Ra Bendre Biography in Kannada Language: In this article, we are providing ದ ರಾ ಬೇಂದ್ರೆ ಜೀವನ ಚರಿತ್ರೆ for students and teachers. Students can use this Ra Bendre life history in kannada to complete their homework.
ದ ರಾ ಬೇಂದ್ರೆ ಜೀವನ ಚರಿತ್ರೆ Ra Bendre Biography in Kannada Language
ದಾರ್ಶನಿಕ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ 'ಅಂಬಿಕಾತನದತ್ತ' ಧಾರವಾಡ ಜಿಲ್ಲೆಯ ಶಿರಹಟ್ಟಿ ಇವರ ಊರು. 31-1-1896ರಂದು ಧಾರವಾಡದಲ್ಲಿ ಜನನ. ತಂದೆ ರಾಮಚಂದ್ರ ಬೇಂದ್ರೆ, ತಾಯಿ ಅಂಬವ್ವ. 1916ರಲ್ಲಿ ಲಕ್ಷ್ಮೀಬಾಯಿಯೊಡನೆ ವಿವಾಹ, ಧಾರವಾಡ, ಪುಣೆಯಲ್ಲಿ ವಿದ್ಯಾಭ್ಯಾಸ. 1935ರಲ್ಲಿ ಎಂ.ಎ. ಉತ್ತೀರ್ಣ, ಪುಣೆ ಮತ್ತು ಸೊಲ್ಲಾಪುರದಲ್ಲಿ ಅಧ್ಯಾಪಕ ವೃತ್ತಿ. ಕೆಲಕಾಲ 'ಜಯಕರ್ನಾಟಕ' ಪತ್ರಿಕೆ ಸಂಪಾದಕತ್ವ, ಬೇಂದ್ರೆಯವರ 27 ಕವನ ಸಂಕಲನಗಳು ಪ್ರಕಟವಾಗಿವೆ. 14ನಾಟಕಗಳನ್ನು ರಚಿಸಿದ್ದಾರೆ. ಸುಮಾರು 10 ವಿಮರ್ಶಾ ಗ್ರಂಥಗಳನ್ನು ಬರೆದಿದ್ದಾರೆ. ಅವರ ವಿಮರ್ಶೆಗಳು ಹಾಗೂ ಲೇಖನಗಳು ಸಾಹಿತ್ಯದ ವಿರಾಟ್ ಸ್ವರೂಪ ಎಂಬ ಗ್ರಂಥದಲ್ಲಿ ಸಿಕ್ಕುತ್ತದೆ. 'ದೃಷ್ಟಿ ದರ್ಶನ', 'ಕವಿ-ಕೃತಿ', 'ಕರ್ನಾಟಕ-ಮಹಾರಾಷ್ಟ್ರ ಮತ್ತು 'ವಿಚಾರ-ವಿವೇಕ' ಎಂಬ 4 ಭಾಗಗಳನ್ನೊಳಗೊಂಡಿರುವ ಸಾಹಿತ್ಯ ವಿರಾಟ್ ಸ್ವರೂಪ 128 ಪ್ರಬಂಧಗಳನ್ನೂ ಒಳಗೊಂಡಿದ್ದು ಬೇಂದ್ರೆಯವರ ಅಧ್ಯಯನದ ಹರಹನ್ನೂ, ಕಾವ್ಯ ಮೀಮಾಂಸೆ ಹಾಗೂ ಸಂಶೋಧನೆಯ ವಿದ್ವತ್ತನ್ನೂ ಪರಿಚಯಿಸುತ್ತದೆ. ಬೇಂದ್ರೆಯವರು ಮರಾಠಿಯಲ್ಲೂ ಕೆಲವು ಗ್ರಂಥಗಳನ್ನು ರಚಿಸಿದ್ದಾರೆ. ಹಲವು ಗ್ರಂಥಗಳನ್ನು ಅನುವಾದಿಸಿದ್ದಾರೆ.
ಅವಧೂತ ಕವಿ, ವರಕವಿ, ರಸಋಷಿ, ಶ್ರೇಷ್ಠ ಕವಿ-ಹೀಗೆ ಗೌರವಿಸಲ್ಪಟ್ಟಿರುವ ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಸಣ್ಣ ಸೋಮವಾರ, ಹಕ್ಕಿ ಹಾರುತಿವೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಹೂತದ ಹುಣಸಿ, ಶ್ರಾವಣ ವೈಭವ, ಚಿತ್ತಿಯ ಮಳೆಯ ಸಂಜೆ ಮುಂತಾದವು ನಿಸರ್ಗವನ್ನು ಕುರಿತ ಕವಿತೆಗಳು, ಮಾಯಾಕಿನ್ನರಿ, ಹುಬ್ಬಳ್ಳಿಯಾಂವಾ' ಮನಸಖರಾಯನ ಮಗಳು ಮುಂತಾದವು ಮೋಡಿ ಹಾಕುವಂಥ ಕವಿತೆಗಳು, ಪುಟ್ಟವಿಧವೆ, ನರಬಲಿ, ತುತ್ತಿನಚೀಲ, 33 ಕೋಟಿ, ಮುಂತಾದವು ಬದುಕಿನ ಗಹನತೆಯನ್ನು ಪರಿಚಯಿಸುತ್ತದೆ. ಗೆಳೆಯ ಶಂಕರದೇವ, ಗುರುದೇವರಂಥ ಕವಿತೆಗಳು ಶ್ರೇಷ್ಠ ವ್ಯಕ್ತಿತ್ವ ಪರಿಚಯಿಸುವಂಥವು. ಪ್ರೀತಿ, ಪ್ರಣಯ, ಪ್ರೇಮದ ವಿವಿಧ ಮುಖಗಳನ್ನು ಪರಿಚಯಿಸುವ ಅವರ ಕವಿತೆಗಳು ತುಂಬ ಚೇತೋಹಾರಿಯಾದವು. ಕನ್ನಡ ಭಾಷೆ ಹಾಗೂ ನಾಡನ್ನು ಕುರಿತ ಬೇಂದ್ರೆಯವರ ಕವಿತೆಗಳಸಮುದಾಯ ಅಂದಿಗೆ ಅಗತ್ಯವಾಗಿದ್ದ ನಾಡುನುಡಿಗಳ ಪ್ರೇಮವನ್ನು ಉಕ್ಕಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಅಂತಹ ಕವಿತೆಗಳು ಇಂದಿಗೂ ಕಾವ್ಯ ದೃಷ್ಟಿಯಿಂದ ಗಮನಾರ್ಹವಾಗಿಯೇ ಇವೆ.
ವರಕವಿ ಎಂದು ಪ್ರಸಿದ್ಧರಾದ ಬೇಂದ್ರೆ ಉದ್ದಾಮ ದೇಶಭಕ್ತರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದವರು. ದಾರ್ಶನಿಕ ಕವಿ ಬೇಂದ್ರೆಗೆ ಹಲವು ಪ್ರಶಸ್ತಿಗಳು ದೊರೆತಿವೆ. ಅವರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತಂತೆ 'ಬೇಂದ್ರೆ ವಾಹ್ಮಯ ದರ್ಶನ', 'ನಮ್ಮ ಬೇಂದ್ರೆಯವರು', 'ದತ್ತವಾಣಿ', ಮೊದಲಾದ 15ಕ್ಕೂ ಹೆಚ್ಚು ವಿಮರ್ಶಾಗ್ರಂಥಗಳು ಪ್ರಕಟಗೊಂಡಿವೆ. 'ನಿರಾಭರಣ ಸುಂದರಿ' ಅವರ ಕಥಾಸಂಕಲನ. 1965ರಲ್ಲಿ ಅವರ ಮರಾಠಿ ಕೃತಿ. 'ಸಂವಾದ'ಕ್ಕೆ ಕೇಲ್ಕರ್ ಬಹುಮಾನ. 1959ರಲ್ಲಿ ಇವರ 'ಅರಳು ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ದೊರೆತಿವೆ. 1973ರಲ್ಲಿ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ 'ಜ್ಞಾನಪೀಠ ಪ್ರಶಸ್ತಿ' ಅವರ 'ನಾಕುತಂತಿ' ಕವನ ಸಂಕಲನಕ್ಕೆ ಲಭ್ಯವಾಗಿದೆ. ಭಾರತ ಸರ್ಕಾರದ 'ಪದ್ಮಶ್ರೀ' ಪ್ರಶಸ್ತಿ ದೊರೆತಿವೆ. 1976ರಲ್ಲಿ ಕಾಶಿ ವಿದ್ಯಾಪೀಠ ಗೌರವ ಡಾಕ್ಟರೇಟ್ ನೀಡಿ ಗೌರರಿಸಿದೆ. 1969ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ 'ಫೆಲೋ ಗೌರವ ನೀಡಿ ಪುರಸ್ಕರಿಸಿದೆ. 1935ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಬೇಂದ್ರೆಯವರ ಗೌರವಕ್ಕೆ ಕಿರೀಟಪ್ರಾಯವಾದವು. ಕರ್ನಾಟಕ ಸರ್ಕಾರ ಬೇಂದ್ರೆ ಕುರಿತ 'ಸಾಕ್ಷಚಿತ್ರ' ತಯಾರಿಸಿದೆ. 1995 ಬೇಂದ್ರೆ ಶತಮಾನೋತ್ಸವ ವರ್ಷದಲ್ಲಿ ರಾಜ್ಯಾದ್ಯಂತ ಅವರ ಸಾಹಿತ್ಯ ಜೀವನ ಕುರಿತ ಚರ್ಚೆಗಳು ನಡೆದವು.26-10-8
Read also : Kuvempu Biography in Kannada Language
Read also : Kuvempu Biography in Kannada Language
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ReplyDelete