Tuesday, 7 April 2020

ಶಿಕ್ಷಕರ ದಿನಾಚರಣೆ ಪ್ರಬಂಧ Essay on Teachers day in Kannada Language

Essay on Teachers day in Kannada Language: In this article, we are providing ಶಿಕ್ಷಕರ ದಿನಾಚರಣೆ ಪ್ರಬಂಧ and ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಚರಿತ್ರೆ for students and teachers. Students can use this Dr. Sarvapalli Radhakrishnan Biography in Kannada Language / Teachers day kannada essay to complete their homework.

ಶಿಕ್ಷಕರ ದಿನಾಚರಣೆ ಪ್ರಬಂಧ Essay on Teachers day in Kannada Language

ಶಿಕ್ಷಕರ ದಿನಾಚರಣೆ ಪ್ರಬಂಧ Essay on Teachers day in Kannada Language
ರಾಧಾಕೃಷ್ಣನ್ ಒಳ್ಳೆಯ ವಾಗಿ ಶ್ರೇಷ್ಠ ಶಿಕ್ಷಕ, ಅಪರೂಪದ ತತ್ವಜ್ಞಾನಿ. ಈ ಆದರ್ಶ ಶಿಕ್ಷಕನ ಜನ್ಮದಿನವನ್ನು ಭಾರತದಲ್ಲಿ “ಶಿಕ್ಷಕರ ದಿನ” ಎಂದು ಆಚರಿಸಲಾಗುತ್ತಿದೆ. ರಾಧಾಕೃಷ್ಣನ್ 1888 ಸೆಪ್ಟೆಂಬರ್ 5 ರಂದು ಚಿತ್ತೂರು ಜಿಲ್ಲೆಯ ಪವಿತ್ರ ಕ್ಷೇತ್ರ “ತಿರುತನಿ'ಯಲ್ಲಿ ಜನಿಸಿದರು. ಸರ್ವಪಲ್ಲಿ ಇವರ ಮನೆತನದ ಹೆಸರು. ಅವರಿಗೆ ಬಾಲ್ಯದಲ್ಲಿ ಆಟಕ್ಕಿಂತ ದೈವಾರಾಧನೆ, ಅಧ್ಯಾತ್ಮದಲ್ಲಿ ಒಲವು, ಪುಸ್ತಕಗಳೇ ಅವರ ಸಂಗಾತಿ. ಎಂಟು ವರ್ಷ ಕ್ರೈಸ್ತ ಸೇವಾಸಂಘದ ಶಾಲೆಯಲ್ಲಿ, ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಎಂ.ಎ. ಪದವೀಧರರಾದ ಮೇಲೆ ಬೇರೆ ಬೇರೆ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿದರು. ಕಲ್ಕತ್ತ, ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ನಿರ್ವಹಿಸಿದರು. 1931ರಿಂದ 36ರವರೆಗೆ ಆಂಧ್ರ ವಿಶ್ವವಿದ್ಯಾನಿಲಯದಲ್ಲಿ 1939ರಿಂದ 48ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿ, 1953 ರಿಂದ 62ರವರೆಗೆ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಕುಲಪತಿಯಾಗಿ ದಕ್ಷತೆಯಿಂದ ಕೆಲಸ ನಿರ್ವಹಿಸಿದರು.
ರಾಧಾಕೃಷ್ಣನ್‌ರ ಅಪಾರ ಪಾಂಡಿತ್ಯಕ್ಕೆ ಮನ್ನಣೆ ಎಂಬಂತೆ ಅವರನ್ನು ಹಿರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಆಕ್ಸ್‌ಫರ್ಡ್‌ನಲ್ಲಿ ಪೌರಾಸ್ತ್ರ ಧರ್ಮಗಳು ಮತ್ತು ನೀತಿಶಾಸ್ತ್ರದ ಪ್ರಾಧ್ಯಾಪಕರಾಗಿ ನಿಯೋಜಿಸಲಾಯಿತು. 1946ರಿಂದ 1952ರವರೆಗೆ ಯುನೆಸ್ಕೋದಲ್ಲಿ ಭಾರತ ನಿಯೋಗದ ಮುಖಂಡರಾಗಿದ್ದರು. 1949ರಿಂದ 1952ರವರೆಗೆ ಸೋವಿಯತ್ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದರು.
ಭಾರತಕ್ಕೆ ಮರಳಿದಾಗ ಅವರನ್ನು 1952ರಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಲಾಯಿತು. 1962ರ ಮೇ 11 ರಂದು ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾಗಿ ಐದು ವರ್ಷಗಳ ನಂತರ 1967ರಲ್ಲಿ ನಿವೃತ್ತರಾದರು.

ಹಿರಿಯರಿಂದ ಕಿರಿಯರಿಗೆ ಬರಬಹುದಾದ ಹುಟ್ಟಿನ ಹಿರಿಮೆಯನ್ನಾಗಲೀ, ಸಂಪತ್ತಿನ ಸೊಬಗನ್ನಾಗಲೀ ನಾನು ನನ್ನ ಎಳೆತನದಲ್ಲಿ ಕಾಣಲಿಲ್ಲ. ನಾನು ನಾನಾಗಿಯೇ ಬಾಳಿದೆ. ನಾನಾಗಿಯೇ ಬೆಳೆದೆ; ದೇವರ ದಯದಿಂದ ಮಾತ್ರ ಬೆಳಕು ಕಂಡೆ. ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್‌ರು ತಮ್ಮ ಜೀವನದ ಸಾಂಗತ್ಯವನ್ನು ಹೀಗೆ ಹೇಳಿದ್ದಾರೆ.
ತತ್ವಶಾಸ್ತ್ರದ ಪಾಂಡಿತ್ಯದ ಗಣಿ ಎನಿಸಿದ್ದ ರಾಧಾಕೃಷ್ಣನ್ ಭಾರತೀಯ ತತ್ವಶಾಸ್ತ್ರದ ತಿರುಳನ್ನು ಕರಗತ ಮಾಡಿಕೊಂಡಿದ್ದರು. ಅವರಿಗೆ ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿ ಅಗಾಧ ಪರಿಶ್ರಮವಿತ್ತು. ಇಂಗ್ಲಿಷ್ ಭಾಷೆಯಲ್ಲಿ ಪ್ರಭುತ್ವ ಪಡೆದಿದ್ದ ಅವರು ಪೂರ್ವ ಮತ್ತು ಪಶ್ಚಿಮ ದೇಶಗಳ ತತ್ವಶಾಸ್ತ್ರದ ಸಾರವನ್ನು ಸುಂದರವಾಗಿ ನಿರೂಪಣೆ ಮಾಡಿದ್ದಾರೆ. ಹಿಂದೂ ಧರ್ಮವನ್ನು ಜಗತ್ತಿನ ಇತರ ಧರ್ಮಗಳೊಂದಿಗೆ ಹೋಲಿಸಿ ವಿದ್ವತ್ಪೂರ್ಣವೂ, ಸತ್ವಯುತವೂ ಆದ ಭಾಷೆಯಲ್ಲಿ ಆ ಧರ್ಮವನ್ನು, ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಖ್ಯಾತಿ ರಾಧಾಕೃಷ್ಣನ್‌ರದು. 
ಎಸ್. ರಾಧಾಕೃಷ್ಣನ್ ಒಳ್ಳೆಯ ಬರಹಗಾರರು, ಎರಡು ಸಂಪುಟಗಳಲ್ಲಿ “ಭಾರತೀಯ ತತ್ವಜ್ಞಾನ', ಉಪನಿಷತ್ತಿನ ತತ್ವಜ್ಞಾನ, ಆದರ್ಶವಾದಿಯ ಜೀವನದೃಷ್ಟಿ, ಪೌರಸ್ತ್ರ ಧರ್ಮಗಳು ಮತ್ತು ಪಾಶ್ಚಾತ್ಯ ಆಲೋಚನೆ ಇದು ಅವವ ಪ್ರಮುಖ ಕೃತಿಗಳು.

ರಾಧಾಕೃಷ್ಣನ್ ಒಳ್ಳೆಯ ವಾಗಿ ಶ್ರೇಷ್ಠ ಶಿಕ್ಷಕ, ಅಪರೂಪದ ತತ್ವಜ್ಞಾನಿ. ಈ ಆದರ್ಶ ಶಿಕ್ಷಕನ ಜನ್ಮದಿನವನ್ನು ಭಾರತದಲ್ಲಿ “ಶಿಕ್ಷಕರ ದಿನ” ಎಂದು ಆಚರಿಸಲಾಗುತ್ತಿದೆ. 1975 ಏಪ್ರಿಲ್‌ರಂದು ರಾಧಾಕೃಷ್ಣನ್ ನಿಧನಹೊಂದಿದರು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: