Essay on Swami Vivekananda in Kannada Language: In this article, we are providing ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ for students and teachers. You can use this article as ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಕನ್ನಡ or Swami Vivekananda biography in Kannada.
Essay on Swami Vivekananda in Kannada Language: In this article, we are providing ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ for students and teachers. You can use this article as ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಕನ್ನಡ or Swami Vivekananda biography in Kannada.
ಸ್ವಾಮಿ ವಿವೇಕಾನಂದ ಬಗ್ಗೆ ಪ್ರಬಂಧ Essay on Swami Vivekananda in Kannada Language
“ಏಳಿರಿ! ಏಳಿರಿ! ಎಚ್ಚರಾಗಿರಿ! ಗುರಿ ಮುಟ್ಟುವವರೆಗೂ ನಿಲ್ಲಬೇಡಿರಿ!” ತಾಯ್ಯಾಡಿನ ಹಿರಿಮೆಯನ್ನು ಪಶ್ಚಿಮ ದೇಶಗಳಿಗೆ ತೋರಿಸಿಕೊಟ್ಟ : ಸ್ವಾಮಿ ವಿವೇಕಾನಂದರು ಭಾರತೀಯರಿಗೆ ನೀಡಿದ ಕರೆ ಇದು. ಈ ವಿಭೂತಿ ಪುರುಷ 1863ರಲ್ಲಿ ಕಲ್ಕತ್ತಾ ನಗರದಲ್ಲಿ ಜನಿಸಿದರು. ಹೆತ್ತವರು ವಿಶ್ವೇಶ್ವರ ಎಂದು ಹೆಸರಿಟ್ಟರು. ಅನಂತರ ನರೇಂದ್ರನಾಥ ಎಂದು ಕರೆದರು. ಮೊದಲಿನಿಂದಲೂ ನರೇಂದ್ರನಿಗೆ ಧೈರ್ಯ, ಪ್ರತಿಯೊಂದನ್ನೂ ಮಾಡಿನೋಡುವ, ವಿಚಾರಮಾಡುವ ಪ್ರವೃತ್ತಿ ಆತನದು. ಬುದ್ದಿವಂತ ನರೇಂದ್ರ ಚರಿತ್ರೆ, ಸಾಹಿತ್ಯ, ತತ್ವಶಾಸ್ತ್ರ, ವಿಜ್ಞಾನ ಮುಂತಾದ ಅನೇಕ ಗ್ರಂಥಗಳನ್ನು ಕಾಲೇಜು ವಿದ್ಯಾಭ್ಯಾಸದಲ್ಲೇ ಓದಿದ, ನರೇಂದ್ರನಿಗೆ ದೇವರು ಇದ್ದಾನೆಯೇ ಎಂದು ತಿಳಿದುಕೊಳ್ಳುವ ಬಯಕ. ದಕ್ಷಿಣೇಶ್ವರಕ್ಕೆ ಹೋಗಿ ಪರಮಹಂಸರೊಡನೆ ಮಾತನಾಡಿದ ಮೇಲೆ ದೇವರಿದ್ದಾನೆ ಎಂಬ ನಂಬಿಕೆ ಆತನಿಗೆ ಉಂಟಾಯಿತು. ಅವನು ರಾಮಕೃಷ್ಣರ ಶಿಷ್ಯನಾದ. ರಾಮಕೃಷ್ಣರು ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ನರೇಂದ್ರನಿಗೆ ಧಾರೆಯೆರೆದರು. ತಮ್ಮ ಶಿಷ್ಯರನ್ನೂ, ಭಕ್ತರನ್ನೂ ಅವರಿಗೆ ಒಪ್ಪಿಸಿದರು. ಕಾಲಾನಂತರ ನರೇಂದ್ರ ಸನ್ಯಾಸ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದರಾದರು. ಧ್ಯಾನ, ಅಧ್ಯಯನ, ಸಾಧನೆಯಲ್ಲಿ ತೊಡಗಿದರು. ಭಾರತದಲ್ಲೆಲ್ಲಾ ಸಂಚರಿಸಿದರು.
ಅಮರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದೂ ಧರ್ಮದ ಸಂದೇಶವನ್ನು ಪ್ರಪಂಚಕ್ಕೆ ಸಾರಿದರು. ಈ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಪಶ್ಚಿಮ ದೇಶದವರ ಕಣ್ಣು ತೆರೆಸಿತು. ಅದುವರೆಗೆ ಅವರು ಭಾರತವೆಂದರೆ ಮೂಢನಂಬಿಕೆಗಳ ಮತ್ತು ಅನಾಗರಿಕರ ದೇಶ ಎಂದು ತಿಳಿದಿದ್ದರು. ವಿವೇಕಾನಂದರ ಭಾಷಣ ಹಿಂದೂಧರ್ಮದ ಹಿರಿಮೆಯನ್ನು, ಭಾರತದ ಸಂಸ್ಕೃತಿಯನ್ನು ಅವರಿಗೆ ಪರಿಚಯಿಸಿತು. ಅಮೇರಿಕ, ಇಂಗ್ಲೆಂಡ್ ದೇಶಗಳಲ್ಲಿ ಸಂಚರಿಸಿ ಅವರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಕುರಿತು ಅನೇಕ ಉಪನ್ಯಾಸಗಳನ್ನು ಮಾಡಿದರು. ಪಾಶ್ಚಾತ್ಯರಲ್ಲಿ ಅನೇಕರು ಇವರು ಶಿಷ್ಯರಾದರು. 1897 ಜನವರಿ 15 ರಂದು ಭಾರತಕ್ಕೆ ಹಿಂದಿರುಗಿದ ಅವರು ತಮ್ಮಸಂದೇಶವನ್ನು ಭಾರತದಲ್ಲಿ ಹರಡಲು ರಾಮಕೃಷ್ಣ ಸನ್ಯಾಸಿ ಸಂಘ'ವನ್ನು ಆರಂಭಿಸಿ ಅದರ ಕೇಂದ್ರಗಳನ್ನು ಅನೇಕ ಕಡೆ ಸ್ಥಾಪಿಸಿದರು. ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಯಲ್ಲಿನ ಅವರ ವಾಣಿ ಅನೇಕರನ್ನು ಎಚ್ಚರಿಸಿತು. ನಮ್ಮ ಕಾಲಮೇಲೆ ನಿಂತು ಮನುಷ್ಯರಾಗೋಣ. ನಮಗಿಂದು ಪುರುಷ ಸಿಂಹರನ್ನು ನಿರ್ಮಿಸುವ ಧೈರ್ಯಬೇಕು; ಪುರುಷಸಿಂಹರನ್ನು ನಿರ್ಮಿಸುವ ಸಿದ್ದಾಂತಬೇಕು. ಪುರುಷಸಿಂಹರನ್ನಾಗಿ ಸರ್ವತೋಮುಖಿಗಳನ್ನಾಗಿ ಮಾಡುವ ವಿದ್ಯಾಭ್ಯಾಸಬೇಕು. ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಯಾವುದು ದುರ್ಬಲರನ್ನಾಗಿ ಮಾಡುವುದೋ ಅದನ್ನು ವಿಷದಂತೆ ತ್ಯಜಿಸಿ, ಅದರಲ್ಲಿ ಚೇತನವಿಲ್ಲ. ಸತ್ಯ-ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ದೇವರ ಮಕ್ಕಳು, ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು ಹೀಗೆ ವಿವೇಕಾನಂದರು ಭಾರತೀಯರನ್ನು ಎಚ್ಚರಿಸಿ ಅವರಲ್ಲಿ ಹೊಸ ಹುರುಪನ್ನು ತುಂಬಿದರು.
ಕನ್ಯಾಕುಮಾರಿಯ ಬಳಿಯಿರುವ ಬಂಡೆಯೊಂದರ ಮೇಲೆ ಕುಳಿತು ಮೂರು ದಿನ ಧ್ಯಾನ ಮಾಡಿದಾಗ ಅವರಿಗೆ ತಮ್ಮ ಜೀವನದ ಗುರಿ ಸ್ಪಷ್ಟವಾಯಿತು ಎಂದಿದ್ದಾರೆ. ಈ ಬಂಡ 'ವಿವೇಕಾನಂದ ಬಂಡೆ' ಎಂದು ಹೆಸರು ಪಡೆದಿದೆ. ಇದು ಸಮುದ್ರಮಟ್ಟದಲ್ಲಿ 168 ಮೀಟರ್ ಉದ್ದ, 165 ಮೀಟರ್ ಅಗಲ, 15 ಮೀಟರ್ ಎತ್ತರ ಇದೆ. ಇಲ್ಲಿ 2.6 ಮೀಟರ್ ಎತ್ತರದ ವಿವೇಕಾನಂದರ ವಿಗ್ರಹ ಸ್ಥಾಪಿತವಾಗಿದೆ ಇದರ ಅನಾವರಣ 1970 ಸಪ್ಟೆಂಬರ್ 2ರಂದು ನಡೆಯಿತು. 1963ರಲ್ಲಿ ವಿವೇಕಾನಂದರರ ಜನ್ಮಶತಮಾನೋತ್ಸವ ಆಚರಿಸಲ್ಪಟ್ಟಿತು.
ಸ್ವಾಮಿ ವಿವೇಕಾನಂದರು ತತ್ವಜ್ಞಾನಿಗಳು, ದೈವಭಕ್ತರು, ಕರ್ಮಯೋಗಿಗಳು, ಸಮಾಜ ಸುಧಾರಕರು, ದೇಶಭಕ್ತರು, ಭಾರತೀಯರಲ್ಲಿರುವ ಲೋಪದೋಷಗಳನ್ನು ತೋರಿಸಿ ಪರಿಹಾರವೇನು ಎಂದು ವಿವರಿಸಿದರು. ಸಹಕಾರ ಮನೋಭಾವದ ಅಭಾವ, ಅಸೂಯೆ, ಅಧಿಕಾರಲಾಲಸ, ಸೋಮಾರಿತನ, ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಗಮನ ಹರಿಸದಿರುವುದು. ಜಾತಿ ಭಾವನೆ, ಪ್ರಾದೇಶಿಕತೆ, ಅಂಧಾಭಿಮಾನ, ಆತ್ಮಶ್ರೀಯ ಕೊರತ ಇವುಗಳನ್ನು ಖಂಡಿಸಿದರು.
ಭೂಮಿಯ ಮೇಲೆ ತಾವು ಬದುಕಿದ್ದ ಅಲ್ಪಾವಧಿಯಲ್ಲೇ ವಿವೇಕಾನಂದರು ಭಾರತವನ್ನು ಜಗತ್ತಿಗೆ ಪರಿಚಯ ಮಾಡಿಕೊಡುವುದರಲ್ಲಿ ಮತ್ತು ಭಾರತೀಯರಿಗೆ ತಮ್ಮ ಸಂಸ್ಕೃತಿಯ ಪರಂಪರೆಯನ್ನು, ಕರ್ತವ್ಯವನ್ನು ತಿಳಿಸಿಕೊಡುವಲ್ಲಿ ಯಶಸ್ಸು ಗಳಿಸಿದರು.
ಧ್ಯಾನಸಿದ್ದ ಕರ್ಮಯೋಗಿ ವಿವೇಕಾನಂದರ 1920 ಜುಲೈ 4 ರಂದು ಧ್ಯಾನ ಮಗ್ನರಾಗಿದ್ದಾಗಲೇ ಮರಣಿಸಿದರು. ಆಗ ಅವರಿಗೆ ಕೇವಲ 39 ವರ್ಷ ವಯಸ್ಸು.
Srushti radder
ReplyDeleteVery nice
Delete8217514363
ReplyDelete