Sunday, 12 April 2020

ಶ್ರವಣಬೆಳಗೊಳ ಮಾಹಿತಿ Shravanabelagola Information in Kannada Language

Shravanabelagola Information in Kannada Language: In this article, we are providing ಶ್ರವಣಬೆಳಗೊಳ ಮಾಹಿತಿ for students and teachers. Students can use this Shravanabelagola Information in Kannada Language to complete their homework.

ಶ್ರವಣಬೆಳಗೊಳ ಮಾಹಿತಿ Shravanabelagola Information in Kannada Language

ಶ್ರವಣಬೆಳಗೊಳ ಮಾಹಿತಿ Shravanabelagola Information in Kannada Language
ಜೈನರ ಪವಿತ್ರ ಕ್ಷೇತ್ರ ಶ್ರವಣಬೆಳಗೊಳ ಹಾಸನಕ್ಕೆ 51 ಕಿ.ಮೀ. ದೂರದಲ್ಲಿದೆ. 7ನೆಯ ಶತಮಾನದ ಎರಡು ಶಾಸನಹಗಳಲ್ಲಿ ಈ ಊರಿನ ಹೆಸರನ್ನು ವೆಳ್ಕೊಳ, ಬೆಳ್ಕೊಳ ಎಂದು ಕರೆಯಲಾಗಿದೆ. ಊರಿನ ಮಧ್ಯೆಯಿರುವ ಕೊಳದಿಂದ ಈ ಹೆಸರು ಬಂದಿರಬೇಕು. ಮೈಸೂರಿನ, ಚಿಕ್ಕದೇವರಾಜ ಒಡೆಯರ್ (1673-1704) ಇದನ್ನು ಜೀರ್ಣೋದ್ಧಾರ ಮಾಡಿದರು. 'ಶ್ರವಣ' ಎಂದರೆ 'ಜೈನಯತಿ' ಇಲ್ಲಿ ಹಲವಾರು ಜೈನ ಯತಿಗಳು ನೆಲೆಸಿದ್ದರು. ಕಾಲಾನಂತರ ಇದು 'ಶ್ರವಣಬೆಳೊಳ' ಎಂದಾಯಿತು. ಇಲ್ಲಿ ಗೊಮ್ಮಟನ ಮೂರ್ತಿ ಇರುವುದರಿಂದ ಇದನ್ನು 'ಗೊಮ್ಮಟಪುರ' ಎಂದೂ ಕರೆಯುವರು.

ಪ್ರಚಲಿತ ಐತಿಹ್ಯದಂತೆ ಕ್ರಿ.ಪೂ. 3ನೇ ಶತಮಾನದಲ್ಲಿ ಮೌರ್ಯರ ದೊರೆ ಚಂದ್ರಗುಪ್ತ ತನ್ನ ಗುರು ಭದ್ರಬಾಹುವಿನೊಂದಿಗೆ ಇಲ್ಲಿಗೆ ಬಂದು ಚಿಕ್ಕ ಬೆಟ್ಟದ ಗುಹೆಯಲ್ಲಿ ವಾಸಿಸಿ ಅಲ್ಲಿಯೇ ತನ್ನ ದೇಹ ತೊರೆದನೆಂದು ಹೇಳಲಾಗಿದೆ. ಇಮ್ಮಡಿ ರಾಚಮಲ್ಲನ ಮಂತ್ರಿ ಚಾವುಂಡರಾಯ ಕ್ರಿ.ಶ. 981-82 ರಲ್ಲಿ ಬಾಹುಬಲಿ ಅಥವಾ ಗೋಮಟೇಶ್ವರ ವಿಗ್ರಹವನ್ನು ತನ್ನ ತಾಯಿ ಕಾಳಲದೇವಿಯ ಆಸೆಯನ್ನು ಪೂರೈಸಲು ಮಾಡಿಸಿದ. ಚಾವುಂಡರಾಯ ಪರಮ ಜಿನಭಕ್ತ. ಇವನು 'ತೀರ್ಥಂಕರ ಪುರಾಣ' ಅಥವಾ 'ಚಾವುಂಡರಾಯ ಪುರಾಣ ಕೃತಿ'ಯನ್ನು ರಚಿಸಿದ್ದಾನೆ. ಕನ್ನಡದ ಶ್ರೇಷ್ಠ ಕವಿ 'ರನ್ನ'ನಿಗೆ ಇವನು ಆಶ್ರಯದಾತನಾಗಿದ್ದ.

ಶ್ರವಣಬೆಳಗೊಳದಲ್ಲಿ ಎರಡು ಬೆಟ್ಟಗಳಿವೆ. ದೊಡ್ಡಬೆಟ್ಟ ಮತ್ತು ಚಿಕ್ಕಬೆಟ್ಟ. ದೊಡ್ಡಬೆಟ್ಟಕ್ಕೆ ಇಂದ್ರಗಿರಿ, ವಿಂಧ್ಯಗಿರಿ ಎಂಬ ಹೆಸರುಗಳಿವೆ. ಇದು ಸಮುದ್ರ ಮಟ್ಟದಿಂದ ಸು. 3347 ಅಡಿ ಎತ್ತರವಿದೆ. ಬೆಟ್ಟವನ್ನು ಹತ್ತಲು ಸು. 500 ಮೆಟ್ಟಿಲುಗಳಿವೆ. ಬೆಟ್ಟದ ಮೇಲೆ ಉತ್ತರಾಭಿಮುಖವಾಗಿ 58 ಅಡಿ ಎತ್ತರವುಳ್ಳ ಗೊಮ್ಮಟ ವಿಗ್ರಹ ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಏಕಶಿಲೆಯ ಕಲಾತ್ಮಕವಾದ ಕೃತಿ. ಗಂಭೀರವಾದ, ಪ್ರಶಾಂತವಾದ ಮುಖಮುದ್ರೆ, ತಲೆಯಲ್ಲೆಲ್ಲ ಉಂಗುರಗಳಂತೆ ಹರಡಿರುವ ಗುಂಗುರು ಕೂದಲು, ಪೌರುಷದ ಪ್ರತೀಕವೆಂಬಂತಿರುವ ಭುಜ, ವಿಶಾಲವಾದ ಎದೆ, ನವಿರಾದ ಹೆಬ್ಬೆರಳು, ಹೊರಮುಖವಾಗಿರುವಂತ ಎರಡು ಹಸ್ತಗಳು, ಸಣ್ಣನಡು, ಮೊಣಕಾಲು, ಪಾದ ಇವುಗಳಿಂದ ಇದು ಗಂಭೀರವಾದ ಶಿಲ್ಪಕೃತಿ ಎನಿಸಿದೆ. ತೊಡೆಗಳ ಕೆಳಭಾಗ ಹುತ್ತದಿಂದ ಆವೃತವಾಗಿದೆ. ಹುತ್ತದಿಂದ ಸರ್ಪಗಳು ಹೊರಬಂದಿವೆ. ಎರಡು ಕಾಲುಗಳನ್ನು ತೋಳುಗಳನ್ನು ಮಾಧವೀಲತ ಸುತ್ತಿಕೊಂಡಿದೆ. ಗೊಮ್ಮಟ ವಿಗ್ರಹದ ಮುಂದೆ ಒಳ್ಳೆಯ ಕೆತ್ತನೆನ್ನೊಳಗೊಂಡ ಮಂಟಪವಿದೆ.

ದೊಡ್ಡ ಬೆಟ್ಟದ ಇತರ ಕಟ್ಟಡಗಳಲ್ಲಿ 'ಸಿದ್ದರ ಬಸದಿ' ಮುಖ್ಯವಾದದ್ದು. ಈ ಚಿಕ್ಕ ಆಲಯದಲ್ಲಿ 3 ಅಡಿ ಎತ್ತರದ ಸಿದ್ಧನ ವಿಗ್ರಹವಿದೆ. ಎರಡೂ ಕಡೆ ಎರಡು ಚಿತ್ರಮಯ ಕಂಬಗಳಿವೆ. ಗೊಮ್ಮಟಾಲಯಕ್ಕೆ ಹೋಗುವ ದ್ವಾರ ಏಕಶಿಲೆಯಲ್ಲಿ ಕೆತ್ತಿದ ಅಖಂಡಬಾಗಿಲು, ಸೂಕ್ಷ್ಮಕೆತ್ತನೆಯಿರುವ ತ್ಯಾಗದ ಬ್ರಹ್ಮದೇವರ ಕಂಬ, ಇದರ ಪಶ್ಚಿಮಕ್ಕೆ ಚನ್ನಣ್ಣನ ಬಸದಿಯಿದೆ. ಮುಂದೆ ಮಾನಸ್ತಂಭವಿದೆ. ಇದು ಚಂದ್ರನಾಥ ಬಸದಿ, ಅಕ್ಕನ ಬಸದಿ ಹೊಯ್ಸಳ ಶೈಲಿಯ ಕಟ್ಟಡ. ಇದರಲ್ಲಿ ಪಂಚಪರಮೇಷ್ಠಿಗಳ ವಿಗ್ರಹವಿದೆ. ನಗರ ಜಿನಾಲಯದಲ್ಲಿ ಅರಿನಾಥನ ವಿಗ್ರಹ, ಮಂಗಾಯಿ ಬಸದಿಯಲ್ಲಿ ವರ್ಧಮಾನನ ವಿಗ್ರಹವಿದೆ.

ಶ್ರವಣಬೆಳಗೊಳದ ಚಿಕ್ಕ ಬೆಟ್ಟದಲ್ಲಿ ಹಲವಾರು ಬಸದಿಗಳೂ ಇತರ ಧಾರ್ಮಿಕ ಕಟ್ಟಡಗಳೂ ಇವೆ. ಇದನ್ನು ಕಟವಪ್ಪ, ತೀರ್ಥಗಿರಿ, ಋಷಿಗಿರಿ ಎಂದೆಲ್ಲಾ ಕರೆಯಲಾಗುತ್ತದೆ. ಇಲ್ಲಿನ ಬಸದಿಗಳೆಲ್ಲಾ ಒಂದು ಗೋಡೆಯ ಆವರಣದೊಳಗಿವೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ಈ ಬಸದಿಗಳಲ್ಲಿ ಒಂದು ಗರ್ಭಗೃಹ, ಸುಕನಾಸಿ, ನವರಂಗಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇಲ್ಲಿಯ ಚಾವುಂಡರಾಯ ಬಸದಿ ವಾಸ್ತುಶಿಲ್ಪ ಹಾಗೂ ಕಲಾಕೌಶಲ್ಯದ ದೃಷ್ಟಿಯಿಂದ ಸುಂದರವಾದ ಬಸದಿ. ಇದರ ಮೇಲೆ ಉಪ್ಪರಿಗೆ ಹಾಗೂ ವಿಮಾನಗಳಿವೆ. ಗರ್ಭಗುಡಿಯಲ್ಲಿ ನೇಮಿನಾಥನ ವಿಗ್ರಹವಿದೆ. ಇದನ್ನು ಚಾವುಂಡರಾಯ ಕಟ್ಟಿಸಿದನೆಂದು ಹೇಳಲಾಗಿದೆ. ಬಾಗಿಲ ಬಳಿಯೇ ನಿಲ್ಲಿಸಿರುವ ಶಾಸನಕಲ್ಲಿನಿಂದ ಶಾಸನ ಬಸದಿ ಎಂದು ಹೆಸರಾಗಿರುವ ಬಸದಿಯ ಒಳಗಡೆ 5 ಅಡಿ ಎತ್ತರದ ಆದಿನಾಥನ ವಿಗ್ರಹವಿದೆ.

ಹನ್ನೆರಡು ವರ್ಷಗಳಿಗೊಮ್ಮೆ ಶ್ರವಣಬೆಳಗೊಳಗದಲ್ಲಿ ನಡೆಯುವ ಮಹಾಮಸ್ತಾಕಾಭಿಷೇಕ ಪ್ರಸಿದ್ಧವಾದುದು. 1398ರಷ್ಟು ಹಿಂದೆಯೇ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ ನಡೆದ ವಿಷಯ ಶಾಸನದಿಂದ ತಿಳಿದುಬಂದಿದೆ. 2006ರಲ್ಲಿ ಈ ಶತಮಾನದ ಮೊದಲಮಹಾಮಜ್ಜನ ನಡೆಯಿತು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: