Sunday, 12 April 2020

ಸೋಮನಾಥಪುರ ಮಾಹಿತಿ Somanathapura Information in Kannada Language

Somanathapura Information in Kannada Language: In this article, we are providing ಸೋಮನಾಥಪುರ ಮಾಹಿತಿ for students and teachers. Students can use this Somanathapura Information in Kannada Language to complete their homework.

ಸೋಮನಾಥಪುರ ಮಾಹಿತಿ Somanathapura Information in Kannada Language

Somanathapura Information in Kannada Language
ತಿರಮಕೂಡಲು ನರಸೀಪುರದ ಬಳಿ ಮೈಸೂರಿಗೆ 40 ಕಿ.ಮೀ. ದೂರದಲ್ಲಿ ಕಾವೇರಿನದಿಯ ಎಡದಂಡೆಯ ಮೇಲೆ ಸೋಮನಾಥಪುರ ಇದೆ. 13ನೆಯ ಶತಮಾನದಲ್ಲಿ ಇದು ಅಗ್ರಹಾರವಾಗಿತ್ತು. ಈ ಊರಿನಲ್ಲಿರುವ ಏಳು ಶಾಸನಗಳು ಹರಿಹರ ಮತ್ತು ಹೆಬ್ಬಕವಾಡಿಯಲ್ಲಿರುವ ಶಾಸನಗಳು ಈ ಅಗ್ರಹಾರ ಹಾಗೂ ಇಲ್ಲಿನ ದೇವಾಲಯಗಳ ಬಗೆಗೆ ಸಾಕಷ್ಟು ವಿವರಗಳನ್ನೊದಗಿಸುತ್ತದೆ. ಕಲೆ ಮತ್ತು ವಿದ್ಯೆಗೆ ಈ ಅಗ್ರಹಾರ ಪ್ರಸಿದ್ದಿ ಪಡೆದಿತ್ತು. ಹೊಯ್ಸಳ ರಾಜನಾದ ಮೂರನೇ ನರಸಿಂಹನ ಮಂತ್ರಿ ಸೋಮದಂಡನಾಥ ಎಂಬುವನು. 1268ರಲ್ಲಿ ಸೋಮನಾಥಪುರವನ್ನು ಅಗ್ರಹಾರವಾಗಿ ಕಟ್ಟಿಸಿದರು. ಇಲ್ಲಿ ಒಂದು ವಿಷ್ಣು (ಕೇಶವ) ದೇವಾಲಯ, ಒಂದು ಶಿವಾಲಯ (ಪಂಚಲಿಂಗ) ದೇವಾಲಯವಿದೆ. ಕೇಶವ ದೇವಾಲಯ ಮೂರು ಗರ್ಭಗೃಹವಿರುವ ತ್ರಿಕೂಟಾಚಲ, ಬೇಲೂರಿನ ಚೆನ್ನಕೇಶವ ದೇವಾಲಯಕ್ಕಿಂತ ಇದು ಚಿಕ್ಕದು ಇದರ ಎತ್ತರ 32ಅಡಿ ಮಾತ್ರ. ಆದರೆ ಇಲ್ಲಿ ಕೆತ್ತನೆಯ ಅಲಂಕಾರದ ಕೆಲಸಗಳು ಹೆಚ್ಚು. ಹೀಗಾಗಿ ಇದು ಉತ್ತಮ ಹೊಯ್ಸಳ ದೇವಾಲಯ ಎನ್ನಬಹುದು. ಈ ದೇವಾಲಯ 218 ಅಡಿ ಉದ್ದ, 117 ಅಡಿ ಅಗಲವಿರುವ ಅಂಗಳದ ಮಧ್ಯ ಭಾಗದಲ್ಲಿ ನಿರ್ಮಿತವಾಗಿದೆ. ಅಂಗಳದ ಒಳಭಾಗದಲ್ಲಿ ಸುತ್ತಲೂ ಪ್ರಾಕಾರದ ಗೋಡೆಗೆ ಸೇರಿದ ಹಾಗೆ 2 ಅಂಕಣಗಳು ಒಟ್ಟು 64 ಕೈಸಾಲೆ ಮಂಟಪಗಳಿವೆ. ದೇವಾಲಯ ಪೂರ್ವಾಭಿಮುಖವಾಗಿದ್ದು ಮೂರು ಅಡಿ ಎತ್ತರದ ಜಗಲಿಯ ಮೇಲೆ ನಿಂತಿದೆ. ಜಗತಿಯನ್ನು ಹತ್ತಲು 10 ಮೆಟ್ಟಿಲುಗಳಿದ್ದು ಎರಡೂ ಪಾರ್ಶ್ವಗಳಲ್ಲಿ ಚಿಕ್ಕ ದೇವಾಲಯಗಳಿವೆ. ಜಗತಿಯ ಪ್ರತಿಯೊಂದೂ ಮೂಲೆಯಲ್ಲಿ ಇಡೀ ಕಟ್ಟಡವನ್ನು ಹೊತ್ತುಕೊಂಡಿರುವಂತೆ ಆನೆಗಳು ನಿಲ್ಲಿಸಲ್ಪಟ್ಟಿವೆ. ಜಗತಿಗೆ ಒರಗಿಕೊಂಡಂತ ಕೆಲವು ವಿಗ್ರಹಗಳಿವೆ.

ಈ ದೇವಾಲಯ ಮುಖಮಂಟಪ, ನವರಂಗ ಮತ್ತು ಮೂರು ಗರ್ಭಗುಡಿಗಳಿಂದ ಕೂಡಿದೆ. ಎಲ್ಲಿ ಗರ್ಭಗುಡಿಗಳಿಗೂ ಸುಕನಾಸಿಗಳಿವೆ. ಗರ್ಭಗುಡಿಯ ವಿನ್ಯಾಸ ಹೊರಭಾಗದಲ್ಲಿ ನಕ್ಷತ್ರಾಕಾರವಾಗಿ, ಒಳಭಾಗದಲ್ಲಿ ಚತುರಸ್ರಾಕಾರವಾಗಿದೆ. ಇಲ್ಲಿಯ ಕಂಬಗಳ ರಚನೆ ಕಲಾತ್ಮಕವಾಗಿದ್ದು ಆಕರ್ಷಕವಾಗಿದೆ. ನವರಂಗ ಮತ್ತು ಮುಖಮಂಟಪಗಳಲ್ಲಿ ಒಟ್ಟು 16ಭುವನೇಶ್ವರಿಗಳಿವೆ. ಇವುಗಳಲ್ಲಿ ಕಾಣುವ ಸೂಕ್ತವಾದ ಕೆತ್ತನೆಯ ಕೆಲಸ, ನಕ್ಷೆಗಳ ವಿನ್ಯಾಸ, ನಿಪುಣತೆ, ಕುಶಲತೆ ಬೆರಗುಗೊಳಿಸುತ್ತದೆ. ದೇವಾಲಯದ ಬಾಗಿಲಿಗೆ ಎದುರಿಗೇ ಇರುವ ಮಧ್ಯದ ಗರ್ಭಗೃಹವೇ ಮುಖ್ಯವಾದದ್ದು. ಅಲ್ಲಿ ಕೇಶವ ದೇವರ ವಿಗ್ರಹವಿತ್ತೆಂದೂ ಇದಕ್ಕೆ ಕೇಶವ ದೇವಾಲಯವೆಂದು ಹೆಸರಾಯಿತು ಎನ್ನಲಾಗಿದೆ. ಈಗ ಆ ಮೂಲ ವಿಗ್ರಹವಿಲ್ಲ. ಉತ್ತರದ ಕಡೆಗಿರುವ ಗರ್ಭಾಗೃಹದಲ್ಲಿ 6 ಅಡಿ ಎತ್ತರದ ಪೀಠದ ಮೇಲೆ ಜನಾರ್ಧನ ವಿಗ್ರಹ, ದಕ್ಷಿಣ ಗರ್ಭಗೃಹದಲ್ಲಿ 41/2 ಅಡಿ ಎತ್ತರದ ವೇಣುಗೋಪಾಲ ವಿಗ್ರಹವಿದೆ. ಇವು ತುಂಬ ಸುಂದರವಾಗಿವೆ. ಪ್ರಭಾವಳಿಯಲ್ಲಿ ದಶಾವತಾರದ ಚಿತ್ರಗಳಿವೆ.

ದೇವಾಲಯದ ಹೊರಗೋಡೆಗಳ ಮೇಲೆ ಸುತ್ತಲೂ ಮೂರು ಅಡಿಯಷ್ಟು ಎತ್ತರವಾಗಿ ಚಿತ್ರ ಪಟ್ಟಿಕೆಗಳಿವೆ. ಇದರಲ್ಲಿ ಕೆಳಗಿನಿಂದ ಕ್ರಮವಾಗಿ ಆನೆಗಳು, ಮಾವುತರು, ಬಳ್ಳಿ ಪುರಾಣ ಇತಿಹಾಸದ ಕತೆಗಳು, ಮಕರ, ಹಂಸಗಳು ಕೆತ್ತಲ್ಪಟ್ಟಿವೆ. ಆನೆಗಳು ಅಶ್ವಾರೋಹಿಗಳ ಪಟ್ಟಿಕೆಯಲ್ಲಿ ಕಾಣಬರುವ ಉಡುಗೆ ತೊಡುಗೆ, ಆಭರಣ, ಆಯುಧ ಗಮನಾರ್ಹ. ನವರಂಗದ ಹೊರಗೋಡೆಯಲ್ಲಿ ಹಂಸಗಳಿಗೆ ಬದಲಾಗಿ ಚಿಕ್ಕ ಚಿಕ್ಕ ಕಂಬಗಳು ಮತ್ತು ಅವುಗಳ ಮಧ್ಯೆ ದೇವತಾ ವಿಗ್ರಹಗಳು, ಅವುಗಳ ಮೇಲೆ ಗೋಪುರಗಳು, ಮಧ್ಯೆ ಮಧ್ಯೆ ಸಿಂಹಗಳಿವೆ. ನವರಂಗದ ಗೋಡೆಯ ಸುತ್ತ ಜಾಲಂಧ್ರಗಳಿವೆ. ಜಾಲಂಧ್ರಕ್ಕೂ ಚಿತ್ರಪಟ್ಟಿಕೆಗೂ ಮಧ್ಯೆ ಕಟಾಂಜನವಿದೆ. ಇದರಲ್ಲಿ ಜೋಡು ಕಂಬಗಳು, ಅವುಗಳ ಕೆಳಗೆ ಬಳ್ಳಿಗಳೂ, ಮೇಲೆ ಹೂವಿನ ತೋರಣ, ಮಧ್ಯೆ ಸಣ್ಣ ವಿಗ್ರಹಗಳೂ ಇವೆ. ಚಿತ್ರಪಟ್ಟಿಕೆಯ ನಾಲ್ಕನೆಯ ಸಾಲಿನಲ್ಲಿ ಪುರಾಣೇತಿಹಾಸಗಳ ಕಥೆಯಿದೆ. ಉತ್ತರ ಗರ್ಭಗುಡಿಯ ಸುತ್ತಲಿನ ಪಟ್ಟಿಕೆಯಲ್ಲಿ ಮಹಾಭಾರತದ ಕಥೆ, ದಕ್ಷಿಣ ಗರ್ಭಗುಡಿಯ ಸುತ್ತಲೂ ರಾಮಾಯಣದ ಕಥೆ, ಪಶ್ಚಿಮದ ಗರ್ಭಗುಡಿಯ ಪಟ್ಟಿಕೆಯಲ್ಲಿ ಭಾಗವತದ ಕಥೆ ಚಿತ್ರಿತವಾಗಿದೆ. ಈ ಚಿತ್ರಪಟ್ಟಿಕೆಯ ಮೇಲೆ ಗರ್ಭಗುಡಿಯ ಸುತ್ತಲೂ ಹೊರಪಾರ್ಶ್ವದಲ್ಲಿ ಒಟ್ಟು 194ದೊಡ್ಡ ವಿಗ್ರಹಗಳಿದ್ದು 114 ಸ್ತ್ರೀ ವಿಗ್ರಹಗಳು 80 ಪುರುಷ ವಿಗ್ರಹಗಳಿವೆ. ಇವುಗಳಲ್ಲಿ ನರಸಿಂಹ, ವರಾಹ, ಹಯಗ್ರೀವ, ವೇಣುಗೋಪಾಲ, ಪರವಾಸುದೇವ, ಬ್ರಹ್ಮ ಶಿವ, ಗಣಪತಿ, ಇಂದ್ರ, ಮನ್ಮಥ, ಸೂರ್ಯ, ಗರುಡ, ಲಕ್ಷ್ಮೀ, ಸರಸ್ವತಿ, ಮಹಿಷಾಸುರ ಮರ್ದಿನಿ ಪ್ರಮುಖವಾದವು. ಈ ದೊಡ್ಡ ವಿಗ್ರಹಗಳಾದನಂತರ ಇವುಗಳ ಮೇಲ್ಬಾಗದ ಗೋಡೆಯ ಮೇಲೆ ಚಿಕ್ಕ ಚಿಕ್ಕ ಗೋಪುರಗಳಿವೆ. ಈ ದೇವಾಲಯದ ವಿಗ್ರಹಗಳ ಮೇಲೆ ಕೆಲವು ಶಿಲ್ಪಿಗಳ ಹೆಸರಿವೆ. ಮಲ್ಲಿ ತಮ್ಮನ ಹೆಸರು 40 ವಿಗ್ರಹಗಳ ಕೆಳಗೆ ಇದ್ದು ಅವನು ಮುಖ್ಯವಾದ ಪಾತ್ರವಹಿಸಿದಂತೆ ಕಾಣುತ್ತದೆ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: