Friday, 3 April 2020

ಕರ್ನಾಟಕದ ಶಾಸನಗಳು ಮಾಹಿತಿ Information of Inscriptions of Karnataka in Kannada Language

Information of Inscriptions of Karnataka in Kannada Language: In this article, we are providing ಕರ್ನಾಟಕದ ಶಾಸನಗಳು ಮಾಹಿತಿ for students and teachers. Students can use this Information of Inscriptions of Karnataka in Kannada Language to complete their homework.

ಕರ್ನಾಟಕದ ಶಾಸನಗಳು ಮಾಹಿತಿ Information of Inscriptions of Karnataka in Kannada Language

ಕರ್ನಾಟಕದ ಶಾಸನಗಳು ಮಾಹಿತಿ Information of Inscriptions of Karnataka in Kannada Language
ಪ್ರಾಚೀನ ಚರಿತ್ರ ಬರೆಯಲು ಶಿಲಾ ಲೇಖನಗಳು ಅತ್ಯಂತ ನಂಬಿಕೆಗೆ ಅರ್ಹವಾದ ಮುಖ್ಯವಾದ ಸಾಧನಗಳು. ಈ ಎಲ್ಲ ಶಾಸನಗಳಿಂದ ಅಂದಂದಿನ ರಾಜಕೀಯ, ಸಾಮಾಜಿಕ, ಚಾರಿತ್ರಿಕ, ಸಾಂಸ್ಕೃತಿಕ ವಿಷಯಗಳು ತಿಳಿಯುವುದು. ಅಲ್ಲದೆ, ಭಾಷೆ, ಲಿಪಿ, ಬರವಣಿಗೆಯ ರೀತಿ - ಮೊದಲಾದ ಅಂಶಗಳನ್ನು ತಿಳಿಯಲು ಇವು ಸಾಧನಗಳಾಗಿವೆ. ಮೊದಮೊದಲು ಬರವಣಿಗೆಯ ಸಾಧನವಾದುದು ಭೂರ್ಜಪತ್ರ, ತಾಳೆಗರಿ, ಮರದ ತೊಗಟೆ, ಅನಂತರ ತಾವು ಕೊಟ್ಟ ದಾನ ಶಾಶ್ವತವಾಗಿ ಉಳಿಯಬೇಕೆಂದು ಕಲ್ಲುಗಳ ಮೇಲೂ, ಲೋಹಗಳ ಕಂಬ, ತಗಡುಗಳ ಮೇಲೂ ಬರೆಸಿ ಅವನ್ನು ಎಲ್ಲ ಜನರಿಗೂ ತಿಳಿಯುವ ಸ್ಥಳಗಳಲ್ಲಿ ನಡೆಸಿದರು. ಕೊನೆಕೊನೆಗೆ ಬರವಣಿಗೆಗೆ ಅವಕಾಶ ಸಿಕ್ಕಿದ ಕಡೆಗಳಲ್ಲಿ ತಮ್ಮ ಕೀರ್ತಿ ಬೆಳಗಬೇಕೆಂದು. ಬರೆಸಿದವರುಂಟು. ದೇವಸ್ಥಾನ, ಮಠಗಳ ಚಿನ್ನ, ಬೆಳ್ಳಿ, ಮೊದಲಾದ ಲೋಹಗಳ ಪಾತ್ರಗಳು, ಮಡಕೆಗಳು ಲೋಹದ ತಗಡುಗಳು ಕಬ್ಬಿಣದ ಕಂಬ, ದೇವರ ಪೀಠಗಳು, ಮೂರ್ತಿಗಳ ಬೆನ್ನು ಭಾಗ ದೇವಸ್ಥಾನಗಳ ತಳಪಾಯದ ಕಲ್ಲು, ಕಂಬ, ಗೋಡೆ ಬಲಿಪೀಠ ಗೋಪುರದ ಕಲಶ ಇವೇ ಮೊದಲಾದ ಕಡೆಗಳಲ್ಲಿ ಬರವಣಿಗೆಗಳಿವೆ. ಇವುಗಳಲ್ಲದ ಊರುಗಳ ಮುಂಭಾಗದಲ್ಲಿ, ಕಾಡುಗಳಲ್ಲಿ ನೆಟ್ಟ ಬೋರುಕಲ್ಲು, ಯಂತ್ರಕಲ್ಲು, ವೀರಗಲ್ಲು, ತುರುಗಲ್ಲು, ಲಿಂಗಮುದ್ರೆಕಲ್ಲು, ವಾಮನ ಮುದ್ರೆಕಲ್ಲು, ಮಾಸ್ತಿಕಲ್ಲುಗಳೆಂದು ಕರೆಯಲ್ಪಡುವ ಅನ್ವರ್ಥವಾದ ಶಿಲಾಲೇಖನಗಳಿವೆ. ಪುಣ್ಯಕ್ಷೇತ್ರ ಮತ್ತು ಬೆಟ್ಟಗಳ ಬಂಡೆಗಳಲ್ಲಿ, ನದಿತೀರಗಳಲ್ಲಿ, ಕೊಳಗಳ ಪಕ್ಕದಲ್ಲಿ ಅಲ್ಲಿಗೆ ಬಂದ ಯಾತ್ರಾರ್ಥಿಗಳು. ರಾಜರ, ಕವಿಗಳ ಸ್ಮಾರಕ ಬರವಣಿಗೆಗಳಿವೆ. ಕೆರೆ ಕಟ್ಟಿಸಿ ತೂಬಿನ ಮೇಲೆ ಬರೆಸಿರುವ ಶಾಸನಗಳೂ ಸಿಕ್ಕಿವೆ. ಅನಶನ ವ್ರತದಿಂದ ಪ್ರಾಣಾರ್ಪಣೆ ಮಾಡಿದವರ ಜ್ಞಾಪಕಾರ್ಥವಾದ ನಿಶಧಿಕಲ್ಲು ತಮ್ಮ ಸ್ವಾಮಿಗೆ ಭಕ್ತಿ ಸಲ್ಲಿಸಲು ಶರೀರ ತ್ಯಾಗಮಾಡಿ ತ್ಯಾಗಿಗಳ ಗರುಡಕಲ್ಲುಗಳು ಇವೆ. ಕನ್ನಡ ಭಾಷೆಯಲ್ಲಿಯೇ ಬರೆದ ಬರವಣಿಗೆ ಕ್ರಿ.ಶ. ಐದನೆಯ ಶತಮಾನಕ್ಕೆ ಮೊದಲು ಎಲ್ಲಿಯೂ ದೊರೆತಿಲ್ಲ. ಮೊಟ್ಟಮೊದಲು ಕನ್ನಡ ಭಾಷೆಯಲ್ಲೇ ಬರೆದ ಬರವಣಿಗೆ ಎಂದರೆ ಹಿಡಿಯ ಶಿಲಾಲೇಖನವೇ. ಈ ಶಿಲಾಶಾಸನದ ಮಂಗಳಶ್ಲೋಕ ಸಂಸ್ಕೃತಭಾಷೆಯಾಗಿದ್ದು ಉಳಿದದ್ದು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದೆ. ಇಲ್ಲಿಂದ ಮುಂದೆ ಕನ್ನಡ ಭಾಷೆಯಲ್ಲಿ ರಚಿತವಾದ ಕವಿರಾಜಮಾರ್ಗ ಗ್ರಂಥದ ಕಾಲದವರೆಗೆ ಸಿರಿಗುಂದದ ದುರ್ವಿನೀತನ ಶಾಸನ, ಬಾದಾಮಿಯ ಮಂಗಳೇಶನ ಶಾಸನವೇ ಮೊದಲಾದ ಶಾಸನಗಳು, ವೀರಗಲ್ಲುಗಳು, ಶ್ರವಣಬೆಳಗೊಳದ ನಿಶದಿಕಲ್ಲುಗಳು ಕನ್ನಡ ಭಾಷೆಯಲ್ಲಿವೆ. ಸುಮಾರು ಇದುವರೆಗೂ ಕನ್ನಡನಾಡಿನಲ್ಲಿ ಇಪ್ಪತ್ತು ಸಾವಿರ ಶಾಸನಗಳು ಸಿಕ್ಕಿವೆ. ಆತ್ಮಾರ್ಪಣೆ ಮಾಡಿದ ತ್ಯಾಗಿಗಳ ಶಾಸನಗಳನ್ನು ವೀರಗಲ್ಲುಗಳೆಂದು ಕರೆಯುವರು. ಅನೇಕ ಪುರಾತನ ಪಟ್ಟಣಗಳ, ರಾಜಧಾನಿಗಳ, ಹಳೆ ಊರುಗಳ ಮುಂಭಾಗದಲ್ಲಿ ಸಾಲಾಗಿ ನೆಡಿಸಿರುವ ಚಿತ್ರಗಳುಳ್ಳ ಕಲ್ಲುಗಳಿವು. ಈ ವೀರಗಲ್ಲುಗಳಲ್ಲಿ ಊರಿನ ಗೋವುಗಳನ್ನು ಕಾಪಾಡಲು ಪ್ರಾಣ ಬಿಟ್ಟವನ ಜ್ಞಾಪಕಾರ್ಥವಾಗಿ ಹಾಕಿರುವ ಕಲ್ಲಿಗೆ ತುರುಕಲ್ಲೆಂದು ಹೆಸರು. ಹೆಂಗಸರು ತಮ್ಮಗಂಡ ಸತ್ತಾಗ ಪ್ರಾಣ ಬಿಟ್ಟಿದ್ದಕ್ಕೆ ಹಾಕಿರುವ ಕಲ್ಲುಗಳೇ ಮಾಸ್ತಿಕಲ್ಲುಗಳು. ಮಹಾಸತಿ ಎಂಬುದು ಮಾಸ್ತಿ ಆದಂತೆ ತೋರುತ್ತದೆ. ರಾಜರ ಕಾಲಗಳಲ್ಲಿ ರಾಜ ಸತ್ತಾಗ ಅವನೊಡನೆ ಆತ್ಮಾರ್ಪಣ ಮಾಡಿರುವ ವೀರರ ಸ್ಮಾರಕಗಳನ್ನು ಗರುಡಗಲ್ಲುಗಳೆಂದು ಕರೆಯುವರು.

ಜೈನರಲ್ಲಿ ಅವಸಾನಕಾಲ ಪ್ರಾಪ್ತವಾದಾಗ ಅಥವಾ ಜೀವನದಲ್ಲಿ ಜುಗುಪ್ಪ ತೋರಿ ವೈರಾಗ್ಯ ಬಂದಾಗ ಅನಶನವ್ರತ ಮಾಡಿ ಪ್ರಾಣಾರ್ಪಣ ಮಾಡಿರುವುದಕ್ಕಾಗಿ ಹಾಕಿಸಿರುವ ಕಲ್ಲುಗಳಿಗೆ ನಿಶದಿ ಕಲ್ಲುಗಳೆಂದು ಹೆಸರು. ಶ್ರವಣಬೆಳಗೊಳ ಒಂದರಲ್ಲಿಯೇ ಇಂಥ ಅರುವತ್ತು ನಿಶದಿ ಕಲ್ಲುಗಳಿವೆ. ಪ್ರಾಚೀನ ಕಾಲದ ಬರವಣಿಗೆಯ ಈ ವಿಧವಾದ ಶಿಲಾಲೇಖನಗಳ ಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿ ಹೇಳಿರುವ ದಾನ, ಧರ್ಮ, ತ್ಯಾಗ, ಚರಿತ್ರಾಂಶಗಳನ್ನು ಬೆಳಕಿಗೆ ತಂದ ಕೀರ್ತಿ ಪಾಶ್ಚಾತ್ಯ ವಿದ್ವಾಂಸರಿಗೆ ಸೇರಿದುದು. 1879ರಲ್ಲಿ ಮೈಸೂರು ದೇಶದ ವಿದ್ಯಾಭ್ಯಾಸದ ಇಲಾಖೆಯ ಮುಖ್ಯಾಧಿಕಾರಿಯಾಗಿದ್ದ ಬಿ.ಎಲ್. ರೈಸರ ನೇತೃತ್ವದಲ್ಲಿ ಶಾಸನಗಳ ಸಂಗ್ರಹಕಾರ್ಯ ಪ್ರಾರಂಭವಾಯಿತು. ಈ ಪುರಾತನ ಬರವಣಿಗೆ ಇರುವ ಲೇಖನಗಳು ಹೆಚ್ಚು ಹೆಚ್ಚಾಗಿ ಕಣ್ಣಿಗೆ ಬೀಳಲು ಸರ್ಕಾರದವರು ಮೈಸೂರು ರಾಜ್ಯದಲ್ಲಿ ಪ್ರತ್ಯೇಕವಾಗಿ ಒಂದು ಇಲಾಖೆಯನ್ನೇ ತೆರೆದರು. ಅದರ ಮುಖ್ಯಾಧಿಕಾರಿಯನ್ನಾಗಿ ಬಿ.ಎಲ್. ರೈಸ್ ಅವರನ್ನೇ ನೇಮಿಸಲಾಯಿತು. 1879ರಿಂದ 1906ರವರೆಗೆ ಬಿ.ಎಲ್. ರೈಸ್ ಅವರು ಸಂಗ್ರಹಿಸಿದ ಶಾಸನಗಳಲ್ಲ ಎಫಿಗ್ರಾಫಿಯ ಕರ್ನಾಟಕ ಎಂಬ ಅಂಕಿತದ ಹನ್ನೆರಡು ಸಂಪುಟಗಳಲ್ಲಿ ಪ್ರಕಟವಾಗಿವೆ. ಅವರ ನಂತರ ಬಂದ ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರು ತಮ್ಮ ಕಾಲದಲ್ಲಿ ಸಂಗ್ರಹಿಸಿದ ಶಾಸನಗಳನ್ನೆಲ್ಲ ಮೈಸೂರು ಶಾಸನ ಇಲಾಖಾ ವರದಿಗಳಲ್ಲಿ ಮುದ್ರಿಸಿರುವುದಲ್ಲದೆ ರೈಸ್ ಅವರು ಪ್ರಕಟಿಸಿದ ಕೆಲವು ಶಾಸನಗಳ ತಿದ್ದುಪಡಿ ಕೂಡಾ ಮಾಡಿರುವರು. ಐತಿಹಾಸಿಕ ದೃಷ್ಟಿಯಿಂದ ಇಂಡಿಕ, ಇಂಡಿಯನ್ ಆಂಟೆರಿ ಮೊದಲಾದ ವಿದ್ವತ್ತೂರ್ಣ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
Read also :

Natural Disasters Essay in Kannada Language

Essay on My Favourite Hobby Coin Collection

Togalu Gombe Information in Kannada Language


SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: