ ಗೌರವವನ್ನು ಆತಿಥೇಯ ನಗರದ ಮಹಾಪೌರನಿಗೆ ಒಪ್ಪಿಸಲಾಗುತ್ತದೆ. ಅವನು ಅದನ್ನು ಜೋಪಾನವಾಗಿ ಇಟ್ಟುಕೊಂಡು ಮುಂದಿನ ಒಲಿಂಪಿಕ್ ಕ್ರೀಡೆಗಳು ನಡೆಯುವಲ್ಲಿಗೆ ಬಂದು ಅದನ್ನು ಒಪ್ಪಿಸುವುದು ಒಂದು ಸಂಪ್ರದಾಯ. ಇದು ಆತಿಥೇಯ ನಗರಕ್ಕೆ ಸಲ್ಲುವ ಒಲಿಂಪಿಕ್ಸ್‌ನ ಒಂದುಗೌರವ.
ಒಲಿಂಪಿಕ್ಸ್ ಪ್ರತಿಜ್ಞೆ:- ಜಾಗತಿಕ ಕ್ರೀಡಾ ಉತ್ಸವದ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಉತ್ಸವದ ಉದ್ದೇಶವನ್ನು ಸ್ಮರಿಸುತ್ತಾರೆ. ಉದ್ಘಾಟನಾ ಭಾಷಣದ ನಂತರ ಒಲಿಂಪಿಕ್ ಜ್ಯೋತಿ ಬೆಳಗಿಸಲಾಗುತ್ತದೆ. ಅನಂತರ ಪ್ರತಿಜ್ಞಾ ಸ್ವೀಕಾರ ನಡೆಯುತ್ತದೆ. ಪ್ರಾಚೀನ ಗ್ರೀಸಿನ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಾಳುಗಳ ಜೊತೆ ಅವರ ಕುಟುಂಬದವರು, ತರಬೇತಿಗಾರರು ಮತ್ತು ತೀರ್ಪುಗಾರರು ಪ್ರತಿಜ್ಞೆ ಸ್ವೀಕರಿಸುತ್ತಿದ್ದರು. ನಿಯಮಬದ್ಧವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಅವುಗಳನ್ನು ನಡೆಯಗೊಡುವುದಾಗಿ ಹಾಗೂ ತೀರ್ಪು ನೀಡುವುದಾಗಿ ಪ್ರತಿಜ್ಞೆ ಮಾಡಬೇಕಾಗಿತ್ತು.
ಈಗ ಒಲಿಂಪಿಕ್ ಕ್ರೀಡೋತ್ಸವ ನಡೆಯುವ ದೇಶದ ಒಬ್ಬ ಕ್ರೀಡಾಪಟು ವೇದಿಕೆಯೇರಿ ಪ್ರತಿಜ್ಞಾ ವಾಕ್ಯವನ್ನು ಹೇಳುತ್ತಾನೆ. ಉಳಿದ ಸ್ಪರ್ಧಾಳುಗಳು ಅದನ್ನು ಪುನರುಚ್ಚರಿಸುತ್ತಾರೆ. 'ನಾವು ನಿಜವಾದ ಕ್ರೀಡಾಮನೋಭಾವದಿಂದ ಒಲಿಂಪಿಕ್ಸ್‌ನ ಹಿರಿಮ ಮತ್ತು ಮನ್ನಣೆ ನೀಡಿ ಈ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತೇವೆಂದು ಎಲ್ಲಾ ಸ್ಪರ್ಧಾಳುಗಳ ಪರವಾಗಿ ನಾನು ಭರವಸೆ ನೀಡುತ್ತೇನೆ'. 1920ರಲ್ಲಿ ಆಂಟ್‌ವರ್ಪ್‌ನಲ್ಲಿ ಈ ಒಲಿಂಪಿಕ್ಸ್ ಪ್ರತಿಜ್ಞಾ ವಾಕ್ಯವನ್ನು ಆರಂಭಿಸಲಾಯಿತು.
ಒಲಿಂಪಿಕ್ಸ್ ಪದಕ:- ಪ್ರಾಚೀನ ಒಲಿಂಪಿಕ್ ಕ್ರೀಡೆಗಳಲ್ಲಿ ಗೆದ್ದವರಿಗೆ ಆಲಿವ್ ಎಲೆಗಳಿಂದ ರಚಿಸಿದ ಕಿರೀಟವನ್ನು ಪಾರಿತೋಷಕವಾಗಿ ನೀಡಲಾಗುತ್ತಿತ್ತು. ಈಗ ಒಲಿಂಪಿಕ್ ಕ್ರೀಡೆಗಳಲ್ಲಿ ಯಾವುದೇ ಒಂದು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರೆ ಚಿನ್ನದ ಪದಕ ಎರಡನೇ ಸ್ಥಾನಕ್ಕೆ ಬೆಳ್ಳಿ ಪದಕ, ಮೂರನೇ ಸ್ಥಾನಕ್ಕೆ ಕಂಚಿನ ಪದಕ ದೊರೆಯುತ್ತದೆ. ಕ್ರೀಡೆಗಳನ್ನು ನಡೆಸುವ ದೇಶದ ರಾಷ್ಟ್ರಭಾಷೆಯಲ್ಲಿ ಪದಕಗಳ ಮೇಲೆ ಬರೆದಿರುತ್ತಾರೆ. ಪ್ರಶಸ್ತಿ ವಿಜೇತರಿಗೆ ಪದಕಗಳ ಜೊತೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ನಾಲ್ಕು, ಐದು, ಆರು ಸ್ಥಾನ ಗಳಿಸಿದರೆ ಆಯಾ ಸ್ಥಾನವನ್ನು ನಮೂದಿಸಿದ ಪ್ರಮಾಣಪತ್ರವನ್ನು ಕೊಡಲಾಗುವುದು.
ಭಾರತ ಒಲಿಂಪಿಕ್ಸ್‌ನಲ್ಲಿ 1928ರಲ್ಲಿ ಮೊದಲ ಬಾರಿಗೆ ಪ್ರವೇಶಿಸಿತು. ಅಂದಿನಿಂದ 1956ರವರೆಗೆ ಪ್ರತಿ ಒಲಿಂಪಿಕ್ಸ್‌ನಲ್ಲೂ ಹಾಕಿಯಲ್ಲಿ ಚಿನ್ನದ ಪದಕ ಗಳಿಸಿತು.
Tags:
kannada 98
Admin

100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
COMMENTS