Yakshagana Yakshagana Dance Information in Kannada Language: In this article, we are providing ಯಕ್ಷಗಾನದ ಬಗ್ಗೆ ಮಾಹಿತಿ for students and teachers. ಯಕ್ಷಾನ ನಡೆಯುವುದು ಬಯಲಿನಲ್ಲಿ. ಹೀಗಾಗಿ ಇದಕ್ಕೆ 'ಬಯಲಾಟ' ಎಂದು ಹೆಸರಿದೆ. ಬಯಲಾಟ ನಡೆಯುವ ಸ್ಥಳಕ್ಕೆ 'ಶಂಗಸ್ಥಳ' ಎನ್ನುವರು, ನಾಲ್ಕು ಕಂಬಗಳ ಸುಮಾರು 15 ಅಡಿಗಳಷ್ಟು ಚಚೌಕದಲ್ಲಿ ಇದನ್ನು ಸಿದ್ದಪಡಿಸಲಾಗುತ್ತದೆ. Read also : Natural Disasters Essay in Kannada Language ರಂಗಪ್ಪಳದ ಪಕ್ಕದಲ್ಲಿ ಬಣ್ಣ ಹಚ್ಚುವ 'ಚೌಕಿ' ಇರುತ್ತದೆ, ಆಟದ ಪ್ರಾರಂಭಕ್ಕೆ ಮೊದಲು ಭಟರು ವೇಷಭೂಷಣದಿಂದ ಸಾಗುತ್ತಾರೆ, ಬಯಲಾಟದಲ್ಲಿ ಹಾಡುವವರಿಗೆ 'ಭಾಗವತರು' ಎಂದು ಹೆಸರಿದೆ. ಇವರು ಬಯಲಾಟದ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಾರೆ. ನಟರು ಆಡಿ ತೋರಿಸುವ ಕಥಾಭಾಗವನ್ನು 'ಪ್ರಸಂಗ' ಎನ್ನುತ್ತಾರೆ. ಬಯಲಾಟದ ಫಂಡದವರಿಗೆ 'ಮೇಳದವರು' ಎಂದು ಹೆಸರಿದ, ಮೃದಂಗ ಅಥವಾ ಮದ್ದಳ, ಶ್ರುತಿ, ತಾಳ ಮತ್ತು ಚಂಡ-ಇವು ಹಿಮ್ಮೇಳ ವಾದ್ಯಗಳು,
Yakshagana Yakshagana Dance Information in Kannada Language: In this article, we are providing ಯಕ್ಷಗಾನದ ಬಗ್ಗೆ ಮಾಹಿತಿ for students and teachers. Students can use this Yakshagana Dance Information in Kannada Language to complete their homework.
ಯಕ್ಷಗಾನದ ಬಗ್ಗೆ ಮಾಹಿತಿ Yakshagana Dance Information in Kannada Language
1. ಪರಿಚಯ 2. ರಂಗಸ್ಥಳ ಸಿದ್ಧತೆ 3 ಹಿಮ್ಮೇಳ ಮತ್ತು ನಟನೆ 4. ಹಲವಾರು ಪ್ರಸಂಗಗಳು $ ತಾಳಮದ್ದಳೆ
ಯಕ್ಷಾನ ನಡೆಯುವುದು ಬಯಲಿನಲ್ಲಿ. ಹೀಗಾಗಿ ಇದಕ್ಕೆ 'ಬಯಲಾಟ' ಎಂದು ಹೆಸರಿದೆ. ಬಯಲಾಟ ನಡೆಯುವ ಸ್ಥಳಕ್ಕೆ 'ಶಂಗಸ್ಥಳ' ಎನ್ನುವರು, ನಾಲ್ಕು ಕಂಬಗಳ ಸುಮಾರು 15 ಅಡಿಗಳಷ್ಟು ಚಚೌಕದಲ್ಲಿ ಇದನ್ನು ಸಿದ್ದಪಡಿಸಲಾಗುತ್ತದೆ. ತಳಿರುತೋರಣ, ಚಪ್ಪರದಿಂದ ಇದನ್ನು ಅಲಂಕರಿಸಲಾಗುತ್ತದೆ. ಹಿಂದೆ ಕೈದೀಪ, ಗ್ಯಾಸ್ ಲೈಟಿನ ಬೆಳಕಿನಲ್ಲಿ ಆಟ ನಡೆಯುತ್ತಿತ್ತು. ಈಗ ವಿದ್ಯುತ್ ದೀಪಗಳ ಅನುಕೂಲತಯಿದ, ರಂಗಸ್ಥಳದ ಹಿಂಬದಿಯಲ್ಲಿ ಹಿಮ್ಮೇಳದವರಿಗೆ ಕುಳಿತುಕೊಳ್ಳಲು ಏರ್ಪಾಟು ಇರುತ್ತದೆ. ಇದಕ್ಕಾಗಿ 'ಅಡಿಮಂಚ' ಕಟ್ಟಿರುತ್ತಾರೆ, ಇದರ ಬಲಭಾಗದಲ್ಲಿ ನೆಲದ ಮೇಲೆ ಚಂಡ ಬಾರಿಸುವವನು ಕುಳಿತಿರುತ್ತಾನೆ. ಉಳಿದ ಮೂರು ಭಾಗಗಳಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುತ್ತಾರೆ,
ಯಕ್ಷಾನ ನಡೆಯುವುದು ಬಯಲಿನಲ್ಲಿ. ಹೀಗಾಗಿ ಇದಕ್ಕೆ 'ಬಯಲಾಟ' ಎಂದು ಹೆಸರಿದೆ. ಬಯಲಾಟ ನಡೆಯುವ ಸ್ಥಳಕ್ಕೆ 'ಶಂಗಸ್ಥಳ' ಎನ್ನುವರು, ನಾಲ್ಕು ಕಂಬಗಳ ಸುಮಾರು 15 ಅಡಿಗಳಷ್ಟು ಚಚೌಕದಲ್ಲಿ ಇದನ್ನು ಸಿದ್ದಪಡಿಸಲಾಗುತ್ತದೆ. ತಳಿರುತೋರಣ, ಚಪ್ಪರದಿಂದ ಇದನ್ನು ಅಲಂಕರಿಸಲಾಗುತ್ತದೆ. ಹಿಂದೆ ಕೈದೀಪ, ಗ್ಯಾಸ್ ಲೈಟಿನ ಬೆಳಕಿನಲ್ಲಿ ಆಟ ನಡೆಯುತ್ತಿತ್ತು. ಈಗ ವಿದ್ಯುತ್ ದೀಪಗಳ ಅನುಕೂಲತಯಿದ, ರಂಗಸ್ಥಳದ ಹಿಂಬದಿಯಲ್ಲಿ ಹಿಮ್ಮೇಳದವರಿಗೆ ಕುಳಿತುಕೊಳ್ಳಲು ಏರ್ಪಾಟು ಇರುತ್ತದೆ. ಇದಕ್ಕಾಗಿ 'ಅಡಿಮಂಚ' ಕಟ್ಟಿರುತ್ತಾರೆ, ಇದರ ಬಲಭಾಗದಲ್ಲಿ ನೆಲದ ಮೇಲೆ ಚಂಡ ಬಾರಿಸುವವನು ಕುಳಿತಿರುತ್ತಾನೆ. ಉಳಿದ ಮೂರು ಭಾಗಗಳಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುತ್ತಾರೆ,
ರಂಗಪ್ಪಳದ ಪಕ್ಕದಲ್ಲಿ ಬಣ್ಣ ಹಚ್ಚುವ 'ಚೌಕಿ' ಇರುತ್ತದೆ, ಆಟದ ಪ್ರಾರಂಭಕ್ಕೆ ಮೊದಲು ಭಟರು ವೇಷಭೂಷಣದಿಂದ ಸಾಗುತ್ತಾರೆ, ಬಯಲಾಟದಲ್ಲಿ ಹಾಡುವವರಿಗೆ 'ಭಾಗವತರು' ಎಂದು ಹೆಸರಿದೆ. ಇವರು ಬಯಲಾಟದ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಾರೆ. ನಟರು ಆಡಿ ತೋರಿಸುವ ಕಥಾಭಾಗವನ್ನು 'ಪ್ರಸಂಗ' ಎನ್ನುತ್ತಾರೆ. ಬಯಲಾಟದ ಫಂಡದವರಿಗೆ 'ಮೇಳದವರು' ಎಂದು ಹೆಸರಿದ, ಮೃದಂಗ ಅಥವಾ ಮದ್ದಳ, ಶ್ರುತಿ, ತಾಳ ಮತ್ತು ಚಂಡ-ಇವು ಹಿಮ್ಮೇಳ ವಾದ್ಯಗಳು,
ಆಟ ಪ್ರಾರಂಭವಾದ ಕೂಡಲೇ ಕೋಡಂಗಿ ಅಥವಾ ಹನುಮಂತನ ಬಳಗ ಪ್ರವೇಶಿಸುತ್ತಥ, ವಿಚಿತ್ರ ವೇಷಗಳಲ್ಲಿ ಇವರು ಜನರನ್ನು ನಗಿಸುತ್ತಾರೆ. ಇವರ ನಂತರ 'ಬಾಲಗೋಪಾಲ'ರು ಬರುತ್ತಾರೆ. ಒಂದೆರಡು ಗಂಟೆಯ ನಂತರ ಪೂರ್ವರಾಗದ ಅಥವಾ ಸಭಾ ಲಕ್ಷಣದ ಕಾರ್ಯಕ್ರಮವಾದ ಮೇಲೆ ಕಥೆ ಆರಂಭವಾಗುತ್ತದೆ. ವೇಷಧಾರಿಗಳು ತಮ್ಮ ಪಾತ್ರಗಳಿಗೆ ತಕ್ಕಂತೆ ಕುಣಿಯುತ್ತಾರೆ, ಸಂಭಾಷಿಸುತ್ತಾರೆ. ಭಾಗವತರು ಹಾಡಿನ ಮೂಲಕ ಕಥೆಯನ್ನು ಬೆಳೆಸುತ್ತಾರೆ. ಬಯಲಾಟ ಇಡೀ ರಾತ್ರಿ ನಡೆಯುತ್ತದೆ.
ಪಾತ್ರಗಳ ವೇಷಭೂಷಣ ಹಳೆಯ ಸಂಪ್ರದಾಯವು, ವಿವಿಧ ಬಣ್ಣ ಹಚ್ಚಿಕೊಂಡು, ಮರದ ಬೆಂಡಿನ ಆಭರಣಗಳನ್ನು ಧರಿಸಿ, ರಂಗುರಂಗಿನ ಹೊಳೆಯುವ ಸುನೇರಿ ಕಾಗದ ಅಂಟಿಸಿ, ಗಾಜಿನ ತುಂಡು ಹಚ್ಚಿ ಹೊಳಪು ಕೊಡುತ್ತಾರೆ. ರಾಕ್ಷಸ ವೇಷಧಾರಿಗಳು ಕಪ್ಪು, ಕೆಂಪು ಬಣ್ಣ ಹಚ್ಚಿಕೊಂಡು ಅದರ ಮೇಲೆ ಚುಟ್ಟಿಗಳು ಎಂಬ ಅಕ್ಕಿಯ ಹಿಟ್ಟಿನ ರೇಖೆಗಳನ್ನೂ, ಕಾಳುಗಳನ್ನೂ ಬೇರೆ ಬೇರೆ ವಿನ್ಯಾಸದಲ್ಲಿ ಅಂಟಿಸಿಕೊಳ್ಳುತ್ತಾರೆ. ಬಲವಾದ ಕರಿಮೀಸೆ ನೋಡಲು ಭಯಂಕರವಾಗಿಸುತ್ತದೆ. ಕಿರಿಯ ಪ್ರಾಯದ ಪಾತ್ರಗಳಿಗೆ ಚಿಕ್ಕ 'ಕೇದಗೆ ಮುಂದಲೆ' ಕಿರೀಟವಿರುತ್ತದೆ. ಹಿರಿಯ ಪಾತ್ರಗಳಿಗೆ ಭಾರಿ ಆಕಾರದ ಮುಂಡಾಸು' ಕಿರೀಟವಿರುತ್ತದೆ. ರಾಕ್ಷಸ ಪಾತ್ರಗಳಿಗೆ 'ಬಟ್ಟಲು' ಕಿರೀಟ. ಈ ಪಾತ್ರಧಾರಿಗಳೆಲ್ಲರೂ ಕವಚ, ಭುಜಕೀರ್ತಿ, ಖಡ್ಗ, ಬಿಲ್ಲುಬಾಣ ಮುಂತಾದವನ್ನು ಧರಿಸುತ್ತಾರೆ.
ಯಕ್ಷಗಾನ ಆಟದಲ್ಲಿ ಸುಮಾರು 500 ಪ್ರಸಂಗಗಳಿವೆ ಎಂದು ಅಂದಾಜು ಮಾಡಲಾಗಿದೆ. ನೂರರಷ್ಟು ಪ್ರಸಂಗಗಳು ಪುಸ್ತಕ ರೂಪದಲ್ಲಿವೆ. ಕೆಲವೊಂದು ಪ್ರಸಂಗಗಳು ಓಲೆಗರಿ ಮತ್ತು ಕಾಗದದಲ್ಲಿ ಲಿಖಿತ ರೂಪದಲ್ಲಿದೆ. ಮತ್ತೆ ಕೆಲವು ಪರಂಪರೆಯಾಗಿ ಬಂದು ಹಾಡುವವರ ಬಾಯಲ್ಲಿಯೇ ಉಳಿದಿದೆ. ಕೆಲವು ಭಾಗವತರು 30-40 ಪ್ರಸಂಗಗಳನ್ನು ಹಾಡಬಲ್ಲರು.
ಮಳೆಗಾಲದ ಸಮಯದಲ್ಲಿ ಯಕ್ಷಗಾನ ಆಡಲು ಆಡಚಣೆಯಾಗುವುದರಿಂದ 'ತಾಳಮದ್ದಳೆ' ನಡೆಯುತ್ತದೆ. ಉಡುಪಿ, ಧರ್ಮಸ್ಥಳಗಳಲ್ಲಿ ಯಕ್ಷಗಾನ ಕೇಂದ್ರಗಳಿವೆ. ವಿದೇಶಿಯರು ಸಹ ಇದರಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಶಿವರಾಮ ಕಾರಂತರು ಹತ್ತಾರು ವರ್ಷಗಳಿಂದ ಯಕ್ಷಗಾನದಲ್ಲಿ ಸಂಶೋಧನೆಯನ್ನು ನಡೆಸುತ್ತಾ ಬಂದಿದ್ದರು. ಅನೇಕ ಯಕ್ಷಗಾನ ತಂಡಗಳು ವಿದೇಶಗಳ ಪ್ರವಾಸ ಮಾಡಿ ಜಯಭೇರಿ ಹೊಡದಿರುವುದು ಹೆಮ್ಮೆಯ ವಿಷಯವಾಗಿದೆ.
Nice
Delete