Sunday, 8 March 2020

ಕ್ರೀಡೆಗಳು ಮತ್ತು ಹವ್ಯಾಸಗಳು ಪ್ರಬಂಧ Essay on Kreedegalu Mahatva in Kannada Language

Essay on Kreedegalu Mahatva in Kannada Language: In this article, we are providing ಕ್ರೀಡೆಗಳು ಮತ್ತು ಹವ್ಯಾಸಗಳು ಪ್ರಬಂಧ for students and teachers. Students can use ths Essay on Kreedegalu Mahatva in Kannada language

ಕ್ರೀಡೆಗಳು ಮತ್ತು ಹವ್ಯಾಸಗಳು ಪ್ರಬಂಧ Essay on Kreedegalu Mahatva in Kannada

1.ಕ್ರೀಡಾಪೋಷಣೆ 2. ಪ್ರಾಚೀನ ಕಾಲದ ಕ್ರೀಡೆಗಳು 3, ಹರಪ್ಪಮೊಹೆಂಜೋದಾರೋ ಕಾಲದ ಕ್ರೀಡೆಗಳು 4. ಬೇರೆ ಬೇರೆ ಕಾಲದಲ್ಲಿ ಕ್ರೀಡಾ ಬೆಳವಣಿಗೆ 5. ಆಧುನಿಕ ಕಾಲದಲ್ಲಿ ಕ್ರೀಡಾ ಚಟುವಟಿಕೆ.
ಕ್ರೀಡೆಗಳು ಮತ್ತು ಹವ್ಯಾಸಗಳು ಪ್ರಬಂಧ Essay on Kreedegalu Mahatva in Kannada
“ಕ್ರೀಡೆಯಲ್ಲಿ ದೊರೆಯುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಲಾಭಗಳಿಗಾಗಿ ಮಾತ್ರ ನಾನು ಅದರಲ್ಲಿ ಭಾಗವಹಿಸಿದ್ದೇನೆ. ಕ್ರೀಡ ನನಗೆ ಒಂದು ಮನೋಲ್ಲಾಸ ಮಾತ್ರ ಎಂದು ಭಾವಿಸಿದ್ದೇನೆ' ಒಲಂಪಿಕ್ ಕ್ರೀಡಾಪಟುಗಳು ಈ ಘೋಷಣೆಗೆ ಬದ್ದರಾಗಿರಬೇಕು. ಆನಂದ, ವಿನೋದಗಳಿಗಾಗಿ ಚಲನೆಯಲ್ಲಿ ಪಟುತ್ವ ಸಂಪಾದನೆಗಾಗಿ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಕ್ರೀಡೆ ಮೈಮನಸ್ಸುಗಳಿಗೆ ಮುದ ಕೂಡುತ್ತವೆ, ಉಲ್ಲಾಸ ನೀಡುತ್ತವೆ. ಕ್ರೀಡೆ ದೈಹಿಕ ಬೆಳವಣಿಗೆಗೆ ಪೂರಕ.

ಮಾನವ ತನ್ನ ಆಹಾರ, ವಸತಿ, ಉಡುಪುಗಳಿಗಾಗಿ ನಡೆಯುತ್ತಿದ್ದ ಉದ್ದೇಶಪೂರ್ವಕ ಚಟುವಟಿಕೆಗಳೆಲ್ಲವೂ ಕ್ರೀಡೆಯ ಹಿನ್ನೆಲೆಯನ್ನುಳ್ಳದ್ದು. ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾಣಿಗಳನ್ನು ಕೊಲ್ಲಬೇಕಾಗಿತ್ತು. ಕುದುರೆ ಸವಾರಿ, ರಥ ಓಟ, ಕುಸ್ತಿ ಇತ್ಯಾದಿ ರಣರಂಗದ ಸಿದ್ಧತೆಗಾಗಿ ರೂಢಿಸಿಕೊಂಡ ಚಟುವಟಿಕೆಗಳು. ಪುರಾತನ ರೋಮ್‌ನ ಪ್ರಸಿದ್ಧರಥಸ್ಪರ್ಧೆ ಯುದ್ಧಕಾಲದ ಸಿದ್ಧತೆಯಾಗಿರುತ್ತಿತ್ತು.

ವೇದ ಮತ್ತು ಪುರಾಣ ಕಾಲದಿಂದಲೂ ಭಾರತದಲ್ಲಿ ಕ್ರೀಡಾ ಸಂಪ್ರದಾಯ ಬೆಳೆದು ಬಂದಿದೆ. ಬಾಣ ಪ್ರಯೋಗ, ಭರ್ಜಿ ಎಸತ, ಕುದುರೆ ಸವಾರಿ, ರಥ ಸ್ಪರ್ಧೆ, ಪಗಡೆಯಾಟ ಮೊದಲಾದ ಚಟುವಟಿಕೆಗಳು ಆರ್ಯರ ಕಾಲದಲ್ಲಿ ರೂಢಿಯಲ್ಲಿತ್ತು. ಯೋಗಾಸನ, ಪ್ರಾಣಾಯಾಮ, ಸೂರ್ಯ ನಮಸ್ಕಾರಗಳು ಇತ್ಯಾದಿ ಆರ್ಯರ ಶಾರೀರಿಕ ಚಟುವಟಿಕೆಗಳಾಗಿದ್ದವು. ಪುರಾಣದ ಅರ್ಜುನ, ರಾಮ, ಲಕ್ಷಣ, ಭೀಮ, ಜರಾಸಂಧ, ದುರ್ಯೊಧನ, ಕಂಸ-ಇವರೆಲ್ಲಾ ಧನುರ್ವಿದ್ಯ, ಬಾಹುಬಲಗಳಿಗೆ ಪ್ರಸಿದ್ದರಾದವರು.

ಹರಪ್ಪ-ಮೊಹೆಂಜದಾರೋ ಸಂಸ್ಕೃತಿಯ ಕಾಲದಲ್ಲಿ ಈಜು ಒಂದು ಜನಪ್ರಿಯ ಕ್ರೀಡೆಯಾಗಿತ್ತು. ಈಜು ಸ್ಪರ್ಧೆಗಳು ನಡೆಯುವಾಗ ಜನರು ಈಜು ಕೊಳದ ಸುತ್ತಲೂ ಕುಳಿತು ಆನಂದಿಸುತ್ತಿದ್ದರು. ತಕ್ಷಶಿಲಾ, ನಲಂದಾ ಪ್ರಾಚೀನ ವಿಶ್ವವಿದ್ಯಾಲಯಗಳ ಆವರಣದಲ್ಲಿ ದೊಡ್ಡ ಕ್ರೀಡಾಂಗಣಗಳಿದ್ದವು. ಅಲ್ಲಿ ಓಟ, ಭರ್ಜಿ ಎಸೆತ, ಕುಸ್ತಿ, ಮುಷ್ಟಿಕಾಳಗ, ಕಹಳೆ ಊದುವುದು, ಚೆಂಡಾಟ, ರಥಸ್ಪರ್ಧೆ, ಕತ್ತಿವರಸ ಇತ್ಯಾದಿ ಕ್ರೀಡೆಗಳಿಗೆ ಪ್ರೋತ್ಸಾಹವಿತ್ತು. ಭಾರ ಎತ್ತುವುದು, ಚಕ್ರ ಎಸೆತ, ಗದೆ ತಿರುಗಿಸುವುದು, ಮಲ್ಲಕಂಬ ಇತ್ಯಾದಿ ಕ್ರೀಡೆಗಳು ಈ ವಿಶ್ವವಿದ್ಯಾಲಯಗಳ ಪ್ರಾಂಗಣದಲ್ಲಿ ನಡೆಯುತ್ತಿದ್ದವು.

ರಜಪೂತರು ಕುದುರೆ ಓಟ, ಬೇಟೆ, ಕುದುರೆ ಮೇಲೆ ಕುಳಿತು ಓಕುಳಿ ಎರಚುವುದು ಇತ್ಯಾದಿ ಕ್ರೀಡೆಗಳಲ್ಲಿ ನಿರತರಾಗಿರುತ್ತಿದ್ದರು. ಮುಸಲ್ಮಾನರ ಕಾಲದಲ್ಲಿ ಕುಸ್ತಿ, ಮುಷ್ಟಿಕಾಳಗ, ಈಗಿನ ಪೋಲೋ ಆಟವನ್ನು ಹೋಲುವ 'ಚೌಗನ್', “ಕವಡೆಯಾಟ', ಪ್ರಸಿದ್ಧವಾಗಿದ್ದವು. ಬ್ರಿಟಿಷರ ಕಾಲದಲ್ಲಿ ಆಧುನಿಕ ಕ್ರೀಡಾ ಚಟುವಟಿಕೆಗಳು ಭಾರತದ ಶಾಲೆ, ಕಾಲೇಜುಗಳಲ್ಲಿ ರೂಢಿಗೆ ಬಂದವು. ಕ್ರಿಕೆಟ್, ಫುಟ್ಬಾಲ್, ಹಾಕಿ ಕಲಿಸಲ್ಪಟ್ಟವು. ಭಾರತದ ಸ್ವಾತಂತ್ರ್ಯಾನಂತರ ಎಲ್ಲ ಬಗೆಯ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯಿತು.

ಯೂರೋಪಿನ ಮಧ್ಯಯುಗದಲ್ಲಿ ಊಳಿಗಮಾನ್ಯದೊರೆಗಳ ನಿಯಂತ್ರಣದಲ್ಲಿ ಕ್ರೀಡಾ ಚಟುವಟಿಕೆಗಳು ಜರುಗುತ್ತಿದ್ದವು. ಕೈಗಾರಿಕಾ ಕ್ರಾಂತಿಯಿಂದ ಕ್ರೀಡೋತ್ಸವಗಳಿಗೆ ಪ್ರೋತ್ಸಾಹ ದೊರೆಯಿತು. ಯಂತ್ರಗಳಿಂದ ವಿರಾಮ ದೂರತೊಡನೆ ಕಾಲ ಕಳೆಯಲು ಮನರಂಜನಾ ಚಟವಟಿಕೆಗಳು ಹೆಚ್ಚಿದವು.

ಒಂದು ಕಾಲದಲ್ಲಿ ನಿರ್ದಿಷ್ಟ ದೂರಗಳಿಗೆ ಮೀಸಲಾಗಿದ್ದ ಕೆಲವು ಕ್ರೀಡೆಗಳು ಈಗ ಎಲ್ಲೆಡೆ ಹರಡಿವೆ. ಸಾರಿಗೆ ಸಂಪರ್ಕ ಅನುಕೂಲವಿರುವುದರಿಂದ ಒಂದೆಡೆ ಹೆಚ್ಚು ಮಚ್ಚುಗೆಯಾದ ಒಂದು ಆಟ ಬಹುಬೇಗ ಅಂತರರಾಷ್ಟ್ರೀಯ ಮಟ್ಟದ ಆಟವಾಗಲು ಅವಕಾಶವಿದೆ.
Read also :

ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ Short Essay on Parisara Malinya in Kannada Language

ಪರಿಸರ ಮತ್ತು ಸಂರಕ್ಷಣೆ ಪ್ರಬಂಧ Environment Protection Essay in Kannada

ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ Short Essay on Parisara Malinya in Kannada Language


SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 Comments: