Tuesday, 10 March 2020

ನಮ್ಮ ರಾಷ್ಟ್ರೀಯ ಹಬ್ಬಗಳ ಮೇಲೆ ಪ್ರಬಂಧ Essay on our national festivals in Kannada Language

Essay on our national festivals in Kannada Language: In this article, we are providing ನಮ್ಮ ರಾಷ್ಟ್ರೀಯ ಹಬ್ಬಗಳ ಮೇಲೆ ಪ್ರಬಂಧ for students and teachers. Students can use this Essay on our national festivals in Kannada Language to complete their homework.

ನಮ್ಮ ರಾಷ್ಟ್ರೀಯ ಹಬ್ಬಗಳ ಮೇಲೆ ಪ್ರಬಂಧ Essay on our national festivals in Kannada Language

1. ಹಬ್ಬದ ಮಹತ್ವ 2. ಜಾತಿಮತಗಳಿಗೆ ಹೊರತು 3. ರಾಷ್ಟ್ರೀಯ ಭಾವನೆ 4.ದೇಶಪ್ರೇಮ 5. ಉಪಸಂಹಾರ

'ಹಬ್ಬ'ವೆಂದರೆ ಸಾಕು, ಏನೋ, ಸಂಭ್ರಮ, ಸಡಗರ. ಹಬ್ಬಗಳು ಸಾಮಾಜಿಕವಾಗಿಯೂ ಧಾರ್ಮಿಕವಾಗಿಯೂ ಮೂಡಿಬಂದವುಗಳು. ಹುಟ್ಟಿದ ಹಬ್ಬ, ಮದುವೆಯಾದ ದಿನದ ಸ್ಮರಣೆ, ಮೊದಲಾದವು ಪ್ರತಿ ಮನೆಯಲ್ಲಿಯೂ ಸ್ವತಂತ್ರವಾಗಿ ನಡೆಯುತ್ತವೆ. ಆ ದಿನ ಬಂಧುಮಿತ್ರರನ್ನು ಕರೆದು ಸತ್ಕರಿಸುತ್ತಾರೆ. ಧಾರ್ಮಿಕ ಹಬ್ಬಗಳು ಆಯಾ ಮತೀಯರೆಲ್ಲಾ ಆಚರಿಸುವಂಥವು. ಹಿಂದೂಗಳು ಯುಗಾದಿ, ಸಂಕ್ರಾಂತಿ, ಗೌರಿಗಣೇಶ, ದೀಪಾವಳಿ, ನವರಾತ್ರಿ, ಶಿವರಾತ್ರಿ ಮೊದಲಾದವುಗಳನ್ನು ಆಚರಿಸುತ್ತಾರೆ. ಮುಸ್ಲಿಮರು ರಂಜಾನ್, ಮೊಹರಂ, ಬಕ್ರೀದ್ ಮೊದಲಾದವುಗಳನ್ನು ಆಚರಿಸುತ್ತಾರೆ. ಕ್ರೈಸ್ತರು ಕ್ರಿಸ್‌ಮಸ್, ಬೂದಿ ಬುಧವಾರ, ಶುಭ ಶುಕ್ರವಾರ ಮೊದಲಾದ ಹಬ್ಬಗಳನ್ನು ಆಚರಿಸುತ್ತಾರೆ.
ಆದರೆ ಇಡೀ ರಾಷ್ಟ್ರದ ಪ್ರಜೆಗಳೆಲ್ಲರೂ ಜಾತಿಮತಗಳ ಭೇದವಿಲ್ಲದೆ ಆಚರಿಸುವ ಕೆಲವು ಹಬ್ಬಗಳೂ ಉತ್ಸವಗಳೂ ಇವೆ. ಇವು ರಾಷ್ಟ್ರೀಯ ಹಬ್ಬಗಳು. ಇವುಗಳು ಸರ್ಕಾರ ಘೋಷಿಸಿರುವ ಹಬ್ಬಗಳು, ಇವು ಯಾವುದಾದರೊಂದು ಜಾತಿ ಅಥವಾ ಮತಕ್ಕೆ ಮೀಸಲಲ್ಲ. ರಾಷ್ಟ್ರದ ಎಲ್ಲ ಪ್ರಜೆಗಳೂ ಸೇರಿ ಆಚರಿಸಬೇಕಾದವುಗಳು. ಇವುಗಳಿಗೆ ಧಾರ್ಮಿಕ ಹಿನ್ನೆಲೆ ಇಲ್ಲ. ಆದರೆ ರಾಜಕೀಯ ಮತ್ತು ಚಾರಿತ್ರಿಕ ಹಿನ್ನೆಲೆ ಇರುತ್ತದೆ. * ಜನವರಿ 26 ರಂದು ಬರುವ ರಾಷ್ಟ್ರೀಯ ಹಬ್ಬ 'ರಿಪಬ್ಲಿಕ್ ಡೇ' ಅಥವಾ “ಗಣರಾಜ್ಯ ದಿನಚಾರಣೆ”. ಭಾರತ ದೇಶವು ಸ್ವತಂತ್ರವಾದ ಮೇಲೆ ತನ್ನದೇ ಆದ ರಾಜ್ಯಾಂಗ ನಿಯಮಗಳನ್ನು ರಚಿಸಿಕೊಂಡಿತು. ಮತ್ತು ಅದೇ ದಿನ ಜಾರಿಗೆ ತಂದಿತು. ಭಾರತ ದೇಶವು 'ಸರ್ವತಂತ್ರ ಸ್ವತಂತ್ರ ರಾಷ್ಟ'ವೆಂದು ಘೋಷಿಸಿದ ದಿನ ಅದು. ಅಂದಿನಿಂದ ನಮ್ಮದೇ ರಾಜ್ಯಾಂಗದಂತೆ-ಯಾರ ಅಪ್ಪಣೆಗೂ ಕಾಯದೆ-ನಾವು ರಾಜ್ಯಭಾರ ಆರಂಭಿಸಿದವು. ಇದಕ್ಕೆ ಚಾರಿತ್ರಿಕ ಹಿನ್ನೆಲೆ ಇದೆ. ಭಾರತೀಯರು ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭಿಸಿದಾಗ, ಬ್ರಿಟಿಷರ ರಕ್ಷಣೆಯಲ್ಲಿ ನಮ್ಮದೇ ಆದ ಸರಕಾರವಿದ್ದರೆ ಸಾಕು ಎಂದು ನೆಹರೂ ಮೊದಲಾದ ನಾಯಕರು ಅಪೇಕ್ಷೆಪಟ್ಟಿದ್ದರು. ಹಲವಾರು ಯುವನಾಯಕರು ಇದಕ್ಕೆ ಒಪ್ಪಲಿಲ್ಲ. ಲೋಕಮಾನ್ಯ ತಿಲಕರು ಹೇಳಿದಂತೆ 'ಸರ್ವಸ್ವತಂತ್ರ ಭಾರತವನ್ನು ಅಪೇಕ್ಷಿಸಿದರು. ಅದರಂತೆ ಜವಾಹರಲಾಲರ ನೇತೃತ್ವದಲ್ಲಿ 'ಗಣರಾಜ್ಯ ದಿನ' ಘೋಷಣೆ ಮಾಡಿ, ಇಂಗ್ಲಿಷ್‌ರಿಂದ ಪೂರ್ಣ ಮುಕ್ತರಾಗಲು ಬಯಸಿದರು. ಇದರ ಹಿನ್ನೆಲೆಯಲ್ಲಿ ಜನವರಿ26 ಗಣರಾಜ್ಯ ದಿನವಾಯಿತು.
1947 ಆಗಸ್ಟ್ 15ರಂದು ಭಾರತ ದೇಶವು ಸ್ವತಂತ್ರವಾಯಿತು. ಆ ದಿನ ಇಂಗ್ಲಿಷರು ರಾಜ್ಯಭಾರದ ಹೊಣೆಯನ್ನು ಭಾರತೀಯ ನಾಯಕರಿಗೆ ಒಪ್ಪಿಸಿದರು. ಅಂದಿನಿಂದ ಆಗಸ್ಟ್ 15 'ಸ್ವಾತಂತ್ರ್ಯ ದಿನ' ಆಯಿತು. ಇದಕ್ಕೂ ಇತಿಹಾಸದ ಹಿನ್ನೆಲೆಯುಂಟು. ಸ್ವಾತಂತ್ರ್ಯಕ್ಕಾಗಿ ಮೊದಲು ಭಾರತೀಯರನ್ನು ಹುರಿದುಂಬಿಸಿದವರು ಅರವಿಂದ ಘೋಷರು. ಅವರು ತೋರಿದ ದಾರಿಯಲ್ಲಿ ಮಹಾತ್ಮಗಾಂಧೀಜಿ ಸ್ವಾತಂತ್ರ್ಯ ಹೋರಾಟ ಮುಂದುವರಿಸಿದರು. ಅದಕ್ಕೆ ಅಹಿಂಸಾತ್ಮಕ ರೂಪ ಕೊಟ್ಟರು. ಅದರಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಅರವಿಂದ ಘೋಷರು ಹುಟ್ಟಿದ್ದು 1827 ಆಗಸ್ಟ್ 15 ರಂದು. ಅವರ ಜ್ಞಾಪಕಾರ್ಥವಾಗಿ ಆಗಸ್ಟ್ 15 ರಂದು 'ಸ್ವಾತಂತ್ರ್ಯ ದಿನ'ವೆಂದು ಘೋಷಿಸಲಾಯಿತು.

ಅಕ್ಟೋಬರ್ 2 ರಂದು ಮಹಾತ್ಮಾಗಾಂಧೀಜಿಯ ಜನ್ಮದಿನದ ಜಯಂತಿ. ಅದು ರಾಷ್ಟ್ರೀಯ ಹಬ್ಬವಾದುದು ಮಹಾತ್ಮರ ಜ್ಞಾಪಕಾರ್ಥವಾಗಿ
ರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್‌ರವರ ಜನ್ಮದಿನವಾದ ಸಪ್ಟೆಂಬರ್ 5 'ಉಪಾಧ್ಯಾಯರ ದಿನ'ವೆಂದು ಆಚರಿಸಲ್ಪಡುತ್ತಿದೆ. ರಾಧಾಕೃಷ್ಣನ್‌ರವರೂ ಅಧ್ಯಾಪಕರಾಗಿದ್ದುದೇ ಇದಕ್ಕೆ ಕಾರಣ, ಜವಾಹರಲಾರರ ಜನ್ಮದಿನ ನವೆಂಬರ್ 14 ಮಕ್ಕಳ ದಿನ'ವೆಂದು ಆಚರಿಸಲ್ಪಡುತ್ತಿದೆ. ಈ ಹಬ್ಬದ ಆಚರಣೆ ಜವಾಹರರಿಗೆ ಮಕ್ಕಳಲ್ಲಿದ್ದ ಪ್ರೀತಿಯ ದ್ಯೋತಕ. ಇವರಲ್ಲದೆ ಇನ್ನೂ ಅನೇಕ ರಾಷ್ಟ್ರನಾಯಕರ ದಿನಾಚರಣೆಗಳುಂಟು. ರಾಷ್ಟ್ರೀಯ ಹಬ್ಬಗಳನ್ನು ಎಲ್ಲ ರಾಷ್ಟ್ರಗಳೂ ನಿಗದಿಯಾದ ದಿನಾಂಕಗಳಂದು ಆಚರಿಸುತ್ತವೆ. ಧಾರ್ಮಿಕ ಹಬ್ಬಗಳಿಗಿಂತ ಹೆಚ್ಚು ವೈಭವದಿಂದ ನಾವು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

9 comments: