Ganesh Chaturthi Essay in Kannada : In this article, we are providing ಗಣೇಶ ಚತುರ್ಥಿ ಪ್ರಬಂಧ for students. After reading this, You will be a...
Ganesh Chaturthi Essay in Kannada : In this article, we are providing ಗಣೇಶ ಚತುರ್ಥಿ ಪ್ರಬಂಧ for students. After reading this, You will be able to write Ganesh Chaturthi Prabandha in Kannada
ಗಣೇಶ ಚತುರ್ಥಿ ಪ್ರಬಂಧ (Ganesh Chaturthi Prabandha in Kannada)
ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದಲ್ಲಷ್ಟೇ ಅಲ್ಲದೆ, ವಿದೇಶದಲ್ಲೂ ವಿನಾಯಕ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ, ಸಂಭ್ರಮದಿಂದ ಆಚರಿಸಲಾಗುತ್ತದೆ. ವಿನಾಯಕ ಚತುರ್ಥಿಯು ಭಾದ್ರಪದ ಮಾಸದ (ಆಗಸ್ಟ್ - ಸೆಪ್ಟೆಂಬರ್) ಶುಕ್ಲಪಕ್ಷದ ಚತುರ್ಥಿ ತಿಥಿ (ನಾಲ್ಕನೇ ದಿನ) ಬರುತ್ತದೆ. ಹಿಂದೂಗಳು ಅತ್ಯಂತ ಆರಾಧಿಸುವ ಮತ್ತು ಆಚರಿಸುವ ದೇವರುಗಳಲ್ಲಿ ಗಣೇಶನೂ ಒಬ್ಬ. ಗಣೇಶನ ಜನನವನ್ನು ಗಣೇಶ ಚತುರ್ಥಿಯನ್ನಾಗಿ 10 ದಿನಗಳ ಕಾಲ ಉತ್ಸವವನ್ನಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.
ಈ ದಿನದಂದೇ ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಮುಖದ ಜಾಗದಲ್ಲಿ ಆನೆಯ ಮುಖವನ್ನು ಸೇರಿಸಲಾಯಿತು. ಈ ಮೂಲಕ ಗಣೇಶನೂ ಗಜಾನನ ಆದನು. ಗಣೇಶನ ಮಾತಾಪಿತರು ಶಿವ ಮತ್ತು ಪಾರ್ವತಿ. ಶಿವ ಮತ್ತು ಪಾರ್ವತಿಯ ಪುತ್ರನಾದ ಗಣೇಶ ಅದೃಷ್ಟ, ಸಮೃದ್ಧಿ ಮತ್ತು ಬುದ್ಧಿವಂತಿಕೆಯ ದೇವರು ಎಂದು ಭಕ್ತರು ನಂಬಿದ್ದಾರೆ.ಅದಕ್ಕಾಗಿಯೇ ಜನರು ಅದೃಷ್ಟಕ್ಕಾಗಿ ಮತ್ತು ಯಾವುದೇ ವಿಘ್ನ ಬಾರದೇ ಇರಲು ಯಾವುದೇ ಪವಿತ್ರ ಸಂದರ್ಭಕ್ಕೂ ಮುನ್ನ ಗಣೇಶನನ್ನು ಪೂಜಿಸುತ್ತಾರೆ. ಹೀಗಾಗಿ ಅವನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ.
ಈ ಗಣೇಶ ಹಬ್ಬದಂದು ಭಕ್ತರು ತಮ್ಮ ಮನೆಗಳಿಗೆ ಗಣಪನನ್ನು ಸಂಭ್ರಮ ಸಡಗರದಿಂದ ಆಹ್ವಾನಿಸುತ್ತಾರೆ. ಅಲ್ಲದೆ, ಮನೆಗಳಲ್ಲೂ ವಿನಾಯಕ ಚತುರ್ಥಿ ಪೂಜೆ ಮತ್ತು ವ್ರತವನ್ನು ಮಾಡಲಾಗುತ್ತದೆ. ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಕೆಲವರು ಗಣಪನನ್ನು ಐದು ದಿನಗಳವರೆಗೆ ಪ್ರತಿಷ್ಠಾಪಿಸಿ ಪೂಜಿಸಿದರೇ ಇನ್ನು ಕೆಲವರು 10, 11 ಗಳವರೆಗೆ ಇಟ್ಟು ಪೂಜಿಸುತ್ತಾರೆ. ಮೋದಕ, ಕಾರಂಜಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ನಂತರ ಗಣಪನನ್ನು ಸಾಂಪ್ರದಾಯಿಕ ವಿಧಾನದಲ್ಲಿ ಭಕ್ತಿಯಿಂದ ಪೂಜಿಸುತ್ತಾರೆ. ನಂತರ ಸಂಭ್ರಮ, ಸಡಗರದಿಂದ ಹಾಡು ಮತ್ತು ನೃತ್ಯ ಮಾಡುತ್ತಾ ಗಣೇಶನನ್ನು ಮೆರವಣಿಗೆ ಮಾಡುತ್ತಾರೆ. ನಂತರ ನದಿಯ ಬಳಿ ತಂದು ಮತ್ತೆ ಪೂಜಿಸಿ ನದಿಯಲ್ಲಿ ಮುಳುಗಿಸುತ್ತಾರೆ.
ಈ ಮುಳುಗಿಸುವಿಕೆಯು ತನ್ನ ಭಕ್ತರ ಎಲ್ಲಾ ದುರದೃಷ್ಟಗಳನ್ನು ವಶಪಡಿಸಿಕೊಳ್ಳುವುದರಿಂದ ಗಣೇಶನನ್ನು ಕೈಲಾಸಕ್ಕೆತನ್ನ ನಿವಾಸದ ಕಡೆಗೆ ಬೀಳ್ಕೊಡುವುದನ್ನು ಸಂಕೇತಿಸುತ್ತದೆ.ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಆಚರಣೆಗಳು ಭವ್ಯ ಮತ್ತು ವಿಜೃಂಭಣೆಯಿಂದ ಕೂಡಿದ್ದರೂ ಸಹ , ಕರ್ನಾಟಕ ಮತ್ತು ಮಹಾರಾಷ್ಟ್ರಗಳು ತಮ್ಮ ಗಣೇಶ ಹಬ್ಬಕ್ಕೆ ಇಡೀ ದೇಶಾದ್ಯಂತ ಜನಪ್ರಿಯವಾಗಿವೆ. ಪ್ರತಿ ವರ್ಷ, ಕರ್ನಾಟಕ ಸರ್ಕಾರವು ಬೃಹತ್ ಗಣೇಶ ಮೂರ್ತಿಗಳನ್ನು ವರ್ಣಮಯವಾಗಿ ಅಲಂಕರಿಸಿದ ತಾತ್ಕಾಲಿಕ ಮಂಟಪಗಳಲ್ಲಿ ಅಥವಾ ಪಂಡಲ್‌ಗಳಲ್ಲಿ ಸ್ಥಾಪಿಸುತ್ತದೆ. ಈ ಅಲಂಕಾರಿಕ ಗಣಪಗಳನ್ನು ಸಾರ್ವಜನಿಕರ ಕಣ್ಮನಗಳನ್ನು ಸೆಳೆಯುತ್ತದೆ. ಚಿಕ್ಕ ಚಿಕ್ಕ ಬಾಳೆ ಸಸಿಗಳು, ಹೂವಿನ ಹಾರಗಳು ಮತ್ತು ನೂರಾರು ದೀಪಗಳಂತಹ ಅಲಂಕಾರಿಕ ವಸ್ತುಗಳಿಂದ ಈ ಪಂಡಲ್‌ಗಳನ್ನು ಅಲಂಕರಿಸಲಾಗುತ್ತದೆ. ಈ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಸ್ತುತ ಘಟನೆಗಳು ಅಥವಾ ಧಾರ್ಮಿಕ ವಿಷಯಗಳನ್ನು ಚಿತ್ರಿಸುವ ಥೀಮ್ ಆಧಾರಿತ ಅಲಂಕಾರಗಳನ್ನು ಕೂಡ ನಾವು ನೋಡಿ ಆನಂದಿಸಬಹುದು.
COMMENTS