Nirudyoga Samasya Essay in Kannada Language: In this article, we are providing ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಬಂಧ for students and teachers. Students can use this Nirudyoga Samasya Essay in Kannada Language to complete their homework.
ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಬಂಧ Nirudyoga Samasya Essay in Kannada Language
ನಿರುದ್ಯೋಗದಿಂದ ನಿರಾಸೆ
ವಯಸ್ಸು ಕಳೆದಂತ ಮನುಷ್ಯ ತನಗೊಂದು ಕೆಲಸ ಹುಡುಕುವುದು ಸ್ವಾಭಾವಿಕ. ಕೆಲಸ ಸಿಕ್ಕದಿದ್ದರೆ ಅವನಿಗೆ ನಿರಾಸೆಯಾಗುತ್ತದೆ. ಊಟ, ಬಟ್ಟೆಯ ಚಿಂತೆ ಕಾಡುತ್ತದೆ. ಇದನ್ನೇ ನಾವು ನಿರುದ್ಯೋಗ ಸಮಸ್ಯೆ ಎನ್ನುತ್ತೇವೆ. ನಿರುದ್ಯೋಗಿಗೆ ಏನೊಂದೂ ರುಚಿಸದಂತಾಗುತ್ತದೆ. ಜೀವನ ನಿರ್ವಹಣೆಗೆ ಬೇರೆ ಮಾರ್ಗವಿಲ್ಲದೆ ಕಳ್ಳತನ, ದರೋಡೆ ಇತ್ಯಾದಿ ತಪ್ಪು ದಾರಿಹಿಡಿಯುವುದು ಅನಿವಾರ್ಯವಾಗುತ್ತದೆ. ವಿಶೇಷವಾಗಿ ಯುವಜನಾಂಗ ನಿರುದ್ಯೋಗ ಸಮಸ್ಯೆಯಿಂದ ಕಂಗೆಡುತ್ತಾರೆ. ಯುವಕರಲ್ಲಿ ಶಿಕ್ಷಿತರು, ಅಶಿಕ್ಷಿತರು ಎರಡೂ ವರ್ಗದವರಿದ್ದಾರೆ. ಅಂದರೆ ನಿರುದ್ಯೋಗ ಸಮಸ್ಯೆ ಎರಡು ರೀತಿಯದಾಗುತ್ತದೆ.
ಇಂದಿನ ಶಿಕ್ಷಣ ಪದ್ಧತಿ
ಈ ಸಮಸ್ಯೆ ಭಾರತದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರತಿವರ್ಷ50 ಲಕ್ಷ ಯುವಕರು ನಿರುದ್ಯೋಗದ ಗಾಢಾಂಧಕಾರದಲ್ಲಿ ಮುಳುಗುತ್ತಾರೆ. ಶಿಕ್ಷಣ ಪಡೆದ ಯುವಕರ ನಿರುದ್ಯೋಗಕ್ಕೆ ಕಾರಣ ನಮ್ಮ ದೋಷಪೂರ್ಣ ಶಿಕ್ಷಣ ಪ್ರಣಾಲಿಕೆಯೇ ಆಗಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ನೌಕರಿಗಾಗಿಯೇ ಇದೆ. ನಮ್ಮ ದೇಶದಲ್ಲಿ ಸಾವಿರಾರು ಸ್ನಾತಕರು, ಡಾಕ್ಟರು, ಇಂಜಿನಿಯರ್‌ಗಳು ವಿಶ್ವವಿದ್ಯಾಲಯದಿಂದ ಹೊರಬರುತ್ತಿದ್ದಾರೆ. ಇವರಿಗೆ ದೇಶದಲ್ಲಿ ಉದ್ಯೋಗವಿಲ್ಲ. ಹೀಗಾಗಿ ಅವರ ಜೀವನ ಸ್ಥಿತಿ ಅತಂತ್ರವಾಗುತ್ತದೆ.
ಸರ್ಕಾರದ ಯೋಜನೆಗಳು
ಜನಸಂಖ್ಯೆಯ ಹೆಚ್ಚಳ ನಿರುದ್ಯೋಗ ಸಮಸ್ಯೆಗೆ ಇನ್ನೊಂದು ಕಾರಣ. ಕೃಷಿಯನ್ನು ಅವಲಂಬಿಸಲು ಸಾಕಷ್ಟು ಸಾಧನಗಳಿಲ್ಲದಿರುವುದು, ಸಕಾಲದಲ್ಲಿ ಮಳೆಯಾಗದಿರುವುದು, ವಿದ್ಯುತ್ ಕೊರತೆ ಈ ಎಲ್ಲ ಕಾರಣದಿಂದ ಜನರು ಕೆಲಸವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವುದು ಅನಿವಾರ್ಯವಾಗುತ್ತದೆ. ಸರ್ಕಾರದ ಉದ್ಯೋಗವನ್ನು ಸೃಷ್ಟಿಸುವ ಮಹತ್ತರ ಯೋಜನೆಗಳನ್ನು ಕೈಗೆತ್ತಿಕೊಳ್ಳದಿರುವುದೂ ನಿರುದ್ಯೋಗ ಸಮಸ್ಯೆಗೆ ಕಾರಣ, ಯಂತ್ರಗಳ ಬಾಹುಳ್ಯ, ಕಂಪ್ಯೂಟರ್ ಕ್ರಾಂತಿ
ಕೃಷಿಗೆ ಪ್ರಾಧಾನ್ಯ
ಇವೆಲ್ಲವೂ ನಿರುದ್ಯೋಗ ಸಮಸ್ಯೆ ಬೆಳೆಯಲು ಕಾರಣವಾಗಿದೆ. ಭ್ರಷ್ಟಾಚಾರದ ಕಬಂಧಬಾಹು ಅರ್ಹ ಯುವಕರ ನಿರುದ್ಯೋಗ ಸಮಸ್ಯೆಗೆ ಕಾರಣವಾಗಿದೆ. ಯೋಗ್ಯರಿಗೆ ಕೆಲಸ ಸಿಕ್ಕದೆ ಯೋಗ್ಯರಲ್ಲದವರಿಗೆ ಕೆಲಸ ಇದರಿಂದ ದೊರೆಯುವಂತಾಗಿದೆ. ಧರ್ಮದ ಹೆಸರಿನಲ್ಲಿ ಮೂಢನಂಬಿಕೆಯಿಂದಾಗಿ ಈ ಸಮಸ್ಯೆ ಬೆಳೆದಿರುವುದುಂಟು. ಭಿಕ್ಷಾಟನೆ, ಸೋಮಾರಿತನ ಇತ್ಯಾದಿ ಇದರ ಕೊಡುಗೆಯಾಗಿದೆ.
ಕೃಷಿಗೆ ಪ್ರಾಧಾನ್ಯ
ಇವೆಲ್ಲವೂ ನಿರುದ್ಯೋಗ ಸಮಸ್ಯೆ ಬೆಳೆಯಲು ಕಾರಣವಾಗಿದೆ. ಭ್ರಷ್ಟಾಚಾರದ ಕಬಂಧಬಾಹು ಅರ್ಹ ಯುವಕರ ನಿರುದ್ಯೋಗ ಸಮಸ್ಯೆಗೆ ಕಾರಣವಾಗಿದೆ. ಯೋಗ್ಯರಿಗೆ ಕೆಲಸ ಸಿಕ್ಕದೆ ಯೋಗ್ಯರಲ್ಲದವರಿಗೆ ಕೆಲಸ ಇದರಿಂದ ದೊರೆಯುವಂತಾಗಿದೆ. ಧರ್ಮದ ಹೆಸರಿನಲ್ಲಿ ಮೂಢನಂಬಿಕೆಯಿಂದಾಗಿ ಈ ಸಮಸ್ಯೆ ಬೆಳೆದಿರುವುದುಂಟು. ಭಿಕ್ಷಾಟನೆ, ಸೋಮಾರಿತನ ಇತ್ಯಾದಿ ಇದರ ಕೊಡುಗೆಯಾಗಿದೆ.
ಸ್ವಾವಲಂಬನೆ
ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಹಲವು ಮಾರ್ಗೊಪಾಯಗಳಿವೆ. ಮೊದಲು ಇಂದಿನ ಶಿಕ್ಷಣ ಪದ್ಧತಿ ಬದಲಾವಣೆಯಾಗಬೇಕು. ಕೇವಲ ಓದುವುದಷ್ಟೆ ಅಲ್ಲ ಉದ್ಯೋಗಕ್ಕೆ ಯುವಕರನ್ನು ಅಣಿಗೊಳಿಸುವಂಥ ಶಿಕ್ಷಣ ಇಂದು ಅಗತ್ಯ. ಜನಸಂಖ್ಯಾ ನಿಯಂತ್ರಣದ ನಿಟ್ಟಿನಲ್ಲಿ ಕುಟುಂಬ ಯೋಜನೆಯಂಥ ಕಾರ್ಯಕ್ರಮಗಳು ಯಶಸ್ವಿಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹಾಗೂ ಕೃಷಿಯೇತರ ಕೆಲಸಗಳಿಗೆ ಪ್ರಾಧಾನ್ಯ ಸಿಕ್ಕುವಂಥ ಯೋಜನೆಗಳು ರೂಪುಗೊಳ್ಳಬೇಕು. ಭಿಕ್ಷಾಟನೆ, ವೇಶ್ಯಾವಾಟಿಕೆಗಳಂಥವು ಇಲ್ಲವಾಗಬೇಕು. ಯುವಕರಲ್ಲಿ ಶ್ರಮದ ಮಹತ್ವ ಅರಿವಾಗಬೇಕು. ಆರಾಮ ಜೀವನವನ್ನು ಅವರು ಬಯಸುವಂತಾಗಬಾರದು.
ಉಪಸಂಹಾರ
ಪ್ರತಿಯೊಂದು ಕೈಗಳಿಗೆ ಕೆಲಸವನ್ನು ಒದಗಿಸಿದಾಗ ನಮ್ಮ ದೇಶ ಸಮೃದ್ದಿಯ ಪಥದಲ್ಲಿ ಸಾಗುತ್ತದೆ. ಸರ್ಕಾರ ಈ ದಿಶೆಯಲ್ಲಿ ಯೋಗ್ಯವಾದ ಯೋಜನೆಗಳನ್ನು ರೂಪಿಸಬೇಕು. ಯುವಕರು ಸ್ವಾವಲಂಬಿಗಳಾಗಬೇಕು. ಯುವಕರು
Read also :
ಗ್ರಂಥಾಲಯದ ಬಗ್ಗೆ ಪ್ರಬಂಧ Granthalaya Essay in Kannada Language
ಅರಣ್ಯ ಮತ್ತು ಅದರ ಸಂರಕ್ಷಣೆ ಪ್ರಬಂಧ Aranya Samrakshane Essay in Kannada Language
Read also :
ಗ್ರಂಥಾಲಯದ ಬಗ್ಗೆ ಪ್ರಬಂಧ Granthalaya Essay in Kannada Language
ಅರಣ್ಯ ಮತ್ತು ಅದರ ಸಂರಕ್ಷಣೆ ಪ್ರಬಂಧ Aranya Samrakshane Essay in Kannada Language
0 comments: