Wednesday, 18 March 2020

ಚದುರಂಗ ಪ್ರಬಂಧ Essay on Chess in Kannada Language

Essay on Chess in Kannada Language: In this article, we are providing ಚದುರಂಗ ಪ್ರಬಂಧ for students and teachers. Students can use this Essay on Chess in Kannada Language to complete their homework.

ಚದುರಂಗ ಪ್ರಬಂಧ Essay on Chess in Kannada Language

1.ವಿವರಣೆ 2. ಉಗಮ 3.ಆಟದ ಸಲಕರಣೆಗಳ ರಚನೆ 4.ಆಟದ ನಿಯಮಗಳು 5. ವಿಶ್ವದಲ್ಲಿ ಚದುರಂಗದ ಸ್ಥಾನ 6. ಉಪಸಂಹಾರ.
ಚದುರಂಗ ಪ್ರಬಂಧ Essay on Chess in Kannada Language
ಅಂತರರಾಷ್ಟ್ರೀಯ ಆಟಗಳಲ್ಲಿ ಒಂದಾಗಿರುವ ಚದುರಂಗ ರಾಜಕ್ರೀಡೆ ಎಂದು ಪ್ರಖ್ಯಾತಿ ಹೊಂದಿರುವುದು ಮಾತ್ರವಲ್ಲ, ಅದರದೇ ಒಂದು ಪ್ರಬುದ್ಧ ಶಾಸ್ತ್ರವೂ ಮೈತಳೆದಿದೆ. ಜಗತ್ತಿನ ಮೊದಲ ಮುದ್ರಿತ ಗ್ರಂಥ ಬೈಬಲ್ಲಾದರೆ ಎರಡನೇ ಮುದ್ರಿತ ಗ್ರಂಥ ಚದುರಂಗದಾಟದ ಬಗೆಗೆ ಬರೆಯಲ್ಪಟ್ಟಿರುವುದು ಅದರ ಹಿರಿಮೆಗೊಂದು ಸಾಕ್ಷಿ. ಇದು ಕಾರ್ತಿಕಮಾಸದ ಮೊದಲನೆಯ ರಾತ್ರಿ ಧಾರ್ಮಿಕ ಕ್ರೀಡೆಯಾದ ಚದುರಂಗವನ್ನು ಆಡಲಾಗುತ್ತಿತ್ತೆಂದು ರಾಮಾಯಣದಲ್ಲಿ ಉಲ್ಲೇಖಿತವಾಗಿದೆ. ಇದನ್ನು ನೋಡುವಾಗ 4-5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಈ ಕ್ರೀಡೆ ಜನಪ್ರಿಯವಾಗಿತ್ತೆಂದು ತಿಳಿಯುತ್ತದೆ. ಹರಪ್ಪಾ ಮಹೆಂಜೊದಾರೊವಿನಲ್ಲಿ ನಡೆಸಿದ ಉತ್ಕನನಗಳಲ್ಲಿ ಲಭಿಸಿದ ಚದುರಂಗದ ದಾಳಗಳೂ ಅದರ ಪುರಾತನ ಇತಿಹಾಸಕ್ಕೆ ಸಾಕ್ಷಿಯಾಗಿವೆ.
ಚದುರಂಗ ಭಾರತದಲ್ಲೇ ಹುಟ್ಟಿದ್ದೆಂಬುದರಲ್ಲಿ ಅನುಮಾನವಿಲ್ಲ. ಕ್ರಿ.ಶ.100ರ ಸುಮಾರಿನ ಚಿಕ್ಕ ಗ್ರಂಥವೊಂದರಲ್ಲಿ ಚದುರಂಗದಾಟದ ಹಲಗೆಯನ್ನು "ಅಷ್ಟಪದ'ವೆಂದೂ ಕ್ರಿ.ಶ. 600ರ ಜೈನಗ್ರಂಥದಲ್ಲಿ ಅದನ್ನು 'ಅತ್ತವದಯ' ಎಂದೂ ಕರೆಯಲಾಗಿದೆ. ಬಂಗಾಳದ ಹೆಸರಾಂತ ವಿದ್ವಾಂಸ ಸುಲ್ಪನಿಯು ಈ ಆಟದ ನಿಯಮಗಳನ್ನು ಕುರಿತು ಸಂಸ್ಕೃತದಲ್ಲಿ 'ಚದುರಂಗದೀಪಿಕ' ಎಂಬ ಗ್ರಂಥವನ್ನು ರಚಿಸಿದ್ದಾನೆ. ರಾಜ, ಆನೆ, ಕುದುರೆಗಳೊಂದಿಗೆ ಆಗ ರಥದ ಬದಲು ದೋಣಿಯನ್ನು ಬಂಗಾಳದಲ್ಲಿ ಉಪಯೋಗಿಸುತ್ತಿದ್ದರೆಂದೂ ಕೆಂಪು, ಹಸಿರು, ಕಪ್ಪು ಮತ್ತು ಹಳದಿ ವರ್ಣದ ದಾಳಗಳನ್ನು ಬಳಸುತ್ತಿದ್ದರೆಂದೂ ಆ ಗ್ರಂಥದಲ್ಲಿದೆ. ಶ್ರೇಷ್ಠ ದಂತದಿಂದ ದಾಳಗಳನ್ನು ನಿರ್ಮಿಸುತ್ತಿದ್ದರೆಂದು ಆಲ್ ಮಸೂದಿ ಬರೆದಿದ್ದಾನೆ. (ಕ್ರಿ.950 ರ ಖ್ಯಾತ ಅರಬ್ ಇತಿಹಾಸಕಾರ).
ಹತ್ತನೆಯ ಶತಮಾನದಲ್ಲಿ ನಮ್ಮ ದೇಶದಲ್ಲಿ ಆಡುತ್ತಿದ್ದ ಚದುರಂಗ ಎಷ್ಟು ಭೀಕರವಾಗಿತ್ತೆಂಬುದನ್ನು ಅಲ್ ಮಸೂದಿಯ ದಾಖಲೆಯಲ್ಲಿ ಬಣ್ಣಿಸಲಾಗಿದೆ. ರತ್ನಾಭರಣಗಳನ್ನೂ ಹಣವನ್ನೂ ಪಣವೊಡ್ಡಿ ಸೋತ ಆಟಗಾರರು ತಮ್ಮ ಅಂಗಾಂಗಗಳನ್ನೇ ಪಣವೊಡ್ಡಿ ಆಡುತ್ತಿದ್ದರು. ಅದರಲ್ಲಿ ಸೋತರ ಪಣವೊಡ್ಡಿದ ಅಂಗವನ್ನು ಖಡ್ಗದಿಂದ ಕತ್ತರಿಸಿ ಕೊಡುತ್ತಿದ್ದರು. ಕುಲುಮೆಯಲ್ಲಿ ಕುದಿಯುತ್ತಿರುವ ಪಾತ್ರೆಯೊಂದರಲ್ಲಿ ಕೆಂಪು ವರ್ಣದ ರಸವನ್ನು ಗಾಯಕ್ಕೆ ಲೇಪಿಸುತ್ತಿದ್ದರು. ಅದರಿಂದ ರಕ್ತಸ್ರಾವ ಕೂಡಲೇ ನಿಲ್ಲುತ್ತಿತ್ತು. ಅನಂತರ ಮತ್ತೊಂದು ಅಂಗವನ್ನು ಪಣವೊಡ್ಡಿ ಆಟ ಮುಂದುವರೆಸುತ್ತಿದ್ದರು. ಸೋತರೆ ಆ ಅಂಗವೂ ತುಂಡಾಗುತ್ತಿತ್ತು! ಈ ದೇವಾಲಯಗಳಲ್ಲಿ ಜಾಗರಣೆ ಮಾಡಬೇಕಾದ ಸಂದರ್ಭದಲ್ಲಿ ಭಕ್ತಾದಿಗಳು ಹೊತ್ತು ಕಳೆಯಲೆಂದು ಚದುರಂಗವನ್ನು ಕಂಡು ಹಿಡಿದರೆಂದೂ ಹೇಳಿಕೆಯಿದೆ. ಆನೆ, ರಥ, ಕಾಲಾಳು ಇತ್ಯಾದಿಗಳಿಗೆ ಚದುರಂಗ ಬಲವೆಂದು ಹೆಸರು. ಯುದ್ಧಭೂಮಿಯ ಪ್ರತೀಕವಾಗಿರುವ ಈ ಕ್ರೀಡೆಗೂ ಅದೇ ಹೆಸರು ಬರಬೇಕಾದರೆ ಅದರ ಶೋಧಕ ಯಾವನಾದರೊಬ್ಬ ರಾಜನೂ ಆಗಿದ್ದಿರಬಹುದು.
ಇಂದು ಭಾರತದಲ್ಲಿರುವುದಕ್ಕಿಂತ ಹೆಚ್ಚಾಗಿ ಬರ್ಮಾ, ಚೀನಾ, ಮಲಯ, ಜಪಾನ್, ಪರ್ಷಿಯ, ಟಿಬೆಟ್ ಮೊದಲಾದೆಡೆಗಳಲ್ಲಿ ಚದುರಂಗ ಜನಪ್ರಿಯತನ್ನುಳುಸಿಕೊಂಡಿದೆ, ಈ ಶತಮಾನದ ಆಟಗಾರರಲ್ಲಿ ಕ್ಯೂಬಾದ ಕಾಪಾ ಬ್ಲಾಂಕಾ, ಅಮೇರಿಕದ ಬಾಬಿ, ಹಾಲೆಂಡಿನ ಡಾಯುವ.ರಷ್ಯಾದ ಡಾ. ಅಲೇಖಿನಿ, ಭಾರತದ ಸುಲ್ತಾನ್ ಖಾನ್, ಮೂನ್ಯುಯಲ್ ಆರಾನರು ಶ್ರೇಷ್ಠರೆನಿಸಿದ್ದಾರೆ.

ಚದುರಂಗದ ಹಲಗೆಯಲ್ಲಿ 32 ಬಿಳಿಯ 32 ಕರಿಯ ಮನೆಗಳಿವೆ. ಬಿಳಿ ಕಪ್ಪು ವರ್ಣದ 16 ಕಾಯಿಗಳಿವೆ. ಪ್ರತಿ ವರ್ಣದಲ್ಲಿಯೂ ಒಂದು ರಾಜ, ಒಂದು ರಾಣಿ, ಎರಡು ಬಿಷಪ್, ಎರಡು ರೂಕ್ಸ್, ಎರಡು ನಾಯಿಟ್ ಮತ್ತು 8 ಪಾನುಗಳಿವೆ. ಇವುಗಳನ್ನು ಭಾರತದ ಕೆಲವು ಭಾಗಗಳಲ್ಲಿ ರಾಣಿಗೆ ಪ್ರಧಾನ ಅಥವಾ ವಡೀರ್, ನಾಯಿಟ್‌ಗೆ ಕುದುರ, ರೂಕ್ಸ್ಗೆ ಆನ, ಬಿಷಪ್‌ಗೆ ಒಂಟೆ, ಪಾನುಗಳಿಗೆ ಪಾದ್ರಿ ಅಥವಾ ಸೈನಿಕರನೆಂದು ಕರೆಯಲಾಗುತ್ತಿದೆ.
ಚದುರಂಗದಲ್ಲಿ 'ಕುರುಡು ಚದುರಂಗ' ಮತ್ತು 'ಜೀವಂತ' ಚದುರಂಗ ಎಂದು ವಿಶೇಷ ವಿಧಾನಗಳಿವೆ. ಕುರುಡು ವಿಧಾನದಲ್ಲಿ ನಲವತ್ತರಿಂದ ಅರವತ್ತು ಮಂದಿ ಆಟಗಾರರು ಒಮ್ಮಲೇ ಭಾಗವಹಿಸಬಹುದು. ಚದುರಂಗ ಕಾಯಿಗಳ ಬದಲು 64 ಚದುರಂಗದ ಮನೆಗಳಲ್ಲಿ 32 ಮಂದಿ ರಶಿಯನ್ನರನ್ನು ನಿಲ್ಲಿಸಿ ಆಡಿದ ಜೀವಂತ ಚದುರಂಗವನ್ನು ರಷ್ಯದ ಜಾಗತಿಕ ಪ್ರಶಸ್ತಿಗಾರ ಬೆನ್ ವಿನಿಕ್ ಶೋಧಿಸಿದ. ಒಂದು ದೊಡ್ಡ ಕೋಣೆಯೇ ಚದುರಂಗದ ಹಲಗೆಯಾಗಿತ್ತು. ಕೊಡಗಿನ ಅರಸನೊಬ್ಬನು ಇದೇ ರೀತಿ ರೂಪಸಿಯರಾದ ಯುವತಿಯರನ್ನು ಉಪಯೋಗಿಸಿ ಚದುರಂಗವಾಡುತ್ತಿದ್ದನೆಂದು ಹೇಳಿಕೆಯಿದೆ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: