Saturday, 11 April 2020

ಕುಮಾರವ್ಯಾಸ ಮಾಹಿತಿ Kumaravyasa Parichaya in Kannada Language

Kumaravyasa Parichaya in Kannada Language: In this article, we are providing ಕುಮಾರವ್ಯಾಸ ಮಾಹಿತಿ for students and teachers. Students can use thisKumaravyasa Information in Kannada to complete their homework.

ಕುಮಾರವ್ಯಾಸ ಮಾಹಿತಿ Kumaravyasa Parichaya in Kannada Language

ಕುಮಾರವ್ಯಾಸ ಮಾಹಿತಿ Kumaravyasa Parichaya in Kannada Language
ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿದ್ದು, ಜನಪ್ರಿಯ ಗದುಗಿನ ಭಾರತವನ್ನು ಬರೆದ ಕವಿ. ಈತ ಕನ್ನಡ ಸಾಹಿತ್ಯದ ಉನ್ನತೋನ್ನತ ಕವಿ. ಕುಮಾರವ್ಯಾಸ ಇದು ಕವಿಯ ಕಾವ್ಯನಾಮ. ಪ್ರಾಯಶಃ ಮೊದಲಲ್ಲಿ ಬಿರುದಾಗಿ ಬಂದದ್ದು. ಕವಿ ತನ್ನನ್ನು ತಾನು ಕುಮಾರವ್ಯಾಸ ಎಂದು ಕರೆದುಕೊಂಡಿದ್ದರೆ ಅದನ್ನು ನಾವು ಕಾವ್ಯನಾಮ ಎನ್ನಬೇಕು. ಹಿರಿಯರು ಅಭಿಮಾನಿಗಳು ಅವನನ್ನು ಈ ಹೆಸರಿನಿಂದ ಹೊಗಳಿದರೆಂದು ತಿಳಿದೆವಾದರೆ ಇದು ಒಂದು ಬಿರುದು ಎನ್ನಬೇಕಾಗುತ್ತದೆ. ಕುಮಾರವ್ಯಾಸ ಎಂದು ಹೆಸರಾಗಿರುವ ಈ ಕವಿಯ ವಾಡಿಕೆಯ ಹೆಸರು ಏನಾಗಿತ್ತು ಎಂದು ಖಂಡಿತವಾಗಿ ಹೇಳುವಂತಿಲ್ಲ. ನಾರಣಪ್ಪ ಎಂದು ಹೇಳಲಾಗಿದೆ ಕವಿ ಗದುಗಿನ ವೀರನಾರಾಯಣದೇವರ ಉಪಾಸಕ; ಆ ದೇವರನ್ನು ತನ್ನ ಕಾವ್ಯದಲ್ಲಿ ನಾರಾಯಣ, ನಾರಯಣ, ನಾರಣ ಎಂದು ಕರೆದಿದ್ದಾನೆ. ಸ್ಥಳೀಯ ಪ್ರತೀತಿಯಂತೆ ಕುಮಾರವ್ಯಾಸ ಗದುಗಿನ ಬಳಿಯ ಕೋಳಿವಾಡದ ಕರಣಿಕರ ವಂಶಸ್ಥ.
ಕುಮಾರವ್ಯಾಸನ ಭಾರತ ಧರ್ಮರಾಜನ ಪಟ್ಟಾಭಿಷೇಕದಿಂದ ಮುಗಿಯುತ್ತದೆ. ಕೃಷ್ಣದೇವರಾಯನ ಆಸ್ಥಾನದ ತಿಮ್ಮಣ ಕವಿ ಇದರ ಕಥೆಯನ್ನು ಮುಂದುವರಿಸಿ ಇನ್ನೆಂಟು ಪರ್ವಗಳನ್ನು ರಚಿಸಿದ್ದಾನೆ. ಆ ಕಾವ್ಯದ ಪೀಠಿಕೆಯಲ್ಲಿ ಆತ ಮೊದಲು ಕುಮಾರವ್ಯಾಸನ ಕಾವ್ಯವನ್ನು ಪೂರ್ತಿ ಮಾಡು ಎಂದು ಅರಸ ಅಪ್ಪಣೆ ಮಾಡಿದ್ದಾಗಿ ಹೇಳಿದ್ದಾನೆ. ಕೃಷ್ಣದೇವರಾಯನ ಕಾಲ 1509-20. ಈ ಮಾತಿನ ಆಧಾರದ ಮೇಲೆ ರೈಸ್ ಮತ್ತು ಕಿಟ್ಟೆಲರು ಕುಮಾರವ್ಯಾಸ ಸುಮಾರು 1500ರ ಕಾಲಕ್ಕೆ ಜೀವಿಸಿದ್ದಿರಬಹುದುದೆಂದು ಊಹಿಸಿದರು. ಕೋಳಿವಾಡದ ಕರಣಿಕರ ಮನೆತನದ ಲಕ್ಕರಸನ ಹಿರಿಯ ಮಗ ವೀರನಾರಾಯಣ ಈ ಕಾವ್ಯವನ್ನು ರಚಿಸಿದ ಎನ್ನುವುದಾದರೆ ಕಾವ್ಯ 1430-1500 ಅಂತರದಲ್ಲಿ ರಚಿತವಾಯಿತೆನ್ನಬೇಕು. ಕವಿ ಜಾತಿಯಿಂದ ಬ್ರಾಹ್ಮಣ, ಮತ ವೈದಿಕ ಎಂದು ಊಹಿಸಬಹುದು. ಕವಿ ನಾರಾಯಣಪ್ಪ ದಿನವೂ ವೀರನಾರಾಯಣ ದೇವಾಲಯದ ಆವರಣದಲ್ಲಿರುವ ಕೊಳದಲ್ಲಿ ಸ್ನಾನಮಾಡಿ ಒದ್ದೆಯಲ್ಲಿ ದೇವರೆದುರು ಕುಳಿತು ಕಾವ್ಯವನ್ನು ಹೇಳುತ್ತಿದ್ದನೆಂದು ಒಂದು ಸಂಪ್ರದಾಯದ ಮಾತು. ಒದ್ದೆಯಲ್ಲಿ ಕುಳಿತು ಎನ್ನುವುದು ಆಮೇಲಿನ ಜನ ಕಲ್ಪಿಸಿದ ಭಕ್ತಿಯ ಅತಿರೇಕ ಎಂದು ಕಾಣುತ್ತದೆ. ಕಾವ್ಯವನ್ನು ಓದಿದರೆ ಅದು ಕವಿ ದೈವಸನ್ನಿಧಿಯಲ್ಲಿ ಆವೇಶದಿಂದ ತುಂಬಿದ ವೇಳೆ ಬರೆದದ್ದಾಗಿರಬೇಕು ಎಂದು ತೋರುವುದು ದಿಟ. ಅಂತೇ ಈತ ಒಬ್ಬ ವಿಷ್ಣು ಭಕ್ತ. ಹೀಗಿದ್ದೂ ಶಿವ ವಿರೋಧಿ ಅಲ್ಲ; ಶಿವನನ್ನೂ ರೂಪಗಳ ಐಕ್ಯ, ಸಮಾನತೆಗಳ ಒಪ್ಪಿದ ಒಂದು ಪಂಥದವನಾಗಿರಬೇಕು. ಕರ್ಣಾಟಕದ ಭಾಗವತಪಂಥ ಇಂಥ ಒಂದು ಪಂಥ. ತೊರವೆಯ ರಾಮಾಯಣ, ವಿಠಲನಾಥನ ಭಾಗವತ, ಜೈಮಿನಿ ಭಾರತ ಗ್ರಂಥಗಳ ರಚಯಿತರು ಇದೇ ಪಂಥದ ಅನುಯಾಯಿಗಳು. ಕುಮಾರವ್ಯಾಸ ತನ್ನ ಕಾವ್ಯವನ್ನು ಗಮಕದಲ್ಲಿ ಹೇಳುತ್ತಿದ್ದನೆಂದೇ ಗದುಗಿನ ಪ್ರಾಂತದಲ್ಲಿ ಪ್ರತೀತ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಹೆಸರಾಂತು ಬಾಳಿದ ಮಹಾಕವಿ ಬಸವಪ್ಪಶಾಸ್ತಿಗಳು ಈ ಗ್ರಂಥವನ್ನೂ ಇತರ ಗ್ರಂಥಗಳನ್ನೂ ಬಹು ಚೆನ್ನಾಗಿ ಓದಿ ಹೇಳುತ್ತಿದ್ದರಂತೆ. ಹೊಸ ಕಾಲದ ವಿದ್ಯೆಯಲ್ಲಿ ಗಮಕಕ್ಕೆ ಎಡೆ ದೊರೆಯದೆ ಗಮಕ ನಮ್ಮಲ್ಲಿ ಅಪೂರ್ಣ ಆಯಿತು.
ಇವನ ಕಾವ್ಯ ಜನರ ಮನಸ್ಸನ್ನು ಸೂರೆಗೊಂಡಿರುವುದರ ಮುಖ್ಯ ಕಾರಣ. ಮೊದಲಾಗಿ ಅದು ಬಹುಪಾಲು ಓದುತ್ತಿದ್ದಂತೆ, ಕೇಳುತ್ತಿದ್ದಂತೆ, ಅರ್ಥವಾಗುತ್ತದೆ. ಎರಡನೆಯದಾಗಿ ವಿಸ್ತಾರವಾಗಿ ಒಂದು ಕಥೆಯನ್ನು ಹೇಳುವಲ್ಲಿ ಅದು ಮತ್ತೆ ಮತ್ತೆ ರಸಸ್ಥಾನಗಳನ್ನು ಮುಟ್ಟುತ್ತದೆ. ಮೂರನೆಯದಾಗಿ ಅದು ಜನರ ಮನೋಧರ್ಮದ ಹಲವು ಮುಖಗಳನ್ನು ಪ್ರತಿಬಿಂಬಿಸುತ್ತದೆ. ಕಾವ್ಯಸುಲಭವಾಗಿ ಅರ್ಥವಾಗುವುದಕ್ಕೆ ಕಾರಣ ಅದು ಷಟ್ಟದಿಯಲ್ಲಿರುವುದು, ಹತ್ತಿರ ಹತ್ತಿರ ಬಳಕೆಯ ಭಾಷೆಯಲ್ಲಿರುವುದು. ಇಲ್ಲಿ ಕೃಷ್ಣಭಕ್ತಿ ಮುಖ್ಯ ವಿಷಯ. ಕುಮಾರವ್ಯಾಸನ ಕಾಲ ನಾಡಿನಲ್ಲಿ ಶಿವಭಕ್ತಿ ವಿಷ್ಣುಭಕ್ತಿ ಮಹಾಪೂರವಾಗಿ ತುಂಬಿ ಬಂದ ಕಾಲ. ಶಿವಶರಣರ, ಹರಿದಾಸರ, ವಚನದಲ್ಲಿ ನಾಮಾಮೃತ ತುಂಬಿದ ಕಾಲ. ಅವನು ಪುರಾಣದ ಸಂಗತಿಯನ್ನು ಹೇಳಿದ. ಅದನ್ನು ಕೃಷ್ಣಕಥೆ ಎಂದೇ ವರ್ಣಿಸಿದ. ಅದನ್ನು ನುಡಿವಲ್ಲಿಯೇ ವೀರನಾರಾಯಣನ ಕವಿ. ಲಿಪಿಕಾರ ಕುಮಾರವ್ಯಾಸ ಎಂದ; ತಾನು ಬರಿಯ ಬರೆದಾತ; ಕೃತಿಕಾರ ದೇವರು. ಅಂತೆ “ಹರಿಯ ಬಸಿರೊಳಗಖಿಲ ಸೋಕದ ವಿರಡ ಅಡಗಿಹವೋಲು ಭಾರತ ಶರಧಿಯೊಳಗಡಗಿಹವು ಅನೇಕ ಪುರಾಣಶಾಸ್ತ್ರಗಳು' 'ಅರಸುಗಳಿಗಿದುವೀರ ದ್ವಿಜರಿಗೆ ಪರಮವೇದದ ಸಾರ ಯೋಗಿಶ್ವರರ ತತ್ತ ವಿಚಾರ, ಮಂಜನಕೆ ಬುದ್ದಿಗುಣ. ವಿರಿಹಗಳ ಶೃಂಗಾರ, ವಿದ್ಯಾಪರಿಣತರಲಂಕಾರ. ಕಾವ್ಯಕ್ಕೆ ಗುರು' ಎಂದ. ಚಾರುಕವಿತೆಯ ಬಳಕೆಯಲ್ಲ; ಆದರೂ ಕಾವ್ಯಕ್ಕೆ ಗುರು. ಮೂಲ ಭಾರತದ ಕಥೆಯನ್ನು ಕಾವ್ಯಕುಲಕ್ಕೆ ಗುರುವಾಗವಂತೆ ಕನ್ನಡಿಸುವಲ್ಲಿ ಕುಮಾರವ್ಯಾಸ ವ್ಯಾಸಮಹರ್ಷಿ ಹೇಳಿದ ವಿಷಯ ಅಷ್ಟನ್ನೇ ಸಂಗ್ರಹಿಸಿ ಮುಗಿಸಲಿಲ್ಲ. ಕಥೆಯನ್ನು ತನ್ನದಾಗಿ ಮಾಡಿಕೊಂಡು ಅದನ್ನು ತನ್ನ ರುಚಿಯನ್ನನುಸರಿಸಿ ಮತ್ತೆ ಹೇಳಿದ; ಅದನ್ನು “ಭಾರತ ಕಥಾಮಂಜರಿ” ಎಂದು ಕರೆದ. ಜನ್ಮತಃ ಕವಿ ಆವನು ಮಹಾ ಅನುಭಾವಿಯಾಗಿ ಬರೆದ ಈ ಕಾವ್ಯದಲ್ಲಿ ಭಕ್ತಿ ಮುಖ್ಯ ರಸವಾಗಿ ಮತ್ತೆ ಮತ್ತೆ ಮಡುಗಟ್ಟಿ. ಮತ್ತೆ ಮತ್ತೆ ಹೊನಲಾಗಿ ಹರಿಯುವುದು ಸಹಜವಾಗಿದೆ. ಪಂಡಿತರ ಪ್ರಪಂಚವನ್ನು ಬಲ್ಲ ರಸಿಕಚೇತನ. ಆದುದರಿಂದ ಇವನ ದೈವಸ್ತವಗಳಲ್ಲಿ ವೇದ ಉಪನಿಷತ್ತುಗಳ ಉಪದೇಶ ಕೆನೆ, ಗಿಣ್ಣು, ಜೇನು ಎಂಬಂತೆ ಸಿಹಿಯಾಗುತ್ತದೆ. ವಿಸ್ತಾರವೇ ಈ ಸ್ತವಗಳ ಹೃದಯ, ಗಾಯನದಲ್ಲಿ ಸಂಗತಿಗಳಂತೆ ಹೊಸ ವಿವರಗಳನ್ನು ಒಂದರ ಮೇಲೊಂದನ್ನು ಪೇರಿಸಿ ಕವಿ ನಮ್ಮ ಮನಸ್ಸನ್ನು ಒಂದು ಮೋಡಿಗೆ ಅಧೀನ ಮಾಡುತ್ತಾನೆ. ಇದನ್ನು ಉದಾಹರಣೆಗಳಿಂದ ತೋರುವುದು ಸಾಧ್ಯವಲ್ಲ.
ಕಾವ್ಯದ ತುಂಬ ವೀರರಸ ತುಂಬಿದೆ. ಸೆಣಸುವಧಟರ ಗಂಡ, ಸಮರಾಂಗಣದ ತುಲಭೇರುಂಡ ದಿನಮಣಿಯ ಮಗ ಇಷ್ಟು ವಿಸ್ತಾರವಾಗಿ ಹೇಳುವಲ್ಲಿ ಕಾವ್ಯದಲ್ಲಿ ಕಾಣುವ ಶಬ್ದ ಸಂಪತ್ತು ಈ ಕವಿಗೇ ಮೀಸಲು. ರಾಜ ಅರಮನೆ.ಕಾಳೆಗದ ಕಣ. ಜೂಜಿನ ಆಟ. ಮದುವೆಯ ಸಂಭ್ರಮ. ಪಾಳೆಯದ ಬಾಳು, ಸ್ವಯಂವರ ಮಂಟಪ. ಮಲ್ಲಯುದ್ದ ಮಕ್ಕಳಾಟ, ಬೇಟೆ, ರಥದ ಭಾಗಗಳು, ಆಯಧಗಳ ಬಗೆಗಳು, ನಾಯಿ, ಕುದುರೆ ಇವುಗಳ ಜಾತಿಗಳು, ವೀರವಸನ, ಇತ್ಯಾದಿ. ಈ ಕವಿತೆಯಲ್ಲಿ ಬರುವ ಸಂಗತಿ ಒಂದು ಸಾವಿರ. ಅದನ್ನು ಹೇಳುವುದಕ್ಕೆ ಲಕ್ಷ ಶಬ್ದ ಕವಿಯನ್ನು ಓಲೈಸುತ್ತಿವೆ. ಇವನ ನುಡಿ ಅಷ್ಟು ವಿಪುಲ ಅಷ್ಟು ವಿಶಿಷ್ಟ. ಇಷ್ಟು ವಿಷಯವನ್ನು ಹೀಗೆ ಹೇಳಿದವನಿಗೆ ಶಬ್ದ ಬೇಕಾಗುವುದಿಲ್ಲ. ಇಷ್ಟು ಶಬ್ದ ಇಲ್ಲದೆ ಇಷ್ಟು ವಿಷಯವನ್ನು ಹೀಗೆ ಹೇಳುವುದು ಸಾಧ್ಯವಿಲ್ಲ. ಪಂಪ, ರನ್ನ, ಹರಿಹರ, ರತ್ನಾಕರವರ್ಣಿ  - ಇವರು ವಾಕ್‌ಸಾರ್ವಭೌಮರು. ಶಬ್ದಾರ್ಣವರು. ಸರಸ್ವತಿಯ ಭಂಡಾರದ ಮುದ್ರೆಯನ್ನೊಡನೆ ಧೀರರು. ಅಡ್ಡಿ ಇಲ್ಲ. ಕುಮಾರವ್ಯಾಸ ಅಂತೇ ಸಾರ್ವಭೌಮ; ಅಂತೇ ಅರ್ಣವ, ಇಷ್ಟೇ ಭೇದ: ಇವನು ಭಂಡಾರದ ಮುದ್ರೆಯನ್ನೊಡೆಯ ಬೇಕಾಗಲಿಲ್ಲ. ಅದು ಇವನಿಗೆ ತೆರೆದೇ ಇತ್ತು. ಮೇಲಾಗಿ ಈ ಸಂಪತ್ತಿನಲ್ಲಿ ಇದು ಸಂಸ್ಕೃತ, ಇದು ಕನ್ನಡ, ಇದು ಹೆಚ್ಚು, ಇದು ಕಡಿಮೆ ಎನ್ನದೆ ಸಮಸಮವಾಗಿ ಸೇರಿತ್ತು. ಇಲ್ಲಿ ಸಂಸ್ಕೃತ ಸೇರಿರುವುದೂ ಹೀಗೇ ಇದೆ.. ಮನೆಗೆ ಬಂದ ಸೊಸೆಯಂತೆ ಅದು ಕನ್ನಡದಲ್ಲಿ ಕನ್ನಡವಾಗಿ ಸೇರಿಹೋಗಿದೆ. ಕವಿಯ ಚತುರ ಉಕ್ಕಿಯೋ ಧಾರಾಳವೆಂದರೆ ಧಾರಾಳ. ಅದರ ಬೀಸು ಅದರ ಹರಹು ಇವನದೇ. ಇವನ ವರ್ಣನೆಗಳ ಅಂದವೇ ಅಂದ. ಕುಮಾರವ್ಯಾಸ ಮಹಾಭಾರತದಿಂದ ದಿವ್ಯದೃಷ್ಟಿಯನ್ನು ಪಡೆದು ತನ್ನ ಒಳಗೆ ತನ್ನ ಹೊರಗೆ ಅದರ ಮಹಾಶಕ್ತಿಗಳನ್ನು ಕಂಡು ತನ್ನ ಪಾಲಿಗೆ ಬಂದ ಭಾಗವನ್ನು ತನ್ನ ಜನಕ್ಕೆ ಹಂಚಿದ ಉದೀರ್ಣ ಚೇತನ; ಉದಾತ್ತ ಭಾವುಕ, ಕನ್ನಡ ನಾಡಿನ ಸಂಸ್ಕೃತಿ ಭರತವರ್ಷದ ಬೇರೆ ಯಾವ ಭಾಗದ ಸಂಸ್ಕೃತಿಗೂ ಸಮವಾಗಿ ಮೇಲೇರಿತ್ತು. ಭರತವರ್ಷದ ಸಂಸ್ಕೃತಿ ಬೇರೆ ಯಾವ ದೇಶದ ಸಂಸ್ಕೃತಿಗೂ ಕಡಿಮಯನ್ನು ಕಾರಣವಿಲ್ಲ ಎಂದು ಕುಮಾರವ್ಯಾಸ ತನ್ನ ಕಾವ್ಯದಿಂದ ಸಿದ್ದಾಂತ ಮಾಡಿದ್ದಾನೆ. ಈ ಅರ್ಥದಲ್ಲಿ ಈತ ಲೋಕದ ಸಂಸ್ಕೃತಿ ಈವರೆಗೆ ಮುಟ್ಟಿರುವ ಮಹಾಪೂರವೊಂದರ ಎತ್ತರವನ್ನು ಗುರುತಿಸುವ ಸಾಕ್ಷಿರೇಖೆಯಾಗಿದ್ದಾನೆ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: