Halebeedu History in Kannada Language: In this article, we are providing ಹಳೇಬೀಡು ಬಗ್ಗೆ ಮಾಹಿತಿ for students and teachers. Students can use this Halebeedu History in Kannada Language to complete their homework. “ಸೂಕ್ಷ್ಮ ಕೌಶಲದ ಕೆತ್ತನೆಯ ಕೆಲಸದಲ್ಲಿ ಇಡೀ ಜಗತ್ತಿನ ಶಿಲ್ಪವನ್ನೇ ಮೀರಿಸಿದ ಅನೇಕ ಕಟ್ಟಡಗಳು ಭಾರತದಲ್ಲಿವೆ. ಆದರೆ ಬೇಲೂರು, ಹಳೇಬೀಡು ದೇವಾಲಯಗಳು ಅವೆಲ್ಲವನ್ನೂ ಮೀರಿಸಿವೆ” ಕಲಾ ವಿಮರ್ಶಕ ಫರ್ಗ್ಯುಸನ್‌ನ ಈ ಮಾತು ಇಲ್ಲಿಯ ಶಿಲ್ಪಕಲಾ ವೈಭವವನ್ನು ಕಂಡಾಗ ಹೇಳಿದ್ದು ಅತಿಶಯೋಕ್ತಿ ಅನ್ನಿಸದು. 12-13ನೆಯ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಹೊಯ್ಸಳ ದೊರೆಗಳ ಕಾಲದಲ್ಲಿ ಕಟ್ಟಿದ ಗುಡಿಗಳನ್ನು 'ಹೊಯ್ಸಳ ಶೈಲಿ'ಯ ದೇವಾಲಯಗಳು ಎನ್ನುತ್ತಾರೆ. ಪ್ರಧಾನವಾಗಿ ಕಟ್ಟಡದ ತಳಪಾಯ, ವೇದಿಕೆ, ಶಿಲ್ಪಾಲಂಕರಣ ಇವು ಹೊಯ್ಸಳ ಶೈಲಿಯ ಕೆಲವು ವಿಶಿಷ್ಟ ಲಕ್ಷಣಗಳು. ಹಾಸನ ಜಿಲ್ಲೆಯ ಬೇಲೂರಿನ ಪೂರ್ವಕ್ಕೆ 16 ಕಿ.ಮೀ. ದೂರದಲ್ಲಿ ಇತಿಹಾಸ ಪ್ರಸಿದ್ದ 'ಹಳೇಬೀಡು' ಇದೆ. ಈ ಹಿಂದೆ ಇದಕ್ಕೆ ದೂರಸಮುದ್ರ. ದ್ವಾರಸಮುದ್ರ, ದ್ವಾರಾವತಿ ಎಂಬ ಹೆಸರಿತ್ತು.
Halebeedu History in Kannada Language: In this article, we are providing ಹಳೇಬೀಡು ಬಗ್ಗೆ ಮಾಹಿತಿ for students and teachers. Students can use this Halebeedu History in Kannada Language to complete their homework.
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಭಾರತೀಯ ವಾಸ್ತುಶಿಲ್ಪದಲ್ಲೇ ' ಅಗ್ರಸ್ಥಾನವನ್ನು ಪಡೆದಿರುವ ಭವ್ಯ ದೇವಾಲಯ, ಎರಡು ಗರ್ಭಗೃಹಗಳನ್ನುಳ್ಳ ಕಟ್ಟಡ ಇದು. ಹೊಯ್ಸಳರ ದೊರೆ ವಿಷ್ಣುವರ್ಧನನ ದಂಡಾಧಿಕಾರಿಯಾಗಿದ್ದ ಕೇತಮಲ್ಲ ಸು ಕ್ರಿ.ಶ. 121ರಲ್ಲಿ ತನ್ನ ರಾಜನ ಹೆಸರಿನಲ್ಲಿ ಕಟ್ಟಿಸಿದನೆಂದು ಹೇಳಲಾಗಿದೆ. ದೇವಾಲಯ ಐದಡಿ ಎತ್ತರದ ಜಗಲಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿದೆ. ಜಗಲಿಯ ಆಕಾರ ಕಟ್ಟಡದ ನಕ್ಷತ್ರಾಕಾರವನ್ನು ಅನುಸರಿಸಿದೆ. ದೇವಾಲಯ ಉತ್ತರ ದಕ್ಷಿಣವಾಗಿ 160 ಅಡಿ ಪೂರ್ವ ಪಶ್ಚಿಮವಾಗಿ 122 ಅಡಿಗಳಿಷ್ಟಿದೆ. ಈ ಉದ್ದದ ಹಜಾರವನ್ನು ಎರಡು ಭಾಗಗಳಾಗಿ ವಿಂಗಡಿಸಿದಂತ ರಚನೆಯಿದ್ದು ಒಂದೊಂದು ಭಾಗದಲ್ಲಿಯೂ ಗರ್ಭಗೃಹ, ಸುಕನಾಸಿ, ನವರಂಗ ಮಹಾದ್ವಾರಗಳಿವೆ. ಇದಕ್ಕೆ ದ್ವಾರಮಂಟಪವಿದೆ. ಇದೊಂದು ದ್ವಿಕೂಟ ಅಥವಾ ಅವಳಿ ದೇವಾಲಯ. ಎರಡು ಗರ್ಭಗುಡಿಗಳಲ್ಲಿಯೂ ಒಂದೊಂದು ಲಿಂಗ ಇದೆ. ಒಂದು ಹೊಯ್ಸಳೇಶ್ವರ ಮತ್ತೊಂದು ಶಾಂತಲೇಶ್ವರ, 30 ಕಂಬಗಳಿಂದ ರಚಿತವಾಗಿದೆ. ಇದರಲ್ಲಿ ಅಷ್ಟದಿಕ್ಷಾಲಕರು, ನವಗ್ರಹಗಳಿರುವ ಒಂಬತ್ತು ಭುವನೇಶ್ವರಿಗಳಿವೆ. ಈ ಮಂಟಪದಲ್ಲಿ 13 ಅಡಿ ಉದ್ದ 16/12 ಅಡಿ ಅಗಲ ಮತ್ತು 8112 ಅಡಿ ಎತ್ತರವಿರುವ ನಂದಿ ವಿಗ್ರಹವಿದೆ. ಉತ್ತರದ ಕಡೆಯ ಗರ್ಭಗೃಹದ ಎದುರಿನ ನಂದಿ ಮಂಟಪದಲ್ಲಿ 19ಕಂಬಗಳಿವೆ. ಇಲ್ಲಿಯ ನಂದಿ ಚಿಕ್ಕದು 10 ಅಡಿ ಉದ್ದ, 5 ಅಡಿ ಅಗಲ, 7112 ಅಡಿ ಎತ್ತರವಿದೆ. ಗೋಡೆಗಳ ಹೊರಮುಖದಲ್ಲಿ ಸುತ್ತಲೂ ಒಂದರ ಮೇಲೊಂದರಂತೆ ಎಂಟು ಚಿತ್ರ ಪಟ್ಟಿಕೆಯ ಸಾಲುಗಳಿವೆ. ಅವು ಕ್ರಮವಾಗಿ ಆನೆಗಳು, ಸಿಂಹಗಳು, ಬಳ್ಳಿಯ ಕೆತ್ತನೆಗಳು ಮತ್ತು ಅವುಗಳ ಮಧ್ಯೆದಲ್ಲಿ ಋಷಿಗಳು, ಸಿದ್ದರು, ಕುದುರೆ ಸವಾರರು, ಪುರಾಣೇತಿಹಾಸಗಳ ಘಟನೆಗಳನ್ನು ಚಿತ್ರಿಸುವ ವಿಗ್ರಹಗಳು, ಮಕರಗಳು ಮತ್ತು ಮಧ್ಯೆ ಮಧ್ಯೆ ಚಿಕ್ಕ ವಿಗ್ರಹಗಳು ಮತ್ತು ಹಂಸಗಳು ಹೀಗೆ ಎಂಟು ಅಲಂಕಾರ ಪಟ್ಟಿಕೆಗಳಿವೆ. ದೇವಾಲಯದ ಸುತ್ತಲೂ ಬಂದಿರುವ ಈ ಪತ್ರಪಟ್ಟಿಕೆಗಳಲ್ಲಿ ಒಂದೊಂದೂ ಸುಮಾರು 700 ಅಡಿಗಳಷ್ಟು ಉದ್ದವಾಗಿದೆ. ಆನೆಗಳಿರುವ ಮೊದಲ ಚಿತ್ರಪಟ್ಟಿಕೆಯಲ್ಲಿ ಸುಮಾರು 2000 ಆನೆಗಳಿವೆ. ಅಂತೆಯೇ ದೇವಾಲಯದ ಪೂರ್ವಾರ್ಧದಲ್ಲಿ ದಕ್ಷಿಣದ ಬಾಗಿಲಿನಿಂದ ಉತ್ತರದ ಬಾಗಿಲಿನವರೆಗೆ ಇನ್ನೂ ಕೆಲವು ಸಾಲುಗಳಿದ್ದು, ಕುಳಿತಿರುವ, ನಿಂತಿರುವ ಹಲವಾರು ವಿಗ್ರಹಗಳಿವೆ. ಅವುಗಳ ಮೇಲೆ ಚಿಕ್ಕ ಗೋಪುರಗಳು, ಮಧ್ಯೆ ಮಧ್ಯೆ ಸಿಂಹಗಳು, ಕಟಾಂಜನ, ಜೋಡಿಕಂಬಗಳೂ ಇವೆ. ಎರಡೆರಡು ಜೋಡಿ ಕಂಬಗಳ ಮಧ್ಯೆ ಶಿಲಾಫಲಕಗಳು. ಅದರಲ್ಲಿ ಮೂರ್ತಿಗಳೂ ಇವೆ. ಕೊರೆದು ಮಾಡಿರುವ ಜಾಲಂಧ್ರಗಳಿವೆ.
ದೇವಾಲಯ ಪಶ್ಚಿಮಾರ್ಧದ ಅಂದರೆ ಹಿಂಭಾಗದ ಗೋಡೆಗಳು ಶಿಲ್ಪ ಕೃತಿಗಳಿಂದ ಕಿಕ್ಕಿರಿದಿವೆ. ಇಲ್ಲಿ ಸುಮಾರು 280 ವಿಗ್ರಹಗಳಿದ್ದು ಅವುಗಳಲ್ಲಿ 166 ಸ್ತ್ರೀ ವಿಗ್ರಹಗಳೂ, 114 ಪುರುಷ ವಿಗ್ರಹಗಳೂ ಇವೆ. ಇವುಗಳಲ್ಲಿ ಶಿವನ ಅವತಾರ, ಗಣೇಶ, ಉಮಾ ಮಹೇಶ್ವರ, ಸುಬ್ರಮಣ್ಯ, ವೇಣುಗೋಪಾಲ, ನರಸಿಂಹ, ಸರಸ್ವತಿ, ದುರ್ಗಿ, ಬ್ರಹ್ಮ ಮೊದಲಾದ ದೇವತೆಗಳ ವಿಗ್ರಹಗಳು, ಹರಿಹರ, ವಾಮನ, ತ್ರಿವಿಕ್ರಮ, ಇಂದ್ರ, ರಾವಣ, ಅರ್ಜುನ, ಗರುಡ ಇತ್ಯಾದಿ ವಿಗ್ರಹಗಳಿವೆ. ಪೂರ್ವದಿಕ್ಕಿನ ಗೋಡೆಯ ಮೇಲೂ ಇಂಥದೇ ಅನೇಕ ವಿಗ್ರಹಗಳಿವೆ. ಇಷ್ಟು ಅಧಿಕ ಸಂಖ್ಯೆಯಲ್ಲಿ ಬೇರೆ ಇನ್ನಾವುದೇ ದೇವಾಲಯದಲ್ಲಿ ಕಂಡುಬರುವುದಿಲ್ಲ. ಇಲ್ಲಿಯ ಶಿಲ್ಪಗಳನ್ನು ಪರಿಶೀಲಿಸಿದರೆ ಆ ಕಾಲದಲ್ಲಿದ್ದ ಉಡುಗೆ, ತೊಡುಗೆ, ವಾಹನ ಮೊದಲಾದ ಸಾಮಾಜಿಕ ವಿಚಾರಗಳನ್ನು ಅಂದಾಜು ಮಾಡಬಹುದಾಗಿದೆ. ಇಂಥ ಭವ್ಯವಾದ ದೇವಾಲಯದ ಶಿಲ್ಪಕೃತಿಗಳನ್ನು ಕಂಡರಿಸುವಲ್ಲಿ ಹಲವಾರು ಶಿಲ್ಪಿಗಳ ಶ್ರಮವಿದೆ. ಕಾಳಿದಾಸ, ದೇವೋಜ, ಕೇತಣ, ಬಲ್ಲಣ, ರೇಮೋಜ, ಅವನ ಮಗ ಹಪುಗ, ಮಾಣುಬಲಕಿ, ತಣದು ದೂರಹರಿಷ, ಕೇಸಿ ಮೋಜನ ಮಗ ಮಸ ಮೊದಲಾದವರು ಇಲ್ಲಿಯ ಕೆಲವು ರೂವಾರಿಗಳು. ಇಲ್ಲಿಯ ಕೇದಾರೇಶ್ವರ ದೇವಾಲಯವನ್ನು ಹೊಯ್ಸಳ ದೊರೆ ಎರಡನೆಯ ಬಲ್ಲಾಳ ಹಾಗೂ ಅವನ ಕಿರಿಯರಾಣಿ ಕೇತಲ ದೇವಿ ಸು. 1219ರಲ್ಲಿ ಕಟ್ಟಿಸಿದರು. ಈ ದೇವಾಲಯದಲ್ಲಿ ಮೂರು ಕೋಣೆಗಳಿವೆ. ಗರ್ಭಾಗೃಹದಲ್ಲಿ ವಿಗ್ರಹ ಕಾಣುವುದಿಲ್ಲ. ನಕ್ಷತ್ರಾಕಾರದ ತಳವಿನ್ಯಾಸವನ್ನು ಹೊಂದಿದ್ದು, ಎತ್ತರವಾದ ಜಗತಿಯ ಮೇಲೆ ಕಟ್ಟಲಾಗಿದ್ದು ಅಲಂಕಾರ ಪಟ್ಟಿಕೆಗಳನ್ನು ಹೊಂದಿದೆ. ಇದರಲ್ಲಿ ಸುಂದರ ಪುಷ್ಪಗಳು, ರಾಮಾಯಣ, ಮಹಾಭಾರತ ಮತ್ತು ಭಾಗವತಗಳ ಕೆಲವು ಪ್ರಸಂಗಗಳನ್ನು ಆಕರ್ಷಕವಾಗಿ ಬಿಡಿಸಲಾಗಿದೆ. ಇಲ್ಲಿಯ ಹಂಸ ಮತ್ತು ಮಕರಗಳು ಮೋಹಕವಾಗಿವೆ. ದೇವಾಲಯದ ಬಾಗಿಲುವಾಡ, ಭುವನೇಶ್ವರಿ ಹಾಗೂ ಹೊರಭಾಗದ ಗೋಡೆಗಳಲ್ಲಿ ಕೆಲವು ಸುಂದರ ಮೂರ್ತಿಗಳಿವೆ. ಹೊಯ್ಸಳೇಶ್ವರ ದೇವಾಲಯದ ದಕ್ಷಿಣಕ್ಕೆ ಅರ್ಧ ಕಿ.ಮೀ. ದೂರದಲ್ಲಿ ಒಂದೇ ಆವರಣದಲ್ಲಿ ಮೂರು ಬಸದಿಗಳಿವೆ. ಪಾರ್ಶ್ವನಾಥ ಬಸದಿ ಮತ್ತು ಶಾಂತಿನಾಥ ಬಸದಿ. ಪಾರ್ಶ್ವನಾಥ ಬಸದಿಯ ನವರಂಗದ ವೈಶಿಷ್ಟ್ಯವೆಂದರೆ ಹೊಳಪು ಕೊಟ್ಟು ತಿರುಗಣಿಯಲ್ಲಿ ಕಡೆದು ನಿಲ್ಲಿಸಿರುವ ಮಧ್ಯದ ಕಂಬಗಳು. ಒಟ್ಟಿನಲ್ಲಿ ಈ ಹಳೇಬೀಡಿನ ದೇವಾಲಯಗಳು ವಾಸ್ತುಶಿಲ್ಪ ಪ್ರಪಂಚದಲ್ಲಿ ಅದ್ವಿತೀಯವಾದದ್ದು ಎಂದು ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.
Tags:
kannada 98
Admin


100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
COMMENTS