Wednesday, 8 April 2020

ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜೀವನ ಚರಿತ್ರೆ Mokshagundam Visvesvaraya Biography in Kannada Language

Mokshagundam Visvesvaraya Biography in Kannada Language: In this article, we are providing ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜೀವನ ಚರಿತ್ರೆ for students and teachers. Students can use this Mokshagundam Visvesvaraya Biography in Kannada to complete their homework.

ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರ ಜೀವನ ಚರಿತ್ರೆ Mokshagundam Visvesvaraya Biography in Kannada Language

Mokshagundam Visvesvaraya Biography in Kannada Language
1861ನೇ ಸಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಜನನ, ಮೋಕ್ಷಗುಂಡಂ ಆಂಧ್ರಪ್ರದೇಶದ ಒಂದು ಗ್ರಾಮ. ವಿಶ್ವೇಶ್ವರಯ್ಯನವರ ಪೂರ್ವಿಕರು ಅಲ್ಲಿದ್ದರು. ಬಾಲ್ಯದಿಂದಲೂ ತಂದೆಯ ಕಟ್ಟುನಿಟ್ಟಿನ ಆಶ್ರಯದಲ್ಲಿ ವಿದ್ಯೆ ಕಲಿತ ಅವರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ 1881ರಲ್ಲಿ ಬಿ.ಎ. ಅನಂತರ ವಿಶೇಷ ವೇತನ ಪಡೆದು ಪುಣೆಯಲ್ಲಿ ಇಂಜಿನಿಯರಿಂಗ್ ಮುಗಿಸಿದರು. 1884ರಲ್ಲಿ ಸರ್ಕಾರಿ ನೌಕರಿಗೆ ಸೇರಿದರು. ಕಡೆಯವರೆಗೂ ಹಗಲಿರುಳು ಪ್ರಜಾಹಿತಕ್ಕಾಗಿ, ರಾಷ್ಟ್ರದ ಮುನ್ನಡೆಗಾಗಿ ದುಡಿದರು. ಅಸಿಸ್ಟೆಂಟ್ ಇಂಜಿನಿಯರ್, ಸೂಪರಿಂಟೆನ್‌ಡೆಂಟ್ ಇಂಜಿನಿಯರ್, ಚೀಫ್ ಇಂಜಿನಿಯರ್, ಮೈಸೂರಿನ ದಿವಾನರು - ಹೀಗೆ ಹತ್ತಾರು ಹುದ್ದೆಗಳಲ್ಲಿದ್ದು ದೇಶ ಸೇವೆ ಸಲ್ಲಿಸಿದರು. ಜಪಾನ್, ಕೆನಡಾ, ಅಮೆರಿಕ, ಯೂರೋಪು ಮುಂತಾದ ದೇಶಗಳಲ್ಲಿ ಪ್ರವಾಸ ಕೈಗೊಂಡು ಅಲ್ಲಿಯ ಉದ್ದಿಮ ಕ್ಷೇತ್ರಗಳನ್ನು ಅಧ್ಯಯನ ಮಾಡಿದರು. 1906ರಲ್ಲಿ ಅರಬ್ ಪರ್ಯಾಯ ದ್ವೀಪ ಬ್ರಿಟಿಷ್ ವಸಾಹತು ಏಡನ್ ಬಂದರಿನಲ್ಲಿ ನೀರಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಯೋಜನೆಗಳನ್ನು ನಿರ್ವಹಿಸಿದರು. ಇಂಗ್ಲೆಂಡ್ ಸರ್ಕಾರ ಅವರ ಸಲಹೆಯನ್ನು ಮೆಚ್ಚಿ ಅವರಿಗೆ “ಕೈಸರ್-ಎ-ಹಿಂದ್‌' ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿತು.
“ಮನುಷ್ಯ ಸುಮ್ಮನೆ ಕುಳಿತಿರಬಾರದು, ಅದರಿಂದ ಅವನಿಗೂ ಕೇಡು, ದೇಶಕ್ಕೂ ಹಾನಿ” ಎಂದು ಅವರು ಯೋಚಿಸಿದ್ದರು. ಒಂದು ನಿಮಿಷವನ್ನೂ ಅವರು ವ್ಯರ್ಥವಾಗಿ ಕಳೆಯುತ್ತಿರಲಿಲ್ಲ. ಅವರ ದೀರ್ಘಾಯುಸ್ಸಿನ ರಹಸ್ಯ ಸಹ ಅವರ ಸತತ ದುಡಿಮೆಯೇ ಆಗಿತ್ತು. ಅವರು ಕಾಲ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅವರು ಯಾವುದೇ ಕೆಲಸವನ್ನು ಮಾಡಲಿ ಪ್ರಾಮಾಣಿಕವಾಗಿ ಮಾಡುತ್ತಿದ್ದರು ಆತ್ಮಗೌರವ, ಉಡುಗೆ ಮತ್ತು ಊಟದಲ್ಲಿ ಅಚ್ಚುಕಟ್ಟು ಅವರ ವಿಶೇಷ ಗುಣವಾಗಿತ್ತು. ಅವರು ಧರಿಸುತ್ತಿದ್ದುದು ಆಂಗ್ಲ ಉಡುಪೇ ಆಗಿದ್ದರೂ ತಲೆಯ ಮೇಲೆ ರುಮಾಲು ಇರುತ್ತಿತ್ತು. ನಿತ್ಯ ಜೀವನದಲ್ಲಿ ಅವರು ಸಂಪ್ರದಾಯಸ್ಥರು, ದೈವಭಕ್ತರು. ಅವರ ಸೌಜನ್ಯ ಮತ್ತು ಶಿಷ್ಟಾಚಾರ ಅಸಾಧಾರಣವಾದದ್ದು. ಔದ್ಯೋಗೀಕರಣವಾಗದಿದ್ದರೆ ನಿರುದ್ಯೋಗ ಸಮಸ್ಯೆಯನ್ನು ಬಿಡಿಸುವಂತಿಲ್ಲ. ದಾರಿ ಹೋಗುವುದಿಲ್ಲ ಎಂದು ಅವರು ಅಧಿಕಾರದಲ್ಲಿದ್ದಾಗ ಕೈಗಾರಿಕೆಗಳಿಗೆ ಆದ್ಯತೆ ಕೊಟ್ಟರು. ದಕ್ಷ ಇಂಜಿನಿಯರ್, ಮುಂದಾಲೋಚನೆಯ ರಾಜತಂತ್ರಜ್ಞ ರಾಷ್ಟ್ರ ಅಭಿವೃದ್ದಿಗಾಗಿ ಸತತ ಶ್ರಮಿಸಿದ ಜೀವಿ, ಶುದ್ಧ ಚೇತನ, ದೇಶಭಕ್ತ ಸರ್.ಎಂ.ವಿ.ಯವರಿಗೆ ಭಾರತ ಸರ್ಕಾರ 1955ರಲ್ಲಿ “ಭಾರತ ರತ್ನ” ಪ್ರಶಸ್ತಿಯನ್ನಿತ್ತು ಗೌರವಿಸಿತು. ನೂರು ಸಾರ್ಥಕ ಹುಟ್ಟುಹಬ್ಬಗಳನ್ನು ಕಂಡ ಆ ಚೇತನದ ನೂರನೆಯ ಹುಟ್ಟುಹಬ್ಬವನ್ನು (1961) ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. 1962ರಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ನಿಧನರಾದರು. ಅವರ ಕೃತಿ “ನನ್ನ ವೃತ್ತಿ ಜೀವನದ ನೆನಪುಗಳು” ಸ್ಫೂರ್ತಿದಾಯಕ ಗ್ರಂಥ.
ಎಂ. ವಿಶ್ವೇಶ್ವರಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಕೆಲವು ಪ್ರಗತಿಪರ ಸುಧಾರಣೆಗಳಿಗೆ ಪ್ರೋತ್ಸಾಹ ನೀಡಿದರು. ಶಿಕ್ಷಣವನ್ನು ಹಲವಾರು ಹಂತಗಳಲ್ಲಿ ಕಡ್ಡಾಯವನ್ನಾಗಿ ಮಾಡಿದರು. ಸ್ತ್ರೀ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು. ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಆರಂಭಿಸಿದರು. ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿ ಮಂಡ್ಯ ಜಿಲ್ಲೆಯ ಒಂದೂವರೆ ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದರು. ರಾಜ್ಯದ ಲೆಜಿಸ್ಟ್ರೇಟಿವ್ ಕೌನ್ಸಿಲ್ ವಿಸ್ತರಿಸಿದರು. ಸರ್ಕಾರದಿಂದ ಸ್ವರಾಜ್ಯ ಸಂಸ್ಥೆಗಳ ಕಾನೂನು ಪಾಸು ಮಾಡಿಸಿದರು. ಮೈಸೂರು ಎಕನಾಮಿಕ್ ಕಾನ್ಫರೆನ್ಸ್ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಎರಡು ನಿಯತಕಾಲಿಕ ಪತ್ರಿಕೆಗಳನ್ನು ಹೊರಡಿಸಿತು.
1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬ್ಯಾಂಕ್ ಸ್ಥಾಪಿಸಿದರು. ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಎಂಬ ಸಂಸ್ಥೆಯನ್ನು ಆರಂಭಿಸಿದರು. ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಉಡ್ಡಿಸ್ಟಿಲೇಶನ್ ಪ್ಲಾಂಟ್, ಮೈಸೂರಿನ ಗಂಧದೆಣ್ಣೆಯ ಕಾರ್ಖಾನೆ, ಬೆಂಗಳೂರಿನ ಸರ್ಕಾರಿ ಸೋಪ್ ಫ್ಯಾಕ್ಟರಿ, ಕರ್ನಾಟಕ ಸಾಹಿತ್ಯ ಪರಿಷತ್ತು, ಸೆಂಚುರಿ ಕ್ಲಬ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯ, ಮೈಸೂರಿನ ಕಾಸ್ರೋಪಾಲಿಟಿನ್ ಕ್ಲಬ್, ಮೈಸೂರಿನಲ್ಲಿ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜು ಇತ್ಯಾದಿ ಸರ್ ಎಂ.ವಿ. ಅವರ ಸಾಧನಾಪಥಕ್ಕೆ ಉದಾಹರಣೆಯಾಗಿವೆ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: