Aihole Temple Information in Kannada Language: In this article, we are providing ಐಹೊಳೆ ಶಾಸನದ ಮಹತ್ವ for students and teachers. ಬೇಲೂರು ಹಾಸನಕ್ಕೆ 24 ಮೈಲಿ ದೂರದಲ್ಲಿ ಯಗಚಿ ನದಿಯ ಬಲದಂಡೆಯ ಮೇಲಿದೆ. ಈ ಪಟ್ಟಣಕ್ಕೆ ಹಿಂದೆ ವೇಲೂರು, ವೇಲೂಪುರ, ಬೇಲೂದೂರು ಎಂಬ ಹೆಸರುಗಳಿದ್ದವು. ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ಹೊಯ್ಸಳರ ಕಾಲದ “ಚಿನ್ನಕೇಶವ ದೇವಾಲಯ', ಇದು ಹೊಯ್ಸಳ ಶೈಲಿಯ ಸುಂದರ ಕಟ್ಟಡಗಳಲ್ಲಿ ಒಂದು. ತಲಕಾಡುಗೊಂಡ ವಿಷ್ಣುವರ್ಧನ ಹೇವಿಳಂಬಿ ಸಂವತ್ಸರದ ಚೈತ್ರ ಶುದ್ಧ ಪಂಚಮಿ ಶನಿವಾರದಂದು ಅಂದರೆ 20 ಮಾರ್ಚ್ 117ರಲ್ಲಿ ಈ ದೇವಾಲಯವನ್ನು ಪ್ರತಿಷ್ಠಾಪಿಸಿದ ಎಂದು ಶಾಸನಗಳಿಂದ ತಿಳಿದುಬರುತ್ತದೆ. ಹೊಯ್ಸಳ ಶಿಲ್ಪಿಗಳು ತಮ್ಮ ಶಿಲ್ಪಕೌಶಲವನ್ನು ಈ ದೇವಾಲಯಗಳ ಮುಖಾಂತರ ತೋರಿಸಿದ್ದಾರೆ. ಇಲ್ಲಿಯ ಒಂದೊಂದು ವಿಗ್ರಹವೂ ಒಂದೊಂದು ಸುಂದರ ಶಿಲ್ಪಕೃತಿ, ದೇವಾಲಯ ಪೂರ್ವಾಭಿಮುಖವಾಗಿದೆ. Read also : Halebeedu History in Kannada Language, Shravanabelagola Information in Kannada Language, Somanathapura Information in Kannada Language
ಬೇಲೂರು ಟೆಂಪಲ್ ಮಾಹಿತಿ Belur Information in Kannada Language
ಬೇಲೂರು ಹಾಸನಕ್ಕೆ 24 ಮೈಲಿ ದೂರದಲ್ಲಿ ಯಗಚಿ ನದಿಯ ಬಲದಂಡೆಯ ಮೇಲಿದೆ. ಈ ಪಟ್ಟಣಕ್ಕೆ ಹಿಂದೆ ವೇಲೂರು, ವೇಲೂಪುರ, ಬೇಲೂದೂರು ಎಂಬ ಹೆಸರುಗಳಿದ್ದವು. ಇಲ್ಲಿಯ ಪ್ರಮುಖ ಆಕರ್ಷಣೆಯೆಂದರೆ ಹೊಯ್ಸಳರ ಕಾಲದ “ಚಿನ್ನಕೇಶವ ದೇವಾಲಯ', ಇದು ಹೊಯ್ಸಳ ಶೈಲಿಯ ಸುಂದರ ಕಟ್ಟಡಗಳಲ್ಲಿ ಒಂದು. ತಲಕಾಡುಗೊಂಡ ವಿಷ್ಣುವರ್ಧನ ಹೇವಿಳಂಬಿ ಸಂವತ್ಸರದ ಚೈತ್ರ ಶುದ್ಧ ಪಂಚಮಿ ಶನಿವಾರದಂದು ಅಂದರೆ 20 ಮಾರ್ಚ್ 117ರಲ್ಲಿ ಈ ದೇವಾಲಯವನ್ನು ಪ್ರತಿಷ್ಠಾಪಿಸಿದ ಎಂದು ಶಾಸನಗಳಿಂದ ತಿಳಿದುಬರುತ್ತದೆ. ಹೊಯ್ಸಳ ಶಿಲ್ಪಿಗಳು ತಮ್ಮ ಶಿಲ್ಪಕೌಶಲವನ್ನು ಈ ದೇವಾಲಯಗಳ ಮುಖಾಂತರ ತೋರಿಸಿದ್ದಾರೆ. ಇಲ್ಲಿಯ ಒಂದೊಂದು ವಿಗ್ರಹವೂ ಒಂದೊಂದು ಸುಂದರ ಶಿಲ್ಪಕೃತಿ, ದೇವಾಲಯ ಪೂರ್ವಾಭಿಮುಖವಾಗಿದೆ. ಮಹಾದ್ವಾರದ ಮೇಲೆ ದ್ರಾವಿಡ ರೀತಿಯಲ್ಲಿ ಕಟ್ಟಿದ ಎತ್ತರವಾದ ಗೋಪುರವಿದೆ. 396x443 ಅಡಿ ಅಳತೆಯ ಚನ್ನಕೇಶವ ದೇವಾಲಯ ಸುಮಾರು ಮೂರು ಅಡಿ ಎತ್ತರವಾಗಿ ನಕ್ಷತ್ರಾಕಾರವಾಗಿರುವ ಜಗಲಿಯ ಮೇಲೆ ನಿರ್ಮಾಣವಾಗಿದೆ. ಸಾಕಷ್ಟು ಅಗಲವಾಗಿದ್ದು ದೇವಾಲಯದ ಸುತ್ತ ಬಳಸಿ ಬರುವ ಜಗಲಿ, ದೇವಾಲಯದ ಪ್ರದಕ್ಷಿಣ ಪಥವೂ ಆಗಿದೆ. ಹೊಯ್ಸಳ ರಾಜಚಿಹ್ನೆಯಾದ ಹುಲಿ-ಸಳರ ಸೆಣಸಾಟದ ಶಿಲ್ಪ ಆಕರ್ಷಕವಾಗಿದೆ.Read also : Halebeedu History in Kannada Language
ದೇವಾಲಯ ಹೊರಭಾಗದ ಶಿಲ್ಪಕೃತಿಗಳಿಂದ ನಮ್ಮನ್ನು ಆಕರ್ಷಿಸುತ್ತದೆ. ಒಳಭಾಗ ಕುಶಲ ಕೆತ್ತನೆಯಿಂದ ದಿಗ್ರಮಗೊಳಿಸುತ್ತದೆ. ಕುಶಲ ಕಲೆಯ ಕೆತ್ತನೆಯ ಇಲ್ಲಿಯ ಕಂಬಗಳು ಗಮನಾರ್ಹವಾದುದು. ನರಸಿಂಹ ಸ್ತಂಭ ಎಂದು ಕರೆಯಲಾಗುವ ಕಂಬ ಅಮೂಲಾಗ್ರವಾಗಿ ಚಿಕ್ಕ ಚಿಕ್ಕ ಬೊಂಬೆಗಳಿಂದ ಕಿಕ್ಕಿರಿಸಿದೆ. ಕಡಲೆಕಾಳಿನಷ್ಟು ಗಾತ್ರವಿರುವ “ಕಡಲೆ ಬಸವಣ್ಣ' ಅಚ್ಚರಿಗೊಳಿಸುತ್ತದೆ. ಅದರ ತುದಿಯಲ್ಲಿ ನರಸಿಂಹಾವತಾರವಿದ್ದು ಹಿರಣ್ಯಕಶಿಪುವಿನ ಹೊಟ್ಟೆಯಿಂದ ಬಗೆದ ಕರುಳು ಸಹ ಕಾಣುವಷ್ಟು ಸೂಕ್ಷ್ಮ ಕೆತ್ತನೆಯಿದೆ. ಸುಕನಾಸಿಯ ದ್ವಾರ ಸುಂದರವಾಗಿ ಅಲಂಕೃತವಾಗಿದ್ದು ಎರಡೂ ಪಕ್ಕದಲ್ಲಿ ದ್ವಾರಪಾಲಕ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಎತ್ತರವಾಗಿರುವ ಸುಂದರವಾದ ಚೆನ್ನಕೇಶವನ ವಿಗ್ರಹವಿದೆ. ಹಿಂದಿನ ಎರಡೂ ಕೈಗಳಲ್ಲಿ ಶಂಖ, ಚಕ್ರ, ಮುಂದಿನ ಕೈಗಳಲ್ಲಿ ಗದಾ ಪದ್ಯಗಳನ್ನು ಧರಿಸಿ ಮೂರ್ತಿ ಹಸನ್ಮುಖಿಯಾಗಿ ನಿಂತಿದೆ. ಇದರ ಹಿಂಭಾಗದಲ್ಲಿ ದಶಾವತಾರಗಳನ್ನು ಕೆತ್ತಿದ ಪ್ರಭಾವಳಿಯಿದೆ. ವಿಗ್ರಹ 3 ಅಡಿ ಎತ್ತರದ ಪೀಠದ ಮೇಲೆ ನಿಂತಿದೆ.
Read also : Shravanabelagola Information in Kannada Language
ದೇವಾಲಯದ ಹೊರಭಾಗ ಗೋಡೆಗಳ ಚಿತ್ರ ಪಟ್ಟಿಕೆಗಳಿಂದ ಮತ್ತು ಶಿಲ್ಪಕೃತಿಗಳಿಂದ ಅಲಂಕೃತವಾಗಿವೆ. ಬುಡದಿಂದ ಆನೆಗಳು, ಸಿಂಹಲಲಾಟಗಳಿರುವ ಮಣಿತೋರಣಗಳು, ಬಳ್ಳಿಗಳ ಆಕೃತಿಯ ಕೆತ್ತನೆ, ಅವುಗಳ ಮಧ್ಯೆ ನಾನಾ ಭಂಗಿಯಲ್ಲಿರುವ ಚಿಕ್ಕ ಚಿಕ್ಕ ವಿಗ್ರಹಗಳು, ಮತ್ತೊಂದು ಮಣಿತೋರಣ ಮುಂದೆ ಚಾಚಿರುವ ಗೂಡುಗಳು, ಅವುಗಳಲ್ಲಿ ಸ್ತ್ರೀ ವಿಗ್ರಹಗಳು ಮತ್ತು ಎರಡು ಗೂಡುಗಳು ಮಧ್ಯೆ ಹಿಂದೆ ಕುಳಿತಿರುವ ಯಕ್ಷ ವಿಗ್ರಹಗಳು, ಚಿತ್ರಪಟ್ಟಿಕೆಗಳು, ಕಟಾಂಜನದ ಮೇಲೆ ಉದ್ದಕ್ಕೂ ಇರುವ ಶಿಲಾಪಟ್ಟಿಕೆಯ ಮೇಲೆ ಚಿಕ್ಕ ಆಕಾರದ ಶಿಲ್ಪಗಳಲ್ಲಿ ರಾಮಾಯಣ, ಮಹಾಭಾರತದ ಸನ್ನಿವೇಶಗಳು ಚಿತ್ರಿತವಾಗಿವೆ. ಅಲ್ಲಲ್ಲಿ ಗಾಯಕರ ವಿಗ್ರಹಗಳಿವೆ. ದೇವಾಲಯದ ಎಡಗಡ 10, ಬಲಗಡೆ 10ಜಾಲಂಧ್ರಗಳಿವೆ. ಇವುಗಳಲ್ಲಿ ಹೂ ಬಳ್ಳಿಗಳು ಕ್ಷೀರಸಾಗರ ಮಥನ, ವಾಮನಾವತಾರ, ಕಾಳಿಂಗಮರ್ಧನ, ನರಸಿಂಹಾವತಾರ, ವಿಷ್ಣುವರ್ಧನನ ಆಸ್ಥಾನ ಮನೋಹರವಾಗಿವೆ. ಕಂಬಗಳ ಬೋದಿಗೆಯ ಮೇಲೆ ಸೂರಿಗೆ ಊರೆಯಾಗಿ ಸುಂದರವಾದ ಸ್ತ್ರೀ ವಿಗ್ರಹಗಳು ನಿಂತಿವೆ. ಇವುಗಳನ್ನು ಸಾಲಭಂಜಿಕೆ, ಶಿಲಾಬಾಲಿಕೆ, ಮದನಿಕಾ ವಿಗ್ರಹಗಳೆಂದು ಕರೆಯುತ್ತಾರೆ. ಈ ದೇವಾಲಯದ ಸುತ್ತಲೂ 38 ವಿಗ್ರಹಗಳು ಈಗ ಮಾತ್ರ ಉಳಿದಿವೆ. ಇವುಗಳಲ್ಲಿ ಎರಡು ದುರ್ಗಾ ವಿಗ್ರಹಗಳು, ಮೂರು ಶಬರಿ ವಿಗ್ರಹಗಳು, ಉಳಿದವು ವಿವಿಧ ಭಂಗಿಗಳಲ್ಲಿರುವ ಸುಂದರ ಸ್ತ್ರೀ ವಿಗ್ರಹಗಳು, ಹೆಣ್ಣಿನ ವಿನ್ಯಾಸದ ಹಲವು ಭಾವಗಳನ್ನು, ಭರತನಾಟ್ಯದ ವಿವಿಧ ಭಂಗಿಗಳನ್ನು ಶಿಲ್ಪಿಗಳು ಅಭೂತಪೂರ್ವವಾಗಿ ಕಂಡರಿಸಿದ್ದಾರೆ. ಕೆಲವು ವಿಗ್ರಹಗಳ ಮೇಲೆ ದಾಸೋಜ, ಚವನ, ಚಿಕ್ಕಹಂಸ, ಮಲ್ಲಿಯಣ್ಣ, ಮಲ್ಲೋಜ, ನಾಡೋಜ ಮುಂತಾದ ಶಿಲ್ಪಿಗಳ ಹೆಸರುಗಳಿವೆ. ಈ ದೇವಾಲಯದ ಮುಂದಿರುವ ದ್ವಾರಪಾಲಕರಂತಿರುವ ವಿಗ್ರಹಗಳು ರತಿ ಮನ್ಮಥರದು.
Read also : Somanathapura Information in Kannada Language
ಚೆನ್ನಕೇಶವ ದೇವಾಲಯದ ಬಲಗಡೆ ಸ್ವಲ್ಪ ಹಿಂದೆ 124 x106 ಅಳತೆಯ ಕಪ್ಪೆ ಚೆನ್ನಿಗರಾಯನ ಗುಡಿಯಿದೆ. ಶಾಂತಲೆ ಕಟ್ಟಿಸಿದ ಈ ದೇವಾಲಯದ ಮೂಲ ವಿಗ್ರಹ ತುಂಬ ಸುಂದರವಾಗಿದೆ. ಮತ್ತೊಂದು ಗರ್ಭಗೃಹದಲ್ಲಿ ವೇಣುಗೋಪಾಲನ ಮೂರ್ತಿಯಿದೆ. ಇಲ್ಲಿಯ ನವರಂಗದಲ್ಲಿಯೂ ಮೂರು ಮದನಿಕೆಗಳಿವೆ.
ಒಟ್ಟಿನಲ್ಲಿ ಬೇಲೂರು ದೇವಾಲಯದ ವಾಸ್ತುಶಿಲ್ಪ ಮತ್ತು ಶಿಲ್ಪಗಳ ಸಮನ್ವಯದಿಂದ ಕೂಡಿದ್ದು ನೋಡುಗರ ಮನಸೆಳೆಯುತ್ತದೆ.
ಶಿಲಾಬಾಲಿ ಸುಂದರವಾದಹರವಾಗಿವೆ. ಕಂಬೇಗಮರ್ಧನ, ನರಹೂ ಬಳ್ಳಿಗಳು
COMMENTS