Sunday, 22 March 2020

Kannada Essay on My favourite Hobby Flower Arrangement ನನ್ನ ನೆಚ್ಚಿನ ಹವ್ಯಾಸ ಹೂವಿನ ವ್ಯವಸ್ಥೆ ಪ್ರಬಂಧ

Kannada Essay on My favourite Hobby Flower Arrangement: In this article, we are providing ನನ್ನ ನೆಚ್ಚಿನ ಹವ್ಯಾಸ ಹೂವಿನ ವ್ಯವಸ್ಥೆ ಪ್ರಬಂಧ for students and teachers. Students can use this Kannada Essay on My favourite Hobby Flower Arrangement to complete their homework.

ನನ್ನ ನೆಚ್ಚಿನ ಹವ್ಯಾಸ ಹೂವಿನ ವ್ಯವಸ್ಥೆ ಪ್ರಬಂಧ Kannada Essay on My favourite Hobby Flower Arrangement

1.ವಿವರಣೆ 2. ಉಗಮ ಮತ್ತು ಬೆಳವಣಿಗೆ 3. ಸಂಗ್ರಹ ಮತ್ತು ಜೋಡಣೆಯಲ್ಲಿ ಸಮತೋಲನ ಕಾಪಾಡುವ ವಿಧಾನ 4. ಉಪಸಂಹಾರ.

'ಹೂ ಜೋಡಣೆ' ಒಂದು ಉಲ್ಲಾಸಕರ ಕಲೆ, ಉತ್ತಮ ಹವ್ಯಾಸ. ದ್ವಿತೀಯ ಮಹಾಯುದ್ಧದ ನಂತರ ಹೂ ಜೋಡಣೆಯ ಪ್ರಚಾರ ಬಿರುಸಾಗಿ ನಡೆಯಿತು. ಅನೇಕ ಸಂಘ-ಸಂಸ್ಥೆಗಳು ಇದಕ್ಕಾಗಿ ಹುಟ್ಟಿಕೊಂಡವು. ಪಾಶ್ಚಾತ್ಯ ದೇಶಗಳಲ್ಲಿ ಜಪಾನ್ ಮತ್ತು ಚೀನಾ ದೇಶಗಳಲ್ಲಿ ಹೂ ಜೋಡಣೆಯ ಕಲೆ ಮತ್ತು ಸಂಪ್ರದಾಯ ಪುರಾತನ ಕಾಲದಿಂದ ನಡೆದುಬಂದಿದೆ. ಜಪಾನೀ ಶೈಲಿಯ ಜೋಡಣೆಗೆ 'ಇಕಬಾನ' ಎಂಬ ಹೆಸರಿದೆ. 17 ಮತ್ತು 18ನೇ ಶತಮಾನದಲ್ಲಿ ಇದು ಶ್ರೇಷ್ಠ ಚಿತ್ರಗಾರರ ವರ್ಣಚಿತ್ರಗಳಿಂದ ಸ್ಫೂರ್ತಿ ಪಡೆದು ಬೆಳೆಯಿತು. ಸಾಂಪ್ರದಾಯಿಕ 'ಇಕೆಬಾನ' ಕಲೆಯಲ್ಲಿ ಹೂ ಎಲೆ, ಮೊಗ್ಗು ಅಥವಾ ಗಿಡದ ದಂಟುಗಳ ಮೂಲಕ ಋತು ಪರಿವರ್ತನೆ ಅಥವಾ ಸಸ್ಯ ವಿಕಾಸದ ದೃಶ್ಯಗಳನ್ನು ಕಲಾತ್ಮಕವಾಗಿ ಅಳವಡಿಸುತ್ತಾರೆ. ಸರೋವರದ ದೃಶ್ಯ, ಗ್ರಾಮೀಣ ನೋಟ, ಪವಿತ್ರ ಪ್ಯೂಜಿ ಬೆಟ್ಟ ಅಳವಡಿಸಲ್ಪಡುತ್ತದೆ. ಜಪಾನಿನಲ್ಲಿ (ಇಕೆಬಾನ' ಕಲೆಯನ್ನು ಕಲಿಸುವ ವಿಶೇಷ ಶಾಲೆಗಳಿವೆ.
ಹೂ ಜೋಡಣೆಗೆ ಅಂಗಳದಲ್ಲಿ ಮಾಡಿ ಬೆಳೆಸಿದ ಹೂಗಳೇ ಬೇಕೆಂದಿಲ್ಲ. ತಾನಾಗಿ - ಬೆಳೆದ ಕಾಡು ಹೂಗಳೂ ಆಗಬಹುದು. ವ್ಯರ್ಥವಾಗಿ ಬೆಳೆದಿರುವ ಕೆಲವು ಬಗೆಯ ಹುಲ್ಲೂ ಆಗಬಹುದು. ಬಣ್ಣಬಣ್ಣದ ಆಕರ್ಷಕ ಕಾಯಿ-ಹಣ್ಣುಗಳನ್ನು ಅಂದವಾಗಿ ಹೂವು, ಎಲೆಗಳೊಡನೆ ಬೆರೆಯುವಂತೆ ಇಡುವುದೂ ಉಂಟು. ಪಾಶ್ಚಾತ್ಯರಲ್ಲಿ ಹೂವುಗಳಿಂದ ಮನೆಯ ಒಳಾಂಗಣವನ್ನು ಅಲಂಕರಿಸುವ ರೂಢಿ ಬೆಳೆದುಬಂದಿದೆ. ಒಂದೇ ಬಗೆಯ ಹೂವುಗಳನ್ನು ಸಂಗ್ರಹಿಸಿ ಗೊಂಚಲು ಮಾಡಿ ಅವುಗಳ ಬಣ್ಣ ಮತ್ತು ಸಂಖ್ಯೆಯಿಂದ ಅದ್ಭುತ ಪರಿಣಾಮ ಬೀರುವಂತೆ ಮಾಡುವುದು ಸಾಂಪ್ರದಾಯಿಕ ರೀತಿ.

ಹೂ ಜೋಡಣೆಯ ಈಗಿನ ಶೈಲಿಯಲ್ಲಿ ಹೂ-ಎಲೆಗಳನ್ನು ಕಾಲ್ಪನಿಕ ಆಕೃತಿಯ ಭಾವನಿರೂಪಣೆಗಾಗಿ ಉಪಯೋಗಿಸುವುದುಂಟು. ಹೂ ಜೋಡಣೆಗೆ ಹೂವು ಎಷ್ಟು ಮುಖ್ಯವೋ ಜೋಡಣೆಯ ಮಧ್ಯ ತರವಾಗುವ ಜಾಗಗಳಿಗೆ ಅಷ್ಟೇ ಮಹತ್ವವುಂಟು.

ಹೂ ಜೋಡಣೆಯಲ್ಲಿ ಸಹಜತ ಮುಖ್ಯ. ನಿಸರ್ಗದಲ್ಲಿರುವಂತೆಯೇ ಜೋಡಣೆ ಅತ್ಯಂತ ಆಕರ್ಷಕ. ಜೋಡಣೆ ಅತಿ ಶಿಸ್ತುಬದ್ಧವಾಗಲಿ, ಅಂಕುಡೊಂಕಾಗಿಯಾಗಲಿ ಇದ್ದರೆ ಕೃತಕತ ಕಾಣುವುದು. ವಿರುದ್ಧವಾಗಿರುವ ಹೊಂದಿಕೆಯಾಗುವ ಬಣ್ಣಗಳನ್ನು ಆರಿಸುವುದು ಹೂ ಜೋಡಣೆಯಲ್ಲಿ ಮಹತ್ವದ ಸಂಗತಿ. ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ.
ಪುಷ್ಪಾಲಂಕಾರ ಒಂದು ಪ್ರಾಚೀನ ಕಲೆ. 64 ವಿದ್ಯೆಗಳಲ್ಲಿ ಈ ಕಲೆಯೂ ಸೇರಿದೆ. ಹಿಂದೆ ಹೂ ಜೋಡಣೆಗೆ ಬೇಕಾದ ಪಾತ್ರೆ, ಹೂದಾನಿ ಮತ್ತು ಇತರ ಸಾಮಗ್ರಿಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಈಗ ಅತ್ಯಂತ ಕಲಾತ್ಮಕ ಹೂದಾನಿಗಳು ಬೇಕೆಂಬುದಿಲ್ಲ. ಸುಲಭವಾಗಿ ದೊರೆಯುವ ಹಳೇ ವಸ್ತು, ಕಂಚಿನ ಲೋಟ, ಬುಟ್ಟಿ, ಸೀಸ ಇತ್ಯಾದಿ ಯಾವುದಾದರೂ ಆಗಬಹುದು. ಅವು ಸ್ವಲ್ಪ ವಿಶೇಷ ರೀತಿಯದ್ದಾಗಿದ್ದರೆ ಚೆನ್ನ. ಅವುಗಳಿಗೆ ಹೊಂದಿಕೆಯಾಗುವಂತಹ ಹೂವುಗಳನ್ನು ಜೋಡಿಸಬೇಕು.

ಹೂ ಜೋಡಣೆಗೆ ಕೆಲವು ಗಂಟೆಗೆ ಮುಂಚೆ ಹೂಗಳನ್ನು ಕೀಳಬೇಕು. ಅದನ್ನು ಉಗುರು ಬೆಚ್ಚಗಾದ ನೀರಿನಲ್ಲಿ ಅದ್ದಿ ತಂಪಾದ ಜಾಗದಲ್ಲಿ ಹಾಗೆಯೇ ಇರಿಸಬೇಕು. ಮೆದುವಾದ ಟೊಂಗೆಗಳಿದ್ದರೆ ಹರಿತವಾದ ಚಾಕುವಿನಿಂದ ಸೀಳಿದಂತೆ ಮಾಡಬೇಕು. ಅತಿ ಮದುವಾದ ಎಲೆಗಳುಳ್ಳ ಕೆಲವು ಬಗೆಯ ಹೂ ಕಡ್ಡಿಗಳನ್ನು ಕುದಿಯುವ ನೀರಿನಲ್ಲಿ ಕೆಲಕಾಲ ಇಟ್ಟು ತೆಗೆಯುವುದುಂಟು. ಇದರಿಂದ ಬಾಡಿದಂತಾಗುವ ಹೂಗಳಿಗೆ ಮತ್ತೆ ಚೇತನ ಬರುತ್ತದೆ. ಎರಡು ದಿನಗಳಿಗೊಮ್ಮೆ ಅಥವಾ ಅವಶ್ಯವಿದ್ದಂತೆ ಹೂದಾನಿಯ ನೀರನ್ನು ಬದಲಾಯಿಸುವುದು ಒಳ್ಳೆಯದು.

SHARE THIS

Author:

I am writing to express my concern over the Hindi Language. I have iven my views and thoughts about Hindi Language. Hindivyakran.com contains a large number of hindi litracy articles.

0 comments: