Essay on Peacock in Kannada Language: In this article, we are providing ನವಿಲಿನ ಬಗ್ಗೆ ಪ್ರಬಂಧ for students and teachers ನವಿಲು ಮೇಲೆ ಕನ್ನಡ ಪ್ರಬಂಧ. ನವಿಲಿನ ಬಗ್ಗೆ ಮಾಹಿತಿ Students can use this Information about Our National Bird Peacock in Kannada Language to complete their homework.
ನವಿಲಿನ ಬಗ್ಗೆ ಪ್ರಬಂಧ Essay on Peacock in Kannada Language
ಭಾರತದ ರಾಷ್ಟ್ರಪಕ್ಷಿ ನವಿಲು, ವರ್ಷಕಾಲದ ಮೋಡಗಳು ಮಳೆ ಸುರಿಸುವಾಗ ಸಂತೋಷದಿಂದ ಗರಿಗೆದರಿ ಕುಣಿಯುವ ನವಿಲಿನ ಚೆಲುವು ಮನಮೋಹಕ. ನವಿಲು ಸಿಂಹಳ ಮತ್ತು ಭಾರತದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇವು ಪಾವೋ ಕುಲಕ್ಕೆ ಸೇರಿದವು. ಇದರ ತಲೆ ಮತ್ತು ಕತ್ತು ನೀಲಿ. ಬೆನ್ನು ಹಸಿರು, ಮುಖದ ಚರ್ಮ ಬಿಳುಪು, ರೆಕ್ಕೆ ಕೆಂಪು ಮಿಶ್ರಿತ ನಸುಹಳದಿ. ಉದ್ದನೆಯ ಕಾಲು, ತಲೆಯ ಮೇಲೆ ಗರಿಗಳು ತುರಾಯಿಯಂತಿವೆ. ಗಂಡು ನವಿಲಿಗೆ ಬೆನ್ನಿನಲ್ಲಿ ಹಸಿರು ಬಣ್ಣದ ನೂರಕ್ಕಿಂತ ಹೆಚ್ಚು ಗರಿಗಳು ಮೂಡಿರುತ್ತವೆ. ಅದರಲ್ಲಿ ಕಣ್ಣಿನಂತ ಕಾಣುವ ಪ್ರಕಾಶಮಾನವಾದ ಚುಕ್ಕಗಳಿರುತ್ತವೆ. ಗಂಡು ನವಿಲಿನ ಸೊಬಗು ಇರುವುದೇ ಈ ಗರಿಗಳಲ್ಲಿ ಹೆಣ್ಣು ನವಿಲಿಗೆ ಇಂಥ ಗರಿಗಳಿರುವುದಿಲ್ಲ. ಅಲಂಕಾರಪ್ರಾಯವಾದ ನವಿಲನ್ನು ಪಳಗಿಸುವುದು ಸುಲಭ. ಕಾಳು, ಬೀಜ, ಸರೀಸೃಪ ಮತ್ತು ಕೀಟಗಳು ನವಿಲಿನ ಆಹಾರ,
ಬೇಟೆಕಾಲದಲ್ಲಿ ಗಂಡುನವಿಲು ತನ್ನ ಗಡಸು ಕಂಠದಿಂದ ಕುಲುಕುಲು ಸದ್ದು ಮಾಡುತ್ತಾ ಹೆಣ್ಣು ನವಿಲನ್ನು ಕರೆಯುತ್ತದೆ. ಅದರ ಮುಂದೆ ತನ್ನ ಗರಿಗಳನ್ನು ಬೀಸಣಿಗೆಯಾಕಾರದಲ್ಲಿ ಹಿಂದಕ್ಕೆ ಹರಡಿ ಕುಣಿಯುತ್ತದೆ. ಗರಿಗಳ ಸಾವಿರ ಕಣ್ಣುಗಳು ನಮ್ಮ ಕಣ್ಣನ್ನು ಕುಕ್ಕುತ್ತವೆ. ವಸಂತಕಾಲದಲ್ಲಿ ಹೆಣ್ಣು ನವಿಲು ಸುಮಾರು ಹತ್ತು ಬಿಳಿಯ ಮೊಟ್ಟೆಗಳನ್ನು ಇಡುತ್ತದೆ. ನೆಲದಲ್ಲಿ ಗೂಡು ಕಟ್ಟಿ ಮೊಟ್ಟೆ ಇರಿಸುತ್ತದೆ. ತಾಯಿ ನವಿಲು ಎಂಟು ತಿಂಗಳವರೆಗೆ ಮರಿಯನ್ನು ಜೋಪಾನ ಮಾಡುತ್ತದೆ. ಮಾರನೆಯ ವರ್ಷದಲ್ಲಿ ಮರಿಗೆ ಗರಿ ಬೆಳೆಯಲಾರಂಭಿಸುತ್ತದೆ. ಒಂದೊಂದು ಗಂಡು ನವಿಲಿಗೂ ಎರಡರಿಂದ ಐದು ಹೆಣ್ಣು ನವಿಲು ಸಂಗಾತಿಗಳಾಗಿರುತ್ತವೆ. ದೊಡ್ಡ ಗರಿಗಳಿದ್ದರೂ ಗಂಡುನವಿಲು ಹೆಚ್ಚು ದೂರ ಹಾರಲಾರದು. ಗುಂಪಾಗಿ ವಾಸಿಸುವ ಕಾಡುನವಿಲುಗಳನ್ನು ರಾತ್ರಿ ವೇಳೆ ಮರಗಳ ಮೇಲೆ ಕಳೆಯುತ್ತವೆ. ಜಾವಾ, ಬರ್ಮಾ, ಥೈಲ್ಯಾಂಡ್ ಮತ್ತು ಮಲಯ - ಇಲ್ಲಿರುವುದು ಹಸಿರು ನವಿಲು, ಭಾರತದ ನವಿಲಿಗಿಂತ ಇದರ ಕಾಲು ಉದ್ದ. ನವಿಲುಗಳಲ್ಲಿ ಬಿಳಿ ಮತ್ತು ಕಪ್ಪು ಗರಿಗಳಿರುವುದು ಉಂಟು.
ಇದನ್ನು 'ಸಹಸ್ರಾಕ್ಷ' ಎಂದು ಕರೆಯುವುದುಂಟು. ಗಂಡು ನವಿಲಿನ ಹೊಟ್ಟೆ, ಎದೆ, ಕತ್ತು, ತಲೆ-ನೀಲಿ, ನೇರಳೆ, ಹಸಿರು ಬಣ್ಣಗಳಿಂದ ಮಿಂಚುವ ತುಪ್ಪಳಗಳಿಂದ ಹೊದ್ದಿರುತ್ತದೆ. ಹೆಣ್ಣು ನವಿಲು ಗಾತ್ರದಲ್ಲಿ ಗಂಡಿನಷ್ಟೇ ಎತ್ತರವಿದ್ದರೂ ಅದರ ಕತ್ತು, ಎದೆಗಳಲ್ಲಿ ಒಂದಿಷ್ಟು ಸುಂದರ ತುಪ್ಪಳವಿದ್ದರೂ ಅದರ ರೆಕ್ಕೆಯ ಭಾಗ ಮತ್ತು ಬಾಲ ಆಕರ್ಷಕವಲ್ಲ. ಅದು ಕಡುಗಂದು, ಬೂದುಗಂದು ಗರಿಗಳಿಂದ ಕೂಡಿದವು. ಅದರ ಹೊಟ್ಟೆಯ ಭಾಗ ಬಿಳಿ ತುಪ್ಪಳದಿಂದ ಕೂಡಿರುತ್ತದೆ. ಅದರ ಎರಡೂ ಕಾಲು ಕಿತ್ತಲೆ ಬಣ್ಣದ ಹಿಣಿಜುಗಳಿಂದ ಆವೃತವಾಗಿರುತ್ತವೆ. ಸಾಮಾನ್ಯವಾಗಿ ಗುಡ್ಡಗಾಡುಗಳಲ್ಲಿ, ಮರುಭೂಮಿಗಳಲ್ಲಿ ಹಿಂಡುಗೂಡಿ ವಾಸಿಸುವ ನವಿಲುಗಳು ಇಂದು ಮೃಗಾಲಯದಲ್ಲಿ ನೋಡುಗರಿಗೆ ಸಂತೋಷ ಕೊಡುತ್ತಿವೆ. ನಮ್ಮ ಜನರಲ್ಲಿ ನವಿಲಿನ ಮಾಂಸದ ಚಪಲ ಹೆಚ್ಚಿದಂತೆಲ್ಲಾ ನವಿಲುಗಳ ಕುಲ ನಶಿಸುತ್ತಾ ಬಂದಿದೆ. 'ರಾಷ್ಟಪಕ್ಷಿ' ಎಂದು ಹೆಸರಿಟ್ಟರೂ, ಅದನ್ನು ಕೊಲ್ಲುವುದು ಅಪರಾಧ ಎಂದರೂ ಅವುಗಳ ಕುಲ ಕ್ಷೀಣಿಸುತ್ತಿದೆ.
Read also : Essay on Elephant in Kannada Language
Read also : Essay on Elephant in Kannada Language
0 comments: