Thursday, 26 March 2020

Natural Disasters Essay in Kannada Language, "ಪ್ರಕೃತಿ ವಿಕೋಪಗಳು-ನೈಸರ್ಗಿಕ ಅನಾಹುತಗಳು" , "Prakruthi Vikopa Essay in Kannada

Natural Disasters Essay in Kannada Language: In this article, we are providing ಪ್ರಕೃತಿ ವಿಕೋಪಗಳು-ನೈಸರ್ಗಿಕ ಅನಾಹುತಗಳು for students and teachers. Students can use this Prakruthi Vikopa Essay in Kannada to complete their homework.

Natural Disasters Essay in Kannada Language ಪ್ರಕೃತಿ ವಿಕೋಪಗಳು-ನೈಸರ್ಗಿಕ ಅನಾಹುತಗಳು Prakruthi Vikopa Essay in Kannada

ಪರಿಸರವು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜನೈತಿಕ ಮುಂತಾದ ಅಂಶಗಳನ್ನು ಒಳಗೊಂಡಿದೆ. ಭೌತಿಕ ಮತ್ತು ಜೈವಿಕ ಪರಿಸರಗಳಿವೆ. ಭೌತಿಕ ಪರಿಸರವು ಗಾಳಿ, ನೀರು, ನೆಲ ಮುಂತಾದ ಕೇವಲ ಭೌತಿಕ ಅಂಶಗಳಿಂದ ಕೂಡಿದುದು. ಜೈವಿಕ ಪರಿಸರವು ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳಂಥ ಜೈವಿಕ ಅಂಶಗಳಿಗೆ ಸಂಬಂಧಿಸಿದುದು, ಪರಿಸರವನ್ನು ಸ್ಕೂಲವಾಗಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ಪರಿಸರಗಳೆಂದು ನಿರ್ಮಿಸಬಹುದು. ನೈಸರ್ಗಿಕ ಪರಿಸರಗಳಿಗೆ ಉದಾಹರಣೆ ಸಾಗರ, ನದಿ, ಅರಣ್ಯ, ಮರುಭೂಮಿ, ಬೆಟ್ಟಗುಡ್ಡ, ಪರ್ವತಗಳು, ಮಾನವ ನಿರ್ಮಿತ ಪರಿಸರವೆಂದರೆ ಕೃಷಿಭೂಮಿ, ನಗರಗಳು, ಕೈಗಾರಿಕೆಗಳು ಮುಂತಾದವು. ನೈಸರ್ಗಿಕ ಸಂಪನ್ಮೂಲಗಳ ಪೂರೈಕೆಗಾಗಿ ಮಾನವರು ಪರಿಸರವನ್ನು ಅವಲಂಬಿಸಿದ್ದಾರೆ. ಕೆಲವೊಮ್ಮೆ ನೈಸರ್ಗಿಕ ಪರಿಸರದ ಅನಾಹುತಗಳು ಉಂಟಾಗುತ್ತವೆ. ಅವು ಮಾನವ ಸಮಾಜಕ್ಕೆ ಸಾಕಷ್ಟು ಹಾನಿ, ಜೀವನಾಶ ಹಾಗೂ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಪರಿಸರದ ಅನೇಕ ಸಮಸ್ಯೆಗಳು ಪ್ರಾರಂಭ ಆಗುವುದೇ ಮಾನವರ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಮತ್ತು ಮಾಲಿನ್ಯದ ನಡುವೆ ಉಂಟಾಗುವ ಪರಿವರ್ತನೆಯಲ್ಲಿ ಪರಿಸರ ಎದುರಿಸುತ್ತಿರುವ ಕೆಲವು ಬಿಕ್ಕಟ್ಟುಗಳೆಂದರೆ ಜನಸಂಖ್ಯಾ ಹೆಚ್ಚಳ, ಸಂಪನ್ಮೂಲ ಬಳಕೆ, ಅರಣ್ಯನಾಶ, ಮಣ್ಣಿನ ಸವಕಳಿ ಜಲಮಾಲಿನ್ಯ, ವಾಯುಮಾಲಿನ್ಯ, ಮುಂತಾದವು. ಕೆಲವು ಮೂಲ ನೈಸರ್ಗಿಕ ಅನಾಹುತಗಳೆಂದರೆ ಅಗ್ನಿಪರ್ವತಸ್ಫೋಟ, ಭೂಕಂಪ, ಚಂಡಮಾರುತ, ಹಿಮಪಾತ, ಪ್ರವಾಹ, ಭೂಸವಿತ ಮುಂತಾದವು.
ಹಿಮನಿಪಾತ (Avalanche): ಶಿಲೆ ಅಥವಾ ನೀರ್ಗಲ್ಲುಗಳು ಆಯತಪ್ಪಿ ಪರ್ವತ ಅಥವಾ ಬೆಟ್ಟಗಳ ಮೇಲಿನಿಂದ ಉರುಳುವುದು, ಅತಿರಭಸದಿಂದ ಸುರಿಯುವ ಮಳೆ, ಬಿರುಗಾಳಿಗಳು ಹಿಮನಿಪಾತಕ್ಕೆ ಕಾರಣ.

ಚಕ್ರವಾತ - ಸೈಕ್ಲೋನ್ (Cyclone): ವಾಯುವಿನ ಚಕ್ರಾಕರದ ವಿಶಿಷ್ಟ ಚಲನೆ. ಅಧಿಕ ಒತ್ತಡ ಪ್ರದೇಶದಿಂದ ಗಾಳಿಯು ಕಡಿಮೆ ಒತ್ತಡವಿರುವ ಕೇಂದ್ರದ ಕಡೆ ಅಪ್ರದಕ್ಷಿಣವಾಗಿ ಚಲಿಸುತ್ತದೆ. ಇದೇ ಸೈಕ್ಲೋನ್, ಚಕ್ರವಾತಗಳು ದೊಡ್ಡ ವೃತ್ತದಂತಿರುತ್ತದೆ. ಅವುಗಳ ವ್ಯಾಸ ಸುಮಾರು 800-900 ಕಿ.ಮೀ.ಗಳಿರಬಹುದು. ಚಕ್ರವಾತಗಳು ಗಂಟೆಗೆ 120-200 ಕಿ.ಮೀ. ವೇಗದಲ್ಲಿ ಬೀಸಬಹುದು. ಅವುಗಳ ಪ್ರಾರಂಭಿಕ ವೇಗ ಅಧಿಕವಾಗಿರುತ್ತದೆ. ಚಲಿಸಿದಂತೆ ಅವುಗಳ ವೇಗ ಕಡಿಮೆಯಾಗುತ್ತದೆ. ಚಕ್ರವಾತಗಳು ಸ್ವಾಭಾವಿಕ ವಿಪತ್ತುಗಳು. ಇವುಗಳಿಂದ ಅತಿವೃಷ್ಟಿ ಪ್ರಾಣಹಾನಿ, ಆಸ್ತಿಪಾಸ್ತಿಗಳ ನಷ್ಟ ಉಂಟಾಗಬಹುದು.
ಸುನಾಮಿ (Tsunami): ಜಲಾಂತರ್ಗತ ಭೂಕಂಪ, ಜ್ವಾಲಾಮುಖಿ ಸ್ಫೋಟ ಅಥವಾ ಸಾಗರ ತಳದ ಚಿಪ್ಪಿನ ಚಲನೆಯಿಂದ ಸುನಾಮಿಗಳು ಸೃಷ್ಟಿಯಾಗುತ್ತವೆ. ಇವು ಸಾಗರದಲ್ಲಿ ಗಂಟೆಗೆ 700 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಸುನಾಮಿ ಎನ್ನುವುದು ಜಪಾನೀ ಪದ. 'ಬಂದರು ಅಲೆ' ಎಂದು ಇದರ ಅರ್ಥ.
ಭೂಕಂಪ (Earthquake): ಭೂಚಿಪ್ಪಿನಲ್ಲಿ ಕಾಲಾಂತರದಲ್ಲಿ ಶೇಖರವಾದ ಒತ್ತಡವು ಒಮ್ಮೆಲೇ ಬಿಡುಗಡೆಯಾಗಿ ಭೂಫಲಕಗಳು ಇದ್ದಕ್ಕಿದ್ದಂತೆ ಚಲಿಸಿದಾಗ ಉಂಟಾಗುವ ಕಂಪನಗಳೇ ಭೂಕಂಪನ, ಭೂಕಂಪದ ಅಲೆಗಳು ಭೂಮಿಯ ವಿವಿಧ ಪದರುಗಳ ಮೂಲಕ ಪ್ರವಹಿಸಿ, ಭೂಗರ್ಭವನ್ನೂ ತೂರಿಕೊಂಡು ಹೊರಬರುತ್ತವೆ. ಭೂಕುಸಿತ, ಜ್ವಾಲಾಮುಖಿನ್ನೋಟ, ಜಲಾಶಯಗಳಲ್ಲಿ ಅಧಿಕ ನೀರಿನ ಶೇಖರಣೆಯಿಂದ, ದುರ್ಬಲ ಸ್ಥಳಗಳಲ್ಲಿ ಬೀಳುವ ಅಧಿಕ ಒತ್ತಡ, ಗಣಿಗಾರಿಕೆ, ಪರ್ವತಗಳಲ್ಲಿ ಶಿಲೆಗಳು ಸರಿಯುವುದು ಇತ್ಯಾದಿಗಳು ಭೂಕಂಪಕ್ಕೆ ಕಾರಣಗಳು. ಭೂಕಂಪಗಳ ತೀವ್ರತೆಯನ್ನು ಅಳೆಯುವ ಉಪಕರಣವನ್ನು ಭೂಕಂಪಮಾಪಕ (Seismometer) ಎನ್ನುತ್ತಾರೆ. ತೀವ್ರತೆಯನ್ನು ರಿಕ್ಟರ್‌ಮಾನದಲ್ಲಿ ಗುರುತಿಸುತ್ತಾರೆ.

ಪ್ರವಾಹ, ನೆರೆ (Flood): ಭಾರಿಮಳೆ, ಅಥವಾ ಹಿಮಪಾತದಿಂದಾಗಿ ಜಲಾನಯನ ಪ್ರದೇಶಗಳಿಂದ ಹರಿದ ನೀರು, ನದಿ ಸರೋವರಗಳನ್ನು ಸೇರಿ, ಅಲ್ಲಿನ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ದಂಡೆಯ ಮೇಲೇರಿ ಭೂಮಿಯನ್ನು ಆಕ್ರಮಿಸುವಿಕೆಯೇ ಪ್ರವಾಹ, ಪ್ರವಾಹ ಉಂಟಾಗಲು ಪ್ರಮುಖ ಕಾರಣಗಳೆಂದರೆ ವಾಯುಗುಣ ವಿಪರೀತಗಳು, ಭಾರಿಮಳ, ಭಾರಿ ಪ್ರಮಾಣದಲ್ಲಿ ಕರಗುವ ಹಿಮ, ಅಣೆಕಟ್ಟುಗಳ ಕುಸಿತ, ಭೂಕುಸಿತ, ಭಾರೀ ಪ್ರಮಾಣದ ಅರಣ್ಯನಾಶ. ಈ ನೆರೆಹಾವಳಿಯು ಪ್ರಪಂಚದಾದ್ಯಂತ ಲಕ್ಷಲಕ್ಷ ಜನರನ್ನು ಬಲಿತೆಗೆದುಕೊಂಡಿದೆ. ಹಲವಾರು ಲಕ್ಷ ಹೆಕ್ಟೇರುಗಳ ಪಸಲು ನಾಶಮಾಡಿದೆ. ಜನರ ಆಸ್ತಿಪಾಸ್ತಿ ನಾಶವಾಗಿದೆ.
ಚಂಡಮಾರುತ, ಹರಿಕೇನ್ (Hurricane): ಉಷ್ಣವಲಯದ ಪ್ರದೇಶಗಳಲ್ಲಿ ಬೀಸುವ ತೀವ್ರವಾದ ಬಿರುಗಾಳಿ, ಸಾಮಾನ್ಯವಾಗಿ ಕೆರೇಬಿಯನ್ ಪ್ರದೇಶ ಮತ್ತು ಆಸ್ಟ್ರೇಲಿಯಾದ ಈಶಾನ್ಯದ ಕರಾವಳಿಯಲ್ಲಿ ಬೀಸುವ ಚಕ್ರವಾತಗಳನ್ನು 'ಚಂಡಮಾರುತ ಎನ್ನಲಾಗುವುದು. ಇದರ ವೇಗ ಘಂಟೆಗೆ 10Q-120ಕಿ.ಮೀ. ಇರುತ್ತದೆ.

ಬಿಸಿ ಬಿರುಗಾಳಿ (Hot Stom): ವರ್ಷಮಾರುತ, ಚಂಡಮಾರುತ ಮುಂತಾದುವುಗಳಿಗೆ ಸಾಮಾನ್ಯವಾಗಿ ಬಳಸುವ ಪದ ಬಿರುಗಾಳಿ, ವಾತಾವರಣದ ಇಳಿ ಒತ್ತಡ ಪ್ರದೇಶಗಳಲ್ಲಿ ಬಿರುಗಾಳಿ ಬೀಸುತ್ತದೆ. ಸೆಕೆಂಡಿಗೆ 20 ಮೀಟರ್‌ಗಳಿಗಿಂತ ವೇಗವಾಗಿ ಬೀಸುವ ಬಿರುಗಾಳಿ ಕೆಲವೊಮ್ಮೆ ಮಳೆಯನ್ನು ತರುತ್ತದೆ. ಬಿಸಿಬಿರುಗಾಳಿ ತುಂಬಾ ಅಪರೂಪ. ಆಗ ಉಷ್ಣತೆ 40-60°Cಗಳಷ್ಟಿರಬಹುದು. ಅದರಿಂದ ಪ್ರಾಣಹಾನಿ ಆಗಬಹುದು.

ಕಾಡಿಚ್ಚು ಕಾಳಿಚ್ಚು (Wildfire): ಅರಣ್ಯಗಳಲ್ಲಿ ನೈಸರ್ಗಿಕವಾಗಿ ಅಥವಾ ಮಾನವ ಚಟುವಟಿಕೆಯಿಂದ ಹರಡುವ ಬೆಂಕಿಯೇ ಕಾಳಿಚ್ಚು. ಕಾಳಿಚ್ಚಿನ ಮುಖ್ಯ ನೈಸರ್ಗಿಕ ಮೂಲಗಳೆಂದರೆ ಮಿಂಚು, ಸಿಡಿಲು, ಅರಣ್ಯನಾಶ, ಹಲವಾರು ರೀತಿಯಿಂದ ಮಾನವ ಸಮಾಜಕ್ಕೆ ಕಂಟಕಪ್ರಾಯ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: