Short Essay on Parisara Malinya in Kannada Language: In this article, we are providing ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ for students and teachers. Students can use ths essay on parisara Malinya In kannada language to complete their homework. ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ Short Essay on Parisara Malinya in Kannada Language 1.ಶುದ್ಧವಾದ ಗಾಳಿಯ ಕೊರತೆ. 2.ವಾತಾವರಣ ಮಲಿನಗೊಳ್ಳುವುದು 3.ಸಾವುನೋವು ಸಂಭವ 4.ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು5.ದುಷ್ಪರಿಣಾಮಗಳು ಪರಿಸರ ಮಾಲಿನ್ಯ ತಡೆಗಟ್ಟುವ ಕ್ರಮಗಳು ನಗರ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಶುದ್ಧವಾದ ಗಾಳಿ ಸಿಗುವುದು ಕಷ್ಟವಾಗಿ ಒಮ್ಮೊಮ್ಮೆ ಉಸಿರಾಟಕ್ಕೆ ತೊಂದರೆಯಾಗುವುದುಂಟು. ಜಪಾನಿನಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಯಂತ್ರಕ್ಕೆ ಒಂದು ನಾಣ್ಯವನ್ನು ತೂರಿಸಿ ಒಂದು ಬೀಸು ಆಮ್ಲಜನಕ ಪಡೆಯುವುದನ್ನು ನಾವು ಕೇಳಿದ್ದೇವೆ. ವಾತಾವರಣದ ಗಾಳಿ ಪೂರ್ತಿ ಕೆಟ್ಟಾಗ ವಿದ್ಯಾರ್ಥಿಗಳು ಜಾಲರಿಯ ಮುಖವಾಡ ಧರಿಸಿ ಕುಳಿತು ಪಾಠ ಕೇಳುವುದೂ ಉಂಟು. ನೀರಿಗೆ ಸೇರಿದ ರಾಸಾಯನಿಕಗಳನ್ನು
Short Essay on Parisara Malinya in Kannada Language: In this article, we are providing ಪರಿಸರ ಮಾಲಿನ್ಯ ಮತ್ತು ಸಂರಕ್ಷಣೆ ಪ್ರಬಂಧ for students and teachers. Students can use ths essay on parisara Malinya In kannada language to complete their homework.
1.ಶುದ್ಧವಾದ ಗಾಳಿಯ ಕೊರತೆ. 2.ವಾತಾವರಣ ಮಲಿನಗೊಳ್ಳುವುದು 3.ಸಾವುನೋವು ಸಂಭವ 4.ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು5.ದುಷ್ಪರಿಣಾಮಗಳು ಪರಿಸರ ಮಾಲಿನ್ಯ ತಡೆಗಟ್ಟುವ ಕ್ರಮಗಳು
ನಗರ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಶುದ್ಧವಾದ ಗಾಳಿ ಸಿಗುವುದು ಕಷ್ಟವಾಗಿ ಒಮ್ಮೊಮ್ಮೆ ಉಸಿರಾಟಕ್ಕೆ ತೊಂದರೆಯಾಗುವುದುಂಟು. ಜಪಾನಿನಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿರುವ ಯಂತ್ರಕ್ಕೆ ಒಂದು ನಾಣ್ಯವನ್ನು ತೂರಿಸಿ ಒಂದು ಬೀಸು ಆಮ್ಲಜನಕ ಪಡೆಯುವುದನ್ನು ನಾವು ಕೇಳಿದ್ದೇವೆ. ವಾತಾವರಣದ ಗಾಳಿ ಪೂರ್ತಿ ಕೆಟ್ಟಾಗ ವಿದ್ಯಾರ್ಥಿಗಳು ಜಾಲರಿಯ ಮುಖವಾಡ ಧರಿಸಿ ಕುಳಿತು ಪಾಠ ಕೇಳುವುದೂ ಉಂಟು. ನೀರಿಗೆ ಸೇರಿದ ರಾಸಾಯನಿಕಗಳನ್ನು ಸೇವಿಸಿ ಮೀನುಗಳು ವಿಷಾಯುಕ್ತವಾಗಿ ಮರಣಿಸಿರುವುದನ್ನು ಪತ್ರಿಕೆಗಳಲ್ಲಿ ನಾವು ಓದಿದ್ದೇವೆ. ಮೊಟ್ಟೆಯ ಚಿಪ್ಪಿನಲ್ಲಿ ಡಿ.ಡಿ.ಟಿ. ಸೇರಿ ಮೊಟ್ಟೆಗಳು ಒಡೆದು ಹೋಗುವುದನ್ನು ನಾವು ಕೇಳಿದ್ದೇವೆ. ಇದೆಲ್ಲಾ ಭೂಮಿಯ ಗಾಳಿ, ನೀರು, ನೆಲ ಮಲಿನಗೊಳ್ಳುವುದಕ್ಕೆ ಕೆಲವು ಉದಾಹರಣೆಗಳು. ಇದೇಪರಿಸರ ಮಾಲಿನ್ಯ.
ಮನೆ ಮತ್ತು ಕಾರ್ಖಾನೆಗಳ ಚಿಮಿಣಿ ಹೊಗೆಯುಗುಳುತ್ತವೆ. ವಾಹನಗಳ ನಳಿಗೆಗಳಿಂದ ಹೊಗೆ ಬುಸಬುಸ ಹೊರಬರುತ್ತದೆ. ಕಟ್ಟಿಗೆ, ಕಲ್ಲಿದ್ದಲು, ಪೆಟ್ರೋಲು ಮತ್ತಿತರ ಹಲವಾರು ರಾಸಾಯನಿಕ ಪದಾರ್ಥಗಳನ್ನು ದಹಿಸುವುದರಿಂದ ಹೊಗೆಯಲ್ಲಿ ಇಂಗಾಲ, ಸಾರಜನಕ, ಗಂಧಕದ ಆಕೈಡ್‌ಗಳು, ಇತರ ಅನಿಲಗಳು ಗಾಳಿಯಲ್ಲಿ ಶೇಖರಗೊಳ್ಳುತ್ತವೆ. ಬೆಳೆಯ ಮೇಲೆ ಕೀಟನಾಶಕಗಳ ಸಿಂಪರಣೆ, ಬಣ್ಣಗಳ ತಯಾರಿಕೆ ಇತ್ಯಾದಿಗಳಲ್ಲಿ ರಾಸಾಯನಿಕ ವಸ್ತುಗಳು ಗಾಳಿಯನ್ನು ಸೇರುತ್ತವೆ. ಗಣಿ ಕೆಲಸ, ಕಟ್ಟಡ, ರಸ್ತೆ ನಿರ್ಮಾಣದ ಕೆಲಸಗಳಿಂದ ಧೂಳು ಹರಡುತ್ತದೆ. ಕೆಲವೊಮ್ಮೆ ಹಿಮಧೂಳು ವಾತಾವರಣದಲ್ಲಿ ತೆಳು ಮೋಡಗಳಂತ ಹರಡಿ ಗಾಳಿಯ ಚಲನೆಗೆ ತೊಂದರೆಯಾಗುವುದುಂಟು. ಇದರಿಂದ ಪರಿಸರ ಮಾಲಿನ್ಯವುಂಟಾಗುತ್ತದೆ.
ಗಾಳಿ ಅತಿ ಹೆಚ್ಚು ಮಲಿನಗೊಂಡಾಗ ನಿದ್ದೆ ಹಾಳಾಗುತ್ತದೆ. ವಾಂತಿ, ತಲೆ ಸುತ್ತುವುದು ಪ್ರಾರಂಭವಾಗುತ್ತದೆ. ಕೈಗಾರಿಕಾ ಕೇಂದ್ರಗಳಲ್ಲಿ ಒಂದೆರಡು ನಿಮಿಷ ಗಾಳಿ ಕೆಟ್ಟಾಗ ಅಸ್ವಸ್ಥತೆ ಮತ್ತು ಸಾವು ಸಂಭವಿಸುವುದುಂಟು. ಭೋಪಾಲ್ ವಿಷಾನಿಲ ದುರಂತದಿಂದ ನೂರಾರು ಜನರು ಸತ್ತು ಸಾವಿರಾರು ಜನರ ಬಾಳು ದುಸ್ತರವಾಗಿರುವ ವಿಷಯ ಇನ್ನೂ ನಮ್ಮ ಕಣ್ಮುಂದಿದೆ.
ಗಾಳಿ ಮಲಿನವಾಗುವುದನ್ನು ತಪ್ಪಿಸಲು ಕಾರ್ಖಾನೆಗಳಿಂದ ಹೊರಡುವ ಹೊಗೆಯನ್ನು ಅನಿಲ ಶೋಧಕ ಯಂತ್ರಗಳಲ್ಲಿ ದೂಡಿ ಸಂಸ್ಕರಿಸಿ ಹೊರಕ್ಕೆ ಬಿಡಬೇಕು. ವಾಹನಗಳಿಂದ ಹೊರಬರುವ ಹೊಗೆಯನ್ನು ಕಡಿಮೆ ಮಾಡುವುದು, ಹೊಗೆ ಚೆಲ್ಲುವ ವಾಹನ ಸಂಚಾರ ನಿಯಂತ್ರಣ, ಹೊರಗೆ ಚಿಮ್ಮುವ ಹೊಗೆಯ ಗುಣ ಪ್ರಮಾಣವನ್ನು ಪರೀಕ್ಷಿಸುವುದು-ಇದೆಲ್ಲಾ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನಗಳು.
ಗಾಳಿ ಒಂದೇ ಸಮನೆ ಮಲಿನಗೊಂಡರೆ ಜೀವಿಗಳ ಪರಿಸರದ ಸಮತೋಲನ ಏರುಪೇರಾಗಬಹುದು. ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಅಧಿಕವಾದಂತೆ ಭೂಮಿಯ ಉಷ್ಣತೆ ಹೆಚ್ಚಬಹುದು. ಇದರಿಂದ ಧ್ರುವ ಪ್ರದೇಶಗಳ ಹಿಮ ಕರಗಿ ಸಮುದ್ರ ಮಟ್ಟ ಏರಲೂಬಹುದು.
ಕೈಗಾರಿಕಾ ಕೊಳೆ ನದಿ, ಸರೋವರಗಳ ನೀರಿನಲ್ಲಿ ಸೇರಿದಾಗ ಅದರಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶ ಅಧಿಕವಾಗಿ ನೀರು ಗಡುಸಾಗುತ್ತದೆ. ಇಂಥ ನೀರು ಕುಡಿಯಲು, ಕೈಗಾರಿಕೆಗಳಲ್ಲಿ ಬಳಸಲು ಬರುವುದಿಲ್ಲ. ಕರ್ನಾಟಕದ ಅನೇಕ ಕಾರ್ಖಾನೆಗಳು ಕೊಳೆಯನ್ನು ಸಾಗಿಸಲು ತುಂಗಭದ್ರಾ, ಕಾವೇರಿ ಇತ್ಯಾದಿ ನದಿಗಳನ್ನು ಉಪಯೋಗಿಸುತ್ತವೆ. ದುರ್ಗಾಪುರದ ಕೈಗಾರಿಕಾ ಕೊಳೆ ದಾಮೋದರ ನದಿಯ ನೀರನ್ನು ಮಲಿನಗೊಳಿಸುತ್ತದೆ. 1969ರಲ್ಲಿ ಗಂಗಾ ನದಿಯ ನೀರಿಗೆ ಹರಿದ ತೈಲಾಂಶ ಹೆಚ್ಚಾಗಿ ನೀರಿನ ಮೇಲೆ ಎಣ್ಣೆ ಹೊತ್ತಿಕೊಂಡು ಅನೇಕ ದಿನಗಳವರೆಗೆ ಉರಿಯಿತು. ಸಂಸ್ಕರಿಸದ ಯಮುನಾ ನದಿಯ ನೀರು ಕುಡಿದು ದೆಹಲಿಯ ನಾಗರಿಕರು ಕಾಮಾಲೆ ರೋಗದಿಂದ ನರಳಿದರು. ಟನ್‌ಗಟ್ಟಲೆ ಮೀನುಗಳು ಸತ್ತು ನೀರಿನ ಮೇಲೆ ತೇಲಿದವು.
ಗಾಳಿ, ನೀರು, ಮಲಿನಗೊಂಡಂತೆಯೇ ಭೂಮಿ ಸಹ ಮಲಿನಗೊಂಡಿದೆ. ಕ್ರಿಮಿನಾಶಕ ಮತ್ತು ಕೃತಕ ಗೊಬ್ಬರಗಳು ಭೂಮಿಯ ಮೇಲೆಯನ್ನು ಕೆಡಿಸುತ್ತಿದೆ. ಇದು ಕ್ರಮೇಣ ದುಷ್ಪರಿಣಾಮವನ್ನು ಬೀರುತ್ತದೆ. ಕ್ರಿಮಿನಾಶಕ ಮತ್ತು ಕೀಟನಾಶಕಗಳು ಆಹಾರ ಪದಾರ್ಥಗಳಲ್ಲಿ ಕಾಣಿಸಿಕೊಳ್ಳಬಹುದು. ಹೆಚ್ಚಿನ ಪ್ರಮಾಣದಲ್ಲಿ ಇಂಥ ರಾಸಾಯನಿಕ ಅಂಶಗಳು ತರಕಾರಿ, ಧಾನ್ಯ, ಹಾಲು, ಮೊಟ್ಟೆ-ಇವುಗಳು ಶೇಖರವಾಗುವುದರಿಂದ ಮನುಷ್ಯನ ಆರೋಗ್ಯ ಕೆಡುತ್ತದೆ.
ನೀರು, ಗಾಳಿ, ನೆಲ ಮಲಿನಗೊಂಡರೆ ಸಸ್ಯ, ಪ್ರಾಣಿಗಳ ಜೊತೆಗೇ ಮನುಷ್ಯನಿಗೂ ಅಪಾಯವಿದೆ. ಪರಿಸರ ಮಾಲಿನ್ಯ ಹೆಚ್ಚದಂತೆ ಮಾಡುವುದು ಮನುಷ್ಯನು ಇಂದು ಎದುರಿಸಬೇಕಾದ ದೊಡ್ಡ ಸವಾಲಾಗಿದೆ.
Tags:
kannada 98
Admin


100+ Social Counters
WEEK TRENDING
Loading...
YEAR POPULAR
गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
Riddles in Malayalam Language : In this article, you will get കടങ്കഥകൾ മലയാളം . kadamkathakal malayalam with answer are provided below. T...
अस् धातु के रूप संस्कृत में – As Dhatu Roop In Sanskrit यहां पढ़ें अस् धातु रूप के पांचो लकार संस्कृत भाषा में। अस् धातु का अर्थ होता...
पूस की रात कहानी का सारांश - Poos ki Raat Kahani ka Saransh पूस की रात कहानी का सारांश - 'पूस की रात' कहानी ग्रामीण जीवन से संबंधित ...
Thanks
DeleteThank u
DeleteSuper
Delete