History of Hampi in Kannada Language: In this article, we are providing ಹಂಪೆಯ ದೇವಾಲಯಗಳು ಇತಿಹಾಸ for students and teachers. ಹಂಪೆಯ ಸುಂದರ ದೇವಾಲಯಗಳಲ್ಲಿ ಪ್ರಮುಖವಾದದ್ದು ವಿಠಲರಾಯ ಗುಡಿ. ಕೃಷ್ಣನ ಗುಡಿ, ವಿರೂಪಾಕ್ಷ ಗುಡಿ, ಅಚ್ಚುತರಾಯ ದೇವಾಲಯ, ಪಟ್ಟಾಭಿರಾಮ ಗುಡಿ, ಗಾಣಗಿತ್ತಿ ಜಿನಾಲಯ, ಬಂಡೆಯ ಮೇಲೆ ಕಟ್ಟಿರುವ ಹೇಮಕೂಟದ ಗುಡಿಗಳ ಸಮೂಹ, ನದಿಯ ಬಳಿ ಬೆಟ್ಟದ ಇಳಿಜಾರಿನಲ್ಲಿರುವ ವೈಷ್ಣವ ದೇವಾಲಯಗಳ ಸಮೂಹ ಮುಂತಾದವು. Read also : Essay on Srirangapatna in Kannada, Essay on Mysore in Kannada, Essay on Bengaluru in Kannada.
History of Hampi in Kannada Language: In this article, we are providing ಹಂಪೆಯ ದೇವಾಲಯಗಳು ಇತಿಹಾಸ for students and teachers. Students can use this History of Hampi in Kannada Language to complete their homework.
ಹಂಪೆಯ ದೇವಾಲಯಗಳು ಇತಿಹಾಸ History of Hampi in Kannada Language
ಹಂಪೆಯ ಸುಂದರ ದೇವಾಲಯಗಳಲ್ಲಿ ಪ್ರಮುಖವಾದದ್ದು ವಿಠಲರಾಯ ಗುಡಿ. ಕೃಷ್ಣನ ಗುಡಿ, ವಿರೂಪಾಕ್ಷ ಗುಡಿ, ಅಚ್ಚುತರಾಯ ದೇವಾಲಯ, ಪಟ್ಟಾಭಿರಾಮ ಗುಡಿ, ಗಾಣಗಿತ್ತಿ ಜಿನಾಲಯ, ಬಂಡೆಯ ಮೇಲೆ ಕಟ್ಟಿರುವ ಹೇಮಕೂಟದ ಗುಡಿಗಳ ಸಮೂಹ, ನದಿಯ ಬಳಿ ಬೆಟ್ಟದ ಇಳಿಜಾರಿನಲ್ಲಿರುವ ವೈಷ್ಣವ ದೇವಾಲಯಗಳ ಸಮೂಹ ಮುಂತಾದವು.
ವಿಜಯನಗರದ ದೇವಾಲಯಗಳು ಬೆಣಚುಕಲ್ಲು ಚಪ್ಪಡಿಗಳ ಕಟ್ಟಡ ರಚನೆ, ವಾಸ್ತುಶಿಲ್ಪಕ್ಕೆ ಮಾದರಿಗಳಾಗಿವೆ. ಇಲ್ಲಿಯ ದೇವಾಲಯಗಳಲ್ಲಿ ಹಂಪೆ ಬಜಾರಿನ ಉತ್ತರದ ಕೊನೆಯಲ್ಲಿರುವ "ವಿರೂಪಾಕ್ಷ ದೇವಾಲಯ” ಪ್ರಸಿದ್ಧವಾದುದು. ಇದಕ್ಕೆ "ಪಂಪಾವತಿ ದೇವಾಲಯ' ಎಂಬ ಹೆಸರೂ ಇದೆ. ವಿರೂಪಾಕ್ಷ ವಿಜಯನಗರ ಅರಸರ ಕುಲದೈವ. ಬಲ್ಲಾಳನ ಕಾಲದಲ್ಲಿ 11ನೆಯ ಶತಮಾನದಲ್ಲಿ ಮೂಲಗುಡಿ ಪ್ರಾರಂಭವಾಗಿ 16ನೇ ಶತಮಾನದ ಹೊತ್ತಿಗೆ ಹಲವಾರು ಸೇರ್ಪಡೆಗಳೊಂದಿಗೆ ಬೃಹತ್ ದೇವಾಲಯವಾಗಿ ವೃದ್ಧಿಗೊಂಡಿತು. ಈ ದೇವಾಲಯ ಶಿವ, ಪಂಪಾಪತಿ, ಭುವನೇಶ್ವರಿಯ ಗುಡಿಗಳನ್ನು ಹೊಂದಿದೆ. ದೇವಾಲಯದ ಗರ್ಭಗುಡಿಯಲ್ಲಿರುವುದು ಶಿವಲಿಂಗ, ವಿರೂಪಾಕ್ಷನ ಹಿಂದಿನ ಪ್ರಾಕಾರದಲ್ಲಿ ಶ್ರೀ ವಿದ್ಯಾರಣ್ಯರ ಚಿಕ್ಕ ಗುಡಿ ಇದೆ.
ಹಂಪೆಯ ಬಳಿ ಕೋಟೆಯ ಭಾಗದಲ್ಲಿರುವ ಹಲವಾರು ದೇವಾಲಯಗಳಲ್ಲಿ 'ಹಜಾರ ರಾಮಸ್ವಾಮಿ ದೇವಾಲಯ' ಮುಖ್ಯವಾದುದು. ಇದು ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿತವಾದ ದೇವಾಲಯ ಎನ್ನಲಾಗಿದೆ. ದೇವಾಲಯದ ಆವರಣದಲ್ಲಿ ಕಲ್ಯಾಣಮಂಟಪ ಮೊದಲಾದ ಇತರ ಕಟ್ಟಡಗಳಿವೆ. ಇದು ಕಂಬಗಳಿಂದ ಕೂಡಿದ್ದು ಸುಂದರವಾಗಿದೆ. ಇದನ್ನು ದಾಟಿದರೆ ಮಧ್ಯೆ ಕಪ್ಪುಕಲ್ಲಿನ ದೊಡ್ಡ ಕಂಬಗಳಿಂದ ಕೂಡಿ ಚೌಕಾಕೃತಿಯ ಹಜಾರವನ್ನು ನಿರ್ಮಿಸಿದ ರಂಗಮಂಟಪವಿದೆ. ಕಂಬಗಳು ಕೆತ್ತನೆ ಕೆಲಸದಿಂದ ಅಲಂಕೃತವಾಗಿವೆ. ಅಂಗಳದಲ್ಲಿ ನಿಂತು ನೋಡಿದರೆ ದೇವಾಲಯದ ವಿಮಾನ, ಗಂಭೀರವೂ ಆಕರ್ಷಕವಾಗಿಯೂ ಕಾಣುತ್ತದೆ. ವಿಜಯನಗರದ ಸಾಮ್ರಾಟರ ವರಾಹ ಲಾಂಛನವನ್ನು ವರಾಹ ಗುಡಿಯ ಗೋಡೆಯ ಮೇಲೆ ಕೆತ್ತಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ಆನೆಗಳು, ಕುದುರೆಗಳು, ಬಂಡಿಗಳು ಮತ್ತು ಅದರ ಮೇಲೆ ಕಾಲಾಳುಗಳಿರುವ ಚಿತ್ರಪಟ್ಟಿಕೆಗಳೂ ಇವೆ. ಈ ಸಾಲುಗಳಾದ ಮೇಲೆ ನೃತ್ಯದ ವಿವಿಧ ಭಂಗಿಗಳಲ್ಲಿರುವ ಸ್ತ್ರೀಯರ ವಿಗ್ರಹಗಳಿವೆ. ರಾಮಾಯಣ, ಮಹಾಭಾರತಗಳ ಕೆಲವು ದೃಶ್ಯಗಳು, ಸುಬ್ರಹ್ಮಣ್ಯ, ಗಣೇಶ ಮೊದಲಾದ ಶಿಲ್ಪಗಳು ಗೋಡೆಗಳನ್ನು ಅಲಂಕರಿಸಿವೆ.
ಇಲ್ಲಿಯ ಇನ್ನೊಂದು ಪ್ರಮುಖ ದೇವಾಲಯಗಳೆಂದರೆ 'ವಿಜಯವಿಠಲ ಸ್ವಾಮಿ ದೇವಾಲಯ”. ಈ ದೇವಾಲಯದ ಸುತ್ತಮುತ್ತ ಸು. 23 ಶಾಸನಗಳು ದೊರೆತಿವೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಸುಮಾರು 500 ಅಡಿ ಉದ್ದ, 310 ಅಡಿ ಅಗಲದ ಅಂಗಳದ ಮಧ್ಯೆ ಇದೆ. ಈ ಅಂಗಳದ ಸುತ್ತ ಮೂರು ಸಾಲು ಕಂಬಗಳಿಂದ ಕೂಡಿದ ಮಂಟಪದ ಸಾಲುಗಳಿವೆ. ಮುಖ್ಯ ದೇವಾಲಯದ ಮುಂದೆ ಮತ್ತು ಪಕ್ಕದಲ್ಲಿ ಅನೇಕ ಮಂಟಪಗಳಿವೆ. ಮುಂಭಾಗದ ಮಂಟಪದ ಪಕ್ಕದಲ್ಲಿ ಸುಂದರವಾದ ಕಲ್ಲಿನ ರಥವಿದೆ. ಮುಂದೆ ನದಿತೀರದಲ್ಲಿ ಕೋದಂಡರಾಮ, ಸೂರ್ಯನಾರಾಯಣ, ಮಂತ್ರೋದ್ದಾರಕ ಪ್ರಾಣದೇವರು ಮೊದಲಾದ ಗುಡಿಗಳಿವೆ. ಪ್ರಾಣದೇವರ ಗುಡಿಯನ್ನು ಪ್ರತಿಷ್ಠೆ ಮಾಡಿದವರು ವ್ಯಾಸರಾಯರು ಎನ್ನಲಾಗಿದೆ. ಇವುಗಳಲ್ಲದೆ ರಂಗನಾಥ, ವರಾಹ, ಅನಂತಶಯನ ಗುಡಿಗಳೂ ಇವೆ. ಇಲ್ಲಿಯ ವಿಗ್ರಹಗಳು ಸುಂದರವಾಗಿವೆ.
ಇಲ್ಲಿಯ ಇನ್ನೊಂದು ಭವ್ಯವಾದ ದೇವಾಲಯ 'ಅಚ್ಯುತರಾಯನ ಗುಡಿ'. ಕ್ರಿ.ಶ. 1539ರಲ್ಲಿ ಅಚ್ಯುತರಾಯ ಕಟ್ಟಿಸಿದ್ದೆಂದು ತಿಳಿದುಬಂದಿದೆ. ಮಂಟಪಗಳು, ಪಡಸಾಲೆಗಳು ವಿಸ್ತಾರವಾಗಿವೆ. ಅಲ್ಲಿಯ ಕಂಬಗಳ ಮೇಲೆ, ಗೋಡೆಗಳ ಮೇಲೆ ಕೃಷ್ಣನ ಲೀಲೆಗಳ ಕೆತ್ತನೆ ಇದೆ. ದಾರಿಯುದ್ದಕ್ಕೂ ಸಾಲು ಮಂಟಪಗಳಿವೆ. ನದಿಯ ದಡದಲ್ಲಿ ಪುರಂದರ ಮಂಟಪವಿದೆ. ಇಲ್ಲಿ ದಾಸರು ಸ್ನಾನ, ಜಪ, ತಪ ಮಾಡುತ್ತಿದ್ದರು ಎನ್ನಲಾಗಿದೆ. ಅನಂತರ ಕೃಷ್ಣದೇವರಾಯನ ಎತ್ತರದ ತುಲಾಭಾರ ಮಂಟಪವಿದೆ. ರಾಜ ತನ್ನ ತೂಕದ ಚಿನ್ನವನ್ನು ಇಲ್ಲಿ ತೂಕ ಮಾಡಿ ದಾನ ಮಾಡುತ್ತಿದ್ದುದಾಗಿ ಪ್ರತೀತಿ. ಹೇಮಕೂಟದಿಂದ ಬರುವ ದಾರಿಯಲ್ಲಿ ಕೃಷ್ಣಸ್ವಾಮಿ ದೇವಾಲಯವಿದೆ. ಇದು ಮಂಟಪ ಮತ್ತು ಪಡಸಾಲೆಗಳಿಂದ ಆಕರ್ಷಕವಾಗಿದೆ. ಕೃಷ್ಣದೇವರಾಯ ಕ್ರಿ.ಶ. 1514ರಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದನು ಎನ್ನಲಾಗಿದೆ. ಆದರೆ ಈಗ ಕೃಷ್ಣನ ಮೂಲವಿಗ್ರಹ ಇಲ್ಲಿ ಇಲ್ಲ. ಈ ದೇವಾಲಯಗಳು ಹಂಪೆಯ ಶಿಲ್ಪವೈವಿಧ್ಯದಲ್ಲಿ ವಿಜಯನಗರ ಸಾಮ್ರಾಜ್ಯದ ಘನತೆಯನ್ನು ಸಾರುವಲ್ಲಿ ಇಂದಿಗೂ ಸಾಕ್ಷಿಗಳಾಗಿ ನಿಂತಿವೆ ಅನ್ನುವುದರಲ್ಲಿ ಸಂದೇಹವಿಲ್ಲ.
COMMENTS