Tuesday, 17 March 2020

ಗ್ರಂಥಾಲಯದ ಬಗ್ಗೆ ಪ್ರಬಂಧ Granthalaya Essay in Kannada Language

Granthalaya Essay in Kannada Language: In this article, we are providing ಗ್ರಂಥಾಲಯದ ಬಗ್ಗೆ ಪ್ರಬಂಧ for students and teachers. Students can use this Granthalaya Essay in Kannada Language to complete their homework.

ಗ್ರಂಥಾಲಯದ ಬಗ್ಗೆ ಪ್ರಬಂಧ Granthalaya Essay in Kannada Language

1.ವಿಷಯ ಪ್ರವೇಶ 2. ಸರಸ್ವತಿಯ ದೇಗುಲ 3, ಮನರಂಜನೆಯ ಸಾಧನೆ 4. ಜ್ಞಾನದಾಹಿಯ ಕಾಮಧೇನು 5.ಓದುಗರ ಕರ್ತವ್ಯ 6. ಸಂದೇಶ

ಜ್ಞಾನಪ್ರಾಪ್ತಿಗೆ ಪುಸ್ತಕಗಳು ಅಗತ್ಯ. ಇವುಗಳನ್ನು ಒಂದೆಡೆ ಸುರಕ್ಷಿತವಾಗಿಡುವುದು, ಅಗತ್ಯಬಿದ್ದಾಗ ತಮಗೆ ಬೇಕಾದ ಪುಸ್ತಕಗಳನ್ನು ತೆಗೆದುಕೊಂಡು ಅದರ ಲಾಭ ಪಡೆಯುವುದು ಒಳ್ಳೆಯದು, ಪುಸ್ತಕಗಳನ್ನು ಕಸದಂತೆ ಮೂಲೆಯಲ್ಲಿ ಒಟ್ಟುವುದು, ರದ್ದಿಯಂತೆ ರಾಶಿ ಹಾಕುವುದು ಸರಿಯಲ್ಲ.

ಮುದ್ರಣ ಕಲೆಯಲ್ಲಿ ಹೊಸ ಹೊಸ ಆವಿಷ್ಕಾರವಾಗುತ್ತಿದ್ದಂತೆ ಪುಸ್ತಕಗಳ ಸಂಖ್ಯೆ ಹೆಚ್ಚತೊಡಗಿದೆ. ಇವುಗಳನ್ನು ಒಂದೆಡೆ ಶೇಖರಿಸಿಡುವುದು ವ್ಯವಸ್ಥಿತವಾಗಿ ಜೋಡಿಸುವುದು ಇತ್ಯಾದಿ ವ್ಯವಸ್ಥೆಯೇ ಪುಸ್ತಕ ಭಂಡಾರ. ಪ್ರಾಚೀನ ಕಾಲದಲ್ಲಿ ತಾಳೆಗರಿ, ಭೂರ್ಜ್ವಪತ್ರಗಳಲ್ಲಿ ಅಡಗಿದ್ದ ಜ್ಞಾನಸಂಪತ್ತು ಸೀಮಿತವಾಗಿದ್ದು ಅವುಗಳನ್ನು ಸುರಕ್ಷಿತವಾಗಿಡುವುದು ಅಂಥ ಸಮಸ್ಯೆ ಆಗಿರಲಿಲ್ಲ. ಆದರೆ ಬೃಹದಾಕಾರವಾಗಿ ಬೆಳೆದಿರುವ ಪುಸ್ತಕೋದ್ಯಮ ಸುಸಜ್ಜಿತ ಗ್ರಂಥಭಂಡಾರಕ್ಕೆ ನಾಂದಿಯಾಗಿದೆ. ಜ್ಞಾನಪ್ರಾಪ್ತಿಗೆ ತಾಯಿ ಸರಸ್ವತಿಯ ದೇಗುಲಗಳೆಂದರೆ ವಿದ್ಯಾಲಯಗಳು ಮತ್ತು ಪುಸ್ತಕಭಂಡಾರಗಳು, ಪುಸ್ತಕದ ಅಭಿರುಚಿಯಿರುವ ಪುಸ್ತಕಪ್ರೇಮಿ ಹಾಗೂ ಅಧ್ಯಯನ ಶೀಲ ವಿದ್ವಾಂಸ ತನ್ನದೇ ಆದ ಸ್ವಂತ ಪುಸ್ತಕಭಂಡಾರವನ್ನು ಹೊಂದಿರುತ್ತಾನೆ. ಒಂದು ವೇಳೆ ತನ್ನ ನಂತರ ತನ್ನ ಕುಟುಂಬದ ಯಾವ ಸದಸ್ಯನಿಗೂ ಅದರ ಬಗ್ಗೆ ಆಸಕ್ತಿಯಿಲ್ಲ ಅನ್ನಿಸಿದರೆ ಬೇರೊಂದು ಸುಸಜ್ಜಿತ ಗ್ರಂಥ ಭಂಡಾರಕ್ಕೆ ಅವುಗಳನ್ನು ದಾನ ಮಾಡುತ್ತಾರೆ.

ಪ್ರತಿಯೊಂದು ಶಾಲಾ, ಕಾಲೇಜು, ವಿದ್ಯಾಲಯಗಳಲ್ಲಿ ಅಲ್ಲಿಯ ಅಗತ್ಯಕ್ಕೆ ತಕ್ಕಂತೆ ಪುಸ್ತಕ ಭಂಡಾರವಿದ್ದು ವಿದ್ಯಾರ್ಥಿಗಳು, ಅಧ್ಯಾಪಕರು ಅದರ ಉಪಯೋಗ ಪಡೆಯುತ್ತಾರೆ. ಗ್ರಂಥಾಲಯಾಧಿಕಾರಿ ಪುಸ್ತಕ ಭಂಡಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾನೆ. ಇಂಥ ಅಧಿಕಾರಿ ಗ್ರಂಥ ಭಂಡಾರದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಪದವೀಧರನಾಗಿರುತ್ತಾನೆ. ಜ್ಞಾನಾರ್ಜನೆಯ ಜೊತೆಗೆ ಮನರಂಜನೆ ಪಡೆಯಲು ಅಗತ್ಯವಾದ ಕತೆ, ಕಾದಂಬರಿ, ನಾಟಕ, ಕಾವ್ಯ ಇತ್ಯಾದಿಗೆ ಸಂಬಂಧಿಸಿದ ಪುಸ್ತಕಗಳು ಇಲ್ಲಿರುತ್ತವೆ.

ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮಗಳಲ್ಲಿ ಜನಸಾಮಾನ್ಯರಿಗಾಗಿ ಗ್ರಂಥಾಲಯಗಳಿರುತ್ತವೆ. ಕತೆ, ಕಾದಂಬರಿ, ನಾಟಕ, ಜ್ಞಾನ-ವಿಜ್ಞಾನ-ಧರ್ಮ, ಇತಿಹಾಸ, ಭೂಗೋಳ, ಸಾಹಿತ್ಯ, ರಾಜನೀತಿ ಇತ್ಯಾದಿ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳು ಇಲ್ಲಿರುತ್ತವೆ. ಅಂತೆಯೇ ಬೇರೆ ಬೇರೆ ಭಾಷೆಯ ಜನರಿಗಾಗಿ ಹಲವಾರು ಪುಸ್ತಕಗಳು ಇರುವುದು ನಿಯಮದಂತೆ ಶುಲ್ಕ ಪಾವತಿಸಿ ಈ ಗ್ರಂಥಾಲಯದ ಸದಸ್ಯರಾಗಲು ಅವಕಾಶವಿದೆ.

ಕೆಲವು ಗ್ರಂಥಾಲಯಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ನಡೆಸುತ್ತವೆ. ಇಲ್ಲಿ ಪುಸ್ತಕಗಳ ಬೃಹತ್ ಸಂಗ್ರಹವಿದ್ದು ಜ್ಞಾನದಾಹಿಗಳಿಗೆ ಬೇಕಾದ ಎಲ್ಲ ಬಗೆಯ ಪುಸ್ತಕಗಳೂ ಸಿಕ್ಕುತ್ತವೆ. ದೇಶ ವಿದೇಶಗಳ, ಬೇರೆ ಬೇರೆ ಭಾಷೆಗಳ ಅತ್ಯುತ್ತಮ ಪುಸ್ತಕಗಳ ಸಂಗ್ರಹ ಇಲ್ಲಿರುತ್ತದೆ. ಕಲ್ಕತ್ತಾ, ಚಿನ್ಯ, ದಿಲ್ಲಿ, ಬೊಂಬಾಯಿಗಳಲ್ಲಿ ಕೇಂದ್ರ ಸರ್ಕಾರದ ಬೃಹತ್ ಪುಸ್ತಕ ಭಂಡಾರವಿದೆ. ಕಲ್ಕತ್ತಾದಲ್ಲಿನ 'ರಾಷ್ಟ್ರೀಯ ಪುಸ್ತಕಾಲಯ(National Library) ದೇಶದ ಅತಿ ದೊಡ್ಡ ಪುಸ್ತಕಾಲಯ, ಹೊರಗಿನಿಂದ ಬರುವ ಜ್ಞಾನದಾಹಿಗಳಿಗೆ ತಂಗಲು ವ್ಯವಸ್ಥೆ ಇದ್ದು ಇವುಗಳ ಉಪಯೋಗವನ್ನು ಪಡೆಯಬಹುದಾಗಿದೆ. ಪುಸ್ತಕದಲ್ಲಿ ಅಗತ್ಯವಾದ ಪ್ಯಾರಾ, ಲೇಖನ ಇತ್ಯಾದಿಯನ್ನು ನಕಲು ಮಾಡಿಕೊಳ್ಳಲು, ಟೈಪಿಂಗ್, ಫೋಟೋ ಇತ್ಯಾದಿ ಅನುಕೂಲಗಳು ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿರುತ್ತವೆ.

ಓದುಗರು ಪುಸ್ತಕಗಳನ್ನು ಹಾಳುಮಾಡಬಾರದು. ಕೊಳಕುಮಾಡಬಾರದು ಹಾಳೆ ಹರಿಯುವುದು, ಮಡಿಸುವುದು ಇತ್ಯಾದಿ ಮಾಡಬಾರದು. ನಿಗದಿತ ಸಮಯಕ್ಕೆ ಸರಿಯಾಗಿ ತಾವು ಎರವಲು ಕೊಂಡೊಯ್ದ ಪುಸ್ತಕಗಳನ್ನು ಹಿಂದಿರುಗಿಸಬೇಕು. ಇದರಿಂದ ಬೇರೆಯವರಿಗೆ ಅಗತ್ಯವನ್ನು ಪೂರೈಸಿದಂತಾಗುತ್ತದೆ.

ಪುಸ್ತಕ ಮನುಷ್ಯನ ಮಿತ್ರ, ಜ್ಞಾನ ನೀಡುವ ಕಾಮಧೇನು, ವ್ಯಕ್ತಿತ್ವ ನಿರ್ಮಾಣದ ಹೆಬ್ಬಾಗಿಲು, ಮಾರ್ಗದರ್ಶಕ, ಪುಸ್ತಕ ಖರೀದಿಸಲು ಸಾಧ್ಯವಾಗದ ಜ್ಞಾನದಾಹಿಗೆ ಪುಸ್ತಕಾಲಯಗಳು ಒಂದು ಒಂದು ವರ ಇದ್ದಂತ, ಪುಸ್ತಕ ಭಂಡಾರಗಳಲ್ಲಿ ವಾಚನಾಲಯ ವಿಭಾಗವೂ ಇದ್ದು ಪತ್ರಿಕೆಗಳನ್ನು ಓದುವ ಸವಲತ್ತು ಇರುತ್ತದೆ. ನಾವು ಪುಸ್ತಕಾಲಯದಲ್ಲಿ ಗಂಭೀರವಾಗಿ ಅಧ್ಯಯನ ಮಾಡಬೇಕು. ಮಾತಾಡದೆ, ನಿಶ್ಯಬ್ದವಾಗಿರಬೇಕು. ಬೇರೆಯವರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಈ ಪುಸ್ತಕ ಭಂಡಾರದ ಸಂದೇಶವೆಂದರೆ – “ಜ್ಞಾನವೃದ್ಧಿಗಾಗಿ ಒಳಗೆ ಬಾ ಮಾನವ, ಸೇವಗೆ ಹೊರಗೆ ಹೋಗು.”

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

5 comments: