Tuesday, 10 March 2020

ಆಕಾಶವಾಣಿ ಪ್ರಬಂಧ Essay on Akashvani in Kannada Language

Essay on Akashvani in Kannada Language: In this article, we are providing ಆಕಾಶವಾಣಿ ಪ್ರಬಂಧ for students and teachers. Students can use this Essay on Akashvani in Kannada Language to complete their homework.

ಆಕಾಶವಾಣಿ ಪ್ರಬಂಧ Essay on Akashvani in Kannada Language

1. ಆಕಾಶವಾಣಿ ಕೇಂದ್ರಗಳು 2. ಆಕರ್ಷಕ ಕಾರ್ಯಕ್ರಮಗಳು 3. ಕರ್ಣಾಟಕದಲ್ಲಿ ಆಕಾಶವಾಣಿ 4. ಖಾಸಗಿ ಆಕಾಶವಾಣಿ 5. ಉಪಸಂಹಾರ

“ಆಕಾಶವಾಣಿ'-ಇದು ಸ್ವತಂತ್ರ ಭಾರತದ ರೇಡಿಯೋ ವ್ಯವಸ್ಥೆಯ ಹೆಸರು. ಇಂಗ್ಲಿಷಿನಲ್ಲಿ ಇದು 'ಆಲ್ ಇಂಡಿಯಾ ರೇಡಿಯೋ, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದಹಲಿ, ಮುಂಬಯಿ, ಕಲ್ಕತ್ತಾ, ಮದ್ರಾಸು, ಲಕ್ಷ್ಮೀ ಮತ್ತು ತಿರುಚಿನಾಪಲ್ಲಿ - ಈ ಆರು ಕೇಂದ್ರಗಳಿದ್ದವು. ಆಕಾಶವಾಣಿ ಕೇಂದ್ರಗಳನ್ನು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಭಾರತೀಯ ಅಧಿಕೃತ ಭಾಷೆಗಳಲ್ಲದೆ ಕೆಲವು ಒಳನುಡಿಗಳಲ್ಲಿ ಆಕಾಶವಾಣಿ ಪ್ರಸಾರ ಇರುತ್ತದೆ. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕೈಗಾರಿಕೆ, ವಿಜ್ಞಾನ, ರಾಜಕೀಯ, ಶಿಕ್ಷಣ, ಕೃಷಿ-ಹೀಗೆ ಅನೇಕ ಆಸಕ್ತಿಗಳಿಗೆ ಸ್ಥಾನವಿದೆ. ಕೃಷಿಕರಿಗೆ ಅನುಕೂಲಕರವಾದ ಅನೇಕ ಅಂಶಗಳನ್ನು ಕುರಿತು ಪ್ರತಿದಿನ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಯುವಜನರು, ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು, ಹರಿಜನ-ಗಿರಿಜನರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಮನರಂಜನ-ಮನೋಲ್ಲಾಸ ಒದಗಿಸುವ ದೃಷ್ಟಿಯಿಂದ ಸಂಗೀತ, ನಾಟಕ ಚಲನಚಿತ್ರ ಪ್ರಸಾರಕ್ಕೆ ಮೊದಲ ಸ್ಥಾನ ನೀಡಲಾಗುತ್ತದೆ. ಕ್ರೀಡೆಯ ವೀಕ್ಷಕ ವಿವರಣೆ ಆಕಾಶವಾಣಿಯ ಆಕರ್ಷಕ ಕಾರ್ಯಕ್ರಮಗಳಲ್ಲಿ ಒಂದು.

ಕಾರ್ಯಕ್ರಮದ ರೂಪುರೇಷೆಗಳನ್ನು ಕುರಿತು ಸಲಹೆ ನೀಡುವ ಕೇಂದ್ರ ಮತ್ತು ಸ್ಥಾನಿಕ ಸಮಿತಿಗಳಿವೆ. ಆಕಾಶವಾಣಿ ತನ್ನದೇ ಮೂಲಭೂತ ಸಂಶೋಧನೆ, ಕೇಳುಗರ ಪ್ರತಿಕ್ರಿಯ, ಅಧ್ಯಯನ ಕಾರ್ಯಗಳನ್ನು ಸಹ ನಡೆಸುತ್ತದೆ. ಕಾರ್ಯಕ್ರಮ ವಿವರಗಳನ್ನೊಳಗೊಂಡ ನಿಯತಕಾಲಿಕಗಳು ಆಕಾಶವಾಣಿಯ ವತಿಯಿಂದ ಅನೇಕ ಭಾಷೆಗಳಲ್ಲಿ ಪ್ರಕಟವಾಗುತ್ತವೆ.
ಆಕಾಶವಾಣಿಯಿಂದ ಸುದ್ದಿಯ ಪ್ರಸಾರ ವೇಗವಾಗಿ ವ್ಯಾಪಕವಾಗಿ ನಡೆಯುತ್ತದೆ. ವಾರ್ತಾ ಪ್ರಕಟನೆಗಳಲ್ಲದೆ ಪ್ರಾದೇಶಿಕ ಭಾಷೆಗಳಲ್ಲಿ ಆ ಪ್ರದೇಶಗಳ ವಾರ್ತಾ ಪ್ರಸಾರ ನಡೆಯುತ್ತದೆ. ಆರ್ಥಿಕ ಜಗತ್ತಿಗೆ ಆಕಾಶವಾಣಿ ತುಂಬ ಉಪಯುಕ್ತವಾದುದು. ಪೇಟೆಧಾರಣೆ, ಬೆಲೆಯ ಏರಿಳಿತಗಳನ್ನು ತಿಳಿಯಬಹುದು. ಜಗತ್ಪಸಿದ್ಧ ವ್ಯಕ್ತಿಗಳ, ವಿಜ್ಞಾನಿಗಳ, ಕಲಾವಿದರ ಧ್ವನಿ ಮತ್ತು ಮಾತುಗಳನ್ನು ಕೇಳಬಹುದು. ಹಿಂದೆ ಆಗಿಹೋದ ಮಹಾನುಭಾವರ ವಾಣಿಯನ್ನು, ಸಂಗೀತಕಾರರ ಗಾನವನ್ನು, ಸಮ್ಮೇಳನ, ಪರಿಷತ್ತು ಇತ್ಯಾದಿ ದೊಡ್ಡ ದೊಡ್ಡ ಸಮಾರಂಭಗಳ ವರದಿ, ಕಾರ್ಯಕ್ರಮಗಳನ್ನು ರೇಡಿಯೋದಲ್ಲಿ ಕೇಳಲು ಸಾಧ್ಯ.

ರೇಡಿಯೋ ತತ್ವವನ್ನು ಮೊದಲ ಬಾರಿಗೆ ಕಂಡುಹಿಡಿದವನು ಮಾರ್ಕೊನಿ. 1920ರಲ್ಲಿ ಗ್ರೇಟ್ ಬ್ರಿಟನ್ನಿನ 'ಎಸ್‌ಕ್ಸ್' ಎಂಬಲ್ಲಿ ಮೊದಲ ರೇಡಿಯೋ ನಿಲ್ದಾಣ ಆರಂಭವಾಯಿತು. ಕ್ರಮೇಣ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸುಮಾರು ಐನೂರು ಪ್ರಸಾರ ನಿಲಯಗಳು ತಲೆಯೆತ್ತಿದವು.

1942ರಲ್ಲಿ ಮೈಸೂರಿನಲ್ಲಿ ಆಕಾಶವಾಣಿ ಕೇಂದ್ರ'ವನ್ನು ಪ್ರಾಧ್ಯಾಪಕ ಡಾ|| ಎಂ.ವಿ. ಗೋಪಾಲಸ್ವಾಮಿ ಖಾಸಗಿಯಾಗಿ ಆರಂಭಿಸಿದರು. 1950ರಲ್ಲಿ ಅದು 'ಆಲ್ ಇಂಡಿಯಾ ರೇಡಿಯೋ'ದ ಭಾಗವಾಯಿತು.1950ರಲ್ಲಿ ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು.
Read also : ನಮ್ಮ ರಾಷ್ಟ್ರೀಯ ಹಬ್ಬಗಳ ಮೇಲೆ ಪ್ರಬಂಧ Essay on our national festivals in Kannada Language

ಇಂದಿನ ಜೀವನದಲ್ಲಿ ಆಕಾಶವಾಣಿ ಮತ್ತು ಟೆಲಿವಿಷನ್‌ಗಳ ಪ್ರಭಾವ ತುಂಬ ಇದೆ. ದೇಶನಾಯಕರು ಮತ್ತು ಸರ್ಕಾರ ನಾಡಿನ ಮೂಲೆಮೂಲೆಗಳಲ್ಲಿರುವ ಜನರ ಜೊತೆ ನೇರವಾಗಿ ಸಂಬಂಧ ಬೆಳೆಸಲು ಇದು ತುಂಬ ಸಹಾಯಕ. ಪ್ರಜಾಪ್ರಭುತ್ವ ರಾಷ್ಟಗಳಲ್ಲಿ ಈ ಮಾಧ್ಯಮ ಸರ್ಕಾರದ ನೀತಿಯನ್ನು ವಿವರಿಸಲು, ಎಲ್ಲ ಪಕ್ಷಗಳ ಅಭಿಪ್ರಾಯಗಳನ್ನು ಪ್ರತಿಬಿಂಬಿಸಲು ಸಹಾಯಕವಾಗಿದೆ.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: