Wednesday, 18 March 2020

ಕೈಗಾರಿಕಾ ಮಾಲಿನ್ಯ ಪ್ರಬಂಧ Industrial Pollution Essay in Kannada language

Industrial Pollution Essay in Kannada language: In this article, we are providing ಕೈಗಾರಿಕಾ ಮಾಲಿನ್ಯ ಪ್ರಬಂಧ for students and teachers. Students can use this Kaigarika Malinya essay in Kannada to complete their homework.

ಕೈಗಾರಿಕಾ ಮಾಲಿನ್ಯ ಪ್ರಬಂಧ Industrial Pollution Essay in Kannada language

1. ಕಾರ್ಖಾನೆಗಳಿಂದ ಹೊರ ಚೆಲ್ಲುವ ಮಾಲಿನ್ಯ 2. ಅಪಾಯಕಾರಿ ವಿಕಿರಣ 3.ಶಾಖಮಾಲಿನ್ಯ 4. ಮಾಲಿನ್ಯ ತಡೆಗಟ್ಟುವ ವಿಧಾನ. 5. ಉಪಸಂಹಾರ.
Industrial Pollution Essay in Kannada language Kaigarika Malinya essay in Kannada
ಭೂಮಿಯ ಗಾಳಿ ಮತ್ತು ನೀರು ಮಲಿನಗೊಳ್ಳುವುದಕ್ಕೆ ಕೈಗಾರಿಕೆಗಳು ಮುಖ್ಯ ಕಾರಣ, ಕೈಗಾರಿಕಾ ಕೇಂದ್ರಗಳು ಹೊಗೆ, ದ್ರವ, ಘನ ಪದಾರ್ಥಗಳನ್ನು ಹೊರಚೆಲ್ಲುತ್ತವೆ. ಕಾರ್ಖಾನೆಗಳು ಹೊರಚೆಲ್ಲುವ ವರ್ಜಕಗಳಲ್ಲಿ ಹಾನಿಯುಂಟುಮಾಡುವ ರಾಸಾಯನಿಕಗಳು ಕರಗಿದ ರೂಪದಲ್ಲಿರುತ್ತವೆ. ನದಿತೊರೆಗಳಲ್ಲಿ ಹರಿಯಲು ಬಿಡುವ ವರ್ಜಕಗಳು ನೀರಿನಲ್ಲಿ ವಿಲೀನವಾಗಿರುವ ಆಮ್ಲಜನಕದಿಂದ ಹೀರಲ್ಪಡುತ್ತವೆ. ಇದರಿಂದ ಜಲಚರಗಳ ಉಸಿರಾಟಕ್ಕೆ ತೊಂದರೆಯೊದಗಿ ಅವು ಮರಣಿಸುತ್ತವೆ. ಕಾರ್ಖಾನೆಗಳ ಚಿಮಣಿಗಳು ಹೊರಚೆಲ್ಲುವ ಧೂಳು 30 ಮೈಕ್ರಾನುಗಳ ವ್ಯಾಸಕ್ಕಿಂತ ದೊಡ್ಡದಾಗಿದ್ದರೆ ನೆಲಕ್ಕೆ ಇಳಿಯುತ್ತದೆ. ಇಲ್ಲವಾದರೆ ಗಾಳಿಯಲ್ಲೇ ತೇಲುತ್ತಿದ್ದು ಕೆಲವೊಮ್ಮೆ ಹಿಮದೊಡನೆ ಕೂಡಿ ಹಿಮ ಧೂಮವಾಗುತ್ತದೆ. ಪೆಟ್ರೋಲಿಯಂ ಸಂಸ್ಕರಣಾಗಾರ, ಗೊಬ್ಬರ ಕಾರ್ಖಾನೆ, ಕಾಗದದ ಗಿರಣಿ, ಪಿಂಗಾಣಿ ಮತ್ತು ಗಾಜು ಮುಂತಾದವು ಹೊರಚೆಲ್ಲುವ ಹೈಡೋಜನ್ ಸಿಡ್, ಗಂಧಕದ ಆಕೈಡ್, ಫ್ಲೋರೈಡುಗಳು ಮಾಲಿನ್ಯಕ್ಕೆ ಕಾರಣವಾಗುತ್ತವೆ. ನ್ಯೂಕ್ಲಿಯರ್ ರಿಯಾಕ್ಟರ್‌ ಮತ್ತು ಬಾಂಬ್ ತಯಾರಿಕೆಗೆ ಬಳಸುವ ಮೂಲವಸ್ತುಗಳಿಂದ ಅಪಾಯಕಾರಿ ವಿಕಿರಣಗಳನ್ನು ಹೊರಕ್ಕೆ ಬರುತ್ತವೆ. ಅಣ್ವಸ್ತ್ರಗಳನ್ನು ಪರೀಕ್ಷಾರ್ಥವಾಗಿ ಸ್ಫೋಟಿಸಿದಾಗ ಉಂಟಾಗುವ ಭಸ್ಯಪಾತ, ಗಾಳಿ-ನೀರು ನೆಲಗಳನ್ನು ಮಲಿನಗೊಳಿಸುತ್ತದೆ. ಅದು ಚೆಲ್ಲುವ ವಿಕಿರಣಗಳು ದೀರ್ಘಾವಧಿ ಪರಿಣಾಮ ಉಂಟುಮಾಡುತ್ತದೆ.

ನ್ಯೂಕ್ಲಿಯರ್ ರಿಯಾಕ್ಟರುಗಳಲ್ಲಿ ಬಳಸಿ ಉಳಿದ ಇಂಧನವನ್ನು ಸುರಿಕ್ಷಿತವಾಗಿ ಹೊರಚೆಲ್ಲುವುದು ಒಂದು ದೊಡ್ಡ ಸಮಸ್ಯೆ. ಭದ್ರಪಡಿಸಿದ ಕಾಂಕ್ರೀಟ್ ಅಥವಾ ಸೀಸದ ಕೋಶಗಳಲ್ಲಿ ಇಂಧನದ ವಿಕಿರಣಶೀಲ ವರ್ಜಕಗಳನ್ನು ತುಂಬಿ ಸಮುದ್ರದಲ್ಲಿ ಮುಳುಗಿಸುವುದು ಅಥವಾ ನೆಲದಡಿಯಲ್ಲಿ ಹೂಳುವುದು ಸಾಮಾನ್ಯವಾಗಿ ಅನುಸರಿಸುವ ಪದ್ಧತಿ. ಆದರೆ ವಿಕಿರಣಗಳ ದುಷ್ಪರಿಣಾಮಗಳಿಂದ ಪೂರ್ತಿ ಪರಿಹಾರ ಸಾಧ್ಯವಾಗಿಲ್ಲ.

ಕೈಗಾರಿಕೆಗಳು ಅಪಾಯಕಾರಿ ವಸ್ತುಗಳನ್ನು ಹೊರಹಾಕಿ ಮಾಲಿನ್ಯಕ್ಕೆ ಕಾರಣವಾಗುವುದು ಮಾತ್ರವಲ್ಲ, ಅಗಾಧ ಪ್ರಮಾಣದ ಶಾಖವನ್ನೂ ಅವು ಹೊರಚೆಲ್ಲುತ್ತದೆ. ಅದರ ಫಲವೇ ಶಾಖಮಾಲಿನ್ಯ, ಇಂಧನಗಳ ದಹನ ಅಥವಾ ಇತರ ರಾಸಾಯನಿಕ ಕ್ರಿಯೆಗಳಿಂದ ಉತ್ಪಾದಿಸಲ್ಪಡುವ ಶಾಖ ಅನೇಕ ಬಾರಿ ಅನುಪಯುಕ್ತವಾಗುತ್ತದೆ. ಆ ಶಾಖ ಅನಿವಾರ್ಯವಾಗಿ ವಾತಾವರಣದಲ್ಲಾಗಲೀ, ನೀರಿನಲ್ಲಾಗಲೀ ಸೇರಬೇಕಾಗುವುದು.

ಕೆಲವು ಕೈಗಾರಿಕಾ ಸ್ಥಾವರಗಳು ತಮ್ಮ ಯಂತ್ರ ಭಾಗಗಳನ್ನು ತಣ್ಣಗೆ ಮಾಡಲು ಜಲಸಂಗ್ರಹಗಳಲ್ಲಿ ನೀರನ್ನು ಹಾಯಿಸುತ್ತವೆ. ಇದರಿಂದ ನೀರಿನ ಉಷ್ಣತೆ ಅಲ್ಪ ಅವಧಿಯಲ್ಲೇ ಏರುತ್ತದೆ. ಉಷ್ಣತೆ ಹೆಚ್ಚಾದಾಗ ಆಮ್ಲಜನಕದ ಅಂಶ ಕಡಿಮೆಯಾಗುತ್ತದೆ. ನೀರು ಲವಣಗಳನ್ನು ಕರಗಿಸಿಕೊಳ್ಳುವುದು ಹೆಚ್ಚಾಗುತ್ತದೆ. ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತವೆ. ಬೇರೆ ಬೇರೆ ಕೈಗಾರಿಕಾ ಸ್ಥಾವರಗಳಿಂದ ನ್ಯೂಕ್ಲಿಯರ್ ರಿಯಾಕ್ಟರುಗಳು ಹೆಚ್ಚು ಶಾಖವನ್ನು ಹೊರಚೆಲ್ಲುತ್ತವೆ. ವಿದ್ಯುತ್ ಉತ್ಪತ್ತಿ ಮಾಡುವ ಶೇಕಡ 40ರಷ್ಟು ರಿಯಾಕ್ಟರುಗಳಲ್ಲಿ ನೀರನ್ನು ಹಾಯಿಸಿ ಶಾಖವನ್ನು ಹೊರಚೆಲ್ಲುವಂತೆ ಮಾಡುತ್ತಾರೆ.

ಕೈಗಾರಿಕಾ ಕಶ್ಯಗಳನ್ನು ವರ್ಜಿಸುವ ವಿಧಾನಗಳನ್ನು ಉತ್ತಮಗೊಳಿಸಿ ದುಷ್ಪರಿಣಾಮಗಳನ್ನು ತಡೆಗಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಆಧುನಿಕ ಕೈಗಾರಿಕಾ ಸ್ಥಾವರದ ರಚನಾ ವಿನ್ಯಾಸದಲ್ಲಿ ಕಶ್ಯಲ ಕಳೆಯುವುದು ತುಂಬ ಮುಖ್ಯವಾದುದು. ಘನ ಪದಾರ್ಥಗಳಲ್ಲಿ ತೇಲುವಂಥವು, ಯಾಂತ್ರಿಕವಾಗಿ ಪ್ರತ್ಯೇಕಿಸಲ್ಪಡುತ್ತವೆ. ಮುಳುಗುವಂಥದನ್ನು ವಿಶಿಷ್ಟ ಕೋಷ್ಠಗಳಲ್ಲಿ ಕೆಳಗಿಳಿಸಿ ಬೇರ್ಪಡಿಸುತ್ತಾರೆ. ಪ್ರಬಲ ಆಮ್ಮ, ಪ್ರತ್ಯಾಮ್ಲಗಳನ್ನು ತಟಸ್ಥಗೊಳಿಸಿ ಹೊರಬಿಡುತ್ತಾರೆ. ಕೈಗಾರಿಕಾ ಕಶ್ಯಲದ ದುಷ್ಪರಿಣಾಮಗಳ ಬಗ್ಗೆ ಜನರು ವಿಶೇಷ ಗಮನ ಕೊಡುವುದು ಅಗತ್ಯ.
Read also : 

Aranya Samrakshane Essay in Kannada Language

Van Mahotsav Essay in Kannada Language

Rashtriya Bhavaikya Essay in Kannada Language


SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: