ದಸರಾ ಹಬ್ಬದ ಪ್ರಬಂಧ Nada Habba Dasara Prabandha in Kannada

Admin
1
Nada Habba Dasara Prabandha in Kannada: In this article, we are providing ದಸರಾ ಹಬ್ಬದ ಪ್ರಬಂಧ for students and teachers. Students can use this Essay on Dussehra Festival in Kannada Language to complete their homework.

ದಸರಾ ಹಬ್ಬದ ಪ್ರಬಂಧ Nada Habba Dasara Prabandha in Kannada

1.ದಸರಾ ಆರಂಭ 2.ಐತಿಹಾಸಿಕ ಮಹತ್ವ 3.ಕರ್ನಾಟಕದಲ್ಲಿ ದಸರಾ 4.ಬೊಂಬೆಗಳ ಹಬ್ಬ 5. ರಾಕ್ಷಸ ಸಂಹಾರ 6. ಬೇರೆ ರಾಜ್ಯಗಳಲ್ಲಿ ನವರಾತ್ರಿ,
Nada Habba Dasara Prabandha in Kannada Essay on Dussehra Festival in Kannada Language
ಭಾರತದಾದ್ಯಂತ ದಸರಾ ಅಶ್ವಯುಜ ಮಾಸದ ಮೊದಲ ದಿನದಿಂದ ಆರಂಭವಾಗುತ್ತದೆ. ದೇವಿಯ ಪೂಜೆ ಮತ್ತು ಬೊಂಬೆಗಳ ಸಡಗರ ಈ ಹಬ್ಬದ ಆಕರ್ಷಣೆ. ಈ ಹಿಂದೆ ವಿಜಯನಗರದ ರಾಜರ ಕಾಲದಲ್ಲಿ ದಸರಾ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರು. ದಸರಾ ಉತ್ಸವವನ್ನು ನಡೆಸಲು ಅವರು ಕಟ್ಟಿಸಿರುವ ನವರಾತ್ರಿ ದಿಬ್ಬ ಅಥವಾ ಮಾನವಮಿ ದಿಬ್ಬದ ಅವಶೇಷವನ್ನು ಇಂದಿಗೂ ಹಂಪೆಯಲ್ಲಿ ಕಾಣಬಹುದು. ವಿಜಯನಗರದ ಅರಸರ ಕಾಲದಲ್ಲಿ ವಿದೇಶದಿಂದ ಬಂದಿದ್ದ ಪ್ರವಾಸಿಗರು ದಸರಾ ಹಬ್ಬದ ಆಚರಣೆಯ ವೈಶಿಷ್ಟ, ಸಡಗರ, ಸಂಭ್ರಮವನ್ನು ಮುಕ್ತಕಂಠದಿಂದ ಪ್ರಶಂಸೆ ಮಾಡಿದ್ದಾರೆ.

1610ರಲ್ಲಿ ಮೈಸೂರು ಅರಸರಲ್ಲಿ ಒಂಬತ್ತನೆಯವರಾದ ರಾಜಒಡೆಯರು ಮೊದಲಿಗೆ ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬವನ್ನು ಆಚರಣೆಗೆ ತಂದರು. ಮುಂದೆ ತಮ್ಮಅನಂತರ ಬರುವ ಪೀಳಿಗೆಯವರು ಈ ಹಬ್ಬವನ್ನು ಆಚರಿಸಬೇಕು ಎಂದು ಅಪ್ಪಣೆ ಮಾಡಿದರು. 1799ರಲ್ಲಿ ಮುಮುಡಿ ಕೃಷ್ಣರಾಜ ಒಡೆಯರು ಪಟ್ಟಕ್ಕೆ ಬಂದ ಮೇಲೆ ದಸರಾವನ್ನು ಮೈಸೂರಿನಲ್ಲಿ ಆಚರಿಸಲು ಆರಂಭ ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನಲ್ಲಿ ನವರಾತ್ರಿ ಉತ್ಸವ ಹಾಗೂ ವಿಜಯದಶಮಿಯ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲು ಬೇಕಾದ ಸಕಲ ಏರ್ಪಾಟು ಮಾಡಲಾಯಿತು. ಮೈಸೂರಿನಲ್ಲಿ ದಸರಾ ಹಬ್ಬದ ಕೊನೆಯದಿನ ನಡೆಯುವ ಜಂಬೂಸವಾರಿ ಉತ್ಸವವನ್ನು ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಈಗಲೂ ಬರುತ್ತಾರೆ.

ಕರ್ನಾಟಕದಲ್ಲಿ ದಸರಾವನ್ನು 'ನಾಡಹಬ್ಬ ಎಂದು ಆಚರಿಸಲಾಗುತ್ತದೆ. ಹತ್ತುದಿನಗಳು ನಡೆಯುವ ಈ ನಾಡಹಬ್ಬ ಮುಖ್ಯವಾಗಿ ಸಂಸ್ಕೃತಿ ಹಾಗೂ ಸಾಹಿತ್ಯಕ ಕಾರ್ಯಕ್ರಮ. ಹಿಂದೂ ಸಂಪ್ರದಾಯದ ಕುಟುಂಬಗಳಲ್ಲಿ ದಸರಾ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಸಪ್ತಮಿಯ ದಿನ ಶ್ರೀಸರಸ್ವತಿ ಪೂಜೆ ನಡೆಸುತ್ತಾರೆ. ಆ ದಿನ ಪುಸ್ತಕಗಳು, ಸಂಗೀತ ವಾದ್ಯಗಳು, ತಾಳೆಗರಿ, ಭೂರ್ಜ್ವಪತ್ರ ಇತ್ಯಾದಿ ಪೂಜಿಸುತ್ತಾರೆ. ಮಾರನೆಯ ದಿನ ದುರ್ಗಾಷ್ಟಮಿ, ದುರ್ಗಾ ದೇವತೆಯ ಪೂಜೆ ಇಂದಿನ ವಿಶೇಷ. ಮಹಾನವಮಿಯ ದಿನದಂದು ಆಯುಧ ಪೂಜೆ, ಯಂತ್ರಗಳು, ಕಾರು, ಬಸ್ಸು ಇತ್ಯಾದಿ ವಾಹನಗಳು, ಚಾಕು, ಕತ್ತರಿ ಹೊಲಿಗೆಯಂತ್ರ ಮುಂತಾದವುಗಳಿಗೆ ವಿಶೇಷ ಪೂಜೆ ನಡೆಯುತ್ತದೆ.

ದಸರಾ ಬೊಂಬೆಗಳ ಹಬ್ಬವೂ ಹೌದು. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮನೆಮನೆಗಳಲ್ಲಿ ಅಲಂಕರಿಸಿದ ವಿವಿಧ ರೀತಿಯ ಬೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿರುತ್ತಾರೆ. ಮಕ್ಕಳು ಸಡಗರದಿಂದ ಪ್ರತಿ ಮನೆಗಳಿಗೆ ಹೋಗಿ ಬೊಂಬೆಗಳನ್ನು ನೋಡಿ ಸಂತೋಷಪಡುತ್ತಾರೆ. ಬೊಂಬೆಗಳ ಸುಂದರ ನೋಟ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ಮಹಿಷಾಸುರ ಪ್ರಜಾಪೀಡಕನಾಗಿದ್ದ ಕಾರಣ ಜನರು ಭಯದಿಂದ ದೇವರನ್ನು ಸ್ತುತಿಸಿದರು. ದೇವತೆಗಳೂ ಸಹ ಹೆದರಿ ತ್ರಿಮೂರ್ತಿಗಳ ಮೊರೆಹೊಕ್ಕರು. ತ್ರಿಮೂರ್ತಿಗಳು ತಮ್ಮ ಉತ್ತಮ ಗುಣಗಳನ್ನು ಕೊಟ್ಟು ದುರ್ಗಾದೇವಿಯನ್ನು ನಿರ್ಮಿಸಿದರು. ಸಿಂಹವಾಹನದ ಮೇಲೆ ಕುಳಿತು ದೇವಿ, ಮಹಿಷಾಸುರನ್ನು ಎದುರಿಸಿದಳು. ಒಂಬತ್ತು ದಿನ ಅವರಿಬ್ಬರ ಮಧ್ಯೆ ಯುದ್ಧ ನಡೆಯಿತು. ಹತ್ತನೆಯ ದಿನ ದೇವಿ ಅಸುರನನ್ನು ಕೊಂದುಹಾಕಿದಳು. ಈ ಪ್ರಸಂಗದ ನೆನಪಿಗಾಗಿ ದಸರಾ ಅಥವಾ ನವರಾತ್ರಿಯನ್ನು ಆಚರಿಸಲಾಗುತ್ತದೆ. ವಿಜಯದ ದಿನವೂ ಸೇರಿದರೆ ಇದು ಹತ್ತು ದಿನವಾಗುತ್ತದೆ. ಇದೇ ದಸರಾ.

ಬಂಗಾಳದಲ್ಲಿ ದಸರೆಯ ಕಾಲದಲ್ಲಿ ದುರ್ಗಾಪೂಜೆ ವೈಶಿಷ್ಟಪೂರ್ಣವಾದದ್ದು. ರಾಜಾಸ್ಥಾನದಲ್ಲಿ ಮಹಾಲಕ್ಷ್ಮೀಯ ಪೂಜೆ ಮಹತ್ವದ್ದು. ಜೈತ್ರಯಾತ್ರೆ ಎಂದು ಭಕ್ತರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಮಹಾರಾಷ್ಟ್ರದಲ್ಲಿ ಆನೆಯ ಮೇಲೆ ಅಂಬಾರಿ ಮೆರವಣಿಗೆ, ಶಮಿಪತ್ರ ಹಂಚುವುದು ನಡೆಯುತ್ತದೆ.

ವಿಜಯದಶಮಿಯನ್ನು ವಿದ್ಯಾದಶಮಿ' ಎಂದೂ ಕರೆಯುವರು. ಅಕ್ಷರಾಭ್ಯಾಸ, ಸಂಗೀತ, ನೃತ್ಯಾಭ್ಯಾಸ ಆರಂಭಕ್ಕೆ ಇಂದು ಶುಭದಿನ ಎಂದು ಜನರ ನಂಬಿಕೆ, ಉತ್ಸಾಹ, ಸಂಭ್ರಮದಿಂದ ಎಲ್ಲರೂ ಆಚರಿಸುವ ದಸರಾ, ಹಬ್ಬಗಳ ರಾಜ ಎನ್ನಬಹುದು.
Read also :

Industrial Pollution Essay in Kannada language

Essay on Kreedegalu Mahatva in Kannada Language

Aranya Samrakshane Essay in Kannada Language

Van Mahotsav Essay in Kannada Language

Rashtriya Bhavaikya Essay in Kannada Language

Tags

Post a Comment

1Comments
Post a Comment

#buttons=(Accept !) #days=(20)

Our website uses cookies to enhance your experience. Learn More
Accept !